Hamsa Narayan: 'ಪುಟ್ಟಕ್ಕನ ಮಗಳ' ಮದುವೆಯಲ್ಲಿ ರಾಜೇಶ್ವರಿ ಮಿಂಚಿದ್ದೇಗೆ ಗೊತ್ತಾ..?

By ಎಸ್ ಸುಮಂತ್

ಪುಟ್ಟಕ್ಕನ ಮನೆಯಲ್ಲಿ ಮದುವೆ ಶಾಸ್ತ್ರಗಳು ಜೋರಾಗಿದೆ. ಸಹನಾ ತಾನಿಷ್ಟ ಪಟ್ಟ ಹುಡುಗನ ಜೊತೆಗೆ ಹೊಸ ಜೀವನ ಶುರು ಮಾಡಲು ತುದಿಗಾಲಿನಲ್ಲಿ ನಿಂತಿದ್ದಾಳೆ. ಮುರುಳಿ ಮೇಷ್ಟ್ರು ಕೂಡ ಅದೇ ಕಾತುರದಿಂದ ಕಾಯುತ್ತಿದ್ದಾರೆ. ಮದುವೆ ಮನೆ ಶಾಸ್ತ್ರಗಳಿಂದ ಕಳೆಗಟ್ಟಿದೆ.

ಆದರೆ ಯಾವಾಗಲೂ ಕತ್ತಿ ಮಸೆಯುವ ರಾಜೇಶ್ವರಿ ಮದುವೆ ಮನೆಯಲ್ಲೂ ಕಿತಾಪತಿ ಮಾಡುವುದಕ್ಕೇನೆ ಸಿದ್ಧತೆ ನಡೆಸಿದ್ದಾಳೆ. ಅದಕ್ಕೆಂದೆ ಮುರುಳಿ ಮೇಷ್ಟ್ರ ಅಮ್ಮನ ಜೊತೆಗೆ ನಂಟಸ್ತಿಕೆ ಬೆಳೆಸಿಕೊಂಡು, ಪುಟ್ಡಕ್ಕನನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿದ್ದಾಳೆ. ಆದರೆ ರಾಜೇಶ್ವರಿ ಅಲಿಯಾಸ್ ಹಂಸ ನಾರಾಯಣ್ ಮದುವೆ ಮನೆಯಲ್ಲಿ ಹೇಗೆಲ್ಲ ಎಂಜಾಯ್ ಮಾಡುತ್ತಿದ್ದಾರೆ ನೋಡಿ.

ಫೋಟೋ ಹಂಚಿಕೊಂಡ ಹಂಸ ನಾರಾಯಣ್

ಫೋಟೋ ಹಂಚಿಕೊಂಡ ಹಂಸ ನಾರಾಯಣ್

ಧಾರಾವಾಹಿಯೇ ಬೇರೆ ರಿಯಾಲಿಟಿಯೇ ಬೇರೆ ಅನ್ನೋದು ಎಲ್ಲರಿಗೂ ಈಗಾಗಲೇ ಗೊತ್ತಾಗಿದೆ. ಯಾವಾಗ ಸೋಶಿಯಲ್ ಮೀಡಿಯಾ ಫುಲ್ ಸ್ಟ್ರಾಂಗ್ ಆಯ್ತೋ, ಎಲ್ಲರೂ ಬಳಕೆ ಮಾಡುವುದಕ್ಕೆ ಆರಂಭಿಸಿದರೋ ಆಗಿನಿಂದ ಧಾರಾವಾಹಿಯಲ್ಲೂ ವಿಲನ್ ಆದವರು ತೆರೆಹಿಂದೆ ಅದೆಷ್ಟು ಆತ್ಮೀಯರು ಎಂಬುದು ತಿಳಿಯಿತು. ಈಗ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲೂ ಆಗಿದ್ದು ಇದೆ. ಧಾರಾವಾಹಿಯಲ್ಲಿ ಯಾವಾಗಲೂ ಪುಟ್ಟಕ್ಕನನ್ನು ಕಂಡರೆ ಕೆಂಡಕಾರುವ ರಾಜೇಶ್ವರಿ ಅವರ ಜೊತೆಗೇನೆ ಕ್ಲೋಸ್ ಆಗಿದ್ದಾರೆ.

