For Quick Alerts
  ALLOW NOTIFICATIONS  
  For Daily Alerts

  ಪುಟ್ಟಕ್ಕನ ಮಕ್ಕಳು: ಮುರುಳಿ ಮೇಷ್ಟ್ರ ಬಗ್ಗೆ ಮಾತಾಡಿದ್ರೆ ಸಾಕು ಸಹನಾ ಗ್ರಹಚಾರ ಬಿಡಿಸ್ತಾಳೆ!

  By ಎಸ್ ಸುಮಂತ್
  |

  'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಸಹನಾ ಪ್ರೀತಿ ಒಂಥರ ಸ್ಲೋ ಆಗಿ ಓಡುತ್ತಾ ಇದೆ. ಮುರುಳಿ ಮೇಷ್ಟ್ರು ಧೈರ್ಯವಾಗಿ ಪ್ರೀತಿ ಮಾಡುತ್ತಾ ಇದ್ದರೆ, ಇತ್ತ ಸಹನಾ ಮನಸ್ಸಲ್ಲಿರುವ ಪ್ರೀತಿಯನ್ನು ತೋರಿಸದೆ ಮೊದಲು ಬಂದು ಸ್ನೇಹಾ ಬಳಿ ಮಾತನಾಡಿ ಅಂತ ಮೇಷ್ಟ್ರ ಆಸೆಗೆಲ್ಲಾ ಅಲ್ಲಲ್ಲಿಯೇ ತಣ್ಣೀರು ಎರೆಚುತ್ತಿದ್ದಾಳೆ. ಆದರೂ ಮೇಷ್ಟ್ರು ಕೂಡ ಧೈರ್ಯ ಮಾಡಿದ್ದಾರೆ. ನಮ್ಮ ಪ್ರೀತಿಯನ್ನು ಯಾವತ್ತಿಗೂ ಕಳೆದುಕೊಳ್ಳುವುದಿಲ್ಲ ಅಂತ ಪ್ರಾಮಿಸ್ ಮಾಡಿದ್ದಾರೆ.

  ಸಹನಾ ಮತ್ತು ಮುರುಳಿ ಸರ್ ಪ್ರೀತಿ ಮನೆಯಲ್ಲಿ ಸುಮಾಗೆ ತುಂಬಾನೇ ಚೆನ್ನಾಗಿ ಗೊತ್ತು. ಹಾಗೇ ಸಹನಾಳ ಕ್ಲೋಸ್ ಫ್ರೆಂಡ್‌ಗೂ ಗೊತ್ತು. ಇಬ್ಬರು ಸೇರಿ ಸಹನಾಳ ಪ್ರೀತಿಯನ್ನು ಬಚ್ಚಿಟ್ಟು ಕಾಪಾಡುತ್ತಿದ್ದಾರೆ. ಆದರೆ ಸುಮ್ಮನಿದ್ದ ಸುಮಾಳನ್ನು ಸಹಾನಾಳೇ ಕೆಣಕಿದ್ದಾಳೆ. ಸುಮಾ ರೊಚ್ಚಿಗೆದ್ದರೆ ಗೊತ್ತಲ್ಲ. ಎಲ್ಲಾ ಸತ್ಯ ಹೇಳಿ ಬಿಡುತ್ತೀನಿ ಅಂತ ಹೆದರಿಸುತ್ತಿದ್ದಾಳೆ.

  ಅರ್ಧಾಂಗಿ: ಮನೆಯವರ ವಿರೋಧದ ನಡುವೆ ದಿಗಂತ್ ಕರೆದುಕೊಂಡ ಹೋದ ಅದಿತಿ ವಾಪಾಸ್ ಬರುತ್ತಾಳಾ?ಅರ್ಧಾಂಗಿ: ಮನೆಯವರ ವಿರೋಧದ ನಡುವೆ ದಿಗಂತ್ ಕರೆದುಕೊಂಡ ಹೋದ ಅದಿತಿ ವಾಪಾಸ್ ಬರುತ್ತಾಳಾ?

  ಕಂಠಿ ಅಂಡ್ ಟೀಂ ಮಾಡಿದ್ದೇನು..?

  ಕಂಠಿ ಅಂಡ್ ಟೀಂ ಮಾಡಿದ್ದೇನು..?

