Hamsa Narayan: 'ಸುಮ ಜೊತೆಗೆ ರಾಜೇಶ್ವರಿ ಫುಲ್ ಡ್ಯಾನ್ಸ್.. ನೆಟ್ಟಿಗರು ಏನಂದ್ರು..?
'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ದೊಡ್ಡ ವಿಲನ್ ಅಂದ್ರೆ ರಾಜೇಶ್ವರಿ. ಪುಟ್ಟಕ್ಕನೇ ಅವಳಿಗೆ ಟಾರ್ಗೆಟ್ ಆಗಿದ್ದಾಳೆ. ಹೀಗಾಗಿಯೇ ಪುಟ್ಟಕ್ಕನ ಗಂಡನನ್ನು ತನ್ನತ್ತ ತಿರುಗಿಸಿಕೊಂಡಳು. ಪುಟ್ಟಕ್ಕ ಮತ್ತು ಮಕ್ಕಳನ್ನು ಒಂಟಿ ಮಾಡಿದಳು. ಒಂದೊಂದೇ ಕಷ್ಟ ಕೊಡುವುದಕ್ಕೆ ಶುರು ಮಾಡಿದಳು. ಎಷ್ಟು ಸಾಧ್ಯವೋ ಅಷ್ಟು ಹಿಂಸೆ ಕೊಟ್ಟಳು. ಸಹನಾ ಮದುವೆಗೆ ಪುಟ್ಟಕ್ಕ ಸಾಲ ಮಾಡುವಂತೆ ಮಾಡಿದಳು.
ಸ್ನೇಹಾಳ ಮುಂದೆ ರಾಜೇಶ್ವರಿ ತುಟಿಕ್ ಪಿಟಿಕ್ ಅನ್ನಲ್ಲ. ಆದ್ರೆ ಸ್ನೇಹಾಳ ಹಿಂದೆ ಕತ್ತಿ ಮಸೆಯೋದನ್ನ ನಿಲ್ಲಿಸೋಲ್ಲ. ಸಹನಾಳ ಜೀವನದಲ್ಲಿ ಆಟ ಆಡಿದ್ದಾಯ್ತು. ಈಗ ಸ್ನೇಹಾಳ ಪ್ರೀತಿ ಮುರಿಯೋದಕ್ಕೂ ಕಾರಣವಾಗಿದ್ದಾಳೆ. ಇಷ್ಟೆಲ್ಲ ಸಾಲದು ಎಂಬಂತೆ ಈಗ ಪುಟ್ಟಕ್ಕನ ಮಗಳ ಜೊತೆಯಲ್ಲೇ ಕುಣಿಯುತ್ತಿದ್ದಾಳೆ.

ಕಂಠಿ -ಸ್ನೇಹಾಳನ್ನು ದೂರ ಮಾಡಿದ ರಾಜೇಶ್ವರಿ
ರಾಜೇಶ್ವರಿಗೆ ಮೊದಲಿನಿಂದಾನೂ ಪುಟ್ಟಕ್ಕನ ಮಕ್ಕಳನ್ನು ಕಂಡರೂ ಆಗುವುದಿಲ್ಲ. ಹೀಗಾಗಿ ಯಾವ ಕಡೆಯಿಂದ ಸಾಧ್ಯವೋ ಆ ಕಡೆಯಿಂದೆಲ್ಲಾ ಹಾಳು ಮಾಡುವುದಕ್ಕೆ ಟ್ರೈ ಮಾಡ್ತಾಳೆ. ಸಹನಾ ಮದುವೆಗೆ ಸಾಲ ಮಾಡಿಸಿದ್ದಾಯ್ತು, ಈಗ ಸ್ನೇಹಾಳ ಪ್ರೀತಿಯನ್ನೇ ಹಾಳು ಮಾಡಿದ್ದಾಳೆ. ಸ್ನೇಹಾ ಲವ್ ಮಾಡಿದ್ದು ಬಂಗಾರಮ್ಮನ ಮಗನನ್ನೇ ಎಂದು ಗೊತ್ತಾದ ಕೂಡಲೇ ಬಂಗಾರಮ್ಮನಿಗೆ ಎತ್ತಿಟ್ಟುಕೊಟ್ಟಿದ್ದಾಳೆ. ಇದರಿಂದಾಗಿಯೇ ಬಂಗಾ್ಮ್ಮನಿಗೆ ವಿಷಯ ಗೊತ್ತಾಗಿದ್ದು, ಬಳಿಕ ಇಬ್ಬರನ್ನು ದೂರ ಮಾಡುವ ಪ್ಲ್ಯಾನ್ ಮಾಡಿದ್ದು. ಈಗ ಅಂದುಕೊಂಡಂತೆ ದೂರವಾಗಿದ್ದಾರೆ.
