Puttakkana makkalu: ಮಗಳ ಸಂಸಾರ ಸರಿ ಮಾಡಲು ಪುಟ್ಟಕ್ಕ ಹರಸಾಹಸ; ಮನೆ ಬಿಟ್ಟು ಹೊರಟ ಸಹನಾ
ಸಹನಾ ತನ್ನ ತಾಯಿಯ ಹಾಗೆ ಸ್ವಾಭಿಮಾನಿ. ಆಕೆಗೆ ಯಾರ ಹಂಗೂ ಇಲ್ಲದೇ ಬದುಕುವ ಆಸೆ. ಗಂಡನಿಂದ ತಾನು ಪಟ್ಟ ಪಾಡನ್ನು ಮರೆಯಬಹುದು ಎನ್ನುವ ಆಲೋಚನೆಯಲ್ಲಿ ಇದ್ದಳು. ಆದರೆ ಗಂಡನ ಮನೆಯಲ್ಲಿ ಪಡಬಾರದ ಯಾತನೆ ಪಡುತ್ತಿರುತ್ತಾಳೆ. ಯಾರ ಬಳಿಯೂ ಅದನ್ನು ಹೇಳಲು ಆಗದೆ , ನೋವು ಅನುಭವಿಸುತ್ತಿರುತ್ತಾಳೆ.
ಕೊನೆಗೆ ನಿಜ ವಿಚಾರ ಎಲ್ಲರಿಗೆ ಕೂಡ ತಿಳಿಯುತ್ತದೆ. ಆದರೆ ಮುರಳಿಗೆ ಮಾತ್ರ ಸ್ವಲ್ಪ ಕೂಡ ತನ್ನ ಹೆಂಡತಿ ಬಗ್ಗೆ ಕನಿಕರ ಇರಲ್ಲ. ಕೊನೆಗೆ ವಿಡಿಯೋ ನೋಡಿದ ಬಳಿಕ ಮುರಳಿಗೆ ತನ್ನ ಅಮ್ಮನೇ ತಪ್ಪು ಮಾಡಿರುವುದು ಎಂದು ತಿಳಿದು ಬಿಡುತ್ತದೆ. ಆದರೂ ಸಹನಾ ಜೊತೆ ಕ್ಷಮೆಯಾಚಿಸಬೇಕು, ಆಕೆಯನ್ನ ಮನೆಗೆ ಕರೆದುಕೊಂಡು ಹೋಗಬೇಕು ಎನ್ನುವ ಆಲೋಚನೆ ಕೂಡ ಆತನಿಗೆ ಬರಲ್ಲ.

ತನ್ನ ಗಂಡ ಇಷ್ಟು ಕೆಳಮಟ್ಟಕ್ಕೆ ಇಳಿಯುತ್ತಾರೆ ಎಂದು ಸಹನಾ ಅಂದುಕೊಂಡಿರುವುದಿಲ್ಲ. ಆಕೆಗೆ ಗಂಡನ ಬಗ್ಗೆ ಬಹಳಷ್ಟು ನೋವು ಇರುತ್ತದೆ. ಆಕೆ ಅದನ್ನ ಯಾರ ಬಳಿಯೂ ಕೂಡ ಹೇಳಿಕೊಂಡಿರುವುದಿಲ್ಲ. ತನ್ನ ತಾಯಿಯ ಬಳಿ ಹೇಳಿಕೊಂಡರು ನೀನೇ ಕೊಂಚ ಅಡ್ಜಸ್ಟ್ ಮಾಡಿಕೊಂಡು ಹೋಗಮ್ಮ ಎಂದು ಹೇಳುತ್ತಾರೆ.
ಸಹನಾ ತನ್ನ ತಾಯಿಯ ಬಳಿ ಕೂಡ ನಿಜ ವಿಚಾರವನ್ನು ಹೇಳದೆ ಮುಚ್ಚಿಡುತ್ತಾಳೆ. ಇನ್ನು ಸಹನಾ ತವರು ಮನೆಯಲ್ಲಿ ಕೂಡ ನಾನು ಭಾರವಾಗಿ ಹೋಗುತ್ತೇನೆ ಎನ್ನುವ ಭಯದಲ್ಲಿ ಮನೆ ಬಿಟ್ಟು ಹೋಗಲು ನಿರ್ಧಾರ ಮಾಡುತ್ತಾಳೆ. ನಾನು ತೆಗೆದುಕೊಂಡ ನಿರ್ಧಾರ ಸರಿಯಾಗಿ ಇದೆ ಎಂದು ಮನಸ್ಸಿನಲ್ಲಿ ಅಂದುಕೊಂಡು ಬಹಳ ಗಟ್ಟಿ ನಿರ್ಧಾರವನ್ನು ತೆಗೆದುಕೊಳ್ಳುತ್ತಾಳೆ. ಸುಮಾ ಕೂಡ ಅಕ್ಕ ನೀನು ತೆಗೆದುಕೊಂಡ ನಿರ್ಧಾರ ಮಾತ್ರ ತುಂಬಾ ಸರಿಯಾಗಿದೆ ಈ ನಿರ್ಧಾರದಿಂದ ನೀನು ಹಿಂದೆ ಸರಿಯಬೇಡ ಎಂದು ಹೇಳುತ್ತಾಳೆ.
ಅಮ್ಮನ ಸ್ಥಿತಿ ನೆನೆದು ಕಣ್ಣೀರಿಟ್ಟ ಸಹನಾ
ಇನ್ನು ಸಹನಾ ರಾತ್ರಿಯಾಗುವುದನ್ನೆ ಕಾಯುತ್ತಿರುತ್ತಾಳೆ. ಮಧ್ಯರಾತ್ರಿಯಾಗುತ್ತದೆ ಎಲ್ಲರೂ ಗಾಢವಾಗಿ ಮಲಗಿರುವ ಹೊತ್ತಲ್ಲಿ ಸಹನಾ ಗಂಟು ಮೂಟೆ ಸಮೇತವಾಗಿ ಅಮ್ಮನ ಬಳಿ ಬರುತ್ತಾಳೆ. ಪುಟ್ಟಕ್ಕ ಆ ಹೊತ್ತಲ್ಲಿ ಬಹಳ ನಿದ್ದೆಯಲ್ಲಿ ಇರುತ್ತಾಳೆ. ಅಮ್ಮ ನಾನು ತವರು ಮನೆಗೆ ಕೂಡ ಸ್ವಲ್ಪ ಸಮಯದಲ್ಲಿಯೇ ಭಾರವಾಗಿ ಹೋಗಿ ಬಿಡುತ್ತೇನೆ. ನೀನು ಮುರಳಿ ಮೇಷ್ಟ್ರ ಜೊತೆ ಸಂಸಾರ ನಡೆಸು ಎಂದು ಹೇಳಿಯೇ ಹೇಳುತ್ತಿಯಾ ನನಗೆ ಅದು ಚೆನ್ನಾಗಿ ತಿಳಿದಿದೆ ಎಂದು ತನ್ನ ಮನದ ವೇದಿಕೆ ಹೇಳಿಕೊಳ್ಳುತ್ತಾಳೆ.

