ರಾಜಿ ತಂತ್ರಕ್ಕೆ ಪ್ರತಿತಂತ್ರ ಹೂಡಿದ ಗೋಪಾಲ; ರಾಜಿ ಕಕ್ಕಾಬಿಕ್ಕಿ

By ಪೂರ್ವ

ರಾಜಿ ತಂತ್ರಕ್ಕೆ ಗೋಪಾಲ ಪ್ರತಿತಂತ್ರ ಹೂಡಿದ್ದಾನೆ. ಪುಟ್ಟಕ್ಕನನ್ನು ಹೇಗಾದರೂ ಮಾಡಿ ಮಣಿಸಲೇಬೇಕು ಎನ್ನುವ ರಾಜ್ಯ ತಂತ್ರಕ್ಕೆ ಗೋಪಾಲ ಎಳ್ಳು ನೀರು ಬಿಟ್ಟಿದ್ದಾರೆ. ಗೋಪಾಲನನ್ನು ಅರೆಸ್ಟ್ ಮಾಡಲು ಪೊಲೀಸರನ್ನು ರಾಜಿ ಕರೆದುಕೊಂಡು ಬಂದಿದ್ದಾಳೆ. ಆ ವೇಳೆ ಪುಟ್ಟಕ್ಕ ಬಹಳ ಸಲ ರಾಜಿಯ ಬಳಿ ಬೇಡಿಕೊಳ್ಳುತ್ತಾಳೆ. "ನೋಡು ನಿನಗೆ ಏನು ಬೇಕಾದರೂ ನಾನು ಕೊಡುತ್ತೇನೆ ಅವರಿಗೆ ಏನು ಮಾಡಬೇಡ ಈಗಾಗಲೇ ಅವರ ತಲೆಗೆ ಬಲವಾದ ಪೆಟ್ಟು ಬಿದ್ದು ಈಗಷ್ಟೇ ಸುಧಾರಿಸಿಕೊಳ್ಳುತ್ತಿದ್ದಾರೆ" ಎಂದು ಪುಟ್ಟಕ್ಕ ಪದೇ ಪದೇ ರಾಜಿ ಬಳಿ ಕೇಳಿಕೊಳ್ಳುತ್ತಾಳೆ.

ಆದರೆ ಪುಟ್ಟಕ್ಕನ ಮಕ್ಕಳು ಮಾತ್ರ ಗೋಪಾಲನನ್ನು ಕರೆದುಕೊಂಡು ಹೋಗಲಿ, ನೀನು ನಿಶ್ಚಿಂತೆಯಿಂದ ಇರು ಅಮ್ಮ. ಈ ರಾಜಿ ಮಾತಿಗೆ ಸೊಪ್ಪು ಹಾಕಬೇಡ ಎಂದು ಸ್ನೇಹ ಪದೇ ಪದೇ ಹೇಳಿದ್ದಾಳೆ. ಆದರೆ, ರಾಜೀ ಮಾತ್ರ ಕೊನೆಗೆ ಪುಟ್ಟಕ್ಕನ ಬಳಿ ಆಕೆಯ ಬಳಿ ಇರುವ ಮನೆ ಹಾಗೂ ಮೆಸ್ ಅನ್ನು ಕೇಳುತ್ತಾಳೆ. ಇದನ್ನು ಕೇಳಿದ ಪುಟ್ಟಕ್ಕಗೆ ಶಾಕ್. ಆದರೆ, ಸ್ನೇಹಾ ಮತ್ತು ಸಹನಾ ಮಾತ್ರ ರಾಜಿ ವಿರುದ್ಧ ತಿರುಗಿ ಬೀಳುತ್ತಾರೆ. ಯಾಕೆ ಹೀಗೆ ನಮಗೆ ತೊಂದರೆ ಕೊಡುತ್ತಿದ್ದೀಯಾ ಎಂದೆಲ್ಲ ಸಹನಾ ಹೇಳುತ್ತಿದ್ದಾಳೆ.

Puttakkana Makkalu serial 30th January update about Raaji

ಆ ವೇಳೆ ಪುಟ್ಟಕ್ಕ ಮೆತ್ತಗೆ "ಸರಿ ನಾನು ನಿನಗೆ ಮೆಸ್ ಹಾಗೂ ಮನೆಯನ್ನು ಬರೆದುಕೊಡುತ್ತೇನೆ" ಎಂದು ಹೇಳುತ್ತಾರೆ. ಇದನ್ನು ಕೇಳಿದ ರಾಜಿ ಬಹಳ ಖುಷಿಯಾಗುತ್ತೆ. ಆದರೆ, ಗೋಪಾಲನಿಗೆ ಬಹಳ ಬೇಸರಾ ಆಗುತ್ತದೆ. ನನ್ನಿಂದಾಗಿ ಪುಟ್ಟಕ್ಕನಿಗೆ ಈ ಪರಿಸ್ಥಿತಿ ಬಂತಲ್ಲ ಎಂದು ಮನದಲ್ಲಿಯೇ ಕೊರಗುತ್ತಾರೆ. ಬಳಿಕ ಪುಟ್ಟಕ್ಕನ ಬಳಿ ನಿಜ ವಿಚಾರವನ್ನು ಹೇಳುತ್ತಾರೆ.

ಪುಟ್ಟಕ್ಕನ ಬಳಿ ಗೋಪಾಲ ಹೇಳಿದ್ದೇನು?

