Puttakkana Makkalu : ಅರೇರೆ.. ಏನಾಗ್ತಿದೆ..? ಸಹನಾ ಬದಲಿಗೆ ಸ್ನೇಹಾ ಮದುವೆ ಆಯ್ತಾ..?

By ಎಸ್ ಸುಮಂತ್

ಪುಟ್ಟಕ್ಕನ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಸಹನಾ ಮತ್ತು ಮುರುಳಿಯ ಮದುವೆ ನಡೆಯುತ್ತಿದೆ. ಈ ಮದುವೆಯ ಶಾಸ್ತ್ರಗಳು ಒಂದೊಂದೆ ನಡೆಯುತ್ತಿದ್ದು, ಎಲ್ಲರು ಅದ್ಭುತವಾಗಿ ಎಂಜಾಯ್ ಮಾಡುತ್ತಿದ್ದಾರೆ. ಅದರಲ್ಲೂ ಮನೆ, ಮಕ್ಕಳ ಜವಬ್ದಾರಿ ತೆಗೆದುಕೊಂಡಿರುವ ಪುಟ್ಟಕ್ಕ ಕೂಡ ಎಲ್ಲಾ ಭಾರವನ್ನು ಮರೆತು, ಖುಷಿಯಾಗಿ ಮಕ್ಕಳ ಜೊತೆಗೆ ಕುಣಿದಿದ್ದಾರೆ.

ಇನ್ನು ಗೋಪಾಲನಿಗೆ ಪುಟ್ಟಕ್ಕ ಮತ್ತು ಮಕ್ಕಳೆಂದರೆ ಇಷ್ಟ. ಆದರೆ ಏನು ಮಾಡೋದು ರಾಜೇಶ್ವರಿ ಕಾಟದಿಂದ ಇರುವ ಆಸೆಯನ್ನೆಲ್ಲ ಬದಿಗೊತ್ತಿ ಬದುಕುತ್ತಿದ್ದಾನೆ. ಇಂತ ಗೋಪಾಲ ಕೂಡ ಮಗಳ ಮದುವೆಯ ಸಂಗೀತ ಕಾರ್ಯಕ್ರಮದಲ್ಲಿ ಎಂಜಾಯ್ ಮಾಡಿದ್ದಾನೆ. ಆದರೆ ಇದೀಗ ವಿಡಿಯೋವೊಂದು ವೈರಲ್ ಆಗಿದ್ದು, ಇದು ಯಾರ ಮದುವೆ ಎಂಬ ಚರ್ಚೆ ಹುಟ್ಟು ಹಾಕಿದೆ.

ಕಂಠಿ - ಸ್ನೇಹಾ ಇನ್ನು ಹತ್ತಿರ..!

ಕಂಠಿ - ಸ್ನೇಹಾ ಇನ್ನು ಹತ್ತಿರ..!

ಪುಟ್ಟಕ್ಕನ ಮನೆಯಲ್ಲಿ ಮದುವೆಯ ಎಲ್ಲಾ ಕಾರ್ಯಕ್ರಮಗಳಿಗೂ ಊರಿನ ಜನರ ಬೆಂಬಲ ಸಿಕ್ಕಿದೆ. ಅದರ ಜೊತೆಗೆ ಬಂಗಾರಮ್ಮ ತನ್ನ ಮಗನನ್ನು ಕಳುಹಿಸಿದ್ದಾಳೆ. ಇನ್ನು ಕಂಠಿಯನ್ನು ಕೇಳುವುದೇ ಬೇಡ. ಕಂಪ್ಲೀಟ್ ಆಗಿ ಪುಟ್ಟಕ್ಕನ ಮನೆಯಲ್ಲೇ ಜಾಂಡಾ ಹೂಡಿದ್ದಾನೆ. ಅದರ ಜೊತೆಗೆ ಸ್ನೇಹಾಳಿಗೆ ಇನ್ನು ಹತ್ತಿರವಾಗುತ್ತಿದ್ದಾನೆ. ಅವಳಿಗಾಗಿ ಎಲ್ಲಾ ಕೆಲಸವನ್ನು ಮಾಡುತ್ತಿದ್ದಾನೆ. ಅವಳನ್ನು ಇಂಪ್ರೆಸ್ ಮಾಡುವಲ್ಲಿ ಸಕ್ಸಸ್ ಆಗಿದ್ದಾನೆ. ಸ್ನೇಹಾಗೂ ಕಂಠಿ‌ ಮೇಲೆ ಈಗೀಗ ಮತ್ತಷ್ಟು ಲವ್ ಜಾಸ್ತಿ ಆಗ್ತಾ ಇದೆ.

