Puttakkana Makkalu:ಕಾಳಿ ಪ್ರೀತಿ ಮೆಚ್ಚಿದ ಫ್ಯಾನ್ಸ್; ಮುರಳಿ ಬಿಟ್ಟು ಕಾಳಿನ ಮದುವೆ ಆಗು ಎಂದ ನೆಟ್ಟಿಗರು!

By ಪೂರ್ವ

ಕೋರ್ಟ್‌ನಲ್ಲಿ ಕಾಳಿ ತೆಗೆದುಕೊಂಡು ಬಂದ ಆ ಒಂದು ಸಾಕ್ಷಿ ಅಲ್ಲೋಲ ಕಲ್ಲೋಲ ಆಗಿದ್ದ ಸಹನಾ ಜೀವನವನ್ನು ಸರಿಪಡಿಸುವ ಹಾಗೆ ಆಯಿತು. ಹಾಗೆ ನೋಡಲು ಹೋದರೆ ಕಾಳಿ ಎಲ್ಲರ ಮನ ಗೆಲ್ಲುತ್ತಿದ್ದಾನೆ. 'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಫ್ಯಾನ್ಸ್ ಈ ಮೇಷ್ಟ್ರು ಮುರಳಿಗಿಂತ ಆ ಕಾಳಿ ಎಷ್ಟೋ ಬೆಟರ್. ಸಹನಾ ಜೀವನವನ್ನು ಹಾಳು ಮಾಡಲು ಸಾಕಷ್ಟು ಮನೆ ಹಾಳು ಮಾಡುವ ಐಡಿಯಾ ಕೊಟ್ಟರು. ಕೊನೆಗೆ ಗೆದ್ದಿದ್ದು ಮಾತ್ರ ಕಾಳಿಯ ಪರಿಶುದ್ಧವಾದ ಪ್ರೀತಿ ಮಾತ್ರ. ಕಾಳಿ ಚಿಕ್ಕ ವಯಸ್ಸಿನಿಂದಲೂ ಸಹನಾಳನ್ನು ಆರಾಧಿಸುತ್ತಿದ್ದ.

ಆತನಿಗೆ ಮುರಳಿ ಹಾಗೂ ಸಹನಾ ಲವ್ ಸ್ಟೋರಿ ತಿಳಿದು ಈ ಮದುವೆ ನಡೆಯದೆ ಇರುವ ಹಾಗೆ ನೋಡಿಕೊಂಡ. ಆದರೆ, ಮುಂದೊಂದು ದಿನ ಮದುವೆ ಆಗಿಯೇ ಬಿಡುತ್ತದೆ. ಆದರೂ ಕೂಡ ಕಾಳಿ ಸಹನನಿಗಾಗಿ ಮನದಲ್ಲಿ ಪ್ರೀತಿಯ ಗೋಪುರವನ್ನು ಕಟ್ಟಿಕೊಂಡು ಕಾಯುತ್ತಿರುತ್ತಾನೆ. ಇದೀಗ ಮುರಳಿ ಹಾಗೂ ಸಹನಾ ಸಂಸಾರದಲ್ಲಿ ಬಿರುಕು ಕಂಡರೂ, ತನ್ನ ಸಹನಾ ಚೆನ್ನಾಗಿ ಇರಬೇಕು. ಆಕೆ ಯಾರ ಎದುರು ಕೈ ಚೆಲ್ಲಿ ಕುಳಿತುಕೊಳ್ಳಬಾರದು ಅಂದುಕೊಂಡಿರುತ್ತಾನೆ. ಹಾಗೆಯೇ ದಿನೇ ದಿನೆ ಕೌಸಲ್ಯಾ ಮಾಡುತ್ತಿರುವ ಸಂಚಿಗೆ ಸಹನಾ ಪಡುತ್ತಿರುವ ಮೂಕ ವೇದನೆಯನ್ನು ನೋಡಿ ಕಾಳಿಗೆ ಬಹಳ ಸಂಕಟ ಆಗುತ್ತದೆ.

Puttakkana Makkalu Serial April 29th episode upadate

ಅಂತಹದರಲ್ಲಿ ಇದೀಗ ಕೋರ್ಟ್‌ಗೆ ಸರಿಯಾದ ಸಾಕ್ಷಿಯನ್ನು ತೆಗೆದುಕೊಂಡು ಬಂದು ಸಹನಾನಿಗೆ ಆಗಬೇಕಿದ್ದ ಶಿಕ್ಷೆಯಿಂದ ಆಕೆಯನ್ನು ಬಚಾವ್ ಮಾಡುತ್ತಾನೆ. ಯಾವ ಶಿಕ್ಷೆಯೂ ಆಗದೆ ಇರುವ ಹಾಗೆ ನೋಡಿಕೊಳ್ಳುತ್ತಾನೆ. ಕಾಳಿ ಮಾಡಿದ ಕೆಲಸಕ್ಕೆ ಸಹನಾ ಮಾತ್ರ ಕೃತಜ್ಞ ಸಲ್ಲಿಸದೆ ಇರಲಾರಳು ಎಂದು ಕಾಯುತ್ತಿದ್ದಾನೆ ಕಾಳಿ. ಇತ್ತ ಮುರಳಿಗೆ ತನ್ನ ಹೆಂಡತಿಯ ಕಡೆಯಿಂದ ಯಾವುದೇ ತಪ್ಪಿಲ್ಲ ಅನ್ನೋದು ಗೊತ್ತಾಗಿದೆ.

