Puttakkana Makkalu: ಸ್ನೇಹಾಳಿಂದ ಒಂದಾದ ಚಂದ್ರು-ವಸು, ಅಜ್ಜಿಯ ಕನಸು ನನಸು ಮಾಡುತ್ತಾಳಾ ಸ್ನೇಹಾ..?
ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಪುಟ್ಟಕ್ಕಗೆ ತಾನು ತಪ್ಪು ಮಾಡಿ ಬಿಟ್ಟೆನಲ್ಲ ಎನ್ನುವುದು ಮನಸ್ಸಿಗೆ ಬಹಳ ಕಷ್ಟ ಆಗುತ್ತಿದೆ. ಏನು ಮಾಡುವುದು ಎಂದು ತಿಳಿಯದೇ ಬಹಳ ಬೇಸರ ಮಾಡಿಕೊಂಡಿದ್ದಾಳೆ. ಪುಟ್ಟಕ್ಕಗೆ ಹೇಗೆ ತಪ್ಪಾಗಿದೆ ನನ್ನ ಕಡೆ ಅನ್ನಿಸಿದೆಯೋ ಅದೇ ರೀತಿ ಸ್ನೇಹಾಗೂ ಅನ್ನಿಸುತ್ತಿದೆ.
ತನ್ನ ಅತ್ತೆಯ ಮೇಲೆ ನಾನೇ ತಪ್ಪು ತಿಳಿದುಕೊಂಡು ಬಿಟ್ಟೆನ್ನಲ್ಲ ಎನ್ನುವ ಮನಸ್ಥಿತಿ ಕಾಡುತ್ತಾ ಇರುತ್ತದೆ. ಸ್ನೇಹಾ ಬಂಗಾರಮ್ಮ ಬಳಿ ಕ್ಷಮೆ ಕೇಳಬೇಕು ಎಂದುಕೊಂಡಿದ್ದಳು. ನನ್ನ ಅತ್ತೆ ಏನು ತಪ್ಪೇ ಮಾಡಿಲ್ಲ, ಆದರೂ ಬಂಗಾರಮ್ಮ ಅವರ ಮೇಲೆ ನಾನು ತಪ್ಪು ಹೊರೆಸಿದೆ. ಇಲ್ಲ ಸಲ್ಲದ ಕೆಟ್ಟ ಮಾತುಗಳಿಂದ ನಾನು ಬೈದು ಬಿಟ್ಟೆ. ಆದರೆ ಇದನ್ನು ಬಂಗಾರಮ್ಮ ಕ್ಷಮಿಸಿ ಬಿಡುತ್ತಾರ ಎನ್ನುವುದು ಸ್ನೇಹಾ ಪ್ರಶ್ನೆ.

ಸ್ನೇಹಾ ಬಹಳ ಭಯ ಪಟ್ಟುಕೊಂಡಿದ್ದಾಳೆ .ಇದನ್ನೆಲ್ಲ ಕಂಡ ಕಂಠಿ ಅಮ್ಮನ ಜೊತೆ ಇನ್ನಾದರೂ ಸ್ನೇಹದಿಂದ ಇರುತ್ತಾಳೆ ಎನ್ನುವ ಯೋಚನೆಯಲ್ಲಿದ್ದಾರೆ. ಆದರೆ ಅದೆಲ್ಲವೂ ಸುಳ್ಳಾಗಿ ಪರಿಣಮಿಸಿದೆ. ಬಂಗಾರಮ್ಮ ಹಾಗೂ ಸ್ನೇಹಾ ಇಬ್ಬರು ಹಾವು ಮುಂಗುಸಿ ಹಾಗೆ ನಡೆದುಕೊಂಡಿದ್ದಾರೆ. ಇನ್ನು, ಸ್ನೇಹಾ ಹಾಗೂ ಕಂಠಿ, ಚಂದ್ರು ಹಾಗೂ ವಸುವನ್ನು ಒಂದು ಮಾಡಿದ್ದಾರೆ.
ನಂಜಮ್ಮ ಮನೆ ಮುಂದೆ ಬಂಗಾರಮ್ಮ
ನಂಜಮ್ಮನ ಮನೆಗೆ ಬಂದ ಸ್ನೇಹಾ ಹಾಗೂ ಕಂಠಿ, ಚಂದ್ರು ಬಳಿ ಹೇಗಾದರೂ ಮಾಡಿ ವಸುವನ್ನು ಸೇರಿಸಬೇಕು ಅವರಿಬ್ಬರೂ ಬಹಳ ಅನ್ಯೋನ್ಯವಾಗಿ ಜೀವನ ನಡೆಸಬೇಕು ಎಂದೆಲ್ಲ ಅಂದುಕೊಂಡಿದ್ದಾರೆ. ಇನ್ನೂ ಚಂದ್ರು ಮಾತ್ರ ಸ್ನೇಹಾ ಮಾಡಿದ ಉಪಕಾರವನ್ನು ನೆನೆದು ಕಣ್ಣೀರಿಡುತ್ತಾನೆ.

