Puttkkana Makkalu: ಫ್ಯಾಮಿಲಿ ಜೊತೆ ಜಾಲಿ ಮೂಡ್‌ನಲ್ಲಿರುವ ಹಂಸ; ರಾಜೇಶ್ವರಿ ಫೋಟೋಗೆ ಅಭಿಮಾನಿಗಳು ಫಿದಾ
ಪುಟ್ಟಕ್ಕನ ಮಕ್ಕಳು ಧಾರಾವಾಹಿಗಳಲ್ಲಿ ಸದಾ ಮುಂದಿರುವ ಧಾರವಾಹಿ . ಈ ಧಾರಾವಾಹಿಯಲ್ಲಿ ಪ್ರತಿಯೊಬ್ಬ ಆಕ್ಟರ್ ಕೂಡ ಆ ಪಾತ್ರಕ್ಕೆ ಜೀವ ತುಂಬಿ ನಟನೆಯನ್ನು ಮಾಡುತ್ತಾರೆ. ಪುಟ್ಟಕ್ಕನ ಗಂಡ ಬಿಟ್ಟು ಹೋಗಿ ಪುಟ್ಟಕ್ಕ ಮುಂದೇನು ಎನ್ನುವಾಗ ಮೆಸ್ ನಡೆಸುತ್ತಾರೆ.
ಹಲವಾರು ಜನರಿಗೆ ಊಟವನ್ನು ನೀಡಿ ತನ್ನ ಗಂಡನ ಸರಿ ಸಮಾನವಾಗಿ ನಾನು ಬರಬೇಕು ನನ್ನ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕೊಡಬೇಕು ಎನ್ನುವ ದೃಷ್ಟಿಯಲ್ಲಿ ಇರುತ್ತಾಳೆ. ಹಾಗೆಯೇ ತಾನು ಎಂದುಕೊಂಡ ಹಾಗೆಯೇ ಕೆಲಸ ಕೂಡ ಮಾಡುತ್ತಾಳೆ. ಇದನ್ನೆಲ್ಲ ನೋಡಿದ ರಾಜೇಶ್ವರಿ ಅಂದರೆ ಪುಟ್ಟಕ್ಕನ ಗಂಡನ ಎರಡನೇ ಹೆಂಡತಿ ಬಹಳ ಅಸೂಯೆ ಪಡುತ್ತಾ ಇರುತ್ತಾಳೆ.

ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಹಂಸ ರಾಜೇಶ್ವರಿ ಎಂಬ ಖಡಕ್ ಪಾತ್ರ ಮಾಡಿ ಸೈ ಎನಿಸಿಕೊಂಡಿದ್ದಾರೆ. ಆದರೆ ರಿಯಾಲಿಟಿಯಲ್ಲಿ ಮಾತ್ರ ಬಹಳ ಸಾಫ್ಟ್ ಆಗಿದ್ದಾರೆ. ಹೌದು ರಾಜೇಶ್ವರಿ ಬಂದರೆ ಅದೆಷ್ಟೋ ಮನೆಯಲ್ಲಿ ಆಕೆಗೆ ಹಿಡಿಶಾಪ ಹಾಕುವುದೂ ಇದೆ. ಥೇಟ್ ವಿಲನ್ನಂತೆ ಪಾತ್ರ ಮಾಡಿ ಆ ಪಾತ್ರಕ್ಕೆ ಜೀವ ತುಂಬುತ್ತಿರುವ ಈ ರಾಜೇಶ್ವರಿಯವರ ನಿಜವಾದ ಹೆಸರು ಹಂಸ ನಾರಾಯಣಸ್ವಾಮಿ. ಹಂಸ ಧಾರಾವಾಹಿಯಲ್ಲಿ ಟ್ರೆಡಿಶನಲ್ ಡ್ರೆಸ್ ತೊಟ್ಟು ಪಾತ್ರಕ್ಕೆ ಜೀವ ತುಂಬುತ್ತ ಇರುತ್ತಾರೆ ..
