Puttakkana Makkalu:ಪುಟ್ಟಕ್ಕನ ಮಗಳು ಸ್ನೇಹಾಗೆ ಕಾರು ಅಪಘಾತ; ಇದೇ ಕೊನೆಯ ಸಂಚಿಕೆ?
ಪುಟ್ಟಕ್ಕನ ಹುಟ್ಟುಹಬ್ಬಕ್ಕೆ ಸ್ನೇಹಾ ಭರ್ಜರಿ ತಯಾರಿ ನಡೆಸುತ್ತಿರುತ್ತಾಳೆ. ಅವ್ವನಿಗೆ ಈ ಬಾರಿ ಒಂದೊಳ್ಳೆ ಸರ್ಪ್ರೈಸ್ ನೀಡಬೇಕು ಎಂದುಕೊಂಡಿರುತ್ತಾಳೆ. ಇದೇ ಖುಷಿಯಲ್ಲಿ ಇರುವಾಗಲೇ ಸ್ನೇಹಾಗೆ ಇದೀಗ ಅಪಘಾತ ಆಗಿದೆ. ಸ್ನೇಹಾ ಏನೋ ಮಾಡಲು ಹೋಗಿ ಏನೋ ಆಯ್ತು ಎಂದು ಅಭಿಮಾನಿಗಳು ಮರುಕು ಪಡುತ್ತಿದ್ದಾರೆ.
ಇನ್ನೇನು ಪುಟ್ಟಕ್ಕಗೆ ತನ್ನ ಮಗಳು ಸಹನಾ ಬದುಕಿರುವ ವಿಚಾರ ಹೇಳಬೇಕು. ಇಷ್ಟು ದಿನ ನಮ್ಮ ಜೊತೆ ಇದ್ದಿದ್ದು ಬಂಗಾರಮ್ಮ ಅಲ್ಲ ಸಿಂಗಾರಮ್ಮ. ನಿಜವಾದ ನನ್ನ ಅತ್ತೆ ಇವರೇ. ಸಿಂಗಾರಮ್ಮ ನಮ್ಮ ಕುಟುಂಬದವರ ಜೊತೆ ಚೆಲ್ಲಾಟ ಆಡುತ್ತಿದ್ದಾಳೆ ಎನ್ನುವ ಅಸಲಿ ಸತ್ಯವನ್ನು ಮನೆಯವರ ಬಳಿ ಹೇಳಿಕೊಳ್ಳಬೇಕು ಎನ್ನುವಷ್ಟರಲ್ಲಿ ಬಹಳ ದೊಡ್ಡ ಅನಾಹುತ ನಡೆದು ಹೋಗಿದೆ.

ಸಿಂಗಾರಮ್ಮ ಮೊದಲಿಗೆ ಸಹನಾಳನ್ನು ಟಾರ್ಗೆಟ್ ಮಾಡುತ್ತಾಳೆ. ಆದರೆ ಸಹನಾಳನ್ನು ಸ್ನೇಹಾ ಕಾಪಾಡಿಕೊಳ್ಳುತ್ತಾಳೆ. ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಪ್ರಾಣಾಪಾಯದಿಂದ ಪಾರು ಮಾಡಿದ್ದಾಳೆ. ಆದರೆ ಇದೀಗ ಬಂಗಾರಮ್ಮನನ್ನು ಸ್ನೇಹಾ ಮನೆಗೆ ಕರೆದುಕೊಂಡು ಹೋಗುತ್ತಿರಬೇಕಾದರೆ ಆಕೆಯನ್ನು ಸಿಂಗಾರಮ್ಮ ಟಾರ್ಗೆಟ್ ಮಾಡುತ್ತಾಳೆ. ಬಂಗಾರಮ್ಮ ಹಾಗೂ ಸಿಂಗಾರಮ್ಮ ಒಡಹುಟ್ಟಿದವರೇ ಆದರೂ ಬಂಗಾರಮ್ಮನನ್ನು ಕಂಡರೆ ಸಿಂಗಾರಮ್ಮನಿಗೆ ಒಂದು ಚೂರು ಆಗುವುದಿಲ್ಲ. ಆಕೆಯ ಜೀವನ ಸರ್ವ ನಾಶವಾಗಬೇಕು ಎಂದು ಆಗಾಗ ಹೇಳುತ್ತಲೇ ಇದ್ದಳು.
