ಮುರುಳಿ ಮೇಷ್ಟ್ರ ಪ್ರೀತಿಯಲ್ಲಿ ಬಿದ್ದ ಮೇಲೆ ಸಹನಾ ಮಾಡರ್ನ್ ಲುಕ್ ಹೇಗಿದೆ ನೋಡಿ!

By ಎಸ್ ಸುಮಂತ್

'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಸದ್ಯ ಎರಡೆರಡು ಲವ್ ಸ್ಟೋರಿ ಶುರುವಾಗಿದೆ. ಒಂದು ಕಂಠಿ - ಸ್ನೇಹಾ ಲವ್ ಸ್ಟೋರಿ ಟ್ರ್ಯಾಕ್‌ಗೆ ಬಾರದೆ ಒದ್ದಾಡುತ್ತಿದೆ. ಹೇಳಿಕೊಳ್ಳುವುದಕ್ಕೆ ಧೈರ್ಯ ಸಾಲದೆ ಯೋಚಿಸುತ್ತಾ ಕೂತಿದ್ದಾನೆ ಕಂಠಿ. ಈಗಿನ್ನು ಶುರುವಾಗಿರುವ ಸ್ನೇಹವನ್ನು ಕಳೆದುಕೊಳ್ಳೋದಕ್ಕೆ ಇಷ್ಟವಿಲ್ಲ. ಹಾಗಂತ ಹೇಳದೆ ಸುಮ್ಮನೆ ಕೂತಿಲ್ಲ. ಅದಕ್ಕೆಂದೇ ಕಂಠಿ ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದ್ದಾನೆ. ಆದರೆ ಅದೆಲ್ಲವೂ ಕೈಗೂಡುತ್ತಿಲ್ಲ. ಇಬ್ಬರ ನಡುವೆ ಪ್ರೀತಿಯ ಮಾತುಕತೆಗಿಂತ ಹೆಚ್ಚಾಗಿ ಬಂಗಾರಮ್ಮನ ಮಗನ ಬಗ್ಗೆ ಚರ್ಚೆಯೇ ಬಂದು ಹೋಗುತ್ತದೆ‌. ಹೀಗಾಗಿ ತಲೆ ಚಚ್ಚಿಕೊಂಡು ಕಂಠಿ ಕೂಡ ಸುಮ್ಮನೆ ಆಗಿದ್ದಾನೆ.

ಆ ಕಡೆ ಅಂತ ಲವ್ ಸ್ಟೋರಿಯಾದ್ರೆ ಈ ಕಡೆ ಸಹನಾ ಮತ್ತು ಮುರುಳಿ ಮೇಷ್ಟ್ರದ್ದು ಬೇರೆಯದ್ದೇ ರೇಂಜಿಗೆ ಪ್ರೀತಿಯ ಪಯಣ ಸಾಗುತ್ತಿದೆ. ಮೇಷ್ಟ್ರಿಗೆ ಲವ್ ಆಗಿದೆ ಅನ್ನೋದು ಸುಮಾಳಿಗೆ ಕನ್ಫರ್ಮ್ ಆಗಿದೆ. ಸಹನಾಗೂ ಅದೆಂತದ್ದೋ ಭಾವನೆ ಮೇಷ್ಟ್ರ ಮೇಲೆ ಬೆಳೆದಿದೆ. ಅದು ಕೂಡ ಸಹನಾ ಮತ್ತು ಸುಮಾ ಅನುಭವಕ್ಕೆ ಬಂದಿದೆ. ಆದರೆ ಇಬ್ಬರು ಧೈರ್ಯವಾಗಿ ಪ್ರೀತಿ ಹೇಳಿಕೊಳ್ಳುವ ಗೋಜಿಗೆ ಹೋಗುತ್ತಿಲ್ಲ. ಆದರೆ ಇದೀಗ ಸಹನಾ ಬದಲಾವಣೆ ನೋಡಿ ಫ್ಯಾನ್ಸ್ ದಂಗಾಗಿದ್ದಾರೆ.