ಆದರೆ ನಿಜ ಜೀವನದಲ್ಲಿ ಹಂಸ ಸಖತ್ ಮಾಡರ್ನ್ ಆಗಿದ್ದಾರೆ. ಹೌದು ಸದಾ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಹಂಸ ಕಿರಿಕ್ ಮಾಡುತ್ತಲೇ ಇರುತ್ತಿದ್ದರು. ಆದರೆ ಹಂಸ ನಿಜ ಜೀವನದಲ್ಲಿ ಮಾತ್ರ ಯಾವ ಕಿರಿಕ್ ಕೂಡ ಮಾಡುತ್ತಿಲ್ಲ. ಇದೀಗ ತನ್ನ ಗಂಡ ಹಾಗೂ ಮಗನ ಜೊತೆ ಹಂಸ ಜಾಲಿಯಾಗಿ ಕಾಲ ಕಳೆಯುತ್ತಾ ಇದ್ದಾರೆ. ಶೂಟಿಂಗ್ ಇದ್ದರೂ ಬಿಡುವು ಮಾಡಿಕೊಂಡು ಫ್ಯಾಮಿಲಿಗೆ ಟೈಮ್ ನೀಡುತ್ತಿದ್ದಾರೆ ಹಂಸ.
ಇದೀಗ ಈ ನಟಿ ಸಾಮಾಜಿಕ ಜಾಲತಾಣದಲ್ಲಿ ಬಹಳ ಸಕ್ರಿಯವಾಗಿರುತ್ತಾರೆ. ಆಗಾಗ ಫೋಟೋಗಳನ್ನು ಹಾಕಿ ಅಭಿಮಾನಿಗಳಿಗೆ ರಸದೌತಣ ನೀಡುತ್ತಾ ಇರುತ್ತಾರೆ. ಮೊನ್ನೆ ಮೊನ್ನೆಯಷ್ಟೇ ಹಲವಾರು ಫೋಟೋಗಳನ್ನು ಹಂಸ ಪೋಸ್ಟ್ ಮಾಡಿದ್ದರು. ಅದಕ್ಕೆ ಸಾಕಷ್ಟು ಲೈಕ್ಸ್ ಕಾಮೆಂಟ್ ಬಂದಿದೆ. ಹಾಗೆಯೇ ಇದೀಗ ಪತಿ ಮಗನ ಜೊತೆ ಜಾಲಿ ಮೂಡ್ ನಲ್ಲಿ ಇರುವ ಹಂಸ ಗಂಡ ಹಾಗೂ ಮಗನ ಜೊತೆ ಇರುವ ಫೋಟೋವನ್ನು ಶೇಟ್ ಮಾಡಿದ್ದಾರೆ.
ಹಂಸ ನಾರಾಯಣ್ ಪುಟ್ಟಕ್ಕನ ಮಕ್ಕಳು ಧಾರವಾಹಿ ಮೂಲಕ ಬಹಳಷ್ಟು ಫೇಮಸ್ ಆದ ನಟಿ. ದೊಡ್ಡ ಮಗನಿದ್ದರೂ ಹಂಸ ಮಾತ್ರ ಫಿಟ್ನೆಸ್ ಕಡೆಗೆ ಬಹಳ ಒಲವನ್ನು ನೀಡುತ್ತಾ ಬಂದಿದ್ದಾರೆ. ಟೈಮ್ ಸಿಕ್ಕಾಗ ಜಿಮ್ ಗೆ ಹೋಗಿ ವರ್ಕೌಟ್ ಮಾಡುತ್ತಾ ಇರುತ್ತಾರೆ.. ಪುಟ್ಟಕ್ಕನ ಮಕ್ಕಳು ಶೇಡ್ನಿಂದ ಈ ಫೋಟೋಗಳಲ್ಲಿ ತುಂಬಾ ಡಿಫರೆಂಟ್ ಆಗಿ ಕಾಣಿಸೋ ಹಂಸ ಅವರ ಫೋಟೋಗಳಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಅಪ್ಪ-ಅಮ್ಮನಿಗಿಂತ ಮಗನೇ ಸಕತ್ ಎತ್ತರವಾಗಿ ಕಾಣಿಸುತ್ತಿದ್ದು, ಅವರ ಫ್ಯಾಮಿಲಿಯ ಬಗ್ಗೆ ಫ್ಯಾನ್ಸ್ ಪ್ರಶ್ನಿಸುತ್ತಿದ್ದಾರೆ.


Click it and Unblock the Notifications











