Puttakkana Makkalu:ಸ್ನೇಹಾ ಕೈ ಸೇರಿದೆ ಚೀಟಿ; ಅಕ್ಕನ ಬರಹವನ್ನು ಕಂಡು ಹಿಡಿಯುತ್ತಾಳಾ ಸ್ನೇಹಾ?

By ಪೂರ್ವ

ಪುಟ್ಟಕ್ಕನ ಮನೆಯಲ್ಲಿ ಮುರಳಿ ಮದುವೆ ಸಂಭ್ರಮ ಕೊನೆಗೊಂಡಿದೆ. ಆದರೆ ಇದೀಗ ಸಹನಾಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಬಡ್ಡಿಗೆ ಹಣ ತೆಗೆದುಕೊಂಡಿದ್ದ ಸಹನಾ ಇದೀಗ ದೊಡ್ಡ ಕಷ್ಟದಲ್ಲಿ ಸಿಲುಕಿದ್ದಾಳೆ. ಆಕೆಗೆ ತಾನೇನಾದರು ಸಾಧನೆ ಮಾಡಬೇಕು ಎಂದುಕೊಂಡಿದ್ದಾಳೆ. ಇನ್ನೂ ಸಹನಾ ಅಸಹಾಯಕ ಹೆಣ್ಣು ಮಗಳು. ಆಕೆಗೆ ಹಿಂದಿಲ್ಲ ಮುಂದಿಲ್ಲ. ಆಕೆಯನ್ನು ಹೇಗಾದರೂ ಮಾಡಿ ತಮ್ಮ ಕೆಲಸಕ್ಕೆ ಬಳಸಬಹುದು ಎನ್ನುವ ಯೋಚನೆ.

ಇನ್ನೂ ಸಹನಾ ತನ್ನ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿರುವಾಗ ಒಬ್ಬ ಗಿರಾಕಿ ಬಂದು ತನಗೆ ದೋಸೆ ಬೇಕು ಎಂದು ಹೇಳುತ್ತಾನೆ. ಸಹನಾ ದೋಸೆ ಹಾಕುತ್ತಾ ಇರುತ್ತಾಳೆ. ಆ ಕಸ್ಟಮರ್‌ಗೆ ಬಹಳ ಸಿಟ್ಟು ಬರುತ್ತದೆ. ತನಗೆ ತಡವಾಯಿತು ಬೇಗ ದೋಸೆ ಹಾಕಿ ಕೊಡಿ ಎಂದು ಹೇಳಿದಾಗ ಸಹನಾಗೆ ಬಹಳ ಕೋಪ ಬರುತ್ತದೆ.

Puttakkana Makkalu September 7th episode update

ಕಿರಿಕ್ ಮಾಡುತ್ತಿದ್ದ ಗಿರಾಕಿಗೆ ಖಡಕ್ ಉತ್ತರ ಕೊಡುವಾಗಲೇ ಅಲ್ಲಿಗೆ ಬಡ್ಡಿ ಹಣ ಮಸೂಲಿ ಮಾಡುವುದಕ್ಕೆ ಬರುತ್ತಾನೆ. ಸಹನಾ ಆತನನ್ನು ನೋಡಿ ಬಹಳ ಖುಷಿಯಿಂದ ಮಾತಾಡಿಸುತ್ತಾಳೆ. ಬಡ್ಡಿ ಹಣವನ್ನು ತಾನೇ ಭಾನುವಾರ ತಂದುಕೊಡುವುದಾಗಿ ಹೇಳುತ್ತಾಳೆ. ಈ ವೇಳೆ ಬಡ್ಡಿ ಗಗನಕ್ಕೆ ಏರಿಸಿದ್ದನ್ನು ನೋಡಿ ಸಹನಾ ಮತ್ತೆ ಸಂಕಷ್ಟು ಸಿಕ್ಕಿಕೊಳ್ಳುತ್ತಾಳೆ.

