Puttakkana makkalu: ಸಹನಾ ತಿಥಿಗೆ ಮುಂದಾದ ಪುಟ್ಟಕ್ಕ; ಕೊರವಂಜಿ ಎಚ್ಚರಿಕೆ ಏನು?
ಪುಟ್ಟಕ್ಕಗೆ ತನ್ನ ಮಗಳು ಸಹನಾ ಎಂದರೆ ಜೀವ. ಆದರೆ ಮಗಳನ್ನು ಓದಿಸಲು ಸಾಧ್ಯ ಆಗಲಿಲ್ಲ ಆಕೆಗೆ ಉತ್ತಮವಾದ ಜೀವನವನ್ನಾದರೂ ಕಲ್ಪಿಸಿ ಕೊಡಬೇಕು ಎನ್ನುವ ಆಸೆ ಇತ್ತು. ಆದರೆ ಆಕೆಕೊಂಡಿದ್ದೇ ಒಂದು ಆಗಿದ್ದೇ ಇನ್ನೊಂದು. ಪುಟ್ಟಕ್ಕಗೆ ತನ್ನ ಮಗಳು ಸತ್ತ ವಿಚಾರ ಬಹಳ ಆಘಾತ ನೀಡುತ್ತದೆ.
ಮಗಳು ಸಹನಾ ಮರಳಿ ಬರುವುದು ಇಲ್ಲ ಎಂದು ಅಂದುಕೊಂಡು ಇರುತ್ತಾಳೆ ಪುಟ್ಟಕ್ಕ. ಸಹನಾ ಬದುಕಿದ್ದಾಳೆ, ಸ್ವಾವಲಂಬಿಯಾಗಿ ಬದುಕುವ ಪ್ರಯತ್ನ ಮಾಡುತ್ತಿದ್ದಾಳೆ ಎಂದು ತಾಯಿಗೆ ಗೊತ್ತಿಲ್ಲ. ತಾನು ಏನಾದರು ಸಾಧನೆ ಮಾಡಬೇಕು ಎಂದುಕೊಂಡು ಪಟ್ಟಣದ ಕಡೆ ಮುಖ ಮಾಡಿದ ಸಹನಾಗೆ ತೊಡಕುಗಳು ಸಾವಿರಾರು. ತಾನು ಏನೇ ಕೆಲಸ ಮಾಡಲು ಹೊರಟರು ನೂರಾರು ವಿಘ್ನ.

ತಳ್ಳುವ ಗಾಡಿಯಲ್ಲಿ ಪಾತ್ರೆ ತೊಳೆಯುವ ಕೆಲಸವನ್ನು ಗಿಟ್ಟಿಸಿಕೊಂಡ ಸಹನಾ ಮಾತ್ರ ನನಗೆ ಎನು ಬೇಡ ಅಕ್ಕ ಎರಡು ಹೊತ್ತು ಊಟ ಹಾಕಿದರೆ ಸಾಕು ಎಂದು ಹೇಳುತ್ತಾಳೆ. ಆದರೆ ಸಹನಾ ಮನದಲ್ಲಿ ನೂರಾರು ಯೋಚನೆ. ಏನೇ ಕಷ್ಟ ಬಂದರು ಮೆಟ್ಟಿನಿಲ್ಲುವ ಧೈರ್ಯ ಆಕೆಯಲ್ಲಿ ಇದೆ. ಆಕೆಗೆ ಜೀವನದಲ್ಲಿ ನಾನು ಗೆಲ್ಲಬೇಕು ಎನ್ನುವ ಛಲ ಆಕೆಯಲ್ಲಿ ಮೂಡುತ್ತದೆ. ವೈವಾಹಿಕ ಜೀವನದಲ್ಲಿ ಕೊಂಚವೂ ಸುಖ ಕಾಣದ ಸಹನಾಗೆ ಗಂಡನ ಪ್ರೀತಿ ಕೂಡ ಸಿಗುವುದಿಲ್ಲ.
