For Quick Alerts
  ALLOW NOTIFICATIONS  
  For Daily Alerts

  ಸಂಜನಾ ಬುರ್ಲಿ: ಪುಟ್ಟಕ್ಕನ‌ ಮಗಳು ಸ್ನೇಹಾಳ ಹಾಟ್ ಫೋಟೊಗೆ ಫ್ಯಾನ್ಸ್ ಫಿದಾ..!

  By ಎಸ್ ಸುಮಂತ್
  |

  ಪುಟ್ಟಕ್ಕನ ಮಗಳು ಸ್ನೇಹಾ ಹಾಟ್ ಫೋಟೊಗೆ ಪೋಸ್ ನೀಡಿದ್ರಾ ಎಂಬ ಪ್ರಶ್ನೆ ನಿಮ್ಮ ತಲೆಯಲ್ಲಿ ಬಾರದೆ ಇರುವುದಿಲ್ಲ. ಯಾಕೆಂದರೆ ಧಾರಾವಾಹಿ ನೋಡುವಾಗ ಸ್ನೇಹಾ ಕಾಣಿಸಿಕೊಳ್ಳುವ ರೀತಿಯೇ ಬೇರೆಯಾಗಿದೆ. ಆದರೆ ಇದು ಸೀರಿಯಲ್ ವಿಚಾರ ಅಲ್ಲ, ರಿಯಲ್ ಲೈಫ್‌ನಲ್ಲಿ ಸ್ನೇಹಾ ಯಾವ ರೀತಿ ಕಾಣಿಸಿಕೊಳ್ಳುತ್ತಾರೆ ಎಂಬ ವಿಚಾರ.

  ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಮೂವರು ಮಕ್ಕಳು ಸಮಾನ. ಆದರೂ ಸ್ನೇಹಾ ತುಂಬಾನೇ ಹೈಲೈಟ್. ಯಾವಾಗಲೂ ಸಿಡುಕು ಮೂತಿಯಲ್ಲಿಯೇ ಇರುತ್ತಾಳೆ. ಇದನ್ನು ನಾವೂ ಹೇಳುತ್ತಿರುವುದಲ್ಲ. ಅವರ ಜೊತೆಗಿರುವವರೇ ಆಗಾಗ ಭಯ ಪಟ್ಟು ಈ ಮಾತನ್ನು ಹೇಳುತ್ತಿರುತ್ತಾರೆ‌. ಆದರೆ ಇತ್ತಿಚೆಗೆ ಕಂಠಿ ಜೊತೆ ಸೇರಿ ಕೊಂಚ ಕೊಂಚ ಬದಲಾಗುತ್ತಿದ್ದಾಳೆ ಸ್ನೇಹಾ. ಆದರೆ ಸ್ನೇಹಾ ರಿಯಲ್ ಲೈಫ್ ಹೇಗಿದೆ ಗೊತ್ತಾ..?

  'ಕೆಜಿಎಫ್ 2' ಟಿವಿಯಲ್ಲಿ ಗ್ರ್ಯಾಂಡ್‌ ಪ್ರೀಮಿಯರ್‌ಗೆ ವೇದಿಕೆ ಸಜ್ಜು: ಇನ್ನು ನಾಲ್ಕೇ ದಿನ ಬಾಕಿ!'ಕೆಜಿಎಫ್ 2' ಟಿವಿಯಲ್ಲಿ ಗ್ರ್ಯಾಂಡ್‌ ಪ್ರೀಮಿಯರ್‌ಗೆ ವೇದಿಕೆ ಸಜ್ಜು: ಇನ್ನು ನಾಲ್ಕೇ ದಿನ ಬಾಕಿ!

