Don't Miss!
- Automobiles
ದ್ವಿಚಕ್ರ ವಾಹನ ಖರೀದಿಸುತ್ತಿದ್ದೀರಾ? ಇದೇ ತಿಂಗಳ ಪ್ರಮುಖ ಬಿಡುಗಡೆಗಳನ್ನು ಒಮ್ಮೆ ಪರಿಶೀಲಿಸಿ
- News
Budget 2023; ಮೋದಿ ಸರ್ಕಾರದಿಂದ ಸಾವಯವ ಕೃಷಿಗೆ ಒತ್ತು: ಸಂಸದ ಈರಣ್ಣ ಕಡಾಡಿ
- Sports
IND vs NZ 3rd T20: ಸರಣಿ ನಿರ್ಣಾಯಕ 3ನೇ ಪಂದ್ಯದ ಟಾಸ್ ವರದಿ, ಆಡುವ 11ರ ಬಳಗ & ಲೈವ್ ಸ್ಕೋರ್
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Lifestyle
ಬಜೆಟ್ 2023: ಆರೋಗ್ಯ ಕ್ಷೇತ್ರಕ್ಕೆ ಬಂಪರ್ ಕೊಡುಗೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಬೆಂಗಾಲಿ ಬೆಡಗಿಯಾಗಿ ಮಿಂಚಿದ 'ಪುಟ್ಟಕ್ಕನ ಮಗಳು' ಸಂಜನಾ ಬುರ್ಲಿ!
'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಮೂಲಕ ಸ್ನೇಹಾ ಇದೀಗ ಎಲ್ಲರ ಮನಸ್ಸು ಗೆದ್ದಿದ್ದಾಳೆ. ಇದ್ದರೆ ಇಂಥ ಗಟ್ಟಿ ಹುಡುಗಿ ಇರಬೇಕೆಂದು ಎಲ್ಲರೂ ಬಯಸುವಂತೆ ಇದ್ದಾಳೆ. ತಪ್ಪು ಕಂಡರೆ ಯಾರನ್ನು ಉಳಿಸುವುದಿಲ್ಲ. ಅನ್ಯಾಯಕ್ಕೆ ತಲೆಬಾಗಲ್ಲ, ನ್ಯಾಯ ಸಿಗುವ ತನಕ ಬಿಡಲ್ಲ ಎಂಬ ಗುಣದವಳು ಸ್ನೇಹಾ. ಅಂಥ ಪೊಲೀಸಪ್ಪನನ್ನೇ ಬಿಡಲಿಲ್ಲ. ಕಂಠಿಯನ್ನು ತುಂಬಾ ನಂಬಿರುವ ಸ್ನೇಹಾ ಸತ್ಯ ಗೊತ್ತಾದಾಗ ರಣ ರಾಕ್ಷಸಿಯಾಗುವ ಸಾಧ್ಯತೆಯೂ ಇದೆ.
ಹೀಗೆ ಮೊದಲ ಧಾರಾವಾಹಿಯೇ ಆದರೂ ಎಲ್ಲರಿಗೂ ಇಷ್ಟವಾಗಿರುವ ಸ್ನೇಹಾ ಅಲಿಯಾಸ್ ಸಂಜನಾ ಬುರ್ಲಿ, ರಿಯಲ್ ಲೈಫ್‌ನಲ್ಲಿ ಬೇರೆ ರೀತಿಯೇ ಇದ್ದಾರೆ. ಈಗಾಗಲೇ ಸಿನಿಮಾಗಳ ಆಫರ್‌ಗಳು ಸಂಜನಾ ಬುರ್ಲಿ ಕಡೆಗೆ ಬರುತ್ತಿವೆ. ಒಂದು ಸಿನಿಮಾ ಕಂಪ್ಲೀಟ್ ಕೂಡ ಆಗಿದೆ. ಇತ್ತೀಚೆಗೆ ಸಖತ್ ಫೋಟೊಶೂಟ್ ಮಾಡಿಸಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳಿಗೆ ಇನ್ನು ಹತ್ತಿರವಾಗಿದ್ದಾರೆ.