ರಾಜೇಶ್ವರಿ ಜೊತೆಗೆ ಮುರುಳಿ ಅಮ್ಮ

ರಾಜೇಶ್ವರಿ ಜೊತೆಗೆ ಮುರುಳಿ ಅಮ್ಮ

ಮದುವೆ ನಡೆಯಬೇಕು ಎಂದರೆ ಗೋಪಾಲ ಬರಲೇಬೇಕು ಎಂಬುದು ಗಂಡಿನ ಮನೆ ಕಡೆಯವರ ಡಿಮ್ಯಾಂಡ್. ರಾಜೇಶ್ವರಿಗೂ ಅದೇ ಬೇಕಿರುವುದು. ಪುಟ್ಟಕ್ಕ ಬಂದು ಕೇಳಿಕೊಂಡ ತಕ್ಷಣ ಒಪ್ಪಿಕೊಂಡಿಯೇ ಬಿಟ್ಟಳು. ಈಗ ಎಲ್ಲಾ ಶಾಸ್ತ್ರಕ್ಕೂ ಮುಂದೆ ನಿಂತು ಶೋ ಆಫ್ ಮಾಡುತ್ತಿದ್ದಾಳೆ. ಸದ್ಯ ಬಳೆ ಶಾಸ್ತ್ರ ನಡೆಯುತ್ತಿದೆ. ಬಳೆ ಶಾಸ್ತ್ರಕ್ಕೆ ರಾಜೇಶ್ವರಿ ಅಲಿಯಾಸ್ ಹಂಸ ನಾರಾಯಣ್ ಬಂದಿದ್ದು, ಪಿಂಕ್ ಕಲರ್ ಸೀರೆಯಲ್ಲಿ ಮಿರ ಮಿರ ಮಿಂಚುತ್ತಾ ಇದ್ದಾರೆ. ಪಿಂಕ್ ಸೀರೆಗೆ ಹಸಿರು ಬಣ್ಣದ ಬ್ಲೌಸ್ ತೊಟ್ಟು, ಸಿಂಪಲ್ ಆಗಿ ಒಡವೆ ಹಾಕಿಕೊಂಡು, ಹಸಿರು ಚಪ್ಪರವನ್ನ ತಬ್ಬಿ, ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಈ ಫೋಟೋಗಳನ್ನು ಹಂಚಿಕೊಂಡಿದ್ದು, ಮುರುಳಿ ಮೇಷ್ಟ್ರ ಅಮ್ಮ ಕೂಡ ಅಲ್ಲೂ ಜೊತೆಗಿದ್ದಾರೆ.

ರಾಜೇಶ್ವರಿಗೆ ಫ್ಯಾನ್ಸ್ ಎಷ್ಟಿದ್ದಾರೆ ಗೊತ್ತಾ..?

ರಾಜೇಶ್ವರಿಗೆ ಫ್ಯಾನ್ಸ್ ಎಷ್ಟಿದ್ದಾರೆ ಗೊತ್ತಾ..?

ಹಂಸ ನಾರಾಯಣ್ ಸೋಶಿಯಲ್ ಮೀಡಿಯಾದಲ್ಲಿ ಫುಲ್ ಆಕ್ಟಿವ್ ಆಗಿ ಇದ್ದಾರೆ. 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಫುಲ್ ಹಳ್ಳಿ ಮಹಿಳೆಯ ರೀತಿಯೇ ಮಾತನಾಡುವ ಹಂಸ, ಪಕ್ಕ ಹಳ್ಳಿಯವರೇನೋ ಎಂಬಂತೆ ಫೀಲ್ ಆಗುತ್ತಾರೆ. ನೆಗೆಟಿವ್ ರೋಲ್‌ಗೆ ಪಕ್ಕಾ ಮ್ಯಾಚ್ ಆಗುತ್ತಾರೆ ಎಂಬ ಅಭಿಪ್ರಾಯವೂ ಕೇಳಿ ಬಂದಿದೆ. ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಫೋಟೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಸುಮಾರು 13 ಸಾವಿರ ಫಾಲೋವರ್ಸ್ ಹೊಂದಿರುವ ಹಂಸ ಅವರ ಫೋಟೋಗಳಿಗೆ ಹೆಚ್ಚೆಚ್ಚು ಕಮೆಂಟ್ಸ್ ಬರುತ್ತಾ ಇರುತ್ತವೆ.

ವಿಭಿನ್ನ ಪಾತ್ರಗಳ ಮೂಲಕ ಖ್ಯಾತಿ

ವಿಭಿನ್ನ ಪಾತ್ರಗಳ ಮೂಲಕ ಖ್ಯಾತಿ

ಹಂಸ ಸದ್ಯ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಖ್ಯಾತಿ ಪಡೆದಿದ್ದಾರೆ. ಒಂದೊಂದು ಪಾತ್ರಗಳು ಬಹಳ ಮಹತ್ವವನ್ನು ಪಡೆದುಕೊಂಡಿವೆ. ಅದರಲ್ಲಿ ರಾಜೆರಶ್ವರಿಯ ಪಾತ್ರವೂ ಕೂಡ ಬಹಳ ಮುಖ್ಯವಾದುದ್ದಾಗಿದೆ. ಸದ್ಯ ಹಂಸ ನಾರಾಯಣ್ ಧಾರಾವಾಹಿ ಜೊತೆ ಜೊತೆಗೆ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಪೊಲೀಸ್ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಆ ಫೋಟೊವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ತನ್ನ ಇಷ್ಟವಾದ ಪಾತ್ರವಿದು ಎಂದು ಬರೆದುಕೊಂಡಿದ್ದಾರೆ. ಧಾರಾವಾಹಿ ಹಾಗೂ ಸಿನಿಮಾ ಎರಡನ್ನು ಮೆಂಟೈನ್ ಮಾಡಿಕೊಂಡು ಹೋಗುತ್ತಿದ್ದಾರೆ.

More from Filmibeat

English summary
Puttakkana Makkalu Serial Actress Hamsa Narayan Shining In Traditional Saree. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X