ಪುಟ್ಟಕ್ಕನಿಗೆ ಅಪಘಾತ ಆಗಿದ್ದು ನಿಜ. ಆದರೆ, ನನಗೆ ನೆನಪಿನ ಶಕ್ತಿ ಹೋಗಿರುವುದು ಸುಳ್ಳು. ನನಗೆ ನೆನಪಿನ ಶಕ್ತಿ ಇತ್ತು. ನಾನು ಸುಳ್ಳು ಹೇಳಿದೆ ಎಂದು ಹೇಳುತ್ತಾನೆ. ಇದನ್ನು ಕೇಳಿದ ಪುಟ್ಟಕ್ಕನಿಗೆ ಸಿಕ್ಕಾಪಟ್ಟೆ ಶಾಕ್ ಆಗುತ್ತೆ. ಹಾಗೆಯೇ ಪೊಲೀಸರ ಬಳಿ ಗೋಪಾಲ ನನಗೆ ಅಪಘಾತ ಮಾಡಿದ್ದು ಬೇರೆ ಯಾರು ಅಲ್ಲ ರಾಜಿ ಎಂದು ಹೇಳುತ್ತಾನೆ. ಇದನ್ನು ಕೇಳಿದ ರಾಜಿಗೆ ಶಾಕ್ ಆಗುತ್ತೆ. ಇತ್ತ ಕಂಠಿ ಮಾತಿನಂತೆ ಗೋಪಾಲ ನಡೆದುಕೊಂಡಿರುತ್ತಾನೆ.

Puttakkana Makkalu serial 30th January update about Raaji

ವರ್ಕ್ ಆಯ್ತು ಕಂಠಿ ಮಾಸ್ಟರ್ ಪ್ಲಾನ್

ಇನ್ನು ಬಂಗಾರಮ್ಮನ ನಿರ್ಧಾರ ಕೇಳಿ ಮಾದೇ ಗೌಡರಿಗೆ ಬಹಳ ಖುಷಿ ಆಯಿತು. ಶಶಿಕಲಾ ಬಾಯಿ ಮುಚ್ಚಿಸುವ ಹಾಗೆ ಮಾತನಾಡಿದ್ದು ನೋಡಿ ಇನ್ನೂ ಖುಷಿ ಆಗುತ್ತದೆ . ಇದಕ್ಕಾಗಿ ಬಂಗಾರಮ್ಮನ ಬಳಿ ಬಂದು ಮಾದೇಗೌಡರು ಮೆಚ್ಚುಗೆ ಸೂಚಿಸುತ್ತಾರೆ. ಬಂಗಾರಮ್ಮ ಇವತ್ತು ಮಾಡಿದ ಕೆಲಸದಿಂದ ನನಗೆ ಬಹಳ ಖುಷಿ ಆಯಿತು . ಸ್ನೇಹ ಮಗುವನ್ನ ಯಾವುದೋ ಮೂಡನಂಬಿಕೆ ಒಳಗಾಗಿ ತೆಗೆಸಿ ಬಿಡಿ ಆ ಮಗುವನ್ನು ಎಂದು ಶಶಿಕಲಾ ಹೇಳುತ್ತಾರೆ. ಆದರೆ, ನೀನು ಅದನ್ನು ತಿರಸ್ಕಾರ ಮಾಡಿದ್ದು ನನಗೆ ಖುಷಿ ಆಯಿತು. ನೀನು ಎಲ್ಲರನ್ನೂ ನನ್ನ ಮಕ್ಕಳೆಂದು ಅಂದುಕೊಂಡಿರೋದು ಇದಕ್ಕೊಂದು ನಿದರ್ಶನ ಎಂದು ಹೇಳುತ್ತಾರೆ.

ವಸು ಬಗ್ಗೆ ಮರುಕಪಟ್ಟ ಬಂಗಾರಮ್ಮ

ಇನ್ನು ಸ್ನೇಹಾಗೆ ಮಕ್ಕಳಾಗುವುದು ಬಂಗಾರಮ್ಮನಿಗೆ ಇಷ್ಟ ಇಲ್ಲ ಎಂದಲ್ಲ. ತನ್ನ ಮಗ ನನ್ನ ಮಾತು ಮೀರಿ ಬಿಟ್ಟಿದ್ದಾನೆ ಎಂದು ಬಹಳ ಬೇಸರ ಮಾಡಿಕೊಂಡಿದ್ದಾರೆ. ವಸು ರಾಧಾ ಜೀವನ ಸರಿ ಹೋಗಬೇಕು. ಅಲ್ಲಿಯ ತನಕ ಅವರಿಬ್ಬರೂ ಒಂದಾಗಬಾರದು ಎಂದೆಲ್ಲ ಹೇಳಿದ್ದೆ. ಆದರೆ, ಕಂಠಿ ಮಾತ್ರ ಈ ರೀತಿ ನಡೆದುಕೊಂಡು ಇರುವುದು ನನಗೆ ಇಷ್ಟ ಇಲ್ಲ ಎಂದು ಜೋರಾಗಿ ಹೇಳಿ, ಅಲ್ಲಿಂದ ಹೊರಟು ಹೋಗುತ್ತಾರೆ.

More from Filmibeat

English summary
Puttakkana Makkalu serial 30th January update about Raaji
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X