'ಪುಟ್ಟಕ್ಕನ ಮಗಳು' ಸಂಜನಾ ಬುರ್ಲಿ ಕೈ ಹಿಡಿದ ಸಮರ್ಥ್ ಚೆನ್ನಗಿರಿ; ವಿವಾಹ ಬಳಿಕ ಮತ್ತೆ ನಟನೆಗೆ ಮರಳುತ್ತಾರಾ?

ಸ್ಯಾಂಡಲ್‌ವುಡ್ ಅಂಗಳದಲ್ಲಿ ಈಗ ಮದುವೆಯದ್ದೇ ಸದ್ದು. ಅದರಲ್ಲೂ ಕಿರುತೆರೆ ಪ್ರೇಕ್ಷಕರ ನೆಚ್ಚಿನ ನಟಿ ಸಂಜನಾ ಬುರ್ಲಿ ಈಗ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಸಂಜನಾ ಮನೆಯಲ್ಲಿ ಮದುವೆಯ ಸಡಗರ ಮನೆ ಮಾಡಿದೆ.

ಕಿರುತೆರೆಯ ನಟಿ ಸಂಜನಾ ಬುರ್ಲಿ ಮತ್ತು ಸಮರ್ಥ್ ಚೆನ್ನಗಿರಿ ಅವರ ವಿವಾಹ ಮಹೋತ್ಸವ ಜೋರಾಗಿ ನಡೆಯುತ್ತಿದೆ. ಇತ್ತೀಚೆಗಷ್ಟೇ ಅದ್ದೂರಿಯಾಗಿ ನಡೆದ ಆರತಕ್ಷತೆ ಕಾರ್ಯಕ್ರಮದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

Puttakkana Makkalu Serial actress Sanjana Burli reception videos went viral

'ಪುಟ್ಟಕ್ಕನ ಮಕ್ಕಳು' ಹಾಗೂ 'ಶ್ರೀಗಂಧದಗುಡಿ' ಅಂತಹ ಸೂಪರ್ ಹಿಟ್ ಧಾರಾವಾಹಿಗಳ ಮೂಲಕ ಜನಪ್ರಿಯತೆ ಗಳಿಸಿರುವ ಸಂಜನಾ, ಈಗ ಹೊಸ ಜೀವನದ ಆರಂಭ ಮಾಡುತ್ತಿದ್ದಾರೆ. ಅಭಿಮಾನಿಗಳು ತಮ್ಮ ನೆಚ್ಚಿನ ನಟಿಗೆ ಶುಭಾಶಯಗಳ ಮಳೆ ಸುರಿಸುತ್ತಿದ್ದಾರೆ.

ಡಾಕ್ಟರ್ ಕೈ ಹಿಡಿದ ಕಿರುತೆರೆ ಸುಂದರಿ

ಸಂಜನಾ ಬುರ್ಲಿ ಅವರ ಕೈ ಹಿಡಿಯುತ್ತಿರುವ ಸಮರ್ಥ್ ಚೆನ್ನಗಿರಿ ಅವರು ವೃತ್ತಿಯಲ್ಲಿ ವೈದ್ಯರು. ಸಂಜನಾ ಅವರು ಕೂಡ ಇಂಜಿನಿಯರಿಂಗ್ ಪದವೀಧರೆಯಾಗಿದ್ದು, ಓದಿಗೂ ಅಷ್ಟೇ ಪ್ರಾಮುಖ್ಯತೆ ನೀಡಿದವರು. ಈಗ ಈ ಸುಶಿಕ್ಷಿತ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವುದು ವಿಶೇಷವಾಗಿದೆ. ಸಮರ್ಥ್ ಅವರು ಸಂಜನಾ ಅವರ ದೀರ್ಘಕಾಲದ ಗೆಳೆಯ ಎನ್ನಲಾಗಿದೆ. ಇತ್ತೀಚೆಗಷ್ಟೇ ಸಂಜನಾ ತಮ್ಮ ನಿಶ್ಚಿತಾರ್ಥದ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದರು. ಈಗ ವೈದ್ಯರ ಕೈ ಹಿಡಿಯುವ ಮೂಲಕ ಸಂಜನಾ ಹೊಸ ಬದುಕಿಗೆ ಹೆಜ್ಜೆ ಇಡುತ್ತಿದ್ದಾರೆ.