ಮದುವೆ ಆದ ಬಳಿಕ ತವರು ಮನೆಗೆ ಭಾರವಾಗಿ ಯಾಕೆ ಬದುಕಬೇಕು ಎನ್ನುವುದು ಸಹನಾ ಮನದ ಮಾತು. ಮುರಳಿ ಜೊತೆ ಜೀವನ ಮಾಡು ಸಹನಾ ಎಂದು ಅವ್ವ ಹೇಳುತ್ತಿದ್ದ ಮಾತುಗಳು ಸಹನಾ ಮನಸನ್ನು ಇನ್ನಷ್ಟು ನೋವು ನೀಡುತ್ತಿದ್ದವು. ಸಹನಾಗೆ ಮತ್ತೆ ತನ್ನ ಗಂಡನ ಜೊತೆ ಬಾಳ್ವೆ ಮಾಡುವ ಮನಸ್ಸು ಆಕೆಯಲ್ಲಿ ಇರುವುದು ಇಲ್ಲ.

ಇತ್ತ ಪುಟ್ಟಕ್ಕ ತನ್ನ ಜಗಳ ತಿಥಿ ಕಾರ್ಯ ಮಾಡಲು ಮುಂದಾಗುತ್ತಾಳೆ. ತನ್ನ ಮಗಳ ಮುದ್ದಾದ ಫೋಟೋವನ್ನು ಕೈಯಲ್ಲಿ ಹಿಡಿದ ಪುಟ್ಟಕ್ಕ ತನ್ನಿಂದಾಗಿ ನಿನಗೆ ಎಷ್ಟೆಲ್ಲ ನೋವು ಅಲ್ವಾ. ನೀನು ಎಲ್ಲಾ ನೋವನ್ನು ಸಹಿಸಿಕೊಂಡು ಕೊನೆಗೆ ನಮ್ಮನ್ನು ಬಿಟ್ಟು ಹೋದೆ ಅಲ್ವಾ. ತಂದೆ ತಾಯಿ ಮಾಡಿದ ಪುಣ್ಯ ಮಕ್ಕಳಿಗೆ ಸಿಗುತ್ತದೆ ಅಂತೆ. ಆದರೆ ನಾನು ಏನು ತಪ್ಪು ಮಾಡಿದೆ ಸಹನಾ ನೀನು ನನ್ನ ಬಿಟ್ಟು ಹೋದೆಯಲ್ಲ ಎಂದು ಅಳುತ್ತಾಳೆ.
ಸಹನಾ ನೆನೆದು ಅತ್ತ ಪುಟ್ಟಕ್ಕ
ಮುರಳಿ ಮನೆಗೆ ಬರುತ್ತಾನೆ. ಸಹನಾ ಇನ್ನೂ ಮುಂದೆ ಇಲ್ಲ ಎಂದುಕೊಂಡು ಆಕೆಯ ಸತ್ತ ನಂತರದ ಕಾರ್ಯಗಳನ್ನು ಮಾಡುತ್ತಿರುವಾಗ ಅಲ್ಲಿಗೆ ಕೊರವಂಜಿ ಬರುತ್ತಾರೆ. ಕಣಿ ಹೇಳುತ್ತೇನೆ ಎಂದು ಕೊಂಚ ಜೋರಾಗಿಯೇ ಮನೆಯ ಬಾಗಿಲ ಬಳಿ ನಿಂತು ಕರೆಯುತ್ತಾರೆ. ಆಗ ಪುಟ್ಟಕ್ಕ ಮನೆಯ ಹೊರಗೆ ಬಂದು ಕೊರವಂಜಿಯನ್ನು ನೋಡಿ ಅಲ್ಲಿಯೇ ಸುಮ್ಮನೆ ನಿಲ್ಲುತ್ತಾಳೆ. ಕೊರವಂಜಿ ಹೇಳುತ್ತಾರೆ, ನೋಡಿದ ಸಾವು ಸಾವಲ್ಲ. ಆಚಾರ ಮಾಡುವ ಆತುರದಲ್ಲಿ ವಿಚಾರ ಮರಿಬೇಡ, ಸಮಧಿಯಾಗೆ ಮುಚ್ಚಿದ ಸತ್ಯ ಅರಮನೆಯಲ್ಲಿ ಸಿಗುತೈತೆ ಎಂದು ಹೇಳುತ್ತಾರೆ. ಇದನ್ನು ಕೇಳಿದ ಪುಟ್ಟಕ್ಕ ಗೆ ಜೋಗತಿಯವ್ವ ಏನು ಹೇಳುತ್ತಿದ್ದಾಳೆ ಎಂದು ಅರಿಯದಾಗುತ್ತದೆ.
