Puttakkana makkalu: ಬೀಗರ ಮನೆಗೆ ಬಂದ ಬಂಗಾರಮ್ಮ ಕುಟುಂಬ; ಕಾಳೀ ಮಾತಿಗೆ ಪುಟ್ಟಕ್ಕ ನಿಟ್ಟುಸಿರು
ಸಹನಾ ಬಸ್ ಹತ್ತಿ ಹೋದ ಬಳಿಕ ಕಂಠಿಗೆ ಮನವರಿಕೆ ಆಗುತ್ತದೆ. ಸಹನಾಳನ್ನು ತಡೆಯಬಹುದಾಗಿತ್ತು, ಆದರೆ ಈಗ ಏನು ಮಾಡುವುದು ಎಂದು ತಿಳಿಯದೇ ಬಹಳ ಬೇಸರಗೊಂಡಿದ್ದಾನೆ. ಬೆಳಗ್ಗೆ ಎದ್ದ ಕೂಡಲೇ ಪುಟ್ಟಕ್ಕ ಮಗಳು ಸಹನಾ ಕಾಣದೇ ಇರುವುದನ್ನು ನೋಡಿ ಆತಂಕ ಪಡುತ್ತಾಳೆ.
ಪುಟ್ಟಕ್ಕಗೆ ಏನು ಮಾಡಬೇಕು ಎಂದು ತಿಳಿಯದೇ ಕಂಗಾಲಾಗಿ ಹೋಗುತ್ತಾಳೆ. ಸಹನಾ, ದೇವಿಪುರವನ್ನು ಬಿಟ್ಟು ಹೋಗುವ ಬೇಸರದಲ್ಲಿ ಇರುತ್ತಾಳೆ. ಮುಂದೆ ಏನು ಎತ್ತ ತಿಳಿಯದೇ ಮುಂದೆ ಸಾಗಿದ್ದಾಳೆ. ಇನ್ನೂ ಪುಟ್ಟಕ್ಕ ಮಾತ್ರ ಸಹನಾ ಮನೆ ಬಿಟ್ಟು ಹೋಗಿರುವುದನ್ನು ನೋಡಿ ಮತ್ತಷ್ಟು ಕುಗ್ಗಿ ಹೋಗುತ್ತಾಳೆ.

ಪುಟ್ಟಕ್ಕಗೆ ತನ್ನ ದೊಡ್ಡ ಮಗಳು ಎಂದರೆ ಬಹಳ ಇಷ್ಟ. ಆದರೆ ಆಕೆಯೇ ಮನೆಬಿಟ್ಟು ಹೋದ ಬಳಿಕ ಆಕೆ ಸಂಪೂರ್ಣವಾಗಿ ಕುಸಿದು ಹೋಗುವ ಪರಿಸ್ಥಿತಿ ಎದುರಾಗಿದೆ. ಈ ವೇಳೆ ಪುಟ್ಟಕ್ಕನ ಮನೆಗೆ ಮುರಳಿ ಬರುತ್ತಾನೆ. ಸಹನಾ ಮನೆಯಲ್ಲಿ ಇಲ್ಲದೇ ಇರುವುದನ್ನು ನೋಡಿ ಆತನಿಗೆ ಕೂಡ ಏನು ಮಾಡಬೇಕು ಎಂದು ತಿಳಿಯದ ಹಾಗೆ ಆಗುತ್ತದೆ.
ಮುರಳಿಗೆ ಸಹನಾ ಮೇಲೆ ಬಹಳ ಪ್ರೀತಿಯಿದೆ. ಆದರೆ ತಾಯಿ ಪ್ರೀತಿಯ ಮುಂದೆ ಸಹನಾ ಪ್ರೀತಿಯನ್ನು ಮೇಷ್ಟ್ರು ಗಮನಿಸಲೇ ಇಲ್ಲ. ಆದರೆ ಇದೀಗ ಮೇಷ್ಟ್ರ ಆಗಮನ ಆಗಿದೆ. ಆದರೆ ಸಹನಾ ಮನೆಯಲ್ಲಿ ಇಲ್ಲದೆ ಇರುವುದನ್ನು ನೋಡಿ ಚಿಂತಾಕ್ರಾಂತನಾಗುತ್ತಾನೆ.

