Puttakkana makkalu: ರಾಧಾ ಬಂಡವಾಳ ಬಯಲು; ಖಡಕ್ ವಾರ್ನಿಂಗ್ ಕೊಟ್ಟ ಸ್ನೇಹಾ

By Poorva

ಸ್ನೇಹಾ ಎದುರು ರಾಧಾ ಹಾಗೂ ಶಶಿಕಲಾ ಬಂಡವಾಳ ಎಳೆ ಎಳೆಯಾಗಿ ಗೊತ್ತಾಗಿದೆ. ಕಂಠಿಯನ್ನು ಹೇಗಾದರೂ ಮಾಡಿ ಪಡೆದುಕೊಳ್ಳಬೇಕು ಎನ್ನುವ ಛಲದಲ್ಲಿ ಇರುವ ರಾಧಾ ಮಾತ್ರ ಇಂಥ ಮಾರ್ಗವನ್ನು ಹಿಡಿಯಲು ಹಿಂದೇಟು ಹಾಕುವುದು ಇಲ್ಲ.

ರಾಧಾಗೆ ಕಂಠಿ ಅಂದರೆ ಬಹಳ ಇಷ್ಟ. ನನ್ನ ಅಮ್ಮನಿಗೆ ಈ ಮನೆಯಲ್ಲಿ ಸ್ಥಾನ ಕೂಡಲೇ ಇಲ್ಲ. ಆ ಸ್ಥಾನವನ್ನು ನಾನು ಹೇಗಾದರೂ ಮಾಡಿ ಪಡೆದುಕೊಳ್ಳಬೇಕು ಎನ್ನುವ ಸ್ವಾರ್ಥವೂ ಇದೆ. ಕಂಠಿ ಮಾವನನ್ನು ಮದುವೆ ಆದರೆ ಕಡಿದು ಹೋಗಿದ್ದ ಸಂಬಂಧ ಸರಿ ಹೋಗಬಹುದು ಎನ್ನುವ ಆಲೋಚನೆಯಲ್ಲಿ ಇರುತ್ತದೆ. ಆದರೆ ಅಂದುಕೊಂಡಿದ್ದೇ ಒಂದು. ಆಗಿದ್ದು ಒಂದು.

Puttakkana makkalu kannada serial written update on 27th February

ರಾಧಾಗೆ ಬಂಗಾರಮ್ಮನವರ ಕುಟುಂಬದ ಮೇಲೆ ಇನ್ನಷ್ಟು ಕೋಪ ಶುರು ಆಯಿತು. ಹಾಗೆಯೇ ಕಂಠಿ ಮದುವೆ ಮಾಡಿಕೊಂಡು ಬಂದ ಸ್ನೇಹಾ ಮೇಲೆ ಸಿಟ್ಟು ಇರುತ್ತದೆ. ರಾಧಾ ಹಾಗೂ ಶಶಿಕಲಾ ಏನೇ ಕೆಲಸ ಮಾಡಿದರೂ ಅದಕ್ಕೆಲ್ಲ ಅಡ್ಡಗಾಲು ಹೇಳುತ್ತಾಳೆ ಸ್ನೇಹಾ. ಆ ಕಾರಣದಿಂದ ಆಗಿ ಸ್ನೇಹಾಳನ್ನು ಹೇಗಾದರೂ ಕಂಠಿ ಮಾವನ ಮನಸ್ಸಿನಿಂದ ದೂರ ಮಾಡಬೇಕು ಎಂದು ಆಲೋಚನೆ ಮಾಡುತ್ತಾ ಇರುತ್ತಾಳೆ ರಾಧಾ.

ಇನ್ನು ನಂಜಮ್ಮ ಜೊತೆ ಮನದ ಮಾತನ್ನು ಬಿಚ್ಚಿಡುತ್ತಿದ್ದ ರಾಧಾ ಮಾತುಗಳನ್ನು ಸ್ನೇಹಾ ಕೇಳಿ ಬೆಚ್ಚಿ ಬೀಳುತ್ತಾಳೆ. ಹಾಗೆಯೇ ನಂಜಮ್ಮನ ಮಾತುಗಳನ್ನು ಕೇಳಿದ ಸ್ನೇಹಾ ಜೋರಾಗಿ ಈ ಸ್ನೇಹ ಇರುವವರೆಗೆ ನೀನು ಏನು ಮಾಡಲು ಸಾಧ್ಯ ಇಲ್ಲ. ಈ ಬಂಗಾರಮ್ಮನ ಕುಟುಂಬಕ್ಕೆ ನಾನು ಕಾವಲಾಗಿ ಇರುತ್ತೇನೆ, ಎಂದಾಗ ನಂಜಮ್ಮ ಕಕ್ಕಾಬಿಕ್ಕಿ ಆಗಿದ್ದಾಳೆ. ಇತ್ತ ರಾಧಾ ನಾಟಕ ಸ್ನೇಹಾ ಮುಂದೆ ಬಯಲಾಗಿದೆ.

ರಾಧಾಗೆ ಬುದ್ದಿ ಹೇಳಿದ ಸ್ನೇಹಾ

ಸ್ನೇಹಾ ಆಕೆಯ ಕುತ್ತಿಗೆಯಲ್ಲಿ ಇದ್ದ ಕರಿಮಣಿಯನ್ನು ತೋರಿಸಿ ನಾನು ಕಂಠಿ ಹೆಂಡತಿ. ನನಗೆ ಅವರು ತಾಳಿ ಕಟ್ಟಿದ್ದಾರೆ. ನೀನು ಅವರ ಬಗ್ಗೆ ಕನಸು ಕಾಣಬೇಡ. ಹಾಗೆಯೇ ನಮ್ಮಿಬ್ಬರ ಮಧ್ಯೆ ಬರಬೇಡ. ನಿನ್ನ ಜೀವನವನ್ನು ನೀನು ನೋಡಿಕೋ ಎಂದು ಹೇಳುತ್ತಾಳೆ. ಕೂಡಲೇ ನೀನೇ ಹೇಳಿದ್ದು ಅಲ್ವಾ ಇದು ಬಲವಂತದ ಮದುವೆ ಎಂದು ಶಶಿಕಲಾ ಹೇಳುತ್ತಿದ್ದಂತೆ ಸ್ನೇಹಾ ಗರಂ ಆಗುತ್ತಾಳೆ.