ಸ್ತಬ್ಧವಾಗಿ ನಿಂತು ಬಿಟ್ಟ ಪುಟ್ಟಕ್ಕ
ಪುಟ್ಟಕ್ಕಗೆ ತನ್ನ ಮಗಳು ಬದುಕಿದ್ದಾಳೆ ಎನ್ನುವ ನಂಬಿಕೆ. ನನ್ನ ಮಗಳು ಬದುಕಿದ್ದಾಳೆ ,ಆಕೆ ಯಾವತ್ತಾದರೂ ಬಂದೆ ಬರುತ್ತಾಳೆ ಎನ್ನುವ ತವಕ. ಸಹನಾಳನ್ನು ಕಾಣದ ಪುಟ್ಟಕ್ಕ ಗೆ ಮನದಲ್ಲಿ ಬಹಳಷ್ಟು ನೋವು. ತನ್ನ ಎರಡನೇ ಮಗಳ ಜೀವನದಲ್ಲಿ ಕೂಡ ಬಿರುಗಾಳಿ ಎಬ್ಬಿಸಬಹುದು ಎನ್ನುವ ಆಲೋಚನೆ ಪುಟ್ಟಕ್ಕನಿಗೆ ಇತ್ತು. ಆದರೆ ಸ್ನೇಹಾ ಹಾಗೂ ಕಂಠಿ ಜೀವನ ಇದೀಗ ಉತ್ತಮವಾಗಿದೆ. ಅವರಿಬ್ಬರನ್ನು ಮನೆ ಮಂದಿ ಕೊಂಡಾಡುತ್ತಾರೆ. ಇದು ಪುಟ್ಟಕ್ಕಗೆ ಕೊಂಚ ನೆಮ್ಮದಿ ತರಿಸಿದೆ.
ಅಕ್ಕ ನೆನೆದು ಸುಮಾಬೇಸರ
ಸುಮಾಗೆ ಕೂಡ ತನ್ನ ಅಕ್ಕನನ್ನು ಕಳೆದುಕೊಂಡ ನೋವು ಬಹಳ ಇದೆ. ಆಕೆಗೆ ತನ್ನ ಅಕ್ಕ ಎಂದರೆ ಪಂಚ ಪ್ರಾಣ. ಆಕೆಯನ್ನು ಕಳೆದುಕೊಂಡ ದಿನದಿಂದ ಬಹಳ ಬೇಸರ. ಮನದಲ್ಲಿ ನೂರು ಪ್ರಶ್ನೆಗಳು ಇದ್ದರೂ ಅದನ್ನು ಯಾರ ಜೊತೆಯೂ ಹೇಳಿಕೊಳ್ಳಲು ಆಗದೇ ಸುಮಾ ಚಡಪಡಿಸುತ್ತಾ ಇರುತ್ತಾಳೆ. ಆಕೆಗೆ ಎಲ್ಲಿಗೆ ಹೋದರೂ ತನ್ನ ಅಕ್ಕನ ನೆನಪು ಕಾಡುತ್ತಿರುತ್ತದೆ.


Click it and Unblock the Notifications











