ಪುಟ್ಟಕ್ಕನ ಮಗಳು ಶೂಟಿಂಗ್ ಚಕ್ಕರ್; ಟ್ರೆಕ್ಕಿಂಗ್ ಮೂಡ್ನಲ್ಲಿ ನಟಿ ಸಂಜನಾ ಬುರ್ಲಿ
'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯ ಮೂಲಕ ನಟಿ ಸಂಜನಾ ಬುರ್ಲಿ ಎಲ್ಲರಿಗೂ ಪರಿಚಯ ಆದವರು. ಸೀರಿಯಲ್‌ನಲ್ಲಿನ ಸ್ನೇಹಾಳ ಆ ಗಟ್ಟಿತನದ ಹೆಣ್ಣನ್ನು ಕಂಡು ಎಲ್ಲರೂ ಸೋಷಿಯಲ್ ಮೀಡಿಯಾದಲ್ಲಿ ಫಾಲೋ ಮಾಡುವುದಕ್ಕೆ ಶುರು ಮಾಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಸಂಜನಾ ಬುರ್ಲಿ ಕೂಡ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುತ್ತಾರೆ. 'ಪುಟ್ಟಕ್ಕನ ಮಗಳು' ಧಾರಾವಾಹಿಯ ಸ್ನೇಹಾ ಎಂದರೆ ಎಲ್ಲರಿಗೂ ಅಚ್ಚು ಮೆಚ್ಚು. ಅವರ ಪಾತ್ರಗಳಿಂದಲೇ ವೀಕ್ಷಕರ ಮನಸ್ಸನ್ನು ಈಗಾಗಲೇ ಗೆದ್ದು ಬಿಟ್ಟಿದ್ದಾರೆ.

ಅವಳ ಮಾತು, ಅವಳ ಗಟ್ಟಿತನ, ಬದುಕಿಗೆ ಹೆದರದ ಕ್ಯಾರೆಕ್ಟರ್, ಮನಸ್ಸಾರೆ ತೋರಿಸುವ ಪ್ರೀತಿ, ಯಾವಾಗಲೂ ಟ್ರೆಡಿಷನಲ್ ಲುಕ್‌ನಲ್ಲೇ ಮಿಂಚುವ ಮಿಂಚುಳ್ಳಿ. ಅಬ್ಬಬ್ಬಾ ಒಂದಾ.. ಎರಡಾ.. ಸುಮಾರು ವಿಚಾರಗಳಿಗೆ ಸ್ನೇಹಾ ಎಲ್ಲರ ಮನಸ್ಸನ್ನು ಗೆಲ್ಲುತ್ತಾಳೆ.
ಅಭಿಮಾನಿಗಳ ಮನ ಗೆದ್ದಿರುವ ಸಂಜನಾ ಬುರ್ಲಿ
ಸಂಜನಾ ಬುರ್ಲಿ ಅದ್ಯಾವಾಗ ಪುಟ್ಟಕ್ಕನ ಮಗಳಾಗಿ ಅಭಿನಯಿಸಿದರೋ ಅಂದಿನಿಂದ ಎಲ್ಲರ ಮನಸ್ಸನ್ನು ಕದ್ದಿದ್ದರು. ಬಹಳ ಪ್ರಾಮುಖ್ಯತೆ ತಂದುಕೊಟ್ಟಿರುವ ಸೀರಿಯಲ್ ಹಾಗೂ ಪಾತ್ರವದು. ಸ್ನೇಹಾ ಪಾತ್ರದಿಂದಾಗಿ ಸಂಜನಾ ಅವರ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದೆ. ಸಂಜನಾ ಬುರ್ಲಿ ಹಾಕುವ ಒಂದೊಂದು ಫೋಟೋಗೂ ಸಿಕ್ಕಾಪಟ್ಟೆ ಕಮೆಂಟ್‌ಗಳು ಹರಿದು ಬರುತ್ತಿರುತ್ತವೆ. ಜನಪ್ರಿಯತೆ ಗಿಟ್ಟಿಸಿಕೊಂಡಿರುವ ಧಾರಾವಾಹಿಯಲ್ಲಿ ಬ್ರೇಕ್ ಸಿಗುವುದೇ ಹೆಚ್ಚು. ಬ್ರೇಕ್ ಸಿಕ್ಕಿದರು ಫ್ಯಾಮಿಲಿ, ಫ್ರೆಂಡ್ಸ್ ಅಂತ ಕಳೆದೆ ಹೋಗುತ್ತೆ. ಆದರೆ, ಸಂಜನಾ ಬುರ್ಲಿ ಶೂಟಿಂಗ್‌ನಲ್ಲಿ ಗ್ಯಾಪ್ ಸಿಕ್ಕಿದ್ದೆ ತಡ ಟ್ರಿಪ್ ಹೊರಟು ಬಿಟ್ಟಿದ್ದಾರೆ.