  ಪುಟ್ಟಕ್ಕನ ಮನೆಯಲ್ಲಿ ಗಣೇಶೋತ್ಸವ ಅದ್ಧೂರಿಯಾಗಿ ನಡೆದಿದೆ. ಪ್ರತಿ ವರ್ಷ ಹೆಣ್ಣು ಮಕ್ಕಳು ಮತ್ತು ಊರಿನವರು ಸೇರಿಕೊಂಡು ಗಣೇಶೋತ್ಸವ ಮಾಡುತ್ತಿದ್ದರು. ಆದರೆ ಈ ವರ್ಷ ಗಣೇಶೋತ್ಸವ ಇನ್ನು ಅದ್ದೂರಿಯಾಗಿ ನಡೆದಿದೆ. ಅದಕ್ಕೆಲ್ಲ ಕಾರಣ ಕಂಠಿ ಅಂಡ್ ಟೀಂ. ಎಲ್ಲಾ ಕೆಲಸವನ್ನು ಒಟ್ಟಿಗೆ ನಿಂತು ಮಾಡಿದ್ದಾರೆ. ಇದನ್ನು ಹೇಳಿ ಸ್ನೇಹಾ ಸಂತಸ ಪಡುತ್ತಿದ್ದಾಳೆ. ಗಣೇಶನನ್ನು ಕೂರಿಸುವ ಸಮಯದಿಂದ ಹಿಡಿದು ಈಗ ಗಣೇಶ ವಿಸರ್ಜನೆ ತನಕ ಕಂಠಿ ಅಂಡ್ ಗ್ಯಾಂಗ್ ಜೊತೆಯಾಗಿದ್ದಾರೆ. ಇದು ಪುಟ್ಟಕ್ಕನ ಮಕ್ಕಳಿಗೆ ಬಹಳ ಸಂತಸ ನೀಡಿದೆ.

  'ಜೊತೆ ಜೊತೆಯಲಿ' ಬದಲು 'ಶ್ರೀರಸ್ತು ಶುಭಮಸ್ತು'? ಎರಡು ಧಾರಾವಾಹಿಗಳ ಭವಿಷ್ಯವೇನು?'ಜೊತೆ ಜೊತೆಯಲಿ' ಬದಲು 'ಶ್ರೀರಸ್ತು ಶುಭಮಸ್ತು'? ಎರಡು ಧಾರಾವಾಹಿಗಳ ಭವಿಷ್ಯವೇನು?

  ಸಹನಾ ಕೋಪ ಕಂಡು ನಾಗ ಶಾಕ್

  ಸಹನಾ ಕೋಪ ಕಂಡು ನಾಗ ಶಾಕ್

  ಸ್ನೇಹಾ ಈ ಬಾರಿಯ ಗಣೇಶೋತ್ಸವ ಬಗ್ಗೆ ಮಾತನಾಡುತ್ತಾ ಈ ಬಾರಿಯ ಹಬ್ಬ ಖುಷಿ ಖುಷಿಯಾಗಿಯೇ ಆಯ್ತು ಅಲ್ವಾ ಅಕ್ಕ ಎಂದಿದ್ದಾಳೆ. ಅದಕ್ಕೆ ಉತ್ತರಿಸಿದ ಸಹನಾ "ಹೌದು, ಸ್ನೇಹಾ ಎಂದಾಗ, ಪಕ್ಕದಲ್ಲಿಯೇ ಇದ್ದ ಸುಮಾ ಮೇಷ್ಟ್ರು ಬಾವಿಗೆ ಬಿದ್ದದ್ದು ಖುಷಿ ಆಯ್ತಾ ಅಕ್ಕ ಎಂದಿದ್ದಾಳೆ. ಆಗ ಸ್ನೇಹಾ, ಆ ಮೇಷ್ಟ್ರು ಅಲ್ಲಿಗ್ಯಾಕೆ ಬಂದರು? ಬಾವಿಗೆ ಯಾಕೆ ಬಿದ್ದರು ಎಂಬುದು ಗೊತ್ತೆ ಆಗಲಿಲ್ಲ" ಎಂದಾಗ, ಈ ಕಡೆ ನಾಗ ಶುರು ಮಾಡಿದ್ದಾನೆ. "ಮೊದಲೇ ಮೇಷ್ಟ್ರು ಸ್ನೇಹಾಳನ್ನ ನೋಡುತ್ತಿದ್ದಾನೆ ಎಂದುಕೊಂಡಿದ್ದಾರೆ. ಅದಕ್ಕೆ ನೆಗೆಟಿವ್ ಆಗಿ ಹೇಳುವುದಕ್ಕೆ ಶುರು ಮಾಡಿದ್ದಾನೆ. "ಹು ಸಿಸ್ಟರ್ ಮೇಷ್ಟ್ರು ಸ್ವಲ್ಪ ಹಂಗೆಯಾ. ಆಗಾಗ ತಲೆಕೆಟ್ಟವರಂತೆ ಆಡುತ್ತಾರಂತೆ. ಬೈದರೂ ಗೊಂಬೆ ಹತ್ತಿರ ನಿಂತು ಗದ್ದೆ ಹತ್ತಿರ ಮಾತನಾಡುತ್ತಾ ಇದ್ದರಂತೆ. ಅವರಿಗೆ ಸ್ವಲ್ಪ ಹುಚ್ಚಿರಬೇಕು" ಎಂದಿದ್ದಾನೆ.