ಸಿಂಗಾರಮ್ಮಗೆ ಆಕೆಯ ಮಗ ಎಲ್ಲ ವಿಚಾರವನ್ನು ಹೇಳುತ್ತಾನೆ. ಬಂಗಾರಮ್ಮನನ್ನು ಸ್ನೇಹಾ ರಕ್ಷಣೆ ಮಾಡಿರುವುದು ಆಕೆಗೆ ತಿಳಿಯುತ್ತಿದ್ದಂತೆ ಕೆಂಡಾ ಮಂಡಲ ಆಗಿದ್ದಾರೆ. ಯಾವುದೇ ಕಾರಣಕ್ಕೂ ಬಂಗಾರಮ್ಮ ಹಾಗೂ ಸ್ನೇಹ ಬದುಕುಳಿಯಬಾರದು ಅವರಿಬ್ಬರ ಪ್ರಾಣವನ್ನು ತೆಗೆದು ಬಿಡಬೇಕು ಅದಕ್ಕಾಗಿ ಹೀಗೆ ಮಾಡು ಎನ್ನುವ ಐಡಿಯಾವನ್ನು ಸಿಂಗಾರಮ್ಮನೇ ಮಗನಿಗೆ ನೀಡುತ್ತಾಳೆ. ಆ ಪ್ರಕಾರ ಸ್ನೇಹಾ ಬಂಗಾರಮ್ಮನನ್ನು ಕರೆದುಕೊಂಡು ಕಾರಿನಲ್ಲಿ ಹೋಗುತ್ತಿರಬೇಕಾದರೆ ಸ್ನೇಹಾ ಕಾರಿಗೆ ಬಂಗಾರಮ್ಮ ಬಂದು ಜೋರಾಗಿ ಗುದ್ದುತ್ತೆ.
ಲಾರಿ ಗುದ್ದಿದ್ದಕ್ಕೆ ನಜ್ಜುಗೊಜ್ಜಾದ ಕಾರು
ಕಾರಿನ ಹಿಂದೆ ಕಂಠಿ ಕೂಡ ಅವರಿಬ್ಬರನ್ನು ಫಾಲೋ ಮಾಡುತ್ತಿರುತ್ತಾನೆ. ಆದರೆ. ಸ್ನೇಹಾ ಕಾರಿಗೆ ಲಾರಿ ಬಂದು ಗುದ್ದಿರುವುದನ್ನು ಕಂಡು ಕಂಠಿ ಗಾಬರಿ ಬೀಳುತ್ತಾನೆ. ಸ್ನೇಹಾ , ಅವ್ವ ಎಂದು ಕಂಠಿ ಕಿರುಚುತ್ತಾನೆ. ಕಾರಿನ ಬಳಿ ಬಂದು ಸ್ನೇಹಾ ಹಾಗೂ ತನ್ನ ಅವ್ವನ ರಕ್ಷಣೆ ಮಾಡಲು ಮುಂದಾಗುತ್ತಾನೆ. ಆದರೆ ಅವರಿಬ್ಬರ ಕಂಡಿಷನ್ ಬಹಳ ಕ್ರಿಟಿಕಲ್ ಆಗಿರುತ್ತದೆ. ಏನು ಮಾಡಬೇಕು ಎಂದು ದಿಕ್ಕು ತೋಚದಾಗುತ್ತದೆ. ಸ್ನೇಹಾ ಹಾಗೂ ಬಂಗಾರಮ್ಮನನ್ನು ಆಸ್ಪತ್ರೆಗೆ ಸೇರಿಸಲಾಗುತ್ತದೆ. ಇತ್ತ ಸ್ನೇಹಾ ಕಂಡಿಷನ್ ಬಹಳ ಕ್ರಿಟಿಕಲ್ ಆಗಿದೆ.