  ಸ್ನೇಹಾಗೆ ಕ್ರಿಯೇಟ್ ಆಗಿದೆ ದೊಡ್ಡ ಬಳಗ

  ಸ್ನೇಹಾಗೆ ಕ್ರಿಯೇಟ್ ಆಗಿದೆ ದೊಡ್ಡ ಬಳಗ

  ಜೀ ಕನ್ನಡದಲ್ಲಿ ಬರುತ್ತಿರುವ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯೇ ಸ್ನೇಹಾ ಅಲಿಯಾಸ್ ಸಂಜನಾ ಬುರ್ಲಿಗೆ ಮೊದಲ ಧಾರಾವಾಹಿ. ಹಾಗೆ ನೋಡಿಕೊಂಡರೆ ಮೊದಲ ಧಾರಾವಾಹಿಯಲ್ಲಿಯೇ ಸಾಕಷ್ಟು ಖ್ಯಾತಿ ಪಡೆದಿದ್ದಾರೆ. ಅವರಿಗೆ ಆದಂತ ಸಾಕಷ್ಟು ಫ್ಯಾನ್ಸ್ ಪೇಜ್ ಗಳು ಕೂಡ ಕ್ರಿಯೇಟ್ ಆಗಿವೆ. ಆ ಪೇಜ್ ಗಳಲ್ಲಿ ತಮ್ಮ ನಟ - ನಟಿಯರ ಫೋಟೊ ವಿಡಿಯೋಗಳನ್ನು ಹಾಕಿ, ಪ್ರಚಾರ ಮಾಡುತ್ತಾರೆ. ಸೆಲೆಬ್ರೆಟಿಗಳು ತಮ್ಮ ಪ್ರೊಫೈಲ್ ನಲ್ಲಿ ಹಾಕುವುದಕ್ಕೂ ಮುನ್ನವೇ ಕೆಲವೊಂದು ಫೋಟೊ, ವಿಡಿಯೋ ಫ್ಯಾನ್ಸ್ ಪೇಜ್‌ನಲ್ಲಿ ಬಂದಿರುತ್ತದೆ. ಇದೀಗ ಸಂಜನಾ ಬುರ್ಲಿಯ ಹೊಸ ವಿಡಿಯೋ ಒಂದು ಫ್ಯಾನ್ಸ್ ಪೇಜ್ ನಲ್ಲಿ ಹರಿದಾಡುತ್ತಿದೆ.

  ಪುಟ್ಟಕ್ಕನ ಮಕ್ಕಳು: ಖೋಖೋ ಕೋಚ್ ಆಗಿ ಬರಲಿದ್ದಾರಾ ಪುಟ್ಟಕ್ಕ!ಪುಟ್ಟಕ್ಕನ ಮಕ್ಕಳು: ಖೋಖೋ ಕೋಚ್ ಆಗಿ ಬರಲಿದ್ದಾರಾ ಪುಟ್ಟಕ್ಕ!

  ಪುಟ್ಟಕ್ಕನ ಮಕ್ಕಳ ಎಂಜಾಯ್ಮೆಂಟ್

  ಪುಟ್ಟಕ್ಕನ ಮಕ್ಕಳ ಎಂಜಾಯ್ಮೆಂಟ್

  'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಹಲವು ಕಲಾವಿದರಿಗೆ ಮೊದಲ ಧಾರಾವಾಹಿ. ಜೊತೆಗೆ ಒಳ್ಳೆ ಸ್ನೇಹತ್ವವನ್ನು ಬೆಳೆಸಿಕೊಟ್ಟಿದೆ. ಇದೇ ಟೀಂ ಈಗ ಎಲ್ಲರ ಜೊತೆಗೂ ಬೆರೆತಿದೆ. ಹೀಗಾಗಿ ಎಲ್ಲರೂ ಒಟ್ಟಾಗಿ ಎಂಜಾಯ್ ಮಾಡುತ್ತಾರೆ. ಅಲ್ಲಿ ಇಲ್ಲಿ ಸುತ್ತುತ್ತಾರೆ. ಇತ್ತೀಚೆಗಷ್ಟೇ 'ಪುಟ್ಟಕ್ಕನ ಮಕ್ಕಳು' ಸ್ನೇಹಾ, ಸಹನಾ, ಮುರುಳಿ ಮೇಷ್ಟ್ರು, ಕಂಠಿ ಸೇರಿದಂತೆ ಎಲ್ಲರೂ ಟ್ರಕ್ಕಿಂಗ್ ಹೋಗಿದ್ದರು. ಮುಂಜಾನೆಯೇ ಹೋಗಿದ್ದ, ಟೀಂ ಎಲ್ಲಾ ಕಡೆಯಲ್ಲೂ ಎಂಜಾಯ್ ಮಾಡಿಕೊಂಡು ಹೋಗಿದ್ದಾರೆ. ಸ್ಪೆಷಲ್ ಟೀ ಕುಡಿದು, ಸ್ಪೆಷಲ್ ಊಟ ಮಾಡಿ ಸಖತ್ ಎಂಜಾಯ್ ಮಾಡಿದ್ದಾರೆ.

