ಪುಟ್ಟಕ್ಕನ ಮಕ್ಕಳು: ಮುರುಳಿ ಮೇಷ್ಟ್ರ ಸತ್ಯ ಕಂಠಿಗೆ ಗೊತ್ತಾಯ್ತು.. ಆದರೆ ಇದೇ ತಲೆದಂಡವಾಗುತ್ತಾ?

By ಎಸ್‌ ಸುಮಂತ್

'ಪುಟ್ಟಕ್ಕನ ಮಕ್ಕಳು' ಅಂದರೆ ಯಾರಿಗೆ ತಾನೇ ಇಷ್ಟವಾಗುವುದಿಲ್ಲ ಹೇಳಿ. ಅದರಲ್ಲೂ ಸಹನಾಳನ್ನು ಕಂಡರೆ ಅದೆಷ್ಟು ನಯ-ವಿನಯತೆ ಇರುವಂತಹ ಹೆಣ್ಣು. ನಮ್ಮ ಮನೆಗೆ ಸೊಸೆಯಾಗಿ ಬಂದರೆ ಹೇಗಿರುತ್ತೆ ಎಂದು ಎಷ್ಟೋ ಜನ ಅಂದುಕೊಳ್ಳುತ್ತಾರೆ. ಇದೇ ಕಾರಣಕ್ಕಾಗಿಯೇ ಈಗ ಸಹನಾಳನ್ನು ನೋಡಲು ಬಂದು ವಾಪಾಸ್ಸಾಗಿದ್ದ ಗಂಡಿನ ಕಡೆಯವರು ಮತ್ತೆ ಬರುವುದಾಗಿ ಹೇಳಿದ್ದಾರೆ. ಇನ್ನು ಸ್ನೇಹಾ ಒರಟು ಸ್ವಭಾವದವಳೇ ಆಗಿರಬಹುದು. ಆದರೆ ಅವಳ ಸ್ಟ್ರೈಟ್ ಫಾರ್ವಡ್ ಗುಣಕ್ಕೆ ಕಂಠಿ ಫುಲ್ ಫಿದಾ ಆಗಿದ್ದಾನೆ.

ಮೇಷ್ಟ್ರು ಯಾವಾಗಲೂ ಮನೆ, ಮನಸ್ಸಿಗೆ ಬರುತ್ತಿದ್ದ ಕಾರಣ ಕಂಠಿ ಅಂಡ್ ಗ್ಯಾಂಗ್ ಕಣ್ಣಿಗೆ ದುಷ್ಮನ್ ಆಗಿದ್ದರು. ಆದರೆ ಯಾವತ್ತು ಆ ಗ್ಯಾಂಗ್ ಮುರುಳಿ ಮೇಷ್ಟ್ರು ಯಾರಿಗಾಗಿ ಬರುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡಲಿಲ್ಲ. ಈಗ ಸತ್ಯ ಗೊತ್ತಾಗಿದೆ. ಅದನ್ನು ಕೇಳಿ ಕಂಠಿ ಒಳಗೊಳಗೆ ನಗುತ್ತಿದ್ದಾನೆ.

ಕಂಠಿ ಬಳಿ ಸತ್ಯ ಹೇಳಿದ ಸ್ನೇಹಾ?

ಕಂಠಿ ಬಳಿ ಸತ್ಯ ಹೇಳಿದ ಸ್ನೇಹಾ?

ಸ್ನೇಹಾಳಿಗೆ ಕಂಠಿ ಬೆಸ್ಟ್ ಫ್ರೆಂಡ್. ಮುಂಚೆ ಕ್ಲೋಸ್ ಆಗಿ ಇದ್ದಳು. ಆದರೆ ಈಗ ಮನೆಯೊಳಗೆ ಕರೆದು, ಮನೆಯ ಸಮಸ್ಯೆಯನ್ನು ಹಂಚಿಕೊಳ್ಳುವಷ್ಟು ಕ್ಲೋಸ್ ಆಗಿದ್ದಾಳೆ. ಹೀಗಾಗಿ ತನ್ನ ಮನೆಯ ಸಮಸ್ಯೆಯನ್ನು ಯಾರ ಬಳಿಯೂ ಹಂಚಿಕೊಳ್ಳುವುದಕ್ಕೆ ಆಗದೆ ಇರುವುದನ್ನು ಕಂಠಿ ಬಳಿ ಹಂಚಿಕೊಳ್ಳುತ್ತಿದ್ದಾಳೆ. ಮೇಷ್ಟ್ರು ಅಕ್ಕನಿಗೆ ಲವ್ ಲೆಟರ್ ಬರೆದಿದ್ದಾರೆ. ಅವಳನ್ನು ಪ್ರೀತಿ ಮಾಡುತ್ತಿದ್ದಾರೆ ಎಂದು ಹೇಳಿದ್ದಾಳೆ.