ಅದ್ದೂರಿ ಆರತಕ್ಷತೆ: ವೈರಲ್ ಆಯ್ತು ವಿಡಿಯೋ

ಸಂಜನಾ ಬುರ್ಲಿ ಅವರ ವಿವಾಹದ ಸಂಭ್ರಮಕ್ಕೆ ಈಗ ಅಧಿಕೃತ ಚಾಲನೆ ಸಿಕ್ಕಿದೆ. ಮಾರ್ಚ್ 24ರಂದು ಬೆಂಗಳೂರಿನಲ್ಲಿ ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮ ನೆರವೇರಿದೆ. ಈ ಕಾರ್ಯಕ್ರಮದಲ್ಲಿ ಸಂಜನಾ ಮತ್ತು ಸಮರ್ಥ್ ಜೋಡಿ ಅತ್ಯಂತ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಬಂಗಾರದ ಬಣ್ಣದ ಉಡುಪಿನಲ್ಲಿ ಸಂಜನಾ ಕಂಗೊಳಿಸುತ್ತಿದ್ದರೆ, ಸಮರ್ಥ್ ಕೂಡ ಅಷ್ಟೇ ಮಿಂಚುತ್ತಿದ್ದರು. ಅಭಿಮಾನಿ ಬಳಗದಲ್ಲಿ ಈ ವಿಡಿಯೋಗಳು ಶೇರ್ ಆಗುತ್ತಿದ್ದಂತೆಯೇ ಲೈಕ್ಸ್ ಹಾಗೂ ಕಮೆಂಟ್‌ಗಳ ಸುರಿಮಳೆಯೇ ಆಗುತ್ತಿದೆ. ಸಿನಿಮಾ ರಂಗದ ಗಣ್ಯರು ಹಾಗೂ ಕಿರುತೆರೆಯ ಸ್ನೇಹಿತರು ಈ ಸಮಾರಂಭಕ್ಕೆ ಸಾಕ್ಷಿಯಾಗಿದ್ದಾರೆ. ನಾಳೆ ಅಂದರೆ ಮಾರ್ಚ್ 26 ರಂದು ಸಂಜನಾ ಮತ್ತು ಸಮರ್ಥ್ ಅವರ ಕಲ್ಯಾಣ ಮಹೋತ್ಸವ ನಡೆಯಲಿದೆ ಎಂದು ಹೇಳಲಾಗುತ್ತಿದೆ.

'ಪುಟ್ಟಕ್ಕನ ಮಕ್ಕಳು' ಸ್ನೇಹಾ ಈಗ ಮದುಮಗಳು

ಸಂಜನಾ ಬುರ್ಲಿ ಅವರಿಗೆ ದೊಡ್ಡ ಮಟ್ಟದ ಬ್ರೇಕ್ ಕೊಟ್ಟಿದ್ದು 'ಪುಟ್ಟಕ್ಕನ ಮಕ್ಕಳು' ಧಾರಾವಾಹಿ. ಇದರಲ್ಲಿ ಅವರು ಸ್ನೇಹಾ ಎಂಬ ಐಎಎಸ್ ಅಧಿಕಾರಿ ಪಾತ್ರವನ್ನು ನಿರ್ವಹಿಸಿ ಮನೆಮಾತಾಗಿದ್ದರು. ಆದರೆ ಓದಿನ ಕಾರಣ ನೀಡಿ ಅವರು ಈ ಧಾರಾವಾಹಿಯನ್ನು ಅರ್ಧಕ್ಕೆ ತೊರೆದಿದ್ದರು. ಇದು ಅವರ ಅಭಿಮಾನಿಗಳಿಗೆ ಬೇಸರ ತರಿಸಿತ್ತು. ಆನಂತರ ಸಂಜನಾ ಅವರು ಕಲರ್ಸ್ ಕನ್ನಡದ 'ಶ್ರೀಗಂಧದಗುಡಿ' ಧಾರಾವಾಹಿಯ ಮೂಲಕ ಮತ್ತೆ ಕಿರುತೆರೆಗೆ ಮರಳಿದರು. ಈ ಸೀರಿಯಲ್ ಕೂಡ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಆದರೆ, ಮದುವೆಯ ತಯಾರಿಗಾಗಿ ಈ ಧಾರಾವಾಹಿಯಿಂದಲೂ ಅವರು ಹೊರನಡೆದಿದ್ದಾರೆ ಎನ್ನುವ ಮಾಹಿತಿ ಈಗ ಹೊರಬಿದ್ದಿದೆ.

ಸಂಜನಾ ಬುರ್ಲಿ ಅವರು ಮದುವೆಯ ನಂತರ ಮತ್ತೆ ಕಿರುತೆರೆಗೆ ಮರಳುತ್ತಾರಾ ಎಂಬ ಪ್ರಶ್ನೆ ಪ್ರೇಕ್ಷಕರನ್ನು ಕಾಡುತ್ತಿದೆ. ವಿವಾಹದ ನಂತರ ಸಣ್ಣ ಬ್ರೇಕ್ ಪಡೆದು, ಮತ್ತೆ ಬಣ್ಣದ ಲೋಕಕ್ಕೆ ಮರಳಲಿ ಎಂಬುದು ಎಲ್ಲರ ಆಶಯವಾಗಿದೆ. ಸದ್ಯಕ್ಕಂತೂ ಸಂಜನಾ ಅವರ ಮದುವೆ ಫೋಟೋಗಳನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

More from Filmibeat

English summary
Puttakkana Makkalu Serial actress Sanjana Burli reception videos went viral.
Read more about: actress wedding serial
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X