  ಸ್ನೇಹಾ ಹೊಸ ಫೋಟೊಗೆ ಬಹು ಪರಾಕ್

  ಸ್ನೇಹಾ ಹೊಸ ಫೋಟೊಗೆ ಬಹು ಪರಾಕ್

  ಪುಟ್ಟಕ್ಕನ ಮಗಳು ಸ್ನೇಹಾ ಅಲಿಯಾಸ್ ಸಂಜನಾ ಬುರ್ಲಿ ಸಾಕಷ್ಟು ಫೋಟೊಶೂಟ್ ಮಾಡಿಸುತ್ತಾ ಇರುತ್ತಾರೆ. ಅದರಲ್ಲೂ ಇತ್ತೀಚೆಗೆ ಬೆಂಗಾಲಿ ಬೆಡಗಿಯಾಗಿ ಮಿಂಚಿದ್ದರು. ಧಾರಾವಾಹಿಯಲ್ಲೂ ಟ್ರೆಡಿಷನಲ್ ಆಗಿಯೇ ಕಾಣಿಸಿಕೊಳ್ಳುತ್ತಾರೆ. ಆದರೆ ಇದೀಗ ಬೇರೆ ರೀತಿಯಲ್ಲಿಯೇ ಕಾಣಿಸುತ್ತಿದ್ದಾರೆ. ನದಿಯಲ್ಲಿ ಎಂಜಾಯ್ ಮಾಡುತ್ತಿರುವ ಸಂಜನಾ ಬುರ್ಲಿ ಸಖತ್ ಹಾಟ್ ಆಗಿ ಕಾಣಿಸುತ್ತಿದ್ದಾರೆ. ಈ ಒಂದು ಫೋಟೊಗೆ ಸಾಂಗ್ ಒಂದನ್ನು ಎಡಿಟ್ ಮಾಡಿ ಫ್ಯಾನ್ ಪೇಜ್‌ನಲ್ಲಿ ಹಾಕಿದ್ದಾರೆ.

  ಫೋಟೊಗೆ ಡಿಮ್ಯಾಂಡ್

  ಫೋಟೊಗೆ ಡಿಮ್ಯಾಂಡ್

  ಸದ್ಯ ಸಂಜನಾ ಬುರ್ಲಿಯ ಈ ರೀತಿಯ ಫೋಟೊ ಫ್ಯಾನ್ ಪೇಜ್ ನಲ್ಲಿ ಒಂದನ್ನು ಮಾತ್ರ ಹಾಕಿದ್ದಾರೆ. ಆದರೆ ಅಧಿಕೃತವಾಗಿ ಸಂಜನಾ ಇನ್ನು ಫೋಟೊ ಹಾಕಿಲ್ಲ. ಹೀಗಾಗಿ ಅಭಿಮಾನಿ ಬಳಗ ಡಿಮ್ಯಾಂಡ್ ಮಾಡುತ್ತಿದೆ. ಆದಷ್ಟು ಬೇಗ ಉಳಿದ ಫೋಟೊಗಳು ಬರಲಿ, ಇದು ಯಾವ ಸ್ಥಳ ಎಂದೆಲ್ಲಾ ಕುತೂಹಲ ಭರಿತ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಎಕ್ಸ್ಟ್ರಾ ಮಾಹಿತಿಗೆ ಫ್ಯಾನ್ಸ್ ವೈಟಿಂಗ್ ನಲ್ಲಿದ್ದಾರೆ.

  English summary
  Puttakkana Makkalu Serial Actress Sneha Aka Sanjana Burli Photoshoot. Here is the details.
  Tuesday, August 16, 2022, 22:43
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X