ಹೊಸ ಫೋಟೊಗೆ ಪೋಸ್ ಕೊಟ್ಟ ಸಹನಾ

ಹೊಸ ಫೋಟೊಗೆ ಪೋಸ್ ಕೊಟ್ಟ ಸಹನಾ

ಪುಟ್ಟಕ್ಕನ ಮಕ್ಕಳಲ್ಲಿ ಸರಳ ಸ್ವಭಾವದ, ಹೆಚ್ಚು ಮಾತನಾಡದ, ಹೆಚ್ಚು ಭಯ ಪಡುವ ಗುಣದವಳು ಎಂದರೆ ಅದು ಸಹನಾ. ಮನೆಯಲ್ಲಿ ಸಮಸ್ಯೆಯಿದ್ದ ಕಾರಣಕ್ಕೆ ಸಹನಾ ಓದುಗೀದು ಎಲ್ಲಾ ಬಿಟ್ಟು ಅವ್ವನ ಜೊತೆಗೆ ಮೆಸ್‌ನಲ್ಲಿ ಉಳಿದುಬಿಟ್ಟಳು. ಸೀರೆಯನ್ನೇ ಉಡುವ ಸಹನ ಪಕ್ಕಾ ಹಳ್ಳಿಯ ಮುಗ್ಧ ಹೆಣ್ಣಿನ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಸಹನಾ ನಿಜಕ್ಕೂ ರಿಯಲ್ ಲೈಫ್‌ನಲ್ಲಿ ಹೀಗೆಲ್ಲಾ ಇಲ್ಲವೇ ಇಲ್ಲ. ಅವರ ಸೋಶಿಯಲ್ ಮೀಡಿಯಾದಲ್ಲೊಮ್ಮೆ ಇಣುಕು ಹಾಕಿದರೆ ಇದೆಲ್ಲಾ ಗೊತ್ತಾಗುತ್ತದೆ. 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಸಹನಾ ಅಲಿಯಾಸ್ ಅಕ್ಷರಾ ಅಪ್ಪಟ ಹಳ್ಳಿ ಹುಡುಗಿಯಾದರೆ ರಿಯಲ್ ಲೈಫ್‌ನಲ್ಲಿ ಅಪ್ಪಟ ಮಾಡರ್ನ್‌ ಗರ್ಲ್.

ಮುರುಳಿ ಮೇಷ್ಟ್ರ ಅಂತೆ ಸಹನಾಗೆ ಸೋತ ಹುಡುಗರು

ಮುರುಳಿ ಮೇಷ್ಟ್ರ ಅಂತೆ ಸಹನಾಗೆ ಸೋತ ಹುಡುಗರು

ಮುರುಳಿ ಮೇಷ್ಟ್ರು ಹೇಗೋ ಮಕ್ಕಳಿಗೆ ಪಾಠ ಮಾಡುತ್ತಾ, ಕಾಲ ಕಳೆಯುತ್ತಿದ್ದರು. ಆದರೆ ಸಹನಾ ಅವರ ಮನಸ್ಸನ್ನು ತುಂಬಾನೇ ಡಿಸ್ಟರ್ಬ್ ಮಾಡಿದ್ದಾರೆ. ಇದು ಧಾರಾವಾಹಿಗೆ. ಆದರೆ ರಿಯಲ್ ಲೈಫ್‌ನಲ್ಲೂ ಪಡ್ಡೆ ಹೈಕ್ಳ ಹಾರ್ಟ್ ಅನ್ನು ಕೆದಕುವಂತ ಕೆಲಸ ಮಾಡಿದ್ದಾರೆ ಅಕ್ಷರಾ ಬೇಬಿ. ಅದೇನೆಂದರೆ ಇತ್ತೀಚೆಗೆ ಸಖತ್ ಫೋಟೊಶೂಟ್ ಮಾಡಿಸಿದ್ದಾರೆ. ಅದರಲ್ಲಿ ಸಿಕ್ಕಾಪಟ್ಟೆ ಮಾಡರ್ನ್ ಲುಕ್ಕಿಗೆ ಪೋಸ್ ಕೊಟ್ಟಿದ್ದಾರೆ. ತಿಳಿ ನೀಲಿ ಸ್ಪರ್ಟ್‌ಗೆ ಬಿಳಿ ಬಣ್ಣದ ಟಾಪ್ ಹಾಕಿಕೊಂಡು ದೃಷ್ಟಿಯಾಗುವಂತೆ ಗೊಂಬೆಯ ರೀತಿ ಕಾಣುತ್ತಿದ್ದಾರೆ. ಸೀರೆಯಲ್ಲಿ ಮುರುಳಿ ಮಾಸ್ಟರ್ ಕ್ಲೀನ್ ಬೋಲ್ಡ್ ಆಗಿದ್ದರೆ, ಈ ಲುಕ್ಕಿನಿಂದ ಹಲವು ಹುಡುಗರ ಹೃದಯ ಕದ್ದಿದ್ದಾರೆ ಅಕ್ಷರಾ.