ದೇವ್
ಜೊತೆ
ಮನೆ
ಬಿಟ್ಟು
ಹೋಗಿ
ಮದುವೆಯಾಗಲು
ರೇವತಿ
ಒಪ್ಪಿಗೆ:
ಲೀಲಾ
ಈ
ಬಾರಿಯೂ
ಫೇಲ್
ಆಗ್ತಾಳಾ..?

ಬಂಗಾಳಿ ಸ್ಟೈಲ್‌ನಲ್ಲಿ ಸಂಜನಾ ಬುರ್ಲಿ
'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಸ್ನೇಹಾ ಚೂಡಿದಾರ್ ಬಿಟ್ಟರೆ ಬೇರೆ ಏನನ್ನು ಹಾಕುವುದಿಲ್ಲ. ಹಳ್ಳಿಯಲ್ಲಿ ಇರುವುದರಿಂದ ಹಳ್ಳಿಗೆ ಸರಿ ಹೊಂದುವಂತೆ ಇರುತ್ತಾಳೆ. ಹೀಗಾಗಿ ಜಡೆ ಹೆಣೆದು, ಚೂಡಿದಾರ್ ಹಾಕುತ್ತಾಳೆ. ಆದರೆ ರಿಯಲ್ ಲೈಫ್‌ನಲ್ಲಿ ಬೇರೆಯೇ ರೀತಿ ಇರುವ ಸಂಜನಾ ಬುರ್ಲಿ, ಇದೀಗ ಹೊಸ ರೀತಿಯಲ್ಲಿ ಫೋಟೊಶೂಟ್ ಮಾಡಿಸಿಕೊಂಡಿದ್ದಾಳೆ. ಅದು ಬಂಗಾಳಿ ಸ್ಟೈಲ್‌ನಲ್ಲಿ. ಈ ಫೋಟೊ ನೋಡಿದ ಅಭಿಮಾನಿಗಳು ಉಘೇ ಉಘೆ ಎನ್ನುತ್ತಿದ್ದಾರೆ.
ಬೆಟ್ಟದ
ಹೂ:
ರಾಹುಲ್
ಹಿಂದೆ
ಹಿಂದೆ
ಹೋದರು
ಬಗ್ಗುತ್ತಿಲ್ಲ
ಹೂವಿ:
ಮನಸ್ಸು
ಕಲ್ಲಾಗಿದ್ದು
ಯಾಕೆ..?

ಸ್ನೇಹಾಗೆ ಈ ಮೇಕಪ್ ಮಾಡಿದವರು ಯಾರು?
ಸಂಜನಾ ಬುರ್ಲಿ ಈಗ ಬೇಡಿಕೆ ಇರುವಂತ ನಟಿ. ಅದಕ್ಕಾಗಿಯೇ ಈಗಾಗಲೇ ಸಿನಿಮಾವೊಂದನ್ನು ಮಾಡಿದ್ದಾರೆ. ಸೆಲೆಬ್ರೆಟಿ ಎಂದ ಮೇಲೆ ಒಂದಷ್ಟು ಪ್ರಾಡೆಕ್ಟ್, ಬ್ರಾಂಡ್‌ಗಳಿಗೆ ರಾಯಬಾರಿಯಾಗುವ ಡಿಮ್ಯಾಂಡ್ ಕೂಡ ಇದ್ದೇ ಇರುತ್ತದೆ. ಅದರಂತೆ ಸಂಜನಾ ಬುರ್ಲಿಗೆ ಡ್ರೆಸ್, ಮೇಕಪ್ ಕಂಪನಿಗಳು ಆಗಾಗ ಫೋಟೊಶೂಟ್ ಮಾಡಿಸುತ್ತಲೆ ಇರುತ್ತಾರೆ. ಈ ಬಾರಿ ವಿಶೇಷವಾಗಿ ಫೋಟೊಶೂಟ್ ಮಾಡಿಸಿದ್ದಾರೆ. ಅದು ಬೆಂಗಾಲಿ ಸ್ಟೈಲ್‌ನಲ್ಲಿ. ಈ ಫೋಟೊ ಬಿಳಿ ಸೀರೆಗೆ ಕೆಂಪು ಬಾರ್ಡರ್ ಇರುವ ಸೀರೆಯನ್ನುಟ್ಟು, ಅದಕ್ಕೆ ತಕ್ಕನಾದಂತ ಜ್ಯುವೆಲ್ಲರಿ ಹಾಕಿದ್ದು, ಬೆಂಗಾಲಿ ಸ್ಟೈಲ್‌ನಲ್ಲಿ ಮೇಕಪ್ ಮಾಡಲಾಗಿದೆ. ಈ ಫೋಟೊಗೆ ಹತ್ತಿರತ್ತಿರ ಒಂಭತ್ತು ಸಾವಿರ ಲೈಕ್ಸ್ ಬಂದಿದ್ದು, ಕಮೆಂಟ್ಸ್ ಕೂಡ ಸಿಕ್ಕಿವೆ.

