Puttakkana Makkalu: ನ್ಯಾಯಕ್ಕಾಗಿ ಮೊರೆ ಹೋದ ಸಹನಾಗೆ ಶಾಕ್; ಸಹನಾಗೆ 7 ವರ್ಷ ಶಿಕ್ಷೆ?
ಕೋರ್ಟ್‌ಗೆ ಭಾರವಾದ ಮನಸ್ಸಿನಿಂದ ಸಹನಾ ಬರುತ್ತಾಳೆ. ಆಕೆಗೆ ವಿಚ್ಛೇದನ ಸ್ವಲ್ಪವೂ ಇಷ್ಟ ಇರುವುದಿಲ್ಲ. ಆದರೆ, ಮುರಳಿ ಬಗ್ಗೆ ಇಟ್ಟುಕೊಂಡಿರುವ ನಂಬಿಕೆ ಹುಸಿ ಆದಾಗ, ಆತನ ಮನೆಯವರ ಜೊತೆ ಒಗ್ಗದೆ ಹೋದಾಗ ಡಿವೋರ್ಸ್ ಮಾಡಿಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ ಬಂದುಬಿಟ್ಟಿದೆ.
ಆದರೆ, ಮೂದಲಿಗಿಂತ ಕೌಸಲ್ಯಾಗೆ ಇದರಲ್ಲಿ ಆತುರ ಹೆಚ್ಚಾಗಿದೆ. ಹೇಗಾದರೂ ಮಾಡಿ ಮುರಳಿಯನ್ನು ಸಹನಾಳಿಂದ ದೂರ ಮಾಡಬೇಕು. ಆಕೆ ನಮ್ಮ ಸೊಸೆ ಎಂದು ನಾನು ಖಂಡಿತ ಒಪ್ಪಿಕೊಳ್ಳುವುದು ಇಲ್ಲ. ನನ್ನ ಮುರಳಿಗೆ ವಿನೂತನ ಜೊತೆ ಮದುವೆ ಮಾಡಿಸಬೇಕು ಎಂದು ಕೌಸಲ್ಯ ಅಂದುಕೊಂಡಿದ್ದಾಳೆ.

ಇತ್ತ ಕೋರ್ಟ್‌ನಲ್ಲಿ ಕೇಳಿದ ಪ್ರಶ್ನೆಗೆ ಸಹನಾ ಬಹಳ ಸಹನೆಯಿಂದ ಉತ್ತರ ನೀಡಿದ್ದಾಳೆ. "ನನಗೆ ಅತ್ತೆ ಹಾಗೂ ಮುರಳಿ ಅಕ್ಕನ ಗಂಡ ಬಹಳ ಹಿಂಸೆ ನೀಡಿರುವುದು ನಿಜ. ಆದರೆ, ಮುರಳಿಯವರು ನನಗೆ ಯಾವುದೇ ಕಾರಣಕ್ಕೂ ಕೂಡ ತೊಂದರೆ ನೀಡಿಲ್ಲ. ಅವರ ಮನೆಯವರ ಜೊತೆ ನನಗೆ ಬದುಕಲು ಆಗುತ್ತಿಲ್ಲ" ಎಂದು ಹೇಳುತ್ತಾಳೆ. ಆಗ ಮುರಳಿಯನ್ನೂ ನ್ಯಾಯಾಧೀಶರು "ಇದಕ್ಕೆಲ್ಲ ನೀವು ಏನು ಹೇಳುತ್ತೀರಿ?" ಎಂದು ಪ್ರಶ್ನೆ ಮಾಡುತ್ತಾರೆ.
"ನನ್ನ ತಂದೆ ತಾಯಿಗೆ ಕೊಡುತ್ತಿರುವ ಮರ್ಯಾದೆಯನ್ನೂ ನಾನು ಸಹನಾಗೆ ನೀಡುತ್ತಿದ್ದೆ. ಆದರೆ, ಅದನ್ನು ಸಹನಾ ಅವರು ಉಳಿಸಿಕೊಂಡಿಲ್ಲ ಎನ್ನುವುದು ನನ್ನ ನೋವು. ನನ್ನ ತಾಯಿ ಊಟಕ್ಕೆ ವಿಷ ಹಾಕಿದ್ದಾರೆ ಎಂದು ಸುಳ್ಳು ಹೇಳುತ್ತಾರೆ. ಹಾಗೆಯೇ ನನ್ನ ಭಾವ ಇವರನ್ನು ಕಾಮದ ದೃಷ್ಟಿಯಲ್ಲಿ ನೋಡುತ್ತಿದ್ದರು ಎಂದು ಹೇಳುತ್ತಾರೆ. ಆದರೆ ನನಗೆ ನನ್ನ ಅಮ್ಮ ಸರಿಯಾಗಿ ಇದ್ದಾರೆ ಎಂದು ಅನ್ನಿಸುತ್ತಿದೆ. ದೇವರ ಹಾಗೆ ಇರುವ ನನ್ನ ಅಮ್ಮ ಯಾವ ತಪ್ಪೂ ಮಾಡಿರಲು ಸಾಧ್ಯವೇ ಇಲ್ಲ" ಎಂದು ಹೇಳುತ್ತಾನೆ. ಕೋರ್ಟ್ ಯಾವತ್ತೂ ಸಾಕ್ಷಿ ಕೇಳುತ್ತದೆ. ಆದರೆ, ಸಹನಾ ಎಷ್ಟೇ ನಿಜ ಹೇಳಿದರು ಸಾಕ್ಷಿ ಏನಿದೆ? ನಿಮ್ಮಲ್ಲಿ ಎಂದು ಕೋರ್ಟ್ ಹೇಳುತ್ತದೆ. ಇದನ್ನು ಕೇಳಿದ ಸಹನಾಗೆ ಏನು ಹೇಳಬೇಕು ತಿಳಿಯದಾಗುತ್ತದೆ.

