ಟ್ರಿಪ್‌ನಲ್ಲಿ ಪುಟ್ಟಕ್ಕನ ಮಕ್ಕಳು & ಬಾವಿ ಅಳಿಯಂದಿರ ಮೋಜು, ಮಸ್ತಿ..!

By ಎಸ್ ಸುಮಂತ್

ಪುಟ್ಟಕ್ಕನಿಗೆ ಮೂವರು ಹೆಣ್ಣು ಮಕ್ಕಳು. ಅದರಲ್ಲಿ ಸಹನಾ ದೊಡ್ಡವಳು, ಸ್ನೇಹಾ ಮಧ್ಯದವಳು, ಚಿಕ್ಕ ಮಗಳು ಸುಮನಾ ಇನ್ನು ಓದುತ್ತಾ ಇದ್ದಾಳೆ. ತುಂಬಾ ಚಿಕ್ಕ ಹುಡುಗಿ. ಇಲ್ಲಿ ಎರಡು ಲವ್ ಸ್ಟೋರಿ ತುಂಬಾ ಇಂಟ್ರೆಸ್ಟಿಂಗ್ ಆಗಿದೆ. ಅದು ಸ್ನೇಹಾ ಮತ್ತು ಕಂಠಿ ಹಾಗೇ ಸಹನಾ ಮತ್ತು ಮುರುಳಿಯದ್ದು. ಹಾಗೋ ಹೀಗೋ ಮಾಡಿ ಮುರುಳಿ ಮೇಷ್ಟ್ರು ತನ್ನ ಪ್ರೀತಿಯನ್ನು ಪಡೆದುಕೊಂಡಾಗಿದೆ. ಸಹನಾಳಿಗೆ ತನ್ನ ಪ್ರೀತಿ ಹೇಳಿ, ಆ ಕಡೆಯಿಂದಲೂ ಗ್ರೀನ್ ಸಿಗ್ನಲ್ ಪಡೆದಾಗಿದೆ.

ಆದರೆ ಉಳಿದಿರುವುದು ಇನ್ನೊಂದು ಪ್ರೀತಿ. ಅದು ಸ್ನೇಹಾ ಮತ್ತು ಕಂಠಿ ಪ್ರೀತಿ. ಅತ್ತ ಹೇಳುವುದಕ್ಕೂ ಆಗದೆ, ಬಿಡುವುದಕ್ಕೂ ಆಗದೆ ಕಂಠಿ ಒದ್ದಾಡುತ್ತಿದ್ದಾನೆ. ಕಂಠಿಯನ್ನು ಬೆಸ್ಟ್ ಫ್ರೆಂಡ್ ಎಂದೇ ಭಾವಿಸಿರುವ ಸ್ನೇಹಾ, ಅತ್ತ ದೊರೆ ಮೇಲೆ ಪ್ರೀತಿ ಬೆಳೆಸಿಕೊಳ್ಳುತ್ತಿದ್ದಾಳೆ. ಇತ್ತ ಕಂಠಿ ಮನೆಯಲ್ಲಿ ಪೂರ್ವಿಗೆ ಮದುವೆ ಮಾಡಲು ತುದಿಗಾಲಿನಲ್ಲಿ ನಿಂತಿದ್ದಾರೆ. ಇದೆಲ್ಲಾ ತೆರೆಮೇಲಿನ ಟೆನ್ಶನ್. ಆದರೆ ಗ್ಯಾಪ್‌ನಲ್ಲಿ ಈ ಎಲ್ಲಾ ಟೆನ್ಶನ್ ಬಿಟ್ಟು ಪುಟ್ಟಕ್ಕನ ಮಕ್ಕಳು & ಬಾವಿ ಅಳಿಯಂದಿರೆಲ್ಲಾ ಸೇರಿ ಟ್ರಿಪ್ ಹೋಗಿದ್ದಾರೆ.

ಬ್ರೇಕ್ ಟೈಮ್‌ನಲ್ಲಿ 'ಪುಟ್ಟಕ್ಕನ ಮಕ್ಕಳು' ಏನು ಮಾಡುತ್ತಾರೆ?

ಬ್ರೇಕ್ ಟೈಮ್‌ನಲ್ಲಿ 'ಪುಟ್ಟಕ್ಕನ ಮಕ್ಕಳು' ಏನು ಮಾಡುತ್ತಾರೆ?

