Puttakkana Makkalu: ಮುರಳಿ ಮೇಲಿನ ಪ್ರೀತಿ ಒಪ್ಪಿಕೊಂಡ ಸಹನಾ; ಇನ್ನಾದ್ರು ತಪ್ಪಿನ ಅರಿವಾಗುತ್ತಾ?

By Poorva

ಪುಟ್ಟಕ್ಕಗೆ ತನ್ನ ಮಗಳ ಜೀವನ ಸರಿ ಹೋಗಬೇಕು ಎನ್ನುವ ಆಸೆ. ಆಕೆಗೆ ತಾನು ಒಬ್ಬೊಂಟಿಯಾಗಿ ಜೀವನ ಸಾಗಿಸಿ ಕಷ್ಟ ಪಟ್ಟಿದ್ದು ಎಲ್ಲಾ ತಿಳಿದಿದೆ. ಆದರೆ ಅದೇ ರೀತಿ ನನ್ನ ಮಗಳು ಕೂಡ ಕಷ್ಟ ಪಡುವುದನ್ನು ನೋಡುವ ಧೈರ್ಯ ಆಕೆಗೆ ಇಲ್ಲ. ದೊಡ್ಡ ಮಗಳು ನನ್ನ ಕಷ್ಟದ ಸಮಯದಲ್ಲಿ ಕೂಡ ಜೊತೆಯಾಗಿ ನಿಂತವಳು ಎನ್ನುವುದು ಗೊತ್ತಿದೆ.

ನನ್ನ ಕಷ್ಟಕ್ಕೆ ಹೆಗಲಾಗಿ ನಿಂತವಳ ಬದುಕಿನಲ್ಲಿ ಈ ರೀತಿ ಎಲ್ಲಾ ಆಗುತ್ತಿರುವುದನ್ನು ನೋಡಿದ ಪುಟ್ಟಕ್ಕ ಗೆ ಏನು ಮಾಡುವುದು ಎಂದು ತಿಳಿಯದಾಗುತ್ತದೆ. ಮನೆಗೆ ವಕೀಲರು ಬರುತ್ತಾರೆ. ವಕೀಲರನ್ನು ನೋಡಿದ ಪುಟ್ಟಕ್ಕ ಬನ್ನಿ ಎಂದು ಕರೆಯುತ್ತಾರೆ. ಹಾಗೆಯೇ ತನ್ನ ಮಗಳ ಜೀವನ ಸರಿಪಡಿಸಲು ಸಾಧ್ಯ ಇಲ್ಲವೇ ಎಂದು ಪ್ರಶ್ನೆ ಮಾಡುತ್ತಾಳೆ.

Puttakkana makkalu kannada serial written update on 25th April episode

ನಾನು ಮಾಡುವುದೆಲ್ಲ ಮಾಡಿದ್ದೇನೆ ಆದರೆ ಇನ್ನೂ ಮುರಳಿ ಅವರ ನಿರ್ಧಾರ. ಯಾಕೆಂದರೆ ಮುರಳಿ ಅವರಿಗೆ ನೀವು ಬೇಕಾ? ಅಥವಾ ಬೇಡವಾ? ಎನ್ನುವುದು ನಿರ್ಧಾರ ಆಗಬೇಕಿದೆ. ಮುರಳಿ ಅವರು ನಿಮ್ಮ ಜೊತೆ ಬರುತ್ತಾರ ಅಥವಾ ಅಲ್ಲಿಯೇ ಅವರ ಅಮ್ಮನ ಜೊತೆ ಉಳಿಯುತ್ತಾರ? ನೋಡಬೇಕಾಗಿದೆ ಎಂದು ವಕೀಲರು ಹೇಳುತ್ತಾರೆ.

ಸಹನಾ ಅವರೇ ಕೋರ್ಟ್‌ಗೆ ಟೈಮ್ ಆಗುತ್ತಿದೆ ನಾವು ಹೊರಡೋಣ ಎಂದು ವಕೀಲರು ಹೇಳಿದಾಗ ಸರಿ ಹೊರಡೋಣ ಎನ್ನುತ್ತಾಳೆ. ಇತ್ತ ಸಹನಾ ಹೊರಡುತ್ತಿರಬೇಕಾದರೆ ಇವತ್ತು ನಿನ್ನ ಕೆಲಸ ಆಗಲೇ ಬಾರದು ಎಂದು ಹೇಳುತ್ತಾಳೆ. ಕೊನೆಗೆ ಕೋರ್ಟ್‌ಗೆ ಹೊರಡಬೇಕು ಎನ್ನುವಷ್ಟರಲ್ಲಿ ಸುಮಾ ಬಳಿ ಸಹನಾ ಮೊಬೈಲ್ ಕೇಳುತ್ತಾಳೆ.

