ಮುನಿಸು ಮರೆತ ಸ್ನೇಹಾ.. ಕಂಠಿಗೆ ಮನಸೋತ ಪುಟ್ಟಕ್ಕನ ಮಗಳು!

By Poorva

ಪುಟ್ಟಕ್ಕನ ಮಕ್ಕಳು ಧಾರಾವಾಹಿ ಇದೀಗ ಅದ್ಭುತವಾಗಿ ಮೂಡಿ ಬರುತ್ತಿದ್ದು ನೋಡುಗರಿಗೆ ಮನೋರಂಜನೆ ನೀಡುತ್ತಿದೆ. ಏನೇ ಆದರೂ ಸರಿ ನೀನು ಮಾತ್ರ ಸ್ನೇಹಾ ಕೈ ಬಿಡಬೇಡ ಎಂದು ಪುಟ್ಟಕ್ಕ ಕಂಠಿ ಬಳಿ ಮನವಿ ಮಾಡಿದ್ದಾರೆ. ಆಕೆ ನಿನ್ನ ಬಳಿ ಬಹಳ ಕಠೋರವಾಗಿ ನಡೆದುಕೊಳ್ಳಬಹುದು ಆದರೆ ನೀನು ಮಾತ್ರ ಆದ್ಯಾವುದನ್ನು ಮನದಲ್ಲಿ ಇಟ್ಟುಕೊಳ್ಳಬೇಡ ಎಂದು ಬುದ್ಧಿ ಮಾತು ಹೇಳಿ ಹೋಗಿದ್ದಾರೆ.

ಕಂಠಿ ಮನದಲ್ಲಿ ಅದೇ ಯೋಚನೆ ಇರುತ್ತದೆ. ಏನೇ ಮಾಡಿದರೂ ಸ್ನೇಹಾ ನನ್ನ ಜೊತೆಯೇ ಇರಬೇಕು. ಆಕೆ ಹಾಗೂ ನಾನು ಎಂದಿಗೂ ಬೇರೆ ಆಗಲು ಸಾಧ್ಯ ಇಲ್ಲ ಎಂದು ಯೋಚನೆ ಮಾಡುತ್ತಾ ಇರುತ್ತಾರೆ. ಇನ್ನೂ ಬಂಗಾರಮ್ಮನವರ ಮನೆಯಲ್ಲಿ ಎರಡು ಒಲೆ ಉರಿಯುತ್ತಿದೆ. ಬಂಗಾರಮ್ಮ ಸ್ವತಃ ಅಡುಗೆ ಮಾಡುತ್ತಾ ಇದ್ದರೆ ಇತ್ತ ಸ್ನೇಹಾ ಕೂಡ ತರಕಾರಿಯನ್ನು ಹೆಚ್ಚುತ್ತಾ ಇರುತ್ತಾಳೆ. ಇದನ್ನೆಲ್ಲ ನೋಡಿದ ಬಂಗಾರಮ್ಮ ಕೊಂಚ ಕೋಪಗೊಂಡಿದ್ದಾರೆ.

Puttakkana makkalu Kannada serial written updated on 9th August

ನನ್ನ ಮನೆಯಲ್ಲಿ ಎರಡೆರಡು ಒಲೆ ಹೊತ್ತಿದರೆ ಮನೆಗೆ ಒಳ್ಳೆಯದಲ್ಲ ಎಂದಾಗ ಸ್ನೇಹಾ ಡೈರೆಕ್ಟ್ ಆಗಿ ಹೇಳುತ್ತಾಳೆ.. ಮನೆಗೆ ಮನಸ್ಸಿಗೆ ಒಳ್ಳೆಯದು ಆಗುವುದು ಒಳ್ಳೆಯ ಮಾತಿನಿಂದ..ಒಳ್ಳೆಯದು ಮಾಡುವುದರಿಂದ.. ಎರೆಡೆರಡು ಒಲೆ ಹೊತ್ತಿ ಉರಿಯುವುದರಿಂದ ಅಲ್ಲ ಎಂದು ಹೇಳುತ್ತಾಳೆ..