ಸ್ನೇಹಾ ಮದುವೆ ಕಾರ್ಯದಲ್ಲೂ ಭಾಗಿ
ಗೋಪಾಲ ಪುಟ್ಟಕ್ಕನ ಮಕ್ಕಳನ್ನು ಧಾರೆ ಎರೆದು ಕೊಡಬೇಕು. ಖುಷಿಗೋಸ್ಕರ ಅಲ್ಲದೆ ಹೋದರೂ ಅಲ್ಲಿ ಏನಾಗ್ತಿದೆ ಅಂತ ತಿಳಿಯುವುದಕ್ಕೋಸ್ಕರ ಆದ್ರೂ ರಾಜೇಶ್ವರಿ ಪುಟ್ಟಕ್ಕನ ಮನೆಗೆ ಎಂಟ್ರಿ ಕೊಡ್ತಾ ಇರ್ತಾಳೆ. ಈಗ ಸ್ನೇಹಾ ಬೇರೆ ಪ್ರೀತಿಯನ್ನು ಮುರಿದುಕೊಂಡು ಬೇರೆ ಹುಡುಗನ ಜೊತೆಗೆ ಮದುವೆಯಾಗುತ್ತಿದ್ದಾಳೆ. ಈ ಸಂತಸವನ್ನು ಕಣ್ತುಂಬಿಕೊಳ್ಳಲು ಈಗ ರಾಜೇಶ್ವರಿ, ಪುಟ್ಟಕ್ಕನ ಮನೆಗೆ ಬಂದಿದ್ದಾಳೆ. ಸ್ನೇಹಾಳಿಗೆ ಮದುವೆಯಾಗುತ್ತಿದೆ ಎಂಬ ಖುಷಿಗಿಂತ, ಪ್ರೀತಿ ಕಳೆದುಕೊಂಡು ಸ್ನೇಹಾ ಎಷ್ಟು ದುಃಖದಲ್ಲಿದ್ದಾಳೆ ಎಂಬ ಖುಷಿ ನೋಡುವುದಕ್ಕೆ ಹೋಗಿದ್ದಾಳೆ.
ಸುಮಾ -ರಾಜೇಶ್ವರಿ ಡ್ಯಾನ್ಸ್
ರಾಜೇಶ್ವರಿ ಪಾತ್ರದಲ್ಲಿ ಹಂಸ ನಾರಾಯಣ್ ನಟನೆ ಮಾಡಿದ್ದಾರೆ. ಧಾರಾವಾಹಿಯಲ್ಲಿ ಕಂಪ್ಲೀಟ್ ನೆಗೆಟಿವ್ ಪಾತ್ರದಲ್ಲಿ ನಟಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಹಂಸ ನಾರಾಯಣ್ ಕೂಡ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಆಗಾಗ ಫೋಟೊಗಳನ್ನು ಕೊಲಾಜ್ ಮಾಡಿ, ಹೆಜ್ಜೆ ಹಾಕಿ ಬಿಡುತ್ತಾರೆ. ಇತ್ತೀಚೆಗೆ ಪೊಲೀಸ್ ಪಾತ್ರದಲ್ಲಿ ಅಭಿನಯಿಸುತ್ತಿರುವುದೆಲ್ಲವನ್ನು ಹಂಚಿಕೊಂಡಿದ್ದಾರೆ. ಇನ್ಮು ಸುಮಾ ಪಾತ್ರಧಾರಿ ಶಿಲ್ಪಾ ಕೂಡ ಸೋಷಿಯಲ್ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾಳೆ. ಫ್ಯಾಮಿಲಿ ಜೊತೆಗೆ ಸೇರಿ ರೀಲ್ಸ್ ಮಾಡಿ ಹಾಕ್ತಾ ಇರ್ತಾರೆ.
ಚಿಕ್ಕಮ್ -ಮಗಳ ಡ್ಯಾನ್ಸ್‌ಗೆ ನೆಟ್ಟಿಗರು ಫಿದಾ
ರಾಜೇಶ್ವರಿ ಪಾತ್ರ ಪಕ್ಕಾ ನೆಗೆಟಿವ್ ಪಾತ್ರದಲ್ಲಿ ಮಾಡಿರುವ ಕಾರಣ, ನೋಡಿಗರಿಗೂ ದುಷ್ಮನ್ ಆಗಿದ್ದಾಳೆ. ಹೀಗಾಗಿ ನೋಡುಗರು ಯಾವಾಗಲೂ ಬೈಕೊಳ್ತಾ ಇರ್ತಾರೆ. ಆದ್ರೆ, ಈಗ ಬಿಟ್ಟಿರುವ ವಿಡಿಯೋದಲ್ಲಿ ಹೊಗಳಿಕೆಗಳು ಕೇಳಿ ಬಂದಿದೆ. ಧಾರಾವಾಹಿಯಲ್ಲಿ ಮಾಡುವ ಪಾತ್ರವೇ ಬೇರೆ, ನಿಜ ಜೀವನದಲ್ಲಿ ಇರುವ ರೀತಿಯೇ ಬೇರೆ. ಶೂಟಿಂಗ್ ಸ್ಪಾಟ್‌ನಲ್ಲಿ ಫ್ರೀ ಸಿಕ್ಕ ಕೂಡಲೇ ಎಂಜಾಯ್ ಮಾಡುತ್ತಾರೆ. ಆದರೆ, ಕ್ಯಾಮರಾ ಆನ್ ಆದಾಗ ತಮ್ಮ ಪಾತ್ರದಲ್ಲಿ ಪ್ರವೇಶ ಮಾಡಿ ಬಿಡುತ್ತಾರೆ. ರಾಜೇಶ್ವರಿ ಹಾಗೂ ಸುಮಾ ಡ್ಯಾನ್ಸ್ ನೋಡಿ ಎಲ್ಲರೂ ಹೃದಯವನ್ನೇ ನೀಡಿದ್ದು, ಶಬ್ಬಾಶ್ ಎಂದಿದ್ದಾರೆ.


Click it and Unblock the Notifications