ಅಲ್ಲಿಗೆ ಹೋಗಲು ಇಷ್ಟವಿಲ್ಲ ಎಂದ ಸಹನಾ
ಮಗಳ ಜೀವನ ಹಾಳಾಗಬಾರದು ಎಂದು ನೀನು ಎಷ್ಟೆಲ್ಲ ಕಷ್ಟ ಪಡುತ್ತಿದ್ದಿಯಾ ನೀನು ಕಷ್ಟ ಪಡುತ್ತಿರುವುದನ್ನು ನನ್ನಿಂದ ನೋಡಲು ಆಗುವುದಿಲ್ಲ. ಹಾಗೆಯೇ ಗಂಡನ ಮನೆಗೆ ಹೋಗು ಅಲ್ಲಿ ಸಂಸಾರ ಶುರು ಮಾಡು ಎಂದು ಖಂಡಿತವಾಗಿಯೂ ಹೇಳಿಯೇ ಹೇಳುತ್ತಿಯಾ, ಅದಕ್ಕೆ ನಾನೇ ಮನೆ ಬಿಟ್ಟು ಹೋದರೆ ರಗಳೆ ಇರುವುದಿಲ್ಲ ಎಂದು ಸಹನಾ ಹೇಳಿಕೊಳ್ಳುತ್ತಾಳೆ.
ಮನೆಯಿಂದ ಹೊರಟ ಸಹನಾ
ಬಳಿಕ ಪುಟ್ಟಕ್ಕನ ಕಾಲು ಮುಟ್ಟಿ ಆಶೀರ್ವಾದ ತೆಗೆದುಕೊಳ್ಳುತ್ತಾಳೆ. ನಾನು ಯಾವತ್ತಿದ್ದರೂ ಕುಗ್ಗುವುದಿಲ್ಲ. ಹಾಗೆಯೇ ನಾನು ಒಂದು ದಿನ ಗುರಿ ಮುಟ್ಟಿಯೇ ಮುಟ್ಟುತ್ತೇನೆ ಇದು ಮಾತ್ರ ಸತ್ಯವಾದ ಮಾತು ಎಂದು ಹೇಳುತ್ತಾಳೆ. ಬಳಿಕ ಅಲ್ಲಿಂದ ನೇರವಾಗಿ ತಂದೆ ಗೋಪಾಲನ ಬಳಿಗೆ ಬಂದು ಆತನ ಮುಖವನ್ನೊಮ್ಮೆ ನೋಡುತ್ತಾಳೆ.
ತಂದೆಯ ಆಶಿರ್ವಾದ ಪಡೆದ ಸಹನಾ
ತಾನು ಸಾಯುವ ಸ್ಥಿತಿಯಲ್ಲಿ ಇರಬೇಕಾದರೆ ಬದುಕಿಸಿದಾತ , ಹಾಗೆಯೇ ಆಕೆಗೆ ಹಳೆಯ ನೆನಪುಗಳು ಒಮ್ಮೆ ಎದುರಿಗೆ ಬಂದು ಹೋಗುತ್ತದೆ. ಆದರೂ ಎನು ಮಾತನಾಡದೆ ಸುಮ್ಮನೆ ಆಗುತ್ತಾಳೆ. ಇನ್ನೂ ಮನೆ ಮಂದಿಯೆಲ್ಲ ಖುಷಿಯಲ್ಲಿ ಇರಬೇಕು ಎನ್ನುವ ಹೊತ್ತಲ್ಲಿ ಹೀಗೆಲ್ಲ ಆಗಿ ಹೋಯಿತಲ್ಲಾ ಎನ್ನುವ ನೋವು ಆಕೆಯನ್ನು ಕಾಡತೊಡಗಿದೆ.


Click it and Unblock the Notifications