ಅಕ್ಕನ ಮದುವೆಯಲ್ಲಿ ಸ್ನೇಹಾ ಮಿಂಚಿಂಗ್

ಅಕ್ಕನ ಮದುವೆಯಲ್ಲಿ ಸ್ನೇಹಾ ಮಿಂಚಿಂಗ್

ಅಕ್ಕನ ಮದುವೆಯ ಕನಸು ತಂಗಿಯರಿಗೂ ಇತ್ತು. ಸುಮನಾ ಮತ್ತು ಸ್ನೇಹಾ ಇನ್ನು ಓದುತ್ತಿದ್ದಾರೆ. ಸ್ನೇಹಾ ಯಾರಿಗೂ ಬಗ್ಗಲ್ಲ. ತಪ್ಪನ್ನ ತಪ್ಪು ಅಂತಾಳೆ. ದುರಹಂಕಾರ ತೋರಿಸುವವರನ್ನು ದೂರದಲ್ಲಿಯೇ ಇಡುತ್ತಾಳೆ. ಇನ್ನು ಸುಮ ಕೂಡ ಹೆದರುವ ಕ್ಯಾರೆಕ್ಟರ್ ಅಲ್ಲ. ಆದ್ರೆ ಸಹನಾ ಈ ಇಬ್ಬರಿಗಿಂತ ವಿರುದ್ಧ ಕ್ಯಾರೆಕ್ಟರ್. ಭಯ ಹೆಚ್ಚು. ಸಹನಾ ಮುರುಳಿ ಮೇಷ್ಟ್ರನ್ನು ಇಷ್ಟಪಡ್ತಾ ಇದ್ದಾರೆ ಅಂತ ಗೊತ್ತಾಗಿದ್ದೆ ತಡ ಇಬ್ಬರು ತಂಗಿಯರಿಗೆ ಇನ್ನಿಲ್ಲದ ಪ್ರೀತಿ. ಅದಕ್ಕೆ ಈಗ ಮದುವೆಯಲ್ಲಿ ತಂಗಿಯರು ಎಂಜಾಯ್ ಮಾಡುತ್ತಿದ್ದಾರೆ.

ಸ್ನೇಹಾಳ ಹೊಸ ಅವತಾರಕ್ಕೆ ಶಾಕ್..!

ಸ್ನೇಹಾಳ ಹೊಸ ಅವತಾರಕ್ಕೆ ಶಾಕ್..!

ಪುಟ್ಟಕ್ಕನ ದೊಡ್ಡ ಮಗಳು ಸಹನಾಳ ಮದುವೆ ಸಂಭ್ರಮ ನಡೆಯುತ್ತಿರುವಾಗಲೇ, ಮತ್ತೊಂದು ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ನೋಡಿ ಹಲವರು ಶಾಕ್ ಆಗಿದ್ದಾರೆ. ಅಕ್ಕನ ಮದುವೆಯಲ್ಲಿ ಓಡಾಡಬೇಕಿದ್ದ ಸ್ನೇಹಾ, ತಾನೇ ಮದುವೆ ಹೆಣ್ಣಿನಂತೆ ಸಿಂಗಾರಗೊಂಡಿದ್ದಾಳೆ. ನೀಲಿ ಮತ್ತು ಗೋಲ್ಡನ್ ಕಲರ್ ಮಿಶ್ರಿತ ಸೀರೆಯುಟ್ಟು, ಹಾರ ಹಾಕಿಕೊಂಡು, ಕತ್ತಲ್ಲಿ ತಾಳಿಯು ಇದ್ದು, ನಾಚುತ್ತಾ ಬರುತ್ತಿರುವ ಈ ವಿಡಿಯೋ ಕಂಡು ಒಂದು ಕ್ಷಣ ಎಲ್ಲರೂ ಶಾಕ್ ಆಗಿದ್ದಾರೆ. ಸಹನಾ ಮದುವೆ ಗ್ಯಾಪ್‌ನಲ್ಲಿಯೇ ಸ್ನೇಹಾ ಮದುವೆನೂ ಆಗೋಯ್ತಾ ಎಂಬ ಪ್ರಶ್ನೆ ಹಾಕಿಕೊಂಡಿದ್ದಾರೆ.

ಕಂಠಿಯ ಕನಸಾ ಇದು..?

ಕಂಠಿಯ ಕನಸಾ ಇದು..?

ಕಂಠಿಗೆ ಸ್ನೇಹಾ ಮೇಲೆ ಸಿಕ್ಕಾಪಟ್ಟೆ ಲವ್ ಆಗಿದೆ. ಅದಕ್ಕೆ ಅವಳನ್ನು ಇಂಪ್ರೆಸ್ ಮಾಡುವುದಕ್ಕೆ ಟ್ರೈ ಮಾಡುತ್ತಾ ಇರುತ್ತಾನೆ. ಆಗಾಗ ಸ್ನೇಹಾ ಬಗ್ಗೆ ಕನಸು ಕಾಣುತ್ತಾ ಇರುತ್ತಾನೆ. ಹಿಂದೊಮ್ಮೆ ಪೂರ್ವಿ ಜೊತೆಗೆ ನಿಶ್ಚಿತಾರ್ಥ ಮಾಡಿಕೊಳ್ಳುವಾಗ, ಅವ್ವನ ಮುಂದೆ ಸ್ನೇಹಾಳ ವಿಚಾರ ಹೇಳಿದಂತೆ ಕನಸು ಕಂಡಿದ್ದ. ಈಗ ಸ್ನೇಹಾ ಜೊತೆಗೆ ಮದುವೆಯಾದಂತೆ ಕನಸು ಕಾಣುತ್ತಿರಬೇಕು. ಈ ವಿಡಿಯೋ ನೋಡಿದ ಪ್ರತಿಯೊಬ್ಬರು ಇದು ಕಂಠಿ ಅಣ್ಣ ಕಾಣುತ್ತಿರುವ ಕನಸೇ ಆಗಿದೆ ಎಂದು ಕಮೆಂಟ್ ಹಾಕುತ್ತಿದ್ದಾರೆ.

More from Filmibeat

English summary
Puttakkana Makkalu Serial Actress Sanjana Burli In Traditional Look. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X