ಧಾರಾವಾಹಿಯಿಂದ ಸ್ನೇಹಾ ಪಾತ್ರ ಕಣ್ಮರೆ
ಇನ್ನು ಕೆಲವು ದಿನಗಳ ಹಿಂದಷ್ಟೇ ಸ್ನೇಹಾ ಪಾತ್ರದಲ್ಲಿ ನಟಿಸುತ್ತಿರುವ ಸಂಜನಾ ಬುರ್ಲಿ ಧಾರಾವಾಹಿ ತೊರೆಯುವ ಸುಳಿವು ನೀಡಿದ್ದರು. ತನ್ನ ಮುಂದಿನ ಬೆಳವಣಿಗೆಗೆ ಈ ನಿರ್ಧಾರ ಮುಖ್ಯ ಎಂದಿದ್ದರು. ಆದಾದ ಕೆಲವೇ ದಿನಗಳಲ್ಲಿ ಸ್ನೇಹಾ ಪಾತ್ರಕ್ಕೆ ಅಪಘಾತ ಆಗಿದೆ. ಈಗ ಸ್ನೇಹಾ ಬದುಕಿದರೆ, ಸಂಜನಾ ಧಾರಾವಾಹಿಯಲ್ಲಿ ಮುಂದುವರೆಯುತ್ತಾರೆ. ಅದೇ ಸ್ನೇಹಾ ಪಾತ್ರ ಕಣ್ಮರೆಯಾದರೆ, ಸಂಜನಾ ಬುರ್ಲಿ ಗುಡ್ ಬೈ ಹೇಳಿದ್ದಂತೆ. ಇಂದು (ಅಕ್ಟೋಬರ್ 23) ಸ್ನೇಹಾ ಹಾಗೂ ಬಂಗಾರಮ್ಮನ ಅಪಘಾತದ ಸಂಚಿಕೆ ಪ್ರಸಾರ ಆಗಲಿದೆ.
ಸ್ನೇಹಾ ಪಾತ್ರದ ಕಥೆಯೇನು?
ಪುಟ್ಟಕ್ಕನ ಮನೆಯಲ್ಲಿ ಈಗಾಗಲೇ ಸ್ನೇಹಾ ಅನ್ನೋ ಹೆಸರಿನ ಹುಡುಗಿ ಬಂದಾಗಿದೆ. ಆಕೆಗೆ ಹೃದಯ ಸಂಬಂಧಿ ಸಮಸ್ಯೆ ಇರುವುದು ರಿವೀಲ್ ಆಗಿದೆ. ಸ್ನೇಹಾಗೆ ಅಪಘಾತವಾಗುವ ಸ್ವಲ್ಪ ಹೊತ್ತಿನ ಮೊದಲು ಆಕೆಯ ತಂದೆ ಕರೆ ಮಾಡಿ ನನ್ನ ಮಗಳು ಡೋನರ್ ಸಿಕ್ಕಿದರೆ ಬದುಕಬಹುದು ಎಂದು ಹೇಳುತ್ತಾರೆ. ಈಗ ಕಿರಿತೆರೆ ವೀಕ್ಷಕರು ಸ್ನೇಹಾ ಪಾತ್ರದಾರಿ ಬದಲಾಗುತ್ತಾಳೆ. ಆಕ್ಸಿಡೆಂಟ್ ಮಾಡಿಸಿ ಸ್ನೇಹಾಳ ಹೃದಯವನ್ನು ಪುಟ್ಟಕ್ಕನ ಮನೆಯಲ್ಲಿರುವ ಹುಡುಗಿಗೆ ಕಸಿ ಮಾಡಿಸಿ, ಪಾತ್ರವನ್ನು ಮುಂದುವರೆಸಬಹುದು ಎಂದು ಲೆಕ್ಕ ಹಾಕಲಾಗುತ್ತಿದೆ.


Click it and Unblock the Notifications