ಅಮ್ಮನನ್ನು ಕಂಡು ಹೆದರಿಸ ವಸು!
ಇನ್ನೂ ಸ್ನೇಹಾ ಹಾಗೂ ಕಂಠಿ ಅವರಿಬ್ಬರೂ ಮನೆಗೆ ಹೋದ ಬಳಿಕ ಬಂಗಾರಮ್ಮ ಅವರ ಮನೆಯ ಕಾರು ನಂಜಮ್ಮ ಮನೆ ಮುಂದೆ ಕೆಟ್ಟು ಹೋಗುತ್ತದೆ. ಇದನ್ನು ನೋಡಿದ ಬಂಗಾರಮ್ಮಗೆ ಬಹಳ ಸಿಟ್ಟು ಬರುತ್ತದೆ. ಆದರೆ ಅದ್ಯಾವುದನ್ನೂ ತೋರಿಸಲು ಸಾಧ್ಯ ಆಗದೆ ಕಾರಲ್ಲಿ ಕುಳಿತುಕೊಂಡು ಇರುತ್ತಾಳೆ . ಇನ್ನೂ ಬಂಗಾರಮ್ಮ ಅವರನ್ನು ನೋಡಿದ ವಸು ಮಾತ್ರ ಬಹಳ ಭಯ ಪಟ್ಟುಕೊಂಡು ಇರುತ್ತಾಳೆ. ನನ್ನನ್ನು ಇಲ್ಲಿ ಅಮ್ಮನೋಡಿದರೆ ಖಂಡಿತವಾಗಲೂ ಒಂದಾಗಿ ಇರಲು ಬಿಡುವುದಿಲ್ಲ. ನನ್ನ ಚಂದ್ರುವನ್ನು ಬೇರೆ ಮಾಡಿ ಬಿಡುತ್ತಾರೆ ಎಂದು ಬಹಳ ಬೇಸರ ಮಾಡಿಕೊಂಡಿದ್ದಾಳೆ.
ಹೆಂಡತಿ ಹಾಗೂ ಅಮ್ಮನ ಮಧ್ಯೆ ಸಿಕ್ಕಿ ಹಾಕಿಕೊಂಡ ಕಂಠಿ
ಇನ್ನೂ ಕಂಠಿಗೆ ಹೇಗಪ್ಪಾ ಅಮ್ಮ ಮತ್ತು ಸ್ನೇಹಾನ ಒಂದು ಮಾಡುವುದು ಎಂಬುದೇ ದೊಡ್ಡ ಯೋಚನೆಯಾಗಿದೆ. ಹಾಗೆಯೇ ಸ್ನೇಹಾ ಮಾತ್ರ ತಾನು ಬಂಗಾರಮ್ಮ ಮೆಚ್ಚುವ ಸೊಸೆ ಆಗಬೇಕು ಅದು ನನ್ನ ಅಮ್ಮನ ಸಲುವಾಗಿ ಎಂದು ಹೇಳುತ್ತಿದ್ದಾರೆ. ಮುಂದೇನು ನಡೆಯಲಿದೆಯೋ ಕಾದು ನೋಡಬೇಕಿದೆ.


Click it and Unblock the Notifications