ಬಡ್ಡಿ ವಸುಲಿ ಮಾಡುವವನ ದರ್ಪ

ಬಡ್ಡಿ ಹಣ 6000 ಕೊಡುವುದಕ್ಕೆ ಸಹನಾ ಮುಂದಾಗುತ್ತಾಳೆ. ಆಗ ಬಡ್ಡಿ ವಸೂಲಿಗೆ ಬಂದಿದ್ದವ "ಇದೇನು ಈ ರೀತಿ ಹೇಳುತ್ತಿದ್ದೀರಾ. ಬಡ್ಡಿ ಹಣ 6000 ಅಲ್ಲ, 30,000 ಎಂದು ಹೇಳುತ್ತಾನೆ. ಇದನ್ನು ಕೇಳಿ ಸಹನಾಗೆ ಆಕಾಶವೇ ಕಳಚಿ ಬಿದ್ದ ಹಾಗೆ ಆಗುತ್ತೆ. ನೀವು ಮೂರು ಲಕ್ಷ ಹಣಕ್ಕೆ 2% ರಷ್ಟು ಬಡ್ಡಿ ಎಂದು ಹೇಳಿದ್ದೀರಿ. ಅದಕ್ಕೆ ನಾನು ಸಾಲ ಮಾಡಿಕೊಳ್ಳಲು ಒಪ್ಪಿಕೊಂಡೆ" ಎಂದು ಹೇಳುತ್ತಾಳೆ. ಆಗ ಆತ ಎರಡು ಪರ್ಸೆಂಟ್ ಅಲ್ಲ. 12% ಅಂತ ಹೇಳಿದ್ದು. ಆದರೆ, ನೀವು ಹೆಣ್ಣು ಅನ್ನುವ ಕಾರಣಕ್ಕೆ 10 ಪರ್ಸೆಂಟ್‌ಗೆ ಒಪ್ಪಿಕೊಂಡಿದ್ದು" ಎಂದು ಹೇಳುತ್ತಾನೆ.

Puttakkana Makkalu September 7th episode update

ಸಹನಾಗೆ ನೂರೆಂಟು ಯೋಚನೆ

"ನೀವು ಆದಷ್ಟು ಬೇಗ ಹಣವನ್ನು ಕೊಡಬೇಕು. ಇಲ್ಲವಾದರೆ ಅಣ್ಣನೇ ಬಂದು ನಿಮ್ಮ ಅಂಗಡಿಯ ಮುಂದೆ ಕುಳಿತುಕೊಳ್ಳುತ್ತಾನೆ" ಎಂದು ಹೇಳುತ್ತಾನೆ. ಇನ್ನೂ ಸಹನಾಗೆ ಬಹಳ ಆತಂಕ ಶುರುವಾಗುತ್ತದೆ. ಏನು ಮಾಡಬೇಕೆಂದು ದಿಕ್ಕು ತೋಚದಂತಾಗುತ್ತೆ. ಇತ್ತ ಪುಟ್ಟಕ್ಕಗೆ ತನ್ನ ಮಗಳು ಸ್ನೇಹಾ ಖಂಡಿತವಾಗಿಯೂ ಏನಾದರೂ ಒಂದು ಸಾಧನೆ ಮಾಡಿಕೊಂಡು ಬರುತ್ತಾಳೆ. ಸ್ನೇಹಾ ಚಿಕ್ಕ ವಯಸ್ಸಿನಿಂದಲೂ ಕಷ್ಟವನ್ನು ನೋಡಿದ್ದಾಳೆ. ಕಷ್ಟಪಟ್ಟಿದ್ದಾಳೆ. ಒಂದು ದಿವಸ ಡಿಸಿ ಆಗಿ ಆಗುತ್ತಾಳೆ ಅನ್ನೋ ನಂಬಿಕೆಯಲ್ಲಿದ್ದಾರೆ.

ಪುಟ್ಟಕ್ಕನ ಕನಸು ನನಸು ಆಗುತ್ತಾ?

ಸ್ನೇಹಾ ಡಿಸಿಯಾಗುವ ಕನಸು ಇಷ್ಟು ಬೇಗ ನೆರವೇರುತ್ತೆ ಎಂದು ಪುಟ್ಟಕ್ಕ ಅಂದುಕೊಂಡಿರಲಿಲ್ಲ. ಈ ಕಾರಣಕ್ಕೆ ಊರಿಗೆಲ್ಲ ಹಬ್ಬದ ಊಟವನ್ನೇ ಬಡಿಸಲು ಹೋಗುತ್ತಾರೆ. ಇನ್ನು ಇತ್ತ ಸ್ನೇಹಾ ತನ್ನ ವ್ಯಾನಿಟಿ ಬ್ಯಾಗನ್ನು ಚೆಕ್ ಮಾಡಲು ಮುಂದಾಗುತ್ತಾಳೆ. ಆಗ ಅದರಲ್ಲಿ ಒಂದು ಚೀಟಿ ಸಿಗುತ್ತದೆ. ಆ ಚೀಟಿಯನ್ನು ನೋಡಿದ ಸ್ನೇಹಾಗೆ ಆಶ್ಚರ್ಯವಾಗುತ್ತದೆ. ಇದೇನಪ್ಪ ಚೀಟಿ ಎಂದು ತೆಗೆದು ಓದಲು ಶುರು ಮಾಡುತ್ತಾಳೆ. ಆ ಹ್ಯಾಂಡ್ ರೈಟಿಂಗ್‌ ಎಲ್ಲೋ ನೋಡಿದ್ದೇನಲ್ಲ ಎಂದು ಸ್ನೇಹ ಆಲೋಚನೆ ಮಾಡುತ್ತಾಳೆ.

More from Filmibeat

English summary
Puttakkana Makkalu September 7th episode update
Read more about: serial poorva filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X