Puttakkana Makkalu:ಡಿವೋರ್ಸ್ ಪೇಪರ್‌ಗೆ ಕಂಠಿ ಸಹಿ; ಪುಟ್ಟಕ್ಕನಿಗೆ ಮತ್ತೊಂದು ಸಂಕಷ್ಟ?
ಸ್ನೇಹಾ ಜೀವನಕ್ಕೆ ಆಕೆಯೇ ತೆಗೆದುಕೊಂಡ ಕೆಲವು ನಿರ್ಧಾರಗಳು ಸಂಚಕಾರವಾಗಿ ಪರಿಣಮಿಸಿದೆ. ಆಸ್ಪತ್ರೆಯಲ್ಲಿ ರಾಣಿಯ ತಂದೆ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದರೆ, ಆಕೆಯ ತಾಯಿ ಬೇರೆಯವರ ಜೊತೆ ಹಣವನ್ನು ತೆಗೆದುಕೊಂಡು ಬೀರುವಿನಲ್ಲಿ ಎತ್ತಿಟ್ಟಿದ್ದಾಳೆ. ಆದರೆ, ಇದ್ಯಾವುದೂ ಸ್ನೇಹಾ ಅರಿವಿಗೆ ಬರುತ್ತಿಲ್ಲ.
ನಾನು ಮಾಡಿದ್ದೆ ಸರಿ ಎನ್ನುವ ಆಲೋಚನೆಯಲ್ಲಿ ಸ್ನೇಹಾ ಇದ್ದಾಳೆ. ಇತ್ತ ಪುಟ್ಟಕ್ಕ, ಸ್ನೇಹಾಗೆ ಕರೆ ಮಾಡಿ "ನಾನು ನಿನ್ನ ತಾಯಿ ಎಂದು ಅಂದುಕೊಳ್ಳಬೇಡ ನಿನ್ನ ಕಾಲಿಗೆ ಬೀಳುತ್ತೇನೆ ಸ್ನೇಹಾ. ದಯಮಾಡಿ ಬಂಗಾರಮ್ಮನನ್ನು ಜೈಲಿನಿಂದ ಬಿಡಿಸಿ ಬಿಡು. ಬಂಗಾರಮ್ಮ ಬಡ್ಡಿಗೆ ಹಣವನ್ನು ನೀಡಿ ಜನರಿಗೆ ಉಪಕಾರ ಮಾಡಿದ್ದಾರೆ. ಅವರ ಜೊತೆ ಉಪಕಾರ ಪಡೆದುಕೊಂಡು ಇರುವವರಲ್ಲಿ ನಾನು ಒಬ್ಬಳು. ಸಹನಾ ಮದುವೆ, ಸುಮಾ ಓದು, ಇದ್ಯಾವುದೂ ಬಂಗಾರಮ್ಮನವರು ಹಣ ನೀಡದೆ ಹೋಗಿದ್ದರೆ ಸಾಧ್ಯ ಆಗುತ್ತಿರಲಿಲ್ಲ. ಇದೆಲ್ಲ ನಿನಗೆ ಅರ್ಥ ಆಗುವುದು ಯಾವಾಗ ಎಂದು ಹೇಳಿ ದಯವಿಟ್ಟು ಬಂಗಾರಮ್ಮ ಅವರನ್ನು ಬಿಡಿಸಿ ಬಿಡು" ಎಂದು ಅಂಗಲಾಚಿ ಬೇಡಿಕೊಳ್ಳುತ್ತಾರೆ. ಹಾಗೆಯೇ ಸ್ನೇಹಾ ಮಾತಿಗೆ ಕಾಯದೆ ಫೋನ್ ಇಟ್ಟು ಬಿಡುತ್ತಾರೆ.

ಪುಟ್ಟಕ್ಕ ಫೋನ್ ಮಾಡಿದ ಬಳಿಕ ಸ್ನೇಹಾಗೆ ಏನು ಮಾಡಬೇಕು ಅಂತ ದಿಕ್ಕೇ ತೋಚದಂತಾಗುತ್ತದೆ. ಹಾಗೆಯೇ ರಾಣಿಗೆ ಬಾಯ್ ಹೇಳಿ ಆಸ್ಪತ್ರೆಯಿಂದ ಸ್ನೇಹಾ ಹೊರಟು ಹೋಗುತ್ತಾಳೆ. ಅಷ್ಟರಲ್ಲಿ ಆಸ್ಪತ್ರೆಗೆ ಬಂದಂತಹ ಸ್ನೇಹಾ ಹಾಗೂ ರಾಣಿ ಚಲನವಲನವನ್ನು ಗಮನಿಸುತ್ತಿರುತ್ತಾರೆ. ಆತನಿಗೆ ಹೇಗಾದರೂ ಮಾಡಿ ರಾಣಿ ತಂದೆಯನ್ನು ಸಾಯಿಸಬೇಕು ಎನ್ನುವ ಹಠ ಇರುತ್ತೆ. ಸ್ನೇಹಾ, ರಾಣಿ ಇಬ್ಬರೂ ಹೋದ ಬಳಿಕ ಆತ ರಾಣಿ ತಂದೆಯನ್ನು ಉಸಿರುಗಟ್ಟಿಸಿ ಸಾಯಿಸಲು ಪ್ರಯತ್ನ ಪಡುತ್ತಾನೆ.
ಮುರಳಿ ಮಾತಿಗೆ ಕೋಪಗೊಂಡ ಕಂಠಿ
ಕಂಠಿ ತನ್ನ ತಾಯಿ ಜೈಲು ಸೇರಿರುವುದನ್ನು ಕಂಡು ಬಹಳ ನೋವು ಪಡುತ್ತಿರುತ್ತಾನೆ . ತನ್ನ ತಾಯಿ ಚೆನ್ನಾಗಿ ಇರಬೇಕು. ಆಕೆ ಹಾಗೂ ಸ್ನೇಹಾ ಸಂಬಂಧ ಸರಿ ಹೋಗಬೇಕು ಎಂದು ಬಹಳ ಪ್ರಯತ್ನ ಪಡುತ್ತಾನೆ. ಆದರೆ ಅದು ಸಾಧ್ಯ ಆಗುವುದಿಲ್ಲ. ಸ್ನೇಹಾಗೆ ಅವಳದ್ದೇ ಸರಿ, ಆಕೆಯ ಅತ್ತೆಗೆ ಕೂಡ ಹಾಗೆಯೇ. ಹೀಗೆ ಕಂಠಿ ಆಲೋಚನೆ ಮಾಡಿ ಕುಳಿತುಕೊಂಡಿರಬೇಕಾದರೆ ಅಲ್ಲಿಗೆ ಬಂದ ಮುರಳಿ ಕೊಂಚ ಜೋರಾಗಿಯೇ ಮಾತನಾಡುತ್ತಾನೆ. "ಶ್ರೀ ನಿಮಗೆ ಈಗಲಾದರೂ ಗೊತ್ತಾಯಿತಾ ನನ್ನ ನೋವು ಏನು ಅನ್ನೋದು" ಎಂದು ಹೇಳುತ್ತಾನೆ.