ಟ್ರಿಪ್‌ಗಳಿಗೆ ಹೋಗಲು ಬಯಸುವ ನಟಿ
ಈಗಾಗಲೇ ಸಂಜನಾ ಅವರು ಹಲವು ಕಡೆಗಳಲ್ಲಿ ಟ್ರಿಪ್ ಹೋಗಿದ್ದಾರೆ. ಕೂರ್ಗ್, ರಾಜಸ್ಥಾನ, ಜಮ್ಮು-ಕಾಶ್ಮೀರ ಹೀಗೆ ಅಲ್ಲಲ್ಲಿ ಟ್ರಿಪ್ ಹೋಗುತ್ತಿರುತ್ತಾರೆ. ಇನ್ನು ಸಂಜನಾಗೆ ಟ್ರಕ್ಕಿಂಗ್ ಮಾಡುವುದು ಎಂದರೆ ಬಹಳ ಇಷ್ಟ. ಸಂಜನಾ ಬುರ್ಲಿ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಆಕ್ಟಿವ್ ಆಗಿರುವ ಸಂಜನಾಗೆ 314 ಸಾವಿರ ಫಾಲೋವರ್ಸ್ ಕೂಡ ಇದ್ದಾರೆ. ಇದುವರೆಗೂ 506 ಪೋಸ್ಟ್ ಗಳನ್ನು ಸಂಜನಾ ಅಪ್ ಲೋಡ್ ಮಾಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್
'ಪುಟ್ಟಕ್ಕನ ಮಕ್ಕಳು' ಸೆಟ್‌ನಲ್ಲಿ ನಡೆಯುವ ವಿಚಾರ, ತಮ್ಮ ಪರ್ಸನಲ್ ಫೋಟೋಶೂಟ್ ಸೇರಿದಂತೆ ಹಲವು ವಿಡಿಯೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಅದರ ಜೊತೆಗೆ ಕಂಠಿ ಹಾಗೂ ಸ್ನೇಹಾ ಫ್ಯಾನ್ಸ್ ಪೇಜ್ ಕೂಡ ಸಿಕ್ಕಾಪಟ್ಟೆ ಹುಟ್ಟಿಕೊಂಡಿವೆ. ಸಂಜನಾ ಬುರ್ಲಿ ಅವರು ತಮ್ಮ ಅಭಿಮಾನಿಗಳ ಕೆಲ ಕಮೆಂಟ್‌ಗಳಿಗೆ ಅಷ್ಟೇ ಪ್ರೀತಿಯಿಂದ ರಿಪ್ಲೈ ಕೂಡ ಮಾಡುತ್ತಾರೆ. ಇದೀಗ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಸ್ನೇಹಾ ಆಗಿ ಅಭಿನಯ ಮಾಡುತ್ತಿರುವ ಸಂಜನಾ ಬುರ್ಲಿ ಜಾಲಿ ಮೂಡ್‌ನಲ್ಲಿ ಇದ್ದಾರೆ.
ಬಾಬಾ ಬುಡನ್‌ಗಿರಿಯಲ್ಲಿ ಸಂಜನಾ
ತುಂಬಾ ಕಡೆಗಳಿಗೆ ಟ್ರೆಕ್ಕಿಂಗ್ ಹೋಗಿರುವ ಸಂಜನಾ ಇಂದೂ ಕೂಡ ಟ್ರೆಕ್ ಮಾಡಿದ್ದಾರೆ. ಬಾಬ ಬುಡನ್‌ಗಿರಿಗೆ ಹೋಗಿರುವ ಸಂಜನಾ ವೀಡಿಯೋ ಶೇರ್ ಮಾಡಿದ್ದಾರೆ. ಪರಿಸರವನ್ನು ಹೆಚ್ಚು ಹೆಚ್ಚು ಇಷ್ಟಪಡುವ ಸಂಜನಾ ಅವರು ಬೆಟ್ಟ ಗುಡ್ಡಗಳಿಗೆ ಹೋಗುವುದು ಹೆಚ್ಚು. ಇನ್ನು ಇನ್ನು ಸಂಜನಾ ಅವರ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಟಿ ಕಿರುತೆರೆ ಅಷ್ಟೇ ಅಲ್ಲದೇ, ಸಿನಿಮಾ ಲೋಕದಲ್ಲೂ ಬೆಳೆಯಬೇಕು ಎಂಬ ಆಸೆ ಇದೆ. ಅಭಿಮಾನಿಗಳ ಆಸೆಗೆ ತಕ್ಕಂತೆ ಸಂಜನಾ ಅವರು ಕೂಡ ಅವಕಾಶ ಸಿಕ್ಕಾಗಲೆಲ್ಲಾ ಸಿನಿಮಾಗಳಲ್ಲೂ ನಟಿಸುತ್ತಿರುತ್ತಾರೆ.


Click it and Unblock the Notifications











