Puttakkana Makkalu: ನೊಂದ ಜೀವಕ್ಕೆ ಮತ್ತಷ್ಟು ಕಿಡಿ ಹಚ್ಚಿದ ರಾಜೀ; ಗೋಪಾಲನ ವಿರುದ್ಧ ಸಂಚು
ಪುಟ್ಟಕ್ಕಗೆ ತನ್ನ ಮಕ್ಕಳು ಎಂದರೆ ಜೀವ ಬೇಕಾದರೂ ಕೊಡುತ್ತಾಳೆ. ಮಕ್ಕಳಿಗೆ ಏನೇ ತೊಂದರೆ ಬಂದರೂ ಅದನ್ನ ಪುಟ್ಟಕ್ಕ ಸರಳವಾಗಿ ಬಗೆಹರಿಸುತ್ತಿದ್ದಳು. ಇದೀಗ ಸಹನಾ ನಾಪತ್ತೆಯಾಗಿದ್ದಾಳೆ. ಸಹನಾಳನ್ನು ಹೇಗಾದರೂ ಮಾಡಿ ಹುಡುಕಲೇಬೇಕು ಆಕೆ ನಮ್ಮ ಮನೆಗೆ ಬರಲೇಬೇಕು ಎಂದು ಪುಟ್ಟಕ್ಕ ಪಟ್ಟು ಹಿಡಿದಿದ್ದಾಳೆ.
ಸಹನಾಳನ್ನು ಕಂಡರೆ ಪುಟ್ಟಕ್ಕಗೆ ಅತೀವ ಪ್ರೀತಿ. ಚಿಕ್ಕ ವಯಸ್ಸಿನಿಂದಲೂ ಎಲ್ಲಾ ಕಷ್ಟವನ್ನು ತಡೆದುಕೊಂಡು ತನ್ನ ತಾಯಿಯ ಜೊತೆಗೆ ನಿಂತವಳು ಆಕೆ. ಅದೇ ಕಾರಣಕ್ಕೆ ಸಹನಾ ಅಂದ್ರೆ ಬಹಳ ಅಕ್ಕರೆ. ಸಹನಾ ಕಾಣದೇ ಇರುವುದನ್ನು ನೋಡಿದ ಪುಟ್ಟಕ್ಕಗೆ ಬಹಳ ನೋವಾಗುತ್ತದೆ.

ಇದೀಗ ಪುಟ್ಟಕ್ಕನ ಮನೆಗೆ ರಾಜೀ ಕಾಲಿಟ್ಟಿದ್ದಾಳೆ. ಪುಟ್ಟಕ್ಕನ ಮನೆಯಲ್ಲಿ ನಡೆಯುವ ಎಲ್ಲಾ ದುರಂತಕ್ಕೆ ಗೋಪಾಲಯ್ಯನ ಕಾಲ್ಗುಣವೇ ಸಾಕ್ಷಿ ಎಂದು ಗಂಡ ಗೋಪಾಲನ ವಿರುದ್ಧವೇ ರಾಜಿ ಸಂಚು ಮಾಡುತ್ತಾಳೆ. ಹೇಗಾದರೂ ಮಾಡಿ ಗೋಪಾಲನ ಪಡೆದುಕೊಳ್ಳಬೇಕು ಎನ್ನುವ ಆಸೆ ಆಕೆಗೆ.
ಪುಟ್ಟಕ್ಕನಿಂದ ತನ್ನ ಗಂಡನನ್ನು ಹೇಗಾದರೂ ಮಾಡಿ ಕಸಿದುಕೊಳ್ಳಬೇಕು ಇದಕ್ಕೆ ಇದುವೇ ಸರಿಯಾದ ಸಮಯ ಎಂದು ರಾಜೀ, ಪುಟ್ಟಕ್ಕನ ಮನೆಗೆ ಹೋಗುತ್ತಾಳೆ. ಆದರೆ ಪುಟ್ಟಕ್ಕಗೆ ರಾಜೀ ಬರುವಿಕೆಯನ್ನು ಕಂಡು ಆಕೆಯಿಂದ ಏನು ಸಮಾಧಾನದ ಮಾತುಗಳು ಸಿಗುವುದಿಲ್ಲ. ಆಕೆಯಿಂದ ಬರಿಯ ನೋವು ನಮಗೆ ಅಷ್ಟೇ ಎಂದು ಮನದಲ್ಲಿ ಅಂದುಕೊಳ್ಳುತ್ತಾಳೆ. ಹಾಗೆಯೇ ಅದೇ ರೀತಿ ಆಗುತ್ತದೆ ಕೂಡ.

