Puttakkana Makkalu:ಜೈಲಿನಿಂದ ಬಂಗಾರಮ್ಮ ರಿಲೀಸ್; ಸೊಸೆಯನ್ನು ಕ್ಷಮಿಸಬಹುದೇ?

By ಪೂರ್ವ

ತನ್ನ ಮಗಳ ಜೀವನವನ್ನು ಉಳಿಸಲು ಪುಟ್ಟಕ್ಕ, ಬಂಗಾರಮ್ಮನನ್ನು ಜೈಲಿನಿಂದ ಬಿಡುಗಡೆ ಮಾಡಲು ಹರ ಸಾಹಸ ಪಡುತ್ತಿದ್ದಾರೆ. ಬಂಗಾರಮ್ಮನಿಗೆ ಸ್ನೇಹಾ ಮೇಲೆ ವಿಪರೀತ ಸಿಟ್ಟು ಇದೆ. ಆದರೆ, ಪುಟ್ಟಕ್ಕನ ಮೇಲೆ ಅಷ್ಟೇ ಪ್ರೀತಿ ಗೌರವ, ಮಕ್ಕಳು ತಪ್ಪು ಮಾಡಿದರೂ ಅವರ ಜೀವನಕ್ಕೆ ಏನು ತೊಂದರೆ ಆಗಬಾರದು ಎನ್ನುವುದು ಪುಟ್ಟಕ್ಕನ ಕಾಳಜಿ.

ಕಂಠಿ ಹಾಗೂ ಪುಟ್ಟಕ್ಕ, ಸ್ನೇಹಾ ಗೆಳತಿಯ ಮನೆಗೆ ಹೋಗಿರಬೇಕಾದರೆ ಹಣವನ್ನು ಬೀರುವಿನಲ್ಲಿ ಇಡುತ್ತಿದ್ದ ದೃಶ್ಯವನ್ನು ಪುಟ್ಟಕ್ಕ ನೋಡುತ್ತಾರೆ. ಆದರೆ, ಎಲ್ಲರ ಮುಂದೆ ಆಕೆಯ ಬಾಕಿ ಕೇಳಿದರೆ ಏನು ಉತ್ತರ ನೀಡುವುದು ಇಲ್ಲ ಎಂದು ತಿಳಿದ ಪುಟ್ಟಕ್ಕ ಅಲ್ಲಿಂದ ಹೋಗುತ್ತಾರೆ. ಆದರೆ, ಆಕೆಯ ಮನಸ್ಸು ತಡೆಯುವುದಿಲ್ಲ. ಸ್ನೇಹಾ ಗೆಳತಿಯ ತಾಯಿ ಯಾಕೆ ಹೀಗಾಡುತ್ತಿದ್ದಾರೆ? ಆಕೆಗೆ ಬಂಗಾರಮ್ಮನ ಮೇಲೆ ಕೋಪ ಯಾಕೆ? ಎನ್ನುವುದು ಪುಟ್ಟಕ್ಕಗೆ ಅನುಮಾನ ಮೂಡುತ್ತದೆ. ಪುಟ್ಟಕ್ಕ, ಸ್ನೇಹಾ ಗೆಳತಿಯ ಮನೆಗೆ ಯಾರು ಇಲ್ಲದ ವೇಳೆ ಬರುತ್ತಾರೆ. ಆ ವೇಳೆ ಪುಟ್ಟಕ್ಕ, ಸ್ನೇಹಾ ಗೆಳತಿಯ ಜೊತೆ ಕೊಂಚ ಗಡುಸಾಗಿ ವರ್ತಿಸುತ್ತಾರೆ.