ಸಂಜನಾ ವೆರೈಟಿ ವೆರೈಟಿ ಫೋಟೊಶೂಟ್‌ನಲ್ಲಿ ಬ್ಯುಸಿ
ಇತ್ತೀಚೆಗೆ ಸಂಜನಾ ಬುರ್ಲಿ ಸಿಕ್ಕಾಪಟ್ಟೆ ಫೋಟೊಶೂಟ್‌ನಲ್ಲಿ ಬ್ಯುಸಿಯಾಗಿದ್ದಾರೆ. ವೆರೈಟಿ ವೆರೈಟಿ ಡ್ರೆಸ್‌ಗಳಲ್ಲಿ ಫೋಟೊಶೂಟ್ ಮಾಡಿಸುತ್ತಾ ಇರುತ್ತಾರೆ. ಇತ್ತೀಚೆಗೆ ಕೆಂಪು ಸೀರೆಯಲ್ಲಿ, ಕೆಂಪು ಜ್ಯುವೆಲ್ಲರಿ ಹಾಕಿ ಮಧು ಮಗಳಂತೆ ಮಿಂಚಿದ್ದರು. ಅವರ ಸೋಶಿಯಲ್ ಮೀಡಿಯಾ ನೋಡಿದರೇನೆ ಅವರ ಹೊಸ ಹೊಸ ಫೋಟೊಶೂಟ್ ಕಣ್ಣಿಗೆ ಕಾಣುತ್ತದೆ. ಹಸಿರು ಡ್ರೆಸ್‌ನಲ್ಲಿ ಮಾಡಿಸಿರುವ ಫೋಟೊಶೂಟ್‌ನಲ್ಲಿ ಕೂಡ ಅದ್ಭುತವಾಗಿ ಕಾಣಿಸುತ್ತಿದ್ದಾರೆ.
ತಂಗಿಗಾಗಿ ಸತ್ಯ ಹೇಳಲು ಹೊರಟ ಕಂಠಿ
'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಸ್ನೇಹಾಳ ಪ್ರೀತಿಗಾಗಿಯೇ ಕಂಠಿ ಕಾಯುತ್ತಿದ್ದಾನೆ. ಸ್ನೇಹಾ, ಕಂಠಿಯ ಜೊತೆ ತುಂಬಾನೆ ಆತ್ಮೀಯವಾಗಿದ್ದಾನೆ. ಸತ್ಯ ಹೇಳಿದರೆ ಇನ್ನೆಲ್ಲಿ ಸಂಬಂಧ ಹಾಳಾಗುತ್ತೋ ಎಂಬ ಭಯಕ್ಕೆ ಸುಳ್ಳಿನ ಸರಮಾಲೆ ಜೋಡಿಸುತ್ತಿದ್ದಾನೆ. ಆದರೆ ವಸು ಬಾಳು ಸರಿ ಹೋಗಲು ಸ್ನೇಹಾಳ ಬಳಿ ಸತ್ಯ ಹೇಳಲು ಹೊರಟಿದ್ದಾನೆ. ಅತ್ತ ಸ್ನೇಹಾ ಕೂಡ ವಸು ಮತ್ತು ಚಂದ್ರು ಜೀವನ ಸರಿ ಹೋಗಬೇಕೆಂಬ ಕಾರಣಕ್ಕೆ ಬಂಗಾರಮ್ಮನ ಬಳಿ ಸತ್ಯ ಹೇಳಲು ಹೊರಟಿದ್ದಾಳೆ. ಸ್ನೇಹಾ ಮತ್ತು ಕಂಠಿ ಇಬ್ಬರ ಯೋಚನೆ ಒಂದೇ ಆಗಿದೆ.