ಧಾರಾವಾಹಿ ಅಂದರೆ ಸಾಕಷ್ಟು ಸಮಯ ಸೆಟ್‌ನಲ್ಲಿರುವವರ ಜೊತೆಗೆನೇ ಸಮಯ ಕಳೆಯಬೇಕು. ಆಗ ಸಮಾನ ಮನಸ್ಕರು ಸಿಗುತ್ತಾರೆ, ಒಳ್ಳೆ ಫ್ರೆಂಡ್‌ಶಿಪ್‌ ಕ್ಯಾರಿ ಆಗುತ್ತೆ. ಈಗ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲೂ ಅದೇ ಆಗಿದ್ದು. ಎಲ್ಲರೂ ಸಮಾನ ಮನಸ್ಕರಂತೆಯೇ ಕಾಣುತ್ತಾರೆ. ಹೀಗಾಗಿ ಎಲ್ಲರ ನಡುವೆ ಬಾಂಧವ್ಯ ಏರ್ಪಟ್ಟಿದೆ. ಎಲ್ಲಿಯೇ ಹೋದರೂ ಜೊತೆಗೆ ಹೋಗುತ್ತಾರೆ. ಎಂಜಾಯ್ ಮಾಡುತ್ತಾರೆ. ಲೈಫ್‌ನ ಖುಷ್ ಖುಷಿಯಾಗಿ ಇಟ್ಟುಕೊಂಡಿದ್ದಾರೆ.

ಧಾರಾವಾಹಿಯಲ್ಲೇ ಸ್ನೇಹಿತರು ಸಿಕ್ಕರೆ ಲೈಫ್ ಹೀಗಿರುತ್ತೆ

ಧಾರಾವಾಹಿಯಲ್ಲೇ ಸ್ನೇಹಿತರು ಸಿಕ್ಕರೆ ಲೈಫ್ ಹೀಗಿರುತ್ತೆ

ಅದರಲ್ಲೂ ಮೊದಲ ಧಾರಾವಾಹಿಯಲ್ಲಿ ನಟಿಸುವಾಗಲೇ ಸ್ನೇಹಿತರು ಸಿಕ್ಕರೆ ಅದಕ್ಕಿಂತ ಖುಷಿ ಬೇರೆನಿದು. ಮೊದಲ ಧಾರಾವಾಹಿಯಲ್ಲಿ ನಟಿಸಿದ ಅದೆಷ್ಟೋ ಮಂದಿ ಆ ಇಡೀ ಟೀಂ ಈಗಲೂ ಸ್ನೇಹಿತರಾಗಿಯೇ ಮುಂದುವರೆದಿದ್ದಾರೆ. ಅದಕ್ಕೆ ಉದಾಹರಣೆಯೆಂಬಂತೆ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯ ಬಂಗಾರಮ್ಮನನ್ನೇ ತೆಗೆದುಕೊಳ್ಳಿ 'ಸಿಲ್ಲಿ ಲಲ್ಲಿ' ಧಾರಾವಾಹಿ ಆ ಜಮಾನದ್ದು. ಆದರೆ ಆ ಧಾರಾವಾಹಿಯಲ್ಲಿ ಬೆಳೆಸಿಕೊಂಡ ಸ್ನೇಹ ಸಂಬಂಧ ಈಗಲೂ ಮುಂದಿವರೆದಿದೆ. ಸ್ಪೆಷಲ್ ಡೇಗಳಲ್ಲಿ ಭೇಟಿ ಮಾಡುತ್ತಾರೆ, ಊಟ ಮಾಡುತ್ತಾರೆ, ಕಷ್ಟ ಸುಖದ ಹಂಚಿಕೆಯಾಗುತ್ತಿದೆ. ಅದೇ ಥರ 'ಲಕ್ಷ್ಮೀ ಬಾರಮ್ಮ' ಧಾರಾವಾಹಿಯ ತಂಡ ಕೂಡ ಈಗಲೂ ಆ ಸ್ನೇಹವನ್ನು ಉಳಿಸಿಕೊಂಡು ಬಂದಿದೆ. ಈಗ 'ಪುಟ್ಟಕ್ಕನ ಮಕ್ಕಳು' ಮತ್ತು ಅಳಿಯಂದಿರು ಅದೇ ಹಾದಿಯಲ್ಲಿ ಸಾಗುತ್ತಿದ್ದಾರೆ.