Puttakkana Makkalu serial April 17th episode update

"ಯಾಕೆ ನೀನು ಹೀಗೆ ಮಾಡುತ್ತಿದ್ದಿಯಾ? ಬೀರುವಿನಲ್ಲಿ ಇಷ್ಟೆಲ್ಲ ಹಣ ಇದ್ದರೂ ಹಣ ಇಲ್ಲ ಎಂದು ಏಕೆ ಎಲ್ಲರ ಮುಂದೆ ಹೇಳಿದೆ? ಇದು ನಿನಗೆ ಸರಿ ಕಾಣಿಸುತ್ತಾ? ಯಾಕೆ ಹೀಗೆಲ್ಲ ಮಾಡಿದೆ?" ಎಂದು ಕೊಂಚ ಕೋಪದಿಂದ ಕೇಳುತ್ತಾಳೆ. ಇದನ್ನು ಕೇಳಿದ ಸ್ನೇಹಾ, ಗೆಳತಿಯ ತಾಯಿ "ಮೊದಲು ನನ್ನ ಬಳಿ ಹಣ ಇಲ್ಲವೇ ಇಲ್ಲ ಎಂದು ವಾದಿಸಿದರೆ. ಆ ಬಳಿಕ ನನ್ನದು ತಪ್ಪಾಯಿತು. ನನ್ನ ಗಂಡ ಕುಡಿದು ರೋಡಲ್ಲಿ ಬಿದ್ದಿದ್ದರು. ಆದರೆ, ಆತನನ್ನು ಜನರೆ ಕರೆದುಕೊಂಡು ಬರುವಾಗ ಬಂಗಾರಮ್ಮ ಅವರ ಮನೆಯವರು ನನಗೆ ಸಿಕ್ಕಿದರು ಎನ್ನುತ್ತಾರೆ.

ಸ್ನೇಹಾ ಗೆಳತಿಯ ಮನೆಗೆ ಹೊರಟ ಪುಟ್ಟಕ್ಕ

"ಮೊದಲೇ ಅವರ ಮೇಲೆ ನನಗೆ ಸಿಟ್ಟಿತ್ತು. ಆ ಕೂಡಲೇ ಬಂಗಾರಮ್ಮನ ಕಡೆಯವರು ಬಡ್ಡಿ ಕಟ್ಟಲು ವಾರ್ನಿಂಗ್ ಮಾಡಿದ್ದರು. ಬಂಗಾರಮ್ಮನವರಿಗೆ ಬುದ್ಧಿ ಕಲಿಸಲು ಇದುವೇ ಸರಿಯಾದ ಸಮಯ ಎಂದುಕೊಂಡೆ" ಎಂದು ಪುಟ್ಟಕ್ಕನ ಬಳಿ ಹೇಳಿದಾಗ ವಿಪರೀತ ಸಿಟ್ಟು ಬರುತ್ತದೆ. ಆ ಬಳಿಕ ಪುಟ್ಟಕ್ಕ "ನೀನು ನನ್ನ ಬಳಿ ಏನು ಹೇಳಿದ್ದಿಯೋ ಆದನ್ನೆಲ್ಲ ಸ್ಟೇಶನ್‌ನಲ್ಲಿ ಹೇಳು" ಎಂದು ಪೊಲೀಸ್ ಸ್ಟೇಶನ್‌ಗೆ ಕರೆದುಕೊಂಡು ಬರುತ್ತಾರೆ. ಪೊಲೀಸರಿಗೆ ಪುಟ್ಟಕ್ಕ ಹಾಗೂ ಬಂಗಾರಮ್ಮ ವಿರುದ್ದ ಕಂಪ್ಲೇಂಟ್ ಕೊಟ್ಟವರನ್ನು ನೋಡಿ ಕೊಂಚ ಶಾಕ್ ಆಗುತ್ತದೆ.