ಸತ್ಯ ತಿಳಿದ ಕಂಠಿಗೆ ಆನಂದ

ಸತ್ಯ ತಿಳಿದ ಕಂಠಿಗೆ ಆನಂದ

ಮುರುಳಿ ಮೇಷ್ಟ್ರ ಮೇಲೆ ಕಂಠಿಗೆ ಕೋಪ ಇದ್ದದ್ದು, ಸ್ನೇಹಾಳನ್ನು ಲವ್ ಮಾಡುತ್ತಿದ್ದಾನೆ ಎಂಬ ಕಾರಣಕ್ಕೆ. ಮುಂಗುಸಿ ಮತ್ತು ನಾಗ ಕೂಡ ಕಂಠಿಯ ಮನಸ್ಸನ್ನು ಅದೇ ರೀತಿಯಾಗಿ ಹಾಳು ಮಾಡಿದ್ದರು. ಆದರೆ ಸ್ನೇಹಾ ಯಾವಾಗ ಮೇಷ್ಟ್ರು ಅಕ್ಕನನ್ನು ಲವ್ ಮಾಡುತ್ತಿದ್ದಾರೆ ಎಂಬುದನ್ನು ಹೇಳಿದಳೋ, ಕಂಠಿಗೆ ಸಿಕ್ಕಾಪಟ್ಟೆ ಖುಷಿಯಾಗಿದೆ. ಅದನ್ನು ಎಕ್ಸ್‌ಪ್ರೆಸ್ ಮಾಡುವುದಕ್ಕೂ ಆಗದೆ ಮನಸ್ಸಿನೊಳಗೆ ಖುಷಿ ಪಡುತ್ತಿದ್ದಾನೆ. ಈ ಖುಷಿಯೇ ಮುರುಳಿ ಮತ್ತು ಸಹನಾಳ ಪ್ರೀತಿಗೆ ಕಾವಲಾಗಿ ನಿಲ್ಲಬಹುದು.

ಊರ ತುಂಬ ಹಬ್ಬಿಸುತ್ತಾಳಾ ಮಂಜುಳಾ?

ಊರ ತುಂಬ ಹಬ್ಬಿಸುತ್ತಾಳಾ ಮಂಜುಳಾ?

ಪುಟ್ಟಕ್ಕನ ಮನೆಯಲ್ಲಿ ಒಳ್ಳೆಯವಳಂತೆ ನಾಟಕವಾಡುತ್ತಾ, ಎಲ್ಲಾ ವಿಚಾರವನ್ನು ರಾಜೇಶ್ವರಿಗೆ ತಿಳಿಸುತ್ತಿರುವುದು ಮಂಜುಳಾ. ಹಣದ ಆಸೆಗೆ ತಾನು ನಿಮ್ಮವಳು ಎಂದು ತಿಂದ ಮನೆಗೆ ಎರಡು ಬಗೆಯುತ್ತಿದ್ದಾಳೆ. ಈಗಾಗಲೇ ಅವಳ ಬಗ್ಗೆ ಕೆಲವರಿಗೆ ಅನುಮಾನ ಮೂಡಿದೆ. ಆದರೆ ಅದನ್ನು ಸೀರಿಯಸ್ ಆಗಿ ತೆಗೆದುಕೊಂಡಿಲ್ಲ. ಈಗ ಕಂಠಿ ಬಳಿ ಸ್ನೇಹಾ ಹೇಳುತ್ತಿದ್ದ ಸಹನಾಳ ವಿಚಾರವನ್ನು ಗುಟ್ಟಾಗಿ ಕೇಳಿಸಿಕೊಂಡಿದ್ದಾಳೆ. ಊರವರಿಗೆ ಟಾಂ ಟಾಂ ಮಾಡುವ ಚಾಳಿ ಮಂಜುಳಾಗಿದೆ.

ಕಾಳಿ ಇದಕ್ಕೂ ಕೆಡಕು ಮಾಡುತ್ತಾನಾ?

ಕಾಳಿ ಇದಕ್ಕೂ ಕೆಡಕು ಮಾಡುತ್ತಾನಾ?

ಮಂಜುಳಾ ಈಗ ಎಲ್ಲವನ್ನು ತಿಳಿದು ರಾಜೇಶ್ವರಿ ಮನೆಗೆ ಹೇಳುತ್ತಾಳೆ. ಕಾಳಿಗೆ ಗೊತ್ತಾದರೆ ಮುಗಿತು. ಈ ಮೊದಲು ಕಂಠಿ ಮತ್ತು ಸ್ನೇಹಾಳ ಪೋಸ್ಟರ್ ಅಂಟಿಸಿ ಅವರಿಬ್ಬರ ಸಂಬಂಧವನ್ನೇ ಹಾಳು ಮಾಡಿದ್ದ. ಈಗ ಬೇರೆ ನಿನ್ನೊಬ್ಬನೇ ಬಳಿಯೇ ಹೇಳುತ್ತಿರುವುದು ಅಂತ ಸ್ನೇಹಾ ಹೇಳುತ್ತಿದ್ದಾಳೆ. ಇದನ್ನು ಬಂಡವಾಳವಾಗಿಟ್ಟುಕೊಂಡು ಕಾಳಿ ಮುರುಳಿ ಮತ್ತು ಸಹನಾ ಪೋಸ್ಟರ್ ಅಂಟಿಸಿದರೆ ಮತ್ತೆ ಕಂಠಿಯ ಮೇಲೆ ಸ್ನೇಹಾಗೆ ಕೋಪ ಬರುವುದರಲ್ಲಿ ನೋ ಡೌಟ್.

More from Filmibeat

English summary
Puttakkana Makkalu October 10th Episode Written Update. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X