Puttakkana makkalu: ನಿಜ ಹೇಳಿದ ಸಹನಾಗೆ ಹುಚ್ಚಿ ಪಟ್ಟ; ಮುರಳಿ ವರ್ತನೆಗೆ ವೀಕ್ಷಕರ ಬೇಸರ
ಬಂಗಾರ ಮ್ಮ ಪುಟ್ಟಕ್ಕನ ಮನೆಯಲ್ಲಿ ನಂಜಮ್ಮನನ್ನು ನೋಡಿ ಕೆಂಡ ಕಾರುತ್ತಿದ್ದಾಳೆ. ಏನೋ ಬಲವಾದ ಕಾರಣ ಇಟ್ಟುಕೊಂಡೇ ಆಕೆ ಮನೆಗೆ ಬಂದಿದ್ದಾಳೆ. ಇಲ್ಲವಾದರೆ ನಂಜಮ್ಮ ಯಾವತ್ತೂ ಹೀಗೆ ಬರುವವಳು ಅಲ್ಲ ಎನ್ನುವ ವಿಚಾರ ಪುಟ್ಟಕ್ಕಗೆ ಕೂಡ ತಿಳಿದಿದೆ. ವಸು ತಿನ್ನುತ್ತಿದ್ದ ಊಟದ ಬಾಕ್ಸ್ ಅನ್ನು ಕೆಳಗೆ ಬೀಳಿಸುತ್ತಾಳೆ ಬಂಗಾರಮ್ಮ. ಆಕೆಯನ್ನು ನೋಡಿ ವಸು ಚಂದ್ರು ನಂಜಮ್ಮ ಕೂಡ ಶಾಕ್ ಆಗುತ್ತಾರೆ.
ಬಂಗಾರಮ್ಮಗೆ ಒಂದೇ ಚಿಂತೆ ಅದರಲ್ಲಿ ಏನಾದರೂ ನಂಜಮ್ಮ ಮಿಕ್ಸ್ ಮಾಡಿದ್ದರೆ? ಅದು ನನ್ನ ಮಗಳಿಗೆ ಪ್ರಾಬ್ಲಂ ಆಗುತ್ತದೆ ಎಂದು ಹೇಳುತ್ತಿರುತ್ತಾಳೆ. ಇದನ್ನು ಕೇಳಿದ ನಂಜಮ್ಮ ಇಲ್ಲ ಹಾಗೇನೂ ನಾನು ಮಿಕ್ಸ್ ಮಾಡಿಲ್ಲ, ನನಗೂ ಕೂಡ ಮನುಷ್ಯತ್ವ ಇದೆ ಎಂದಾಗ ಚಂದ್ರು ಕೂಡ ತನ್ನ ಅತ್ತೆಯ ಬಳಿ ಹೇಳುತ್ತಾನೆ. ನಾವು ಅವರನ್ನು ಕ್ಷಮಿಸಿದ ಬಳಿಕ ಅವರು ಹೀಗೆ ಊಟ ಮಾಡಿಸಿದ್ದು ಇಲ್ಲವಾದರೆ ಅವರು ಊಟ ಮಾಡಿಸಲು ಬರುತ್ತಾ ಇರಲಿಲ್ಲ ಎಂದು ಹೇಳುತ್ತಾನೆ. ಇದನ್ನು ಕೇಳಿದ ಬಂಗಾರ ಮ್ಮಗೆ ಇನ್ನೂ ಕೋಪ ಬರುತ್ತದೆ. ಆದರೂ ಏನು ಮಾತನಾಡದೆ ಸುಮ್ಮನೆ ಇರುತ್ತಾಳೆ.