ನ್ಯಾಯಾಧೀಶರ ಬಳಿ ಅಳಲು ತೋಡಿಕೊಂಡ ಸಹನಾ
"ನಾನು ಮೊಬೈಲ್‌ನಲ್ಲಿ ಅವರು ಮಾಡುತ್ತಿದ್ದ ಕಿತಾಪತಿಯನ್ನು ಸೆರೆ ಹಿಡಿಯುತ್ತಿದ್ದೆ. ಆದರೆ ಅದೆಲ್ಲವೂ ಡಿಲೀಟ್ ಆಗಿದೆ" ಎಂದು ಹೇಳುತ್ತಾಳೆ. ಕಂಠಿ ಕೂಡ ಸಾಕ್ಷಿ ಹೇಳುತ್ತಾನೆ. "ಸಹನಾ ಅವರಿಗೆ ತೊಂದರೆ ಆಗಿರುವುದಂತು ನಿಜ. ಆದರೆ ಅದನ್ನು ಯಾರ ಜೊತೆ ಹೇಳಿಕೊಳ್ಳಲಾಗದ ಸ್ಥಿತಿಯಲ್ಲಿ ಇದ್ದರು" ಎಂದು ಹೇಳುತ್ತಾನೆ. ಇನ್ನೂ ಕೋರ್ಟ್ ಸಾಕ್ಷಿ ಕೇಳಿದಾಗ ಮಾತ್ರ ಕೊಡಲು ಯಾವ ಆಧಾರ ಇರುವುದು ಇಲ್ಲ. ಇನ್ನೂ ಸುಮಾ ಅಕ್ಕನ ಫೋನ್ ತೆಗೆದುಕೊಂಡು ಹೋಗಿ ಕಾಳೀ ಹಾಗೂ ಸುಮಾ ಮೊಬೈಲ್‌ನಲ್ಲಿ ಡಿಲೀಟ್ ಆಗಿರುವ ವಿಡಿಯೋವನ್ನು ಮರಳಿ ಪಡೆಯಬಹುದಾ ಎಂದು ಮೊಬೈಲ್ ಅಂಗಡಿಯವರ ಬಳಿ ಕೇಳುತ್ತಾರೆ.
ಮೊಬೈಲ್ ಅಂಗಡಿಗೆ ಓಡೋಡಿ ಬಂದ ಕಾಳಿ
ಪುಟ್ಟಕ್ಕ ಕೂಡ ದೇವರ ಬಳಿ ಪ್ರಾರ್ಥನೆ ಮಾಡಿಕೊಂಡಿರುತ್ತಾರೆ. "ನನ್ನ ಜೀವನ ಹೀಗಾಯ್ತು. ಆದರೆ, ನನ್ನ ಮಗಳ ಜೀವನ ಹಾಳಾಗಿ ಹೋಗಲು ನಾನು ಬಿಡುವುದಿಲ್ಲ ಎಂದು ಹೇಳುತ್ತಾಳೆ. ಹಾಗೆಯೇ ನನ್ನ ಜೀವನವನ್ನ ನೀನು ತೆಗೆದುಕೊಂಡು ನನ್ನ ಮಗಳ ಜೀವನವನ್ನು ಸರಿ ಮಾಡು ದೇವರೇ ಎಂದು ಕೇಳಿಕೊಳ್ಳುತ್ತಾರೆ. ಇತ್ತ ಕೋರ್ಟ್‌ನಲ್ಲಿ ಜಡ್ಜ್ ವಾದ ವಿವಾದವನ್ನು ಪರಿಶೀಲನೆ ಮಾಡುತ್ತಿರುತ್ತಾರೆ. ಕೊನೆಗೆ ಅಂತಿಮವಾಗಿ ತೀರ್ಪು ನೀಡುವಾಗ ಸಹನಾ ಕುಸಿದು ಹೋಗುತ್ತಾಳೆ.
ಸಹನಾ ವಿರುದ್ದ ತೀರ್ಪು
ನ್ಯಾಯಾಲಯವು ಸಹನಾ ಅವರು ಸುಳ್ಳು ಆರೋಪ ಹೊರಿಸಿದ ಕಾರಣಕ್ಕೆ ಅವರಿಗೆ 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸುತ್ತದೆಂದು ಕೋರ್ಟ್ ಆದೇಶ ನೀಡುತ್ತದೆ. ಮುಂದೇನಾಯುತ್ತೆ? ಅನ್ನೋದನ್ನು ನೋಡಬೇಕಿದೆ.


Click it and Unblock the Notifications