Puttakkana makkalu kannada serial written update on 25th April episode

ಕೋರ್ಟ್‌ಗೆ ಹೊರಟ ಸಹನಾ

ಇನ್ನೂ ಸಹನಾ ಹಾಗೂ ಲಾಯರ್ ಕೋರ್ಟ್‌ಗೆ ಹೋಗುತ್ತಾರೆ. ಸಹನಾಳನ್ನು ನೋಡಿದ ಮುರಳಿ ಅವರು ಮಾತ್ರ ಒಮ್ಮೆ ಮನದಲ್ಲಿರುವ ಪ್ರೀತಿಯನ್ನು ಹಾಕಬೇಕು ಎಂದುಕೊಳ್ಳುತ್ತಾನೆ. ಆದರೆ ಆತನ ಸ್ವಾಭಿಮಾನ ಅದಕ್ಕೆ ಅಡ್ಡ ಬರುತ್ತದೆ. ಹಾಗೆಯೇ ತನ್ನ ತಾಯಿಗೆ ಸಹನಾ ಮಾಡಿದ ದ್ರೋಹ ಒಂದು ಕ್ಷಣ ನೆನಪಿಗೆ ಬರುತ್ತದೆ. ಡಿವೋರ್ಸ್ ಕೇಸ್ ಆದಷ್ಟು ಬೇಗ ಮುಗಿದರೆ ಒಳ್ಳೆಯದು, ಇಲ್ಲವಾದರೆ ಪದೇ ಪದೇ ನಾವು ಕೋರ್ಟ್‌ಗೆ ಅಲೆದಾಡುವ ಪರಿಸ್ಥಿತಿ ಬರುತ್ತದೆ ಎಂದು ಕೌಸಲ್ಯ ಹೇಳುತ್ತಾಳೆ.

ತಲೆ ತಗ್ಗಿಸಿದ ಸಹನಾ

ಕೌಸಲ್ಯ ಮಾತಿಗೆ ಲಾಯರ್ ಆಗುತ್ತಮ್ಮ, ಇಬ್ಬರು ಒಪ್ಪಿಗೆ ಸೂಚಿಸಿದರೆ ಮಾತ್ರ ಡಿವೋರ್ಸ್ ಆಗುತ್ತದೆ ಎಂದು ಹೇಳುತ್ತಾರೆ. ಆ ವೇಳೆ ಕೋರ್ಟ್‌ಗೆ ಹಾಜರಾಗಲು ಸಹನಾ ಹಾಗೂ ಮುರಳಿಯನ್ನೂ ಕರೆಯುತ್ತಾರೆ. ನ್ಯಾಯಾಧೀಶರು ಬರುತ್ತಾರೆ. ಅವರನ್ನು ನೋಡಿದಾಗಲೇ ಬಹಳ ಗೌರವ ಬರುತ್ತದೆ. ಮುರಳಿ ಸಹನಾ ನೀವಿಬ್ಬರೂ ಒಬ್ಬರಿಗೊಬ್ಬರು ಒಪ್ಪಿ ಡಿವೋರ್ಸ್ ಪಡೆಯಲು ಮುಂದಾಗಿದ್ದಿರಾ? ಎಂದು ನ್ಯಾಯಾಧೀಶರು ಕೇಳಿದ್ದಾಗ ಮುರಳಿ ಹೌದು ಎಂದರೆ ಸಹನಾ ತಲೆ ತಗ್ಗಿಸುತ್ತಾಳೆ.

ಗಂಡ ಅಂದರೆ ಪ್ರೀತಿ ಎಂದ ಸಹನಾ

ಯಾಕಮ್ಮ ನಿನ್ನ ಗಂಡನ ಕಡೆಯಿಂದ ವಿಚ್ಛೇದನ ಕೊಡಬೇಕು ಎಂದು ಕೇಳಿದ್ರಾ ಎಂದು ನ್ಯಾಯಾಧೀಶರು ಕೇಳುತ್ತಾರೆ. ನನ್ನ ಗಂಡನ ಮೇಲೆ ನನಗೆ ಅಪಾರವಾದ ನಂಬಿಕೆ ಇದೆ. ಆದರೆ ಅವರಿಗೆ ನನ್ನ ಮೇಲೆ ನಂಬಿಕೆ ಇಲ್ಲ. ಅವರಿಗೆ ಅವರ ತಾಯಿಯ ಮೇಲೆಯೇ ಅತಿಯಾದ ನಂಬಿಕೆ ಇದೆ ಆದುದರಿಂದಲೇ ನಾವಿಬ್ಬರೂ ಪರಸ್ಪರ ದೂರ ಆಗಬೇಕು ಅಂದುಕೊಂಡು ಇದ್ದೇವೆ ಎಂದು ಸಹನಾ ಹೇಳುತ್ತಾಳೆ.

More from Filmibeat

English summary
Puttakkana makkalu kannada serial today episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X