ಪುಟ್ಟಕ್ಕನ ಬಳಿ ಬಂಗಾರಮ್ಮ ನಿನ್ನ ಮನೆಯಲ್ಲಿ ನನ್ನ ಮಗಳು ಸೇಫ್ ಆಗಿ ಇರುತ್ತಾಳೆ ಎಂದುಕೊಂಡಿದ್ದೆ. ಆದರೆ ಇಲ್ಲಿ ಆಕೆಗೆ ತೊಂದರೆ ಹೆಚ್ಚಾಗಿದೆ ಎನ್ನುತ್ತಾಳೆ. ಇನ್ನೂ ನಂಜಮ್ಮ ಊಟಕ್ಕೆ ಏನು ಮಿಕ್ಸ್ ಮಾಡಿಲ್ಲ ಎಂದು ಆಕೆಯೇ ತಿಂದು ಹೇಳುತ್ತಾಳೆ. ಹಾಗೆ ಅತ್ತು ಕರೆದು ಡ್ರಾಮ ಮಾಡುತ್ತಾಳೆ. ಇತ್ತ ಸಹನಾ ತನ್ನ ಗಂಡನ ನಿಲುವನ್ನು ಪ್ರಶ್ನೆ ಮಾಡುತ್ತಾ ಇರುತ್ತಾಳೆ. ಯಾಕೆ ನೀವು ನನಗೆ ಹುಚ್ಚಿ ಅನ್ನುವ ಪಟ್ಟ ಕಟ್ಟಲು ನೋಡುತ್ತಿದ್ದೀರಾ? ಆಗ ಬಂದಿದ್ದ ನಿಮ್ಮ ಗೆಳತಿ ಈಗ ಬರಲಿಲ್ವ ಎಂದೆಲ್ಲ ಪ್ರಶ್ನೆ ಮೇಲೆ ಪ್ರಶ್ನೆ ಮಾಡಿದಾಗ ಮುರಳಿ ತನ್ನ ತಾಯಿ ಮುಖ ನೋಡುತ್ತಾನೆ.
ತಾಯಿ ಮುಖ ನೋಡಿದ ಮುರಳಿ
ನಾನು ಮತ್ತು ವಿನುತ ಮಾತನಾಡುತ್ತಾ ಇರುವಾಗ ಕದ್ದು ಕೇಳಿಸಿಕೊಂಡು ಇದ್ದಾಳೆ ಎಂದಾಗ ಮುರಳಿ ಮೌನವಾಗಿ ಬಿಡುತ್ತಾನೆ. ಇನ್ನೂ ಸಹನಾ ಮುರಳಿ ಜೊತೆ ಕೊಂಚ ಖಾರವಾಗಿ ಮಾತನಾಡುತ್ತಾಳೆ. ಯಾಕೆ ಹೀಗೆಲ್ಲ ಮಾಡಿದಿರಿ ನಿಮಗೆ ಮನಸ್ಸಾದರೂ ಹೇಗೆ ಬಂತು. ನಾನು ಇಲ್ಲಿ ನಡೆದ ವಿಚಾರ ನಿಮ್ಮ ಬಳಿ ಹೇಳಿಕೊಂಡರೆ ನೀವು ನನ್ನನ್ನು ಹುಚ್ಚಿ ಎಂದು ಹೇಳುವುದು ಸರೀನಾ? ನಿಜವಾದ ಹುಚ್ಚರು ಏನು ಮಾಡುತ್ತಾರೆ ಗೊತ್ತಾ ಎಂದು ಮನೆಯಲ್ಲಿ ಕೈಗೆ ಸಿಕ್ಕಿದ್ದನು ಒಡೆದು ಹಾಕುತ್ತಾಳೆ.
ಸಹನಾ ಮೇಲೆ ಸಿಟ್ಟುಗೊಂಡ ಮುರಳಿ
ಬಳಿಕ ಮುರಳಿ ಮಾತಿಗೆ ಸಹನಾ ಮನಸ್ಸು ಒಡೆದು ಹೋಗುತ್ತದೆ. ತಾನು ಪ್ರೀತಿ ಮಾಡಿದ ಗಂಡ ಈ ರೀತಿ ಹೇಳಿದಾಗ ಏನು ಮಾಡಬೇಕು ಎಂದು ತಿಳಿಯದೇ ಬಹಳ ಬೇಸರದಲ್ಲಿ ಇರುತ್ತಾಳೆ. ಸಹನಾಗೆ ಈ ವಿಚಾರವನ್ನು ಯಾರ ಬಳಿ ಹೇಳಲು ಆಗುತ್ತಿಲ್ಲ. ಆಕೆಗೆ ಬಹಳ ಬೇಸರ ಕೂಡ. ತನ್ನ ತಾಯಿ ಬಳಿ ನಿಜ ವಿಚಾರ ಹೇಳಿ ಬಿಡೋಣ ಎಂದುಕೊಂಡರು ಸಹನಾಗೆ ಸಾಧ್ಯ ಆಗುವುದು ಇಲ್ಲ.

ಗಟ್ಟಿಯಾಗುತ್ತಿದೆ ಕಂಠಿ ಸ್ನೇಹಾ ಸಂಬಂಧ
ಕಂಠಿ ಹಾಗೂ ಸ್ನೇಹಾಳನ್ನು ದೂರ ಮಾಡಲು ರಾಧಾ ತುದಿಗಾಲಿನಲ್ಲಿ ಕಾಯುತ್ತ ಇರುತ್ತಾಳೆ. ಆಕೆಗೆ ಹೇಗಾದರೂ ಮಾಡಿ ಸ್ನೇಹಾಳಿಂದ ಕಂಠಿಯನ್ನು ದೂರ ಮಾಡಿ ಮಾವ ನನ್ನನ್ನು ಮದುವೆ ಆಗಬೇಕು. ಹಾಗೆಯೇ ನನ್ನ ತಾಯಿಗೆ ನ್ಯಾಯ ಕೊಡಿಸಬೇಕು ಎಂದು ಯೋಚನೆ ಮಾಡುತ್ತಿರುತ್ತಾಳೆ.


Click it and Unblock the Notifications