ಪುಟ್ಟಕ್ಕನನ್ನು ಕಂಡು ಬಂಗಾರಮ್ಮ ಶಾಕ್

ಕಂಪ್ಲೇಂಟ್ ವಾಪಸ್ ತೆಗೆದುಕೊಳ್ಳಲು ಬಂದಿರಬಹುದು ಎಂದು ಪೊಲೀಸ್‌ಗೆ ತಿಳಿಯುತ್ತದೆ. ಇನ್‌ಸ್ಟೆಕ್ಟರ್ ಕೊಂಚ ಜೋರು ಧ್ವನಿಯಲ್ಲಿ "ನೀವು ಏನು ಹೆದರಬೇಡಿ. ಏನೆಲ್ಲ ಆಯಿತು ಅದನ್ನು ಹೇಳಿ. ನಾವು ನಿಮಗೆ ನ್ಯಾಯ ಕೊಡಿಸುತ್ತೇವೆ" ಎಂದಾಗ ಆಕೆ ಹೇಳುತ್ತಾಳೆ. ನನ್ನ ಗಂಡ ಬಹಳ ದೊಡ್ಡ ಕುಡುಕ. ಆತ ಕುಡಿದು ತೂರಾಡಿ ಬಿದ್ದಿದ್ದ. ಆತನಿಗೆ ಎರಡು ದಿನ ಆದರೂ ಎಚ್ಚರ ಆಗಲಿಲ್ಲ. ಬಂಗಾರಮ್ಮನ ಮೇಲೆ ನನಗೆ ವಿಪರೀತ ಕೋಪ ಇತ್ತು. ಅದಕ್ಕೆ ನನ್ನ ಯಜಮಾನರು ಬರೆದ ಹಾಗೆ ಪತ್ರ ಬರೆದು, ನನ್ನ ಸಾವಿಗೆ ಬಂಗಾರಮ್ಮ ಅವರೇ ಕಾರಣ ಎನ್ನುವ ಹಾಗೆ ಬಿಂಬಿಸಿ ಲೆಟರ್ ಬರೆದು ಗಂಡನ ಬಳಿ ಇಟ್ಟಿದ್ದೆ" ಎಂದು ಹೇಳಿದಾಗ ಎಲ್ಲರಿಗೂ ಶಾಕ್ ಆಗುತ್ತದೆ.

Puttakkana Makkalu serial April 17th episode update

ಪುಟ್ಟಕ್ಕನ ಮೇಲೆ ಬಂಗಾರಮ್ಮನಿಗೆ ಹೆಮ್ಮೆ

ಇನ್ನೂ ಬಂಗಾರಮ್ಮ ಜೈಲಿನಲ್ಲಿ ಕೊಳೆಯಬೇಕೆಂದು ರಾಧಾ ಅದೆಷ್ಟೇ ಪ್ಲಾನ್ ಮಾಡಿದರೂ, ಅದೆಲ್ಲವನ್ನೂ ಪುಟ್ಟಕ್ಕ ಫ್ಲಾಪ್ ಮಾಡಿದ್ದಾಳೆ. ಪುಟ್ಟಕ್ಕಗೆ ಬಂಗಾರಮ್ಮ ಅಂದರೆ ಬಹಳ ಪ್ರೀತಿ. ಬಂಗಾರಮ್ಮ ಅವರಿಗೆ ಯಾವುದೇ ತೊಂದರೆ ಆಗಬಾರದು. ಆಕೆ ಚೆನ್ನಾಗಿ ಇರಬೇಕು ಎನ್ನುವುದು ಪುಟ್ಟಕ್ಕನ ಆಸೆ. ಪುಟ್ಟಕ್ಕ ಕಷ್ಟದಲ್ಲಿ ಇರಬೇಕಾದರೆ, ಬಂಗಾರಮ್ಮ ಬಹಳ ಸಹಾಯ ಮಾಡಿರುತ್ತಾರೆ. ಅವರಿಗೆ ಪುಟ್ಟಕ್ಕ ಎಂದರೆ ಬಹಳ ಪ್ರೀತಿ . ಅದಕ್ಕೆ ತಕ್ಕ ಹಾಗೆ ಬಂಗಾರಮ್ಮ ನಡೆದುಕೊಳ್ಳುತ್ತಾರೆ. ಇದೀಗ ಪುಟ್ಟಕ್ಕ, ಬಂಗಾರಮ್ಮನನ್ನು ಜೈಲಿನಿಂದ ರಿಲೀಸ್ ಮಾಡಿಸುತ್ತಾರೆ. ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸಿದ ಬಂಗಾರಮ್ಮ ಸ್ನೇಹಾಗೆ ಕ್ಷಮೆ ನೀಡುತ್ತಾರಾ?

More from Filmibeat

English summary
Puttakkana Makkalu serial April 17th episode update:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X