ಪುಟಕ್ಕ ಯಾವತ್ತೂ ತನ್ನ ಮನೆಯ ಸಮಸ್ಯೆಗಳಿಗೆ ಗಂಡನನ್ನ ದೂಷಣೆ ಮಾಡಿರಲಿಲ್ಲ. ಆಕೆಗೆ ತನ್ನ ಗಂಡ ಎಂದರೆ ವಿಪರೀತವಾದ ಪ್ರೀತಿ. ಯಾವತ್ತೂ ಕೂಡ ತನ್ನ ಗಂಡನನ್ನು ಸ್ವಲ್ಪ ಕೂಡ ಆರೋಪ ಮಾಡಿರುವುದಿಲ್ಲ. ಇನ್ನೂ ಸಹನಾ ಮಾಡಿದ ತಪ್ಪಿಗೆ ಪುಟ್ಟಕ್ಕ ಮಾತ್ರ ತಲೆ ಕೊಡುವ ಹಾಗೆ ಆಗಿದೆ. ಸಹನಾ ಮತ್ತೆ ಮನೆಗೆ ಬರಬೇಕು, ಆಕೆ ಜೀವನ ಸರಿಹೋಗಬೇಕು ಎನ್ನುವುದೊಂದೇ ಪುಟ್ಟಕ್ಕಗೆ ಇರುವ ಗುರಿ.
ಸಹನಾ ಕಾಣದೇ ಪುಟ್ಟಕ್ಕ ಕಂಗಾಲು
ಸಹನಾ ಮಾತ್ರ ನಾನು ಏನಾದರೂ ಸಾಧನೆ ಮಾಡುತ್ತೇನೆ ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಾಳೆ. ಆದರೆ ಆಗಿದ್ದೇ ಬೇರೆ. ಪುಟ್ಟಕ್ಕಾಗೆ ಮಾತ್ರ ಶಾಕ್ ಮೇಲೆ ಶಾಕ್ ಸಿಗುತ್ತದೆ. ಸಹನಾ ರೀತಿಯಲ್ಲಿ ಇರುವ ಹುಡುಗಿ ರಕ್ತ ಸಿಕ್ತವಾಗಿ ಬಿದ್ದಿರುತ್ತಾಳೆ. ಹಾಗೆಯೇ ಆಕೆಯ ಮುಖ ನೋಡಿದಾಗ ಗುರುತೇ ಸಿಗದ ಹಾಗೆ ಇರುತ್ತದೆ. ಇದನ್ನೆಲ್ಲ ನೋಡಿದ ಪೊಲೀಸರು ಶವದ ಮುಂದೆ ನಿಂತು ಏನಾದರೂ ಸುಳಿವು ಸಿಗುತ್ತದಾ ಎಂದು ನೋಡುತ್ತಾರೆ.
ಸಿಕ್ತು ಸಹನಾ ಆಧಾರ್ ಕಾರ್ಡ್
ಪೊಲೀಸರಿಗೆ ಸಹನಾ ಭಾವಚಿತ್ರ ಇರುವ ಆಧಾರ್ ಕಾರ್ಡ್ ಸಿಗುತ್ತದೆ. ಅದರಲ್ಲಿ ಸಹನಾ ದೇವಿಪುರ ಎಂದು ಬರೆದಿರುತ್ತದೆ. ಇತ್ತ ರಾಜೀಯಿಂದ ಪುಟ್ಟಕ್ಕನಿಗೆ ಬಹಳ ನೋವು ಆಗುತ್ತದೆ. ಪುಟ್ಟಕ್ಕ ಅದೆಷ್ಟೇ ನೋವಲ್ಲಿದ್ದರು ಮನೆಗೆ ಬಂದವರನ್ನು ಅವಮಾನಿಸಿ ಕಳುಹಿಸುವುದಿಲ್ಲ. ರಾಜೀ ಕೂಡ ಗೋಪಾಲನ ಬಗ್ಗೆ ಬಹಳ ಕೆಟ್ಟದಾಗಿ ಮಾತನಾಡುತ್ತಾಳೆ. ಆದರೆ ಪುಟ್ಟಕ್ಕ ಸುಮ್ಮನಿರುತ್ತಾಳೆ.
ಗೋಪಾಲನ ಮೇಲೆ ರಾಜೀ ಕೆಂಡ
ನಿನ್ನ ಮನೆಯಲ್ಲಿ ಈ ಗೋಪಾಲ ಬರುವುದಕ್ಕಿಂತ ಮುಂಚೆ ಅದೆಷ್ಟು ಖುಷಿಯಾಗಿದ್ದೆ. ಆದರೆ ಗೋಪಾಲ ಬಂದ ಬಳಿಕ ನೋಡು ಹೇಗಾಗಿದ್ದಿಯಾ? ಕಷ್ಟದ ಮೇಲೆ ಕಷ್ಟ ಎಂದು ರಾಜೀ ಹೀಯಾಳಿಸುತ್ತಾಳೆ. ಹಾಗೆಯೇ ಸಹನಾ ಬಗ್ಗೆಯೂ ಮಾತನಾಡುತ್ತಾಳೆ . ಸಹನಾ ಯಾಕೆ ಮನೆ ಬಿಟ್ಟು ಹೋಗಿರುವುದು. ಆಕೆ ಮನೆ ಬಿಟ್ಟು ಹೋಗುವಂಥದ್ದು ಏನಾಗಿದೆ. ಇಷ್ಟೆಲ್ಲ ಆದರೂ ಸಹನಾಗೆ ತವರು ಮನೆಯ ನೆನಪು ಆಗುತ್ತಿಲ್ಲ . ಪುಟ್ಟಕ್ಕ ನಿನಗೆ ಮಗಳು ಎಂದರೆ ಎಷ್ಟು ಪ್ರೀತಿ ನನಗೆ ಗೊತ್ತಿದೆ. ಆದರೆ ಈ ನಿನ್ನ ಪರಿಸ್ಥಿತಿ ನೋಡಿದರೆ ಬೇಸರ ಆಗುತ್ತದೆ ಎನ್ನುತ್ತಾಳೆ.
ರಾಜೀ ವ್ಯಂಗ್ಯ
ಪುಟ್ಟಕ್ಕ ನನ್ನ ಬಾಳು ಹಾಗೂ ನಿನ್ನ ಬಾಳು ಈ ಗೋಪಾಲನಿಂದಾಗಿ ಹಾಳಾಗಿರುವುದು, ನಾನು ನೀನು ಯಾವತ್ತೂ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ ಎಂದು ಬೇಸರ ಆಗುತ್ತಿದೆ ಎಂದು ರಾಜೀ ಹೇಳುತ್ತಾಳೆ.


Click it and Unblock the Notifications