Puttakkana makkalu kannada serial written update on 27th February

ರಾಧಾ ಮಾತಿಗೆ ಕೋಪಗೊಂಡ ಸ್ನೇಹಾ

ಏನೇ ಆಗಿದ್ದರೂ ನನಗೆ ಇದೀಗ ಮದುವೆ ಆಗಿದೆ . ನಾವಿಬ್ಬರೂ ಚೆನ್ನಾಗಿ ಇದ್ದೀವಿ. ರಾಧಾ ಆಕೆಯ ಜೀವನವನ್ನು ನೋಡಿಕೊಳ್ಳುವುದು ಒಳ್ಳೆಯದು ಎಂದು ಸ್ನೇಹಾ ಹೇಳುತ್ತಾಳೆ. ಆದರೆ ಇದನ್ನು ಕೇಳಿದ ರಾಧಾ ಸ್ನೇಹಾ ಮೇಲೆ ಕೂಗಾಡುತ್ತಾಳೆ. ಇದನ್ನೆಲ್ಲ ನನಗೆ ಹೇಳಲು ನೀನು ಯಾರು? ನನ್ನ ಅಕ್ಕನ ಅಥವಾ ತಾಯಿನಾ? ನಿನ್ನ ಕುಟುಂಬದಲ್ಲಿ ಸಾಕಷ್ಟು ತೊಂದರೆ ಇದೆ. ಅದನ್ನು ಹೋಗಿ ಸರಿಪಡಿಸು ಎಂದಾಗ ಸ್ನೇಹಾಗೆ ಬಹಳ ಕೋಪ ಬರುತ್ತದೆ. ಆದರೂ ತಡೆದುಕೊಂಡು ರಾಧಾ ಮನಸ್ಸನ್ನು ಬದಲಿಸುವ ಪ್ರಯತ್ನ ಮಾಡುತ್ತಾಳೆ.

ರಾಧಾಗೆ ಸ್ನೇಹಾ ಎಚ್ಚರಿಕೆ

ಈ ವೇಳೆ ರಾಧಾ ಕೊಂಚ ಜೋರಾಗಿ ಹೇಳುತ್ತಾಳೆ. ತಂದೆ ಇಲ್ಲದ ಮಕ್ಕಳು ಬಹಳ ಜೋರಾಗಿ ಇರುತ್ತಾರೆ ಎನ್ನುವುದು ನನಗೆ ತಿಳಿದಿದೆ. ನಿನ್ನ ತಂದೆ ಬೇರೆ ಯಾರ ಜೊತೆಯೂ ಓಡಿ ಹೋಗಿರುವುದು ಆದರೆ ನನ್ನ ತಂದೆ ಕೊಂದು ಜೈಲು ಸೇರಿರುವುದು. ಆದುದರಿಂದ ನಿನಗಿಂತ ಹೆಚ್ಚಿನ ಪೌರುಷ ನನಗೆ ಇದೆ ಎನ್ನುತ್ತಾಳೆ. ಇದನ್ನೆಲ್ಲ ಕೇಳಿದ ಸ್ನೇಹಾ, ರಾಧಾಗೆ ಬುದ್ದಿ ಹೇಳುತ್ತಾಳೆ. ಆದರೆ ರಾಧಾ ಅದ್ಯಾವುದನ್ನೂ ಕೇಳುವ ಸ್ಥಿತಿಯಲ್ಲಿ ಇರುವುದು ಇಲ್ಲ. ಇದನ್ನೆಲ್ಲ ನೋಡಿದ ರಾಧಾ ಸ್ನೇಹಾಗೆ ಸವಾಲು ಹಾಕುತ್ತಾಳೆ.

ರಾಧಾ ಖಡಕ್ ಮಾತು

ಈ ಮನೆಗೆ ನಿಮ್ಮಿಂದ ಯಾವುದೇ ತೊಂದರೆ ಆಗಲು ನಾನು ಬಿಡುವುದು ಇಲ್ಲ. ನನ್ನ ಅತ್ತೆಗೆ ನನಗೆ ಸಾಕಷ್ಟು ಕಿರಿಕ್ ಇರಬಹುದು ಆದರೆ ಕನಸಲ್ಲೂ ನಾನು ಅವರನ್ನು ಬೈದಿಲ್ಲ. ಅಂಥದ್ದರಲ್ಲಿ ಬೇರೆಯವರಿಂದ ನಮ್ಮ ಕುಟುಂಬಕ್ಕೆ ಹಾನಿ ಇದೆ ಎಂದು ತಿಳಿದು ಸುಮ್ಮನೆ ಇರಲು ನನ್ನಿಂದ ಸಾಧ್ಯ ಇಲ್ಲ. ನಾನು ನೀನು ಮಾಡುವ ದುಷ್ಟ ಬುದ್ದಿಯನ್ನು ಯಾರ ಬಳಿಯೂ ಹೇಳದೇ ಸಂಹಾರ ಮಾಡುತ್ತೇನೆ ಎಂದು ರಾಧಾ ಹೇಳುತ್ತಾಳೆ.

More from Filmibeat

English summary
Puttakkana makkalu kannada serial today episode;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X