ಮಂಜು ಭಾಷಿಣಿ: ಬಂಗಾರಮ್ಮನ ಹೊಸ ಫೋಟೊಗೆ ಫ್ಯಾನ್ಸ್ ಫುಲ್ ಖುಷಿ

By ಎಸ್ ಸುಮಂತ್

'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಬಡ್ಡಿ ಬಂಗಾರಮ್ಮನ ಪಾತ್ರ ಎಲ್ಲರನ್ನು ಕಾಡುತ್ತದೆ. ಬಂಗಾರಮ್ಮನ ಗತ್ತು ಯಾರಿಗೆ ಇಷ್ಟ ಆಗಲ್ಲ ಹೇಳಿ. ಗತ್ತು, ಗಾಂಭೀರ್ಯದಲ್ಲಿ ಬಂಗಾರಮ್ಮನನ್ನು ಬಿಟ್ಟರೆ ಬೇರೆ ಯಾರು ಇಲ್ಲವೇನೋ ಎಂಬಂತೆ ಕಾಣುತ್ತದೆ. ಆದರೆ ಬಂಗಾರಮ್ಮನನ್ನು ನೋಡಿದವರೆಲ್ಲಾ ಅವರ ರಿಯಲ್ ಫೋಟೊ ನೋಡಿದರೆ ಖಂಡಿತಾ ಶಾಕ್ ಆಗುತ್ತಾರೆ. ಅವರ ಸೋಶಿಯಲ್ ಮೀಡಿಯಾದಲ್ಲಿ ಹೊಸದಾಗಿ ಫೋಟೊ ಒಂದನ್ನು ಹಂಚಿಕೊಂಡಿದ್ದಾರೆ. ಆ ಫೋಟೊಗೆ ಫಾಲೋವರ್ಸ್ ಫಿದಾ ಆಗಿದ್ದಾರೆ.

ಬಂಗಾರಮ್ಮನ ಪಾತ್ರ ಮಾಡಿರುವುದು ಮಂಜು ಭಾಷಿಣಿ. ಮಂಜು ಭಾಷಿಣಿ ಅವರನ್ನು 'ಸಿಲ್ಲಿ ಲಲ್ಲಿ' ಧಾರಾವಾಹಿಯಲ್ಲಿ ಲಲಿತಾಂಬ ಪಾತ್ರ ಮಾಡಿದ್ದವರು. ಕಾಮಿಡಿ ಪಾತ್ರದಲ್ಲಿಯೇ ಎಲ್ಲರನ್ನು ನಗಿಸಿದ್ದವರು. ಆದರೆ ಈಗ ಗತ್ತು ಗಾಂಭೀರ್ಯ ಪಾತ್ರದ ಮೂಲಕವೇ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಅದರಲ್ಲೂ ಕಾಮಿಡಿ ಪಾತ್ರದ ಮೂಲಕ ಅದೆಷ್ಟು ಖ್ಯಾತಿ ಪಡೆದವರು. ಈಗ ಅಷ್ಟೇ ಗಂಭೀರವಾದ ಪಾತ್ರದಲ್ಲೂ ಅಷ್ಟೇ ಗಮನ ಸೆಳೆಯುತ್ತಿದ್ದಾರೆ.