ಮುರಳಿ ಮಾಡಿದ ತಪ್ಪಿಗೆ ತಕ್ಕ ಶಿಕ್ಷೆ

"ನನ್ನ ತಾಯಿಯನ್ನು ನಾನು ಎಷ್ಟು ನಂಬಿದ್ದೆ. ನನ್ನ ತಾಯಿ ಯಾವತ್ತೂ ಈ ರೀತಿ ನಡೆದುಕೊಳ್ಳುವುದು ಇಲ್ಲ. ಆಕೆ ಸಹನಾ ಮಯಿ ಹಾಗೆಯೇ ಮಹಾನ್ ತ್ಯಾಗಿ ಎಂದುಕೊಂಡಿದ್ದೆ. ಆದರೆ, ನಾನು ಅಂದುಕೊಂಡದ್ದು ಬೇರೆ ಅಲ್ಲಿ ಆಗಿದ್ದೆ ಬೇರೆ. ತನ್ನ ತಾಯಿಯ ಮೇಲಿನ ಕುರುಡು ಪ್ರೇಮದಿಂದ ತನ್ನ ಮನೆಯವರನ್ನು ಬಿಟ್ಟು ಬಂದ ಸಹನಾ ಮೇಲೆ ದರ್ಪ ತೋರಿಸುವ ಹಾಗಾಯಿತು" ಎಂದು ಬಹಳ ನೊಂದುಕೊಳ್ಳುತ್ತಾರೆ. ಹಾಗೆಯೇ ನಿಜ ಗೊತ್ತಾದ ಬಳಿಕ ತಾಯಿಯ ಮುಖ ನೋಡಲು ಕೂಡ ಮುರಳಿ ಇಷ್ಟ ಪಡುವುದು ಇಲ್ಲ.

ಕೋರ್ಟ್ ಬಳಿ ಮನವಿ ಮಾಡಿದ ಸಹನಾ

ಇತ್ತ ಕೋರ್ಟ್ ಮುರಳಿ ಹಾಗೂ ಸಹನಾಗೆ ಆರು ತಿಂಗಳ ಕಾಲ ಸಮಯ ಕೊಡುತ್ತದೆ. ಆದರೆ ಅದಕ್ಕೆ ಸಹನಾ ಒಪ್ಪುವುದಿಲ್ಲ. ಸ್ವಾಮಿ ಆರು ತಿಂಗಳ ತನಕ ಕಾಯಬೇಕಾ? ದಯವಿಟ್ಟು ಇವತ್ತೇ ತೀರ್ಪು ಕೊಟ್ಟುಬಿಡಿ ಎಂದು ಕೇಳುತ್ತಾರೆ. ಆಗ ಕೋರ್ಟ್ ಹೇಳುತ್ತೆ, ಈಗ ನಿಮಗೆ 6 ತಿಂಗಳ ಕಾಲ ಕಾಲಾವಕಾಶ ಸಿಗುತ್ತದೆ. ಅದಾದ ಬಳಿಕ ನಿಮಗೆ ಇಬ್ಬರಿಗೂ ಒಬ್ಬರಿಗೊಬ್ಬರು ಇಷ್ಟ ಇಲ್ಲ ಎಂದಾದರೆ ವಿಚ್ಛೇದನ ಸಿಗುತ್ತದೆ ಎಂದು ಹೇಳಿದಾಗ ಸಹನಾ ಸುಮ್ಮನಾಗುತ್ತಾರೆ.

Puttakkana Makkalu Serial April 29th episode upadate

ಅಮ್ಮನ ಮಾತು ಕೇಳಿ ಸಹನಾ ಬದಲಾಗುತ್ತಾಳಾ?

ಮನೆಗೆ ಬಂದ ಸಹನಾಗೆ ಮಾತ್ರ ಪುಟ್ಟಕ್ಕ ಮಾವಿನ ಕಾಯಿಯನ್ನು ಒರೆಸಿಕೊಡುವ ನೆಪದಲ್ಲಿ ಮಗಳ ಪಕ್ಕ ಕುಳಿತು ಬುದ್ಧಿವಾದ ಹೇಳುತ್ತಾಳೆ. ಮಗು ನಾವು ಉಪ್ಪಿನ ಕಾಯಿ ಹಾಕುವ ವೇಳೆ ಮಾವಿನ ಕಾಯಿಯಲ್ಲಿ ಸ್ವಲ್ಪ ನೀರಿದ್ದರೂ, ಉಪ್ಪಿನಕಾಯಿ ಹಾಳಾಗಿ ಹೋಗುತ್ತದೆ. ಹಾಗೆಯೇ ನಾವು ಉಪ್ಪಿನ ಕಾಯಿ ಹಾಕುವ ವೇಳೆ ಬಹಳ ಜಾಗ್ರತೆ ವಹಿಸಬೇಕು. ಮಾವಿನ ಕಾಯಿಗೆ ಅದೆಷ್ಟೇ ಉಪ್ಪು ಹಾಕಿದರು ಅದರ ರುಚಿಯನ್ನು ಅದು ಬಿಟ್ಟುಕೊಡುವುದಿಲ್ಲ. ಆದ ಕಾರಣ ಎಷ್ಟೇ ಕಷ್ಟ ಆದರೂ ಅದೆಲ್ಲವನ್ನೂ ಮೆಟ್ಟಿ ನಿಲ್ಲಬೇಕು. ಹಾಗೆಯೇ ಸಂಸಾರ ಎನ್ನುವ ಜಂಜಾಟದಲ್ಲಿ ನಾವು ಒಟ್ಟಿಗೆ ಇರಬೇಕು ಎಂದು ಸಹನಾಗೆ ಬುದ್ದಿ ಹೇಳುತ್ತಾಳೆ.

More from Filmibeat

English summary
Puttakkana Makkalu Serial April 29th episode upadate
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X