  ಮೇಷ್ಟ್ರ ಪರ ನಿಂತ ಸಹನಾ

  ಮೇಷ್ಟ್ರ ಪರ ನಿಂತ ಸಹನಾ

  ನಾಗ ಮೇಷ್ಟ್ರ ಬಗ್ಗೆ ಇಲ್ಲ ಸಲ್ಲದ್ದನ್ನೆಲ್ಲಾ ಹೇಳುವಾಗ ಸಹನಾಗೆ ಕೋಪ ಬಾರದೆ ಇರುತ್ತಾ..? ನೋಡುವ ತನಕ ನೋಡಿದಳು ಕಂಟ್ರೋಲ್ ಮಾಡಿಕೊಳ್ಳಲು ಆಗಲಿಲ್ಲ. "ಹೇ ಮೇಷ್ಟ್ರು ಹಂಗಲ್ಲ. ಯಾರೋ ನಿಮಗೆ ತಪ್ಪಾಗಿ ಹೇಳಿದ್ದಾರೆ. ಬಾವಿಗೆ ಬಿದ್ದೋಗಿದ್ದು ಸಣ್ಣ ಅಪಘಾತ ಅಷ್ಟೆ. ಕಾಲು ಜಾರಿ ಬಿದ್ದು ಬಿಟ್ಟರು. ನಾನು ಆಮೇಲೆ ಅವರನ್ನು ವಿಚಾರಿಸುವುದಕ್ಕೆ ಹೋಗಿದ್ದೆ. ಅವರು ಚೆಂದಾಗೆ ಇದ್ದಾರೆ. ಅವರಿಗೇನು ತಲೆಕೆಟ್ಟಿಲ್ಲ. ಹಂಗೆಲ್ಲಾ ಮಾತಾಡಬೇಡಿ ನೀವು" ಅಂತ ಒಂದೇ ಸಮನೇ ಹೇಳಿದ್ದಾಳೆ. ಇದನ್ನು ಕಂಡು ಎಲ್ಲರೂ ಒಂದು ಕ್ಷಣ ಶಾಕ್ ಆಗಿದ್ದಾರೆ.

  ಸುಮಾಳನ್ನು ಕೆಣಕಿಬಿಟ್ಟಳಾ ಸಹನಾ?

  ಸುಮಾಳನ್ನು ಕೆಣಕಿಬಿಟ್ಟಳಾ ಸಹನಾ?

  ನಾಗ, ಮುಂಗುಸಿ, ಸ್ನೇಹಾ ಶಾಕ್ ಆಗಿದ್ದನ್ನು ಕಂಡು ಸಹನಾಗೆ ನಾನು ಸ್ವಲ್ಪ ಜಾಸ್ತಿಯೇ ಮಾತನಾಡಿ ಬಿಟ್ಟಿದ್ದೀನಿ ಎಂಬುದು ಅರ್ಥವಾಗಿದೆ. ಸುಮ್ಮನೆ ಇರದ ಸುಮ, ಏನಕ್ಕ ಮೇಷ್ಟ್ರ ಬಗ್ಗೆ ನಂಗಿಂತ ಬಹಳ ಅರ್ಥ ಮಾಡಿಕೊಂಡು ಬಿಟ್ಟಿದ್ದೀಯಾ ಎಂದಾಗ ನಮಗೆ ಗೊತ್ತಿಲ್ಲದವರ ಬಗ್ಗೆ ತಪ್ಪಾಗಿ ಹೇಳಿದಾಗ ಸರಿಯಾಗಿ ಹೇಳಬೇಕು ಅಲ್ವಾ ಸ್ನೇಹಾ ಅಂದಾಗ ಮೇಷ್ಟ್ರನ್ನ ನೋಡಿಕೊಂಡು ಬರಲು ಹೋದ ವಿಚಾರ ತಿಳಿದಿದೆ. ಆಗ ಸುಮಾ ಮಾಜಿ ಮೇಷ್ಟ್ರನ್ನ ಅಲ್ಲ ಅಕ್ಕ ಬಾವಿ ಮೇಷ್ಟ್ರನ್ನ ನೋಡಿಕೊಂಡು ಬರುವುದಕ್ಕೆ ಹೋಗಿದ್ದು, ಎಂದು ಮಾತಿಗೆ ಮಾತು ಬೆಳೆದಾಗ ಖೋ ಖೋ ವಿಚಾರ ಬಂದಿದೆ. ಸಿಟ್ಟಿಗೆದ್ದ ಸುಮಾ ಎಲ್ಲವನ್ನು ಹೇಳಿ ಬಿಡ್ಲಾ ಅಂತ ಹೆದರಿಸಿದ್ದಾಳೆ.


  {document1}

  English summary
  Puttakkana Makkalu September 22nd Episode Written Update. Here is the details.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X