ಸಹನಾ ಮನೆಯಲ್ಲಿ ಇಲ್ಲದೇ ಇರುವುದನ್ನ ಗಮನಿಸಿ ಪುಟ್ಟಕ್ಕನ ಗೋಳು ಕೇಳುವವರೇ ಇಲ್ಲ. ಪುಟ್ಟಕ್ಕಗೆ ಮಗಳಂದ್ರೆ ಬಹಳ ಇಷ್ಟ. ಆದರೆ ಮುದ್ದಿನ ಮಗಳೇ ಮನೆ ಬಿಟ್ಟು ಹೋದಾಗ ಆಕೆಗೆ ಬಹಳ ನೋವಾಗಿರುತ್ತದೆ. ಪುಟ್ಟಕ್ಕನ ಮನೆಗೆ ಬಂಗಾರಮ್ಮ ಹಾಗೂ ಅವರ ಕುಟುಂಬ ಬರುತ್ತದೆ. ವಿಚಾರ ಗೊತ್ತಾಗಿ ಬಂಗಾರಮ್ಮಗೆ ಶಾಕ್ ಆಗುತ್ತದೆ .
ಪುಟ್ಟಕ್ಕಗೆ ಬಂಗಾರಮ್ಮ ಸಮಾಧಾನ
ಪುಟಕ್ಕನಿಗೆ ಬಂಗಾರಮ್ಮ ಸಮಾಧಾನ ಮಾಡುತ್ತಿರುತ್ತಾಳೆ. ಸಹನಾ ಎಲ್ಲಿಯ ತನಕ ಹೋಗಲು ಸಾಧ್ಯ? ಆಕೆ ಖಂಡಿತ ದೇವಿಪುರಕ್ಕೆ ಬಂದೇ ಬರುತ್ತಾಳೆ ಎಂದು ಬಂಗಾರಮ್ಮ ಪುಟ್ಟಕ್ಕನಿಗೆ ಸಮಾಧಾನ ಹೇಳುತ್ತಾಳೆ. ಬಂಗಾರಮ್ಮನ ತಾಯಿ ಕೂಡ ಮನೆಗೆ ಬರುತ್ತಾಳೆ. ಆಕೆ ಕೂಡ ಪುಟ್ಟಕ್ಕಗೆ ಸಾಂತ್ವನ ಹೇಳುತ್ತಾಳೆ. ಇನ್ನೂ ಬಂಗಾರಮ್ಮನ ತಾಯಿಗೆ ಸ್ನೇಹ ಮೇಲೆ ಬಹಳ ಸಿಟ್ಟಿರುತ್ತದೆ. ನನ್ನ ಮಗಳ ಮೇಲೆ ಇಲ್ಲಸಲ್ಲದ ಆರೋಪ ಮಾಡಿ ಆಕೆಯನ್ನು ಜೈಲಿಗೆ ಅಟ್ಟಿದ್ದಾಳೆ ಎಂದು ಬಹಳ ಕೋಪದಿಂದ ಹೇಳುತ್ತಾಳೆ.
ಕಂಠಿನ ತರಾಟೆಗೆ ತೆಗೆದುಕೊಂಡ ಅಜ್ಜಿ
ನನ್ನ ಬಳಿ ನೀವು ಯಾವ ವಿಚಾರ ಹೇಳಲು ಇಲ್ಲ, ಇದರಿಂದ ನನಗೆ ಬಹಳ ಬೇಸರ ಆಗಿದೆ. ಹಾಗೆಯೇ ಕೆಲವರು ಮಾಡಿದ ತಪ್ಪಿನಿಂದ ನನ್ನ ಮಗಳು ಶಿಕ್ಷೆ ಅನುಭವಿಸುವ ಹಾಗೆ ಆಯಿತು ಎಂದು ಕಂಠಿ ಬಳಿ ಅಜ್ಜಿ ಹೇಳುತ್ತಾಳೆ. ಇದನ್ನು ಕೇಳಿ ಸ್ನೇಹಾ ತಲೆ ತಗ್ಗಿಸುತ್ತಾಳೆ. ಪುಟ್ಟಕ್ಕ ಮಾತ್ರ ಏನು ಮಾತನಾಡದೇ ಅಳುತ್ತಾ ಇರುತ್ತಾಳೆ.
ಕಾಳಿ ಮಾತಿನಿಂದ ಪುಟ್ಟಕ್ಕಗೆ ಧೈರ್ಯ
ಬಂಗಾರಮ್ಮ ತನ್ನ ತಾಯಿಗೆ ಸಮಾಧಾನ ಮಾಡುತ್ತಾಳೆ. ಅಮ್ಮ ನೀನು ಸುಮ್ಮನಿರು. ನಾನು ಅದೆಲ್ಲವನ್ನೂ ಮರೆತು ತುಂಬಾ ದೂರ ಬಂದಿದ್ದೇನೆ ಎಂದು ಹೇಳುತ್ತಾಳೆ. ಅಷ್ಟರಲ್ಲಿ ಅಲ್ಲಿಗೆ ಕಾಳಿ ಬರುತ್ತಾನೆ. ಸಹನಾ ಎಲ್ಲಿದ್ದಾಳೆ ಎಂದು ನನಗೆ ತಿಳಿದಿದೆ ಎಂದು ಆತ ಹೇಳಿದಾಗ ಪುಟ್ಟಕ್ಕಗೆ ಹೋದ ಜೀವನ ಬಂದ ಹಾಗೆ ಆಗುತ್ತದೆ.


Click it and Unblock the Notifications