ಸಹನಾಗೆ ಮ್ಯಾಚ್ ಆಗುತ್ತೆ ಎರಡು ಲುಕ್

ಸಹನಾಗೆ ಮ್ಯಾಚ್ ಆಗುತ್ತೆ ಎರಡು ಲುಕ್

ಎಲ್ಲಾ ರೀತಿಯ ಡ್ರೆಸ್ ಗಳು ಅಷ್ಟು ಸುಲಭದಲ್ಲಿ ಎಲ್ಲರಿಗೂ ಮ್ಯಾಚ್ ಆಗಲ್ಲ. ಆದರೆ ನಮ್ಮ 'ಪುಟ್ಟಕ್ಕನ ಮಗಳು' ಸಹನಾ ಅದಕ್ಕೆ ವಿರುದ್ಧ. ಅಕ್ಷರಾಗೆ ಟ್ರೆಡಿಷನಲ್ ಲುಕ್ ಆದರೂ ಓಕೆ, ಮಾಡರ್ನ್ ಲುಕ್ ಆದರೂ ಓಕೆ. ಎರಡರಲ್ಲೂ ತುಂಬಾನೇ ಮುದ್ದಾಗಿ ಕಾಣುತ್ತಾರೆ. ಈಗಾಗಲೇ ಸೀರೆ, ಲಂಗ ದಾವಣಿ, ಕುರ್ತಾ ಅಂತೆಲ್ಲಾ ಸಾಕಷ್ಟು ಫೋಟೊಶೂಟ್ ಮಾಡಿಸಿದ್ದಾರೆ. ಅದರಲ್ಲಿ ಮಾಡರ್ನ್ ಡ್ರೆಸ್‌ನಲ್ಲಿ ಕೂಡ ಸಾಕಷ್ಟು ಫೋಟೊಗಳು ಕಾಣಬಹುದು. ಹೀಗಾಗಿ ಎರಡು ಲುಕ್‌ಗೂ ಮ್ಯಾಚ್ ಆಗುವ ಅಕ್ಷರಾಗೆ ಸಾಕಷ್ಟು ಡಿಮ್ಯಾಂಡ್ ಕೂಡ ಇದೆ.

ಅಭಿಮಾನಿಗಳಿಂದ ಅಕ್ಷರಾಗೆ ಶುಭ ಹಾರೈಕೆ

ಅಭಿಮಾನಿಗಳಿಂದ ಅಕ್ಷರಾಗೆ ಶುಭ ಹಾರೈಕೆ

ಅಕ್ಷರಾ 'ಪುಟ್ಟಕ್ಕನ ಮಗಳು' ಧಾರಾವಾಹಿಗೆ ಬರುವುದಕ್ಕೂ ಮುನ್ನ 'ಅಮ್ನೋರು' ಎಂಬ ಧಾರಾವಾಹಿ ಮಾಡಿದ್ದರು. ಆ ಧಾರಾವಾಹಿಯಲ್ಲೂ ತುಂಬಾ ಖ್ಯಾತಿ ಪಡೆದಿದ್ದರು. ಅಕ್ಷರಾಗೆ ನಟನೆಯ ಬ್ಯಾಕ್‌ಗ್ರೌಂಡ್‌ ಇಲ್ಲ. ಕಷ್ಟಪಟ್ಟು, ಆಡಿಷನ್ ಕೊಟ್ಟು ಈ ಫೀಲ್ಡ್‌ಗೆ ಬಂದವರು ಎಂಬುದನ್ನು ಅವರೇ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ಪುಟ್ಟಕ್ಕನ ಮೊದಲ ಮಗಳು ಸಹನಾಳ ಪಾತ್ರದಲ್ಲಿ ಕಾಣಿಸಿಕೊಂಡಾಗಿನಿಂದ ಖ್ಯಾತಿ ಮತ್ತಷ್ಟು ಹೆಚ್ಚಾಗಿದೆ. ಸೋಶಿಯಲ್ ಮೀಡಿಯಾದಲ್ಲಿ 18.2 ಸಾವಿರ ಜನ ಫಾಲೋ ಮಾಡ್ತಿದ್ದಾರೆ. ಅವರು ಸೋಶಿಯಲ್ ಮೀಡಿಯಾದಲ್ಲಿ ಹಾಕುವ ಅಪ್ಡೇಟ್‌ಗೆ ಆಗಾಗ ಮನಸ್ಸಾರೆ ಶುಭ ಹಾರೈಸುತ್ತಿರುತ್ತಾರೆ.

More from Filmibeat

English summary
Puttakkana Makkalu Serial Actress Akshara Photo Shoot. Akshara Popularly Known As Sahana In Puttakkana Makkalu Done Glamorous Photoshoot. Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X