ನೋವು ಹಂಚಿಕೊಂಡ ಮುರಳಿ
"ನನ್ನ ನೋವಿಗೆ ಇದೀಗ ನೀವು ಬೆಲೆ ಕೊಡುತ್ತೀರಾ. ನನಗೆ ಬಹಳ ಬೇಸರ ಆಗಿದ್ದು ಇದಕ್ಕೆ. ನನ್ನ ತಾಯಿ ಜೈಲಿನಲ್ಲಿ ಇರುವುದನ್ನು ನಾನು ಹೇಗೆ ಸಹಿಸಿಕೊಳ್ಳುವುದು ಶ್ರೀ. ಇದೀಗ ನಿಮ್ಮ ಹೆಂಡತಿಗೆ ಏನು ಅಂತ ಪ್ರಶ್ನೆ ಕೇಳಿದ್ರಿ? ಅದನ್ನೇ ನಾನು ತಾನೇ ಮಾಡಿದ್ದು. ಆದರೆ ನನ್ನನ್ನು ಯಾಕೆ ಎಲ್ಲರೂ ವೈರಿಯ ಹಾಗೆ ನೋಡುತ್ತೀರಿ" ಎಂದಾಗ ಮುರಳಿ ಮೇಲೆ ಕಂಠಿ ರೇಗಾಡುತ್ತಾನೆ. ಆತನಿಗೆ ಸಹನಾ ಮಾಡಿದ್ದು ಬಹಳ ದೊಡ್ಡ ತಪ್ಪು ಎನ್ನುವುದು ಮನಸ್ಸಿನಲ್ಲಿ ಕೂತು ಬಿಟ್ಟಿದೆ. ಆದ ಕಾರಣ ಅದನ್ನು ಯಾರೇ ಬಂದರು ತಲೆಯಿಂದ ತೆಗೆದು ಹಾಕಲು ಸಾಧ್ಯ ಇಲ್ಲ.
ರಾಧಾ ಕುತಂತ್ರಕ್ಕೆ ಬಲಿಯಾದ ಕಂಠಿ
ಇತ್ತ ರಾಧಾ, ಕಂಠಿಯ ಬಳಿಗೆ ಬಂದು ಮಾವ ನಾನು ಅತ್ತೆಯನ್ನು ಬಿಡಿಸಿಕೊಂಡು ಬರುತ್ತೇನೆ. ಆದರೆ ನನಗೆ ಈ ಕಾಗದ ಪಾತ್ರಕ್ಕೆ ನಿಮ್ಮ ಸಹಿ ಬೇಕು ಎಂದು ಹೇಳುತ್ತಾಳೆ. ಕಂಠಿ ತನ್ನ ಅಮ್ಮನಿಗಾಗಿ ಏನು ಬೇಕಾದರೂ ಮಾಡಲು ತಯಾರಿರುತ್ತಾನೆ. ಆತ ರಾಧಾ ಮಾತನ್ನು ಕೇಳಿ ಆ ಕಾಗದ ಪತ್ರಕ್ಕೆ ಸಹಿ ಮಾಡುತ್ತಾನೆ. ಆದರೆ, ಅದು ಡಿವೋರ್ಸ್ ಪೇಪರ್ ಎಂದು ಕಂಠಿಗೆ ತಿಳಿದೇ ಇರುವುದಿಲ್ಲ. ಕಂಠಿಯನ್ನು ಪಡೆದುಕೊಳ್ಳಲೆಬೇಕು ಎನ್ನುವ ಉದ್ದೇಶದಿಂದ ಈ ರೀತಿಯ ಎಲ್ಲಾ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಮಾಡುತ್ತಾಳೆ. ಸ್ನೇಹಾ ಮಾತ್ರ ಕಂಠಿ ಯಾವತ್ತೂ ನನ್ನನ್ನು ದೂರ ಮಾಡುವುದಿಲ್ಲ ಎಂದು ನಂಬಿದ್ದಾಳೆ. ಆಕೆಗೆ ಕಂಠಿ ಮೇಲೆ ಅಪಾರವಾದ ಪ್ರೀತಿ. ಆದರೆ, ಕಂಠಿ ಮನಸ್ಸನ್ನು ಘಾಸಿ ಮಾಡಿದ್ದಕ್ಕೆ ಮುಂದೆ ಇನ್ನೇನಾಗುತ್ತೋ?


Click it and Unblock the Notifications