ಸ್ನೇಹಾ ಮೇಲೆ ಮುನಿಸಿಕೊಂಡ ಬಂಗಾರಮ್ಮ

ಸ್ನೇಹಾ ಮಾತು ಕೇಳಿ ಕೋಪಗೊಂಡ ಬಂಗಾರಮ್ಮ , "ಈಕೆಗೆ ಕೊಬ್ಬು ಕೊಂಚ ಜಾಸ್ತಿ ಇದೆ. ಎಷ್ಟೇ ಆದರೂ ಆ ನಂಜಮ್ಮನ ಕಡೆಯವಳು ಅಲ್ವಾ ಅದಕ್ಕೆ ಇದ್ದೆ ಇರುತ್ತದೆ ಎಂದು ಅಂದುಕೊಂಡಾಗಲೇ ಸ್ನೇಹಾ ಒಗ್ಗರಣೆ ಹಾಕುತ್ತ ಇರುವಾಗ ಸಾಸಿವೆ ಸಿಡಿಯುತ್ತದೆ.. ಇದನ್ನು ನೋಡಿದ ಸ್ನೇಹಾ, ಪರವಾಗಿಲ್ಲ ಸಾಸಿವೆ ಜೋರಾಗಿಯೇ ಸಿಡಿಯುತ್ತಿದೆ ಎಂದು ಹೇಳುತ್ತಾಳೆ. ಇದನ್ನು ಕೇಳಿ ಬಂಗಾರಮ್ಮಗೆ ಇನ್ನಷ್ಟು ಕೋಪ ಬರುತ್ತದೆ. ಇವರಿಬ್ಬರ ಮುನಿಸು ದುಪ್ಪಟ್ಟು ಆಗುತ್ತಿದೆ ಹೊರತು ಕಮ್ಮಿ ಮಾತ್ರ ಆಗುತ್ತಿಲ್ಲ.

ಇಬ್ಬರ ನಡುವೆ ಸಿಲುಕಿದ ವಸು

ಸ್ನೇಹಾ ಮತ್ತು ಬಂಗಾರಮ್ಮ ಶೀತಲ ಸಮರ ಮುನ್ನಡೆಸಿಕೊಂಡು ಬಂದಿದ್ದಾರೆ.. ಇದನ್ನು ನೋಡಿದ ವಸು ಮಾತ್ರ ಸುಸ್ತು ಆಗಿದ್ದಾಳೆ. ಇನ್ನೂ ಬಂಗಾರಮ್ಮ ಅಡುಗೆ ಮಾಡಿ ಡೈನಿಂಗ್ ಟೇಬಲ್ ಬಳಿ ತಂದು ಇಡುತ್ತಾಳೆ. ಆಗ ಅಲ್ಲಿಗೆ ಕಂಠಿ ಕೂಡ ಬರುತ್ತಾನೆ. ಇದಕ್ಕಿಂತ ಮುಂಚೆ ಸ್ನೇಹಾ ಕೂಡ ಅನ್ನ, ಸಾಂಬಾರ್ ಅನ್ನು ಡೈನಿಂಗ್ ರೂಮ್‌ಗೆ ತಂದು ಇಟ್ಟಿರುತ್ತಾಳೆ.

ಇನ್ನೂ ಬಂಗಾರಮ್ಮ ಜೋರಾಗಿ ಹೇಳುತ್ತಾಳೆ .. ಟೇಬಲ್‌ ನಲ್ಲಿ ಅನ್ನ, ಸಾಂಬಾರ್ ಇದೆ ಯಾರು ಬೇಕಾದರೂ ಊಟ ಮಾಡಬಹುದು ಎಂದು ಹೇಳುತ್ತಾಳೆ. ಇದನ್ನು ಕೇಳಿಸಿಕೊಂಡ ಕಂಠಿ ಸುಮ್ಮನೆ ಬಂದು ಊಟಕ್ಕೆ ಕೂರುತ್ತಾನೆ. ಆಗ ವಸುಗೆ ಕೂಡ ಏನೋ ಕೆಲಸ ಬರುತ್ತದೆ. ಆಕೆ ಹೇಳುತ್ತಾಳೆ ನನಗೆ ಸ್ವಲ್ಪ ಕೆಲಸ ಇದೆ ನೀನೇ ಬಡಿಸಿಕೊಂಡು ಊಟ ಮಾಡು ಎಂದು ಹೇಳುತ್ತಾಳೆ..

ಸ್ನೇಹಾ ಮಾಡಿದ ಅಡುಗೆ ಊಟ ಮಾಡಿದ ಕಂಠಿ

ಇನ್ನೂ ಕಂಠಿ ಗೆ ಸ್ನೇಹಾ ಮಾಡಿದ ಅಡಿಗೆ ಯಾವುದು ಅಮ್ಮ ಮಾಡಿದ ಅಡಿಗೆ ಯಾವುದು ಎಂದು ತಿಳಿಯದೇ ಸ್ನೇಹಾ ಮಾಡಿದ ಅಡುಗೆಯನ್ನು ಬಡಿಸಿಕೊಂಡು ಊಟ ಮಾಡುತ್ತಾನೆ.. ಇನ್ನೂ ಅಡುಗೆ ಮನೆಯಿಂದ ಬಂದ ಸ್ನೇಹಾಗೆ ಕಂಠಿ ತಾನು ಮಾಡಿರುವ ಅಡುಗೆ ತಿನ್ನುತ್ತಾ ಇರುವುದನ್ನು ನೋಡಿ ತಡೆಯಲಾಗದೆ ಸುಮ್ಮನೆ ನಿಂತುಕೊಂಡು ನೋಡುತ್ತಿದ್ದಾಳೆ. ಇದು ಇಬ್ಬರ ನಡುವಿನ ಮುನಿಸು ಕೊನೆಗೊಳ್ಳುವ ಮುನ್ಸೂಚನೆಯಾ ತಿಳಿಯದು.

More from Filmibeat

English summary
Kannada serial puttakkana makkalu written updated on 9th August.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X