'ಪುಟ್ಟಕ್ಕನ ಮಕ್ಕಳ' ಟ್ರಿಪ್ ಕಂಡು ನೆಟ್ಟಿಗರಿಗೆ ಖುಷಿ

'ಪುಟ್ಟಕ್ಕನ ಮಕ್ಕಳ' ಟ್ರಿಪ್ ಕಂಡು ನೆಟ್ಟಿಗರಿಗೆ ಖುಷಿ

ಈಗಾಗಲೇ ಸ್ನೇಹಾ - ಕಂಠಿ, ಸಹನಾ - ಮುರುಳಿಗೆ ಒಂದಷ್ಟು ಫ್ಯಾನ್ ಫಾಲೋವರ್ಸ್ ಕ್ರಿಯೇಟ್ ಆಗಿದ್ದಾರೆ. ಅದರಂತೆ ಫ್ಯಾನ್ ಪೇಜ್ ಕೂಡ ಇದಾವೆ. ಜೊತೆಗೆ ಅವರನ್ನು ಫಾಲೋ ಮಾಡುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಅದ್ಯಾವಾಗ ಎಲ್ಲರೂ ಟ್ರಿಪ್ ಹೋದ ಫೋಟೊಗಳನ್ನು ಸೋಶಿಯಲ್ ಮೀಡಿಯಾಗೆ ಹಾಕಿದರೋ ಅವರ ಫ್ಯಾನ್ಸ್ ಖುಷಿಯಾಗಿದ್ದಾರೆ. ಸೂಪರ್, ಹೀಗೆ ಖುಷ್ ಖುಷಿಯಾಗಿರಿ ಎಂದು ಹಾರೈಸಿದ್ದಾರೆ.

ಟ್ರಿಪ್ ಹೇಗೆಲ್ಲಾ ಎಂಜಾಯ್ ಮಾಡಿದ್ದಾರೆ

ಟ್ರಿಪ್ ಹೇಗೆಲ್ಲಾ ಎಂಜಾಯ್ ಮಾಡಿದ್ದಾರೆ

ಸಹನಾ, ಸ್ನೇಹಾ, ಕಂಠಿ, ಮುರುಳಿ, ಪುರ್ಶಿ ಸೇರಿ ಇನ್ನಿಬ್ಬರು ಸ್ನೇಹಿತರು ಟ್ರಿಪ್ ನಲ್ಲಿದ್ದಾರೆ. ಸುಮ ಟ್ರಿಪ್‌ಗೆ ಮಿಸ್ಸಾಗಿದ್ದಾರೆ. ಬೆಳ್ಳಂ ಬೆಳಗ್ಗೆಯೇ ರೈಡ್ ಹೋಗೋದು ಅಂದ್ರೆ ಅದೇನೋ ಒಂಥರಾ ಕ್ರೇಜ್ ಅಲ್ವಾ. ಇವರು ಆ ಕ್ರೇಜ್‌ನಲ್ಲಿಯೇ ಹೋಗಿದ್ದಾರೆ. ಫೋಟೊಗಳನ್ನು ನೋಡುತ್ತಿದ್ದರೆ ಮಂಜಿನ ಹನಿಯಲ್ಲಿಯೇ ಟ್ರಾವೆಲ್ ಮಾಡಿದ್ದಾರೆ. ಯಾವುದೋ ಬೆಟ್ಟದ ತುದಿಯಲ್ಲಿ ಟ್ರೆಕ್ಕಿಂಗ್ ಮುಗಿಸಿ ಬಂದವರಂತೆ ಕಾಣುತ್ತಿದೆ. ಫೋಟೊ ಬಿಟ್ಟರೆ ಯಾರೋಬ್ಬರು ಟ್ರಿಪ್ ಬಗ್ಗೆ ಮಾಹಿತಿ ನೀಡಿಲ್ಲ. ಫೋಟೊಗಳನ್ನಷ್ಟೇ ಹಾಕಿದ್ದಾರೆ.

More from Filmibeat

English summary
zee kannada Puttakkana Makkalu Serial Actress Trip Photos. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X