Puttakkana Makkalu:ಪುಟ್ಟಕ್ಕಗೆ ಯಾಕಿಷ್ಟು ಸಂಕಷ್ಟ; ಕಂಠಿ-ಸ್ನೇಹಾ ಬಾಂಧವ್ಯದಲ್ಲಿ ಬಿರುಕು?

By ಪೂರ್ವ

ಪುಟ್ಟಕ್ಕಗೆ ಇದೀಗ ಮನದಲ್ಲಿ ಬಹಳ ಆತಂಕ ಶುರುವಾಗಿದೆ. ದೊಡ್ಡ ಮಗಳ ಜೀವನ ಹಾಳಾಯಿತು. ಹಾಗೆಯೇ ಚಿಕ್ಕ ಮಗಳ ಜೀವನ ಹಾಳಾಗುತ್ತದೆ ಎನ್ನುವ ಭಯದಲ್ಲಿ ಪುಟ್ಟಕ್ಕ ಇರುತ್ತಾರೆ. ಮುತ್ತಿನಂಥ ಅಳಿಯ ಸಿಕ್ಕಿದರೂ ಸ್ನೇಹಾ ಮಾಡಿದ ತಪ್ಪಿನಿಂದಾಗಿ ಬಹಳ ದೊಡ್ಡ ಬೆಲೆ ತೆರಬೇಕಾಗಿದೆ. ಸ್ನೇಹಾಗೆ ತಪ್ಪು ಎಲ್ಲಿ ಕಾಣಿಸಿ ಬಿಡುತ್ತದೋ ಆಕೆ ಅಲ್ಲಿ ಇರುತ್ತಾಳೆ. ಆದರೆ, ಅವರು ದೂರುತ್ತಿರುವುದು ನಿಜವೋ ಅಥವಾ ಸುಳ್ಳೋ ಎನ್ನುವ ಪರಿಜ್ಞಾನ ಆಕೆಗೆ ಇರುವುದು ಇಲ್ಲ.

ಮೊದಲು ಯಾರು ಯಾರನ್ನು ಬೆರಳು ಮಾಡಿ ತೋರಿಸುತ್ತಾರೋ, ಅವರ ಬಗ್ಗೆಯೇ ಸ್ನೇಹಾ ತಪ್ಪು ತಿಳಿದುಕೊಂಡು ಕಂಪ್ಲೇಂಟ್ ಕೊಡುತ್ತಾಳೆ. ಬಡ್ಡಿ ಕಟ್ಟಲು ಆಗದೆ ಇದ್ದರೆ ಬಂಗಾರಮ್ಮ ಅವರ ಬಳಿ ಸಾಲ ತೆಗೆದುಕೊಳ್ಳುವ ಗೋಜಿಗೆ ಹೋಗಬಾರದು, ಆದರೆ ಹಣ ತೆಗೆದುಕೊಂಡು ಸಾಲ ಕೊಡಲು ಆಗಲ್ಲ ಎಂದು ಸೂಸೈಡ್ ಮಾಡಿಕೊಳ್ಳುವ ಪ್ರಯತ್ನ ಮಾಡಿ ಇದನ್ನೆಲ್ಲ ಬಂಗಾರಮ್ಮ ಮಾಡಿದ್ದು ಎಂದು ದೂರುತ್ತಾರೆ.

Puttakkana Makkalu serial April 12th episode update

ಆದರೆ, ಇದು ಯಾಕೋ ಪಕ್ಕ ಷಡ್ಯಂತ್ರದ ಹಾಗೆ ಕಾಣುತ್ತಿದೆ. ಇದರಲ್ಲಿ ರಾಧಾ ಕೈವಾಡ ಇದೆ ಎಂದು ಎಲ್ಲರಿಗೂ ಅನುಮಾನ ಮೂಡುತ್ತಿದೆ. ಹೇಗಾದರೂ ಮಾಡಿ ಸ್ನೇಹಾ ಹಾಗೂ ಕಂಠಿಯನ್ನು ದೂರ ಮಾಡಲು ಇದುವೇ ಸರಿಯಾದ ಸಮಯ ಎಂದು ಈ ರೀತಿಯ ಮಾಸ್ಟರ್ ಪ್ಲ್ಯಾನ್ ಮಾಡಿರಬಹುದು. ಪುಟ್ಟಕ್ಕಗೆ ಮಾತ್ರ ಭಯ ತಡೆದು ಕೊಳ್ಳಲು ಆಗುವುದಿಲ್ಲ. ಯಾಕೆಂದರೆ, ಆಕೆಗೆ ತನ್ನ ಮಗಳ ಜೀವನ ಹಾಳಾಗಿ ಬಿಡುತ್ತದೆ ಎನ್ನುವ ಭಯ. ನೇರವಾಗಿ ಬಂಗಾರಮ್ಮನವರ ಬಳಿಗೆ ಓಡಿಕೊಂಡು ಬರುತ್ತಾಳೆ. ಬಂಗಾರಮ್ಮ ಪೊಲೀಸ್ ಸ್ಟೇಷನ್‌ನಲ್ಲಿ ನೋವಿನಲ್ಲಿ ಕೂತಿರುತ್ತಾರೆ.