ಬಂಗಾರಮ್ಮ ಬೈಕ್ ಓಡಿಸೋದು ನೋಡಿದ್ದೀರಾ

ಬಂಗಾರಮ್ಮ ಬೈಕ್ ಓಡಿಸೋದು ನೋಡಿದ್ದೀರಾ

ಬಂಗಾರಮ್ಮ ಎಂದರೆ ಹೇಗೆ..? ಸೀರೆಯುಟ್ಟು, ಮ್ಯಾಚಿಙಗ್ ಒಡವೆ ಹಾಕಿ ಪಕ್ಕಾ ಯಜಮಾನಿ ರೀತಿ ಕಾಣುವುದು. ಅವರನ್ನು ಆ ರೀತಿಯಲ್ಲಿಯೇ ನೋಡುವುದಕ್ಕೆ ಇಷ್ಟವಾಗುತ್ತೆ. ಆದರೆ ಇದೇ ಬಂಗಾರಮ್ಮ ಬೈಕ್ ಓಡಿಸಿದರೇ ಹೇಗಿರುತ್ತೆ..? ಅಬ್ಬಬ್ಬಾ ಇಮ್ಯಾಜಿನೇಷನ್ ಕೂಡ ಮಾಡಿಕೊಳ್ಳುವುದಕ್ಕೆ ಬೇರೆ ರೀತಿಯ ಫೀಲ್ ಕೊಡುತ್ತೆ ಅಲ್ಲವಾ. ಆದರೆ ಬಂಗಾರಮ್ಮ ಬೈಕ್ ಓಡಿಸಿದರೆ. ಅದು ಪ್ರೆಸೆಂಟ್ ಸಮಯದಲ್ಲಲ್ಲಾ. ಈ ಹಿಂದೆ ಅವರು ಬೈಕ್ ಓಡಿಸಿದ್ದಾರೆ. ಆ ಪೋಟೊ ಹಂಚಿಕೊಂಡಿದ್ದು, ಸಖತ್ ಖುಷಿ ಕೊಡುತ್ತಿದೆ.

ಬಂಗಾರಮ್ಮನ ಹೊಸ ಪೋಟೊಗೆ ಫಿದಾ

ಬಂಗಾರಮ್ಮನನ್ನು 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ನೋಡಿದವರು ಇವರು ಇರುವುದೇ ಈ ರೀತಿಯೇನೋ ಎಂಬಂತೆ ಫೀಲ್ ಮಾಡುತ್ತಾರೆ. ಆದರೆ ಅವರ ಸೋಶಿಯಲ್ ಮೀಡಿಯಾದಲ್ಲಿ ಅವರು ಹಾಕುವ ಪ್ರೆಸೆಂಟ್ ಫೋಟೊಗಳು ಕೂಡ ಎಲ್ಲರನ್ನು ಆಶ್ಚರ್ಯಚಕಿತಗೊಳಿಸದೆ ಇರುವುದಿಲ್ಲ. ಮಾಡರ್ನ್ ಆಗಿ ಕೂಡ ಇರುವ ಮಂಜು ಭಾಷಿಣಿ, ರಿಯಲ್ ಲೈಫ್‌ನಲ್ಲಿ ಸಖತ್ ಸ್ಲಿಮ್ ಆಗಿ ಕಾಣುತ್ತಾರೆ. ಈಗ ಹಂಚಿಕೊಂಡಿರುವ ಫೋಟೊ ಫಾಲೋವರ್ಸ್ ಫಿದಾ ಆಗಿದ್ದಾರೆ. ಲೈಕ್ಸ್ ಸಿಕ್ಕಾಪಟ್ಟೆ ಸಿಕ್ಕಿದ್ದು, ಕಮೆಂಟ್ ನಲ್ಲಿ ವಾವ್ ಎಂದಿದ್ದಾರೆ.

ಬಡ್ಡಿ ಬಂಗಾರಮ್ಮನನ್ನು ಕಂಡರೆ ಇಷ್ಟ

ಬಡ್ಡಿ ಬಂಗಾರಮ್ಮನನ್ನು ಕಂಡರೆ ಇಷ್ಟ

ಸಾಕಷ್ಟು ಜನಕ್ಕೆ 'ಸಿಲ್ಲಿ ಲಲ್ಲಿ' ಧಾರಾವಾಹಿ ತುಂಬಾ ಇಷ್ಟ. ಏನನ್ನೇ ಮಿಸ್ ಮಾಡಿಕೊಂಡಿದ್ದರು ಈ 'ಸಿಲ್ಲಿ ಲಲ್ಲಿ' ಧಾರಾವಾಹಿಯನ್ನು ಮಿಸ್ ಮಾಡಿಕೊಳ್ಳುತ್ತಿರಲಿಲ್ಲ. ಇದೇನು ಸೀರಿಯಸ್ ಆಗಿ ಕುಳಿತುಕೊಂಡು ನೋಡಿಸುವ ಧಾರಾವಾಹಿ ಆಗಿರಲಿಲ್ಲ. ಆದರೂ ಅದರಲ್ಲಿ ಬರುವ ಕಾಮಿಡಿ ಎಲ್ಲರ ಮನಸ್ಸನ್ನು ಹಗುರ ಆಗಿಸುತ್ತಿತ್ತು. ಅಷ್ಟೇ ಅಲ್ಲ ಕಾಮಿಡಿಯಲ್ಲೇ ಸಂಬಂಧಗಳ ಬೆಲೆಯನ್ನು ತಿಳಿಸಿ ಕೊಡುತ್ತಾ ಇದ್ದಂತ ಧಾರಾವಾಹಿಯಾಗಿತ್ತು. ಆ ಧಾರಾವಾಹಿಯಲ್ಲಿ ಬರುವ ಎಲ್ಲಾ ಪಾತ್ರಧಾರಿಗಳು ಎಲ್ಲರ ನೆನಪಲ್ಲೂ ಈಗಲೂ ಅಚ್ಚಳಿಯದೆ ಉಳಿದಿದೆ. ಈಗ ಯಾಕಪ್ಪ ಆ ವಿಚಾರ ಅಂದರೆ ಅದೇ ಸಮಾಜ ಸೇವೆ ಲಲಿತಾಂಬಾ ಈಗ ಬಡ್ಡಿ ಬಂಗಾರಮ್ಮ ಆಗಿರೋದು. ಆದರೆ, ಆಗಿನ ಲಲಿತಾಂಬಾಗೂ ಈಗಿನ ಬಡ್ಡಿ ಬಂಗಾರಮ್ಮನಿಗೂ ಇರೋ ವ್ಯತ್ಯಾಸ ಇದೆಯಲ್ಲ. ವಾಹ್ವ್ ಪ್ರೇಕ್ಷಕರು ಆಗಾಗ ಇದನ್ನು ತಾಳೆ ಹಾಕಿ ನೋಡುತ್ತಲೇ ಇರುತ್ತಾರೆ. ಆದರೂ ಮಂಜು ಭಾಷಿಣಿ ಮಾತ್ರ ಯಾವುದೇ ಪಾತ್ರವಾದರೂ ಪರ್ಫೆಕ್ಟ್ ಆಗಿ ಮ್ಯಾಚ್ ಆಗುತ್ತಾರೆ. ಅಭಿಮಾನಿಗಳ ಮನದಲ್ಲಿ ಉಳಿದುಕೊಳ್ಳುತ್ತಾರೆ.

ಯಾವ ರೀತಿಯ ಪಾತ್ರಕ್ಕೂ ಸೈ

ಯಾವ ರೀತಿಯ ಪಾತ್ರಕ್ಕೂ ಸೈ

ಸದ್ಯ ಪ್ರಸಾರವಾಗುತ್ತಿರುವ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಮಂಜು ಭಾಷಿಣಿ ನೆಗೆಟೀವ್ ಶೇಡ್ ಪಾತ್ರ ಮಾಡುತ್ತಿದ್ದಾರೆ. ಬಡ್ಡಿ ಬಂಗಾರಮ್ಮ ಎಂಬ ಪಾತ್ರವದು. ಕಷ್ಟ ಎನ್ನುವವರಿಗೆ ಬಡ್ಡಿಗೆ ದುಡ್ಡು ಕೊಡುತ್ತಾರೆ. ಮನಸ್ಸಲ್ಲಿ ಮನುಷ್ಯತ್ವವೂ ಹೆಚ್ಚಾಗಿದೆ. ಆದರೆ, ಹಣದ ವಿಚಾರದಲ್ಲಿ ನಿರ್ದಾಕ್ಷೀಣ್ಯ ತೋರಿಸುತ್ತಾರೆ. ಹೀಗಾಗಿ ಬಡ್ಡಿ ಬಂಗಾರಮ್ಮ ಅಂದ್ರೆ ಎಲ್ಲರು ಹೆದರುತ್ತಾರೆ. ಅಷ್ಟೇ ಅಲ್ಲ ಮಕ್ಕಳು ಕೂಡ ಅವ್ವನ ಮುಂದೆ ಮಾತಾಡೋದಕ್ಕೆ ಹೆದರುತ್ತಾರೆ. ಗಂಡು ನಾನು ಎಂಬ ಅಹಂಕಾರವನ್ನ ತೋರಿಸೋದು ಯಾವುದೇ ಕಾರಣಕ್ಕೂ ಬಡ್ಡಿ ಬಂಗಾರಮ್ಮನಿಗೆ ಇಷ್ಟವಾಗೋದಿಲ್ಲ. ಹೆಣ್ಣಿಗೂ ಗೌರವ ಕೊಡಲೇಬೇಕು ಎಂಬುದು ಬಡ್ಡಿ ಬಂಗಾರಮ್ಮ ವಾದ.

More from Filmibeat

English summary
Puttakkana Makkalu Serial Actress Bangaramma New Photo Goes Viral. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X