ಪೊಲೀಸ್ ಸ್ಟೇಶನ್‌ಗೆ ಓಡೋಡಿ ಬಂದ ಪುಟ್ಟಕ್ಕ

ತಾನು ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಬೇಕು ಎನ್ನುವ ಪ್ರಶ್ನೆಯನ್ನು ಆಕೆಯ ಮನದಲ್ಲಿ ಕೇಳುತ್ತಿರುತ್ತಾರೆ. ಆದರೆ, ಸ್ನೇಹಾ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ, ತಾನಾಯಿತು ತನ್ನ ಪಾಡಾಯಿತು ಎನ್ನುವ ಹಾಗಿದ್ದಾಳೆ. ಆಕೆಗೆ ತಾನು ಮಾಡಿದ್ದೆ ಸರಿ ಎನ್ನುವ ಧೋರಣೆ. ಆದರೆ, ಆಕೆ ಮಾಡಿದ್ದು ತಪ್ಪೇ ಎಂದು ಫ್ಯಾನ್ಸ್ ಹೇಳುತ್ತಿದ್ದಾರೆ. ಅತ್ತೆಯ ಬಳಿ ಒಂದು ಮಾತು ಕೇಳಬಹುದಿತ್ತು. ಬಳಿಕ ನಿರ್ಧಾರವನ್ನು ತೆಗೆದುಕೊಳ್ಳಬಹುದಿತ್ತು ಎಂದು ಹೇಳುತ್ತಿದ್ದಾರೆ. ಪುಟ್ಟಕ್ಕ ಪೊಲೀಸ್ ಸ್ಟೇಶನ್‌ಗೆ ಬಂದವಳೇ ಬಂಗಾರಮ್ಮನ ಬಳಿಗೆ ಓಡೋಡಿ ಬರುತ್ತಾರೆ.

Puttakkana Makkalu serial April 12th episode update

ಪುಟ್ಟಕ್ಕನ ಮಾತಿಗೆ ಸಿಡುಕಿದ ಬಂಗಾರಮ್ಮ

"ಅಮ್ಮಾವರೇ ನಮ್ಮನ್ನು ಕ್ಷಮಿಸಿ ಬಿಡಿ.. ಸ್ನೇಹಾ ಮಾಡಿದ ತಪ್ಪಿಗೆ ಇಷ್ಟೆಲ್ಲ ಆಯಿತು. ಆದರೆ ಆಕೆಗೆ ನಾನು ಬುದ್ದಿ ಹೇಳುತ್ತೇನೆ." ಎಂದೆಲ್ಲ ಹೇಳಿದಾಗ ಬಂಗಾರಮ್ಮ ಸಿಡುಕುತ್ತಾರೆ. "ನೀನು ಏನೇ ಹೇಳು ಪುಟ್ಟಕ್ಕ. ಸ್ನೇಹಾಳನ್ನು ನಾನು ಯಾವತ್ತೂ ಕ್ಷಮಿಸಲ್ಲ. ಜೈಲಿನಿಂದ ನಾನು ಹೊರ ಬಂದ ಬಳಿಕ ನಿನ್ನ ಮಗಳು ನನ್ನ ಮನೆಯಲ್ಲಿ ಇರುತ್ತಾಳೆ ಎನ್ನುವ ಗ್ಯಾರಂಟಿ ನಾನು ನಿನಗೆ ಕೊಡುವುದಿಲ್ಲ ಪುಟ್ಟಕ್ಕ" ಎಂದಾಗ ಪುಟ್ಟಕ್ಕನ ಎದೆ ಒಡೆದು ಹೋಗುತ್ತದೆ.

ಮಕ್ಕಳ ಮೇಲೆ ಪುಟ್ಟಕ್ಕ ಬೇಸರ

ಸಹನಾ ಹಾಗೂ ಸ್ನೇಹಾ ಬಾಳು ಅವರೇ ಅವರ ಕೈಯ್ಯಾರೆ ಹಾಳು ಮಾಡಿಕೊಂಡು ಬಿಟ್ಟರಲ್ಲ ಎಂದು ಪುಟ್ಟಕ್ಕ ಕೊರಗುತ್ತಾರೆ. ಇತ್ತ ಕಂಠಿಗೆ ಸ್ನೇಹಾ ಮೇಲೆ ಕೋಪ ಬರುತ್ತೆ. ಏನೇ ಇದ್ದರೂ ಮನೆಯ ಒಳಗೆ ಎಲ್ಲವನ್ನೂ ಕ್ಲಿಯರ್ ಮಾಡಬಹುದು ಎನ್ನುವ ಆಸೆ. ಆದರೆ ಸ್ನೇಹಾ ಮಾಡಿದ್ದೆ ಬೇರೆ. ಆಕೆಯ ಬಗ್ಗೆ ಕಂಠಿ ಮುನಿಸಿ ಕೊಂಡಿದ್ದಾನೆ.

More from Filmibeat

English summary
Puttakkana Makkalu serial April 12th episode update:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X