Puttakkana Makkalu: ಅತ್ತೆಯ ವಿರುದ್ಧ ಸಿಡಿದು ನಿಂತ ಸಹನಾ; ಮುರಳಿಗೂ ಡೊಂಟ್ ಕೇರ್
ಸಹನಾ ಬಹಳ ತಾಳ್ಮೆಯ ಹುಡುಗಿ. ಆದರೆ ತನ್ನ ಪ್ರೀತಿಗಾಗಿ ಅದೆಷ್ಟು ಉದ್ಯೋಗಗಳನ್ನು ಮಾಡಿಕೊಂಡು, ಅದೆಷ್ಟೇ ಕಷ್ಟ ಆದರೂ ತನ್ನ ಗಂಡನ ತಾಯಿಯ ಜೊತೆ ಅಡ್ಜೆಸ್ಟ್ ಮಾಡಿಕೊಂಡು ಹೋಗುತ್ತಿರುತ್ತಾರೆ . ಆದರೆ, ದಿನ ಕಳೆದ ಹಾಗೆ ಕೌಸಲ್ಯಾ ಕಾಟ ಮಿತಿ ಮೀರುತಿತ್ತು. ಆಕೆಗೆ ಏನು ಮಾಡಬೇಕು ತಿಳಿಯದಾಗುತ್ತದೆ. ಕೊನೆಗೆ ಗಂಡನ ಮನೆಯವರ ವಿರುದ್ಧವೇ ಸಿಡಿದು ಬೀಳುತ್ತಾಳೆ.
ತನಗೆ ತನ್ನನ್ನು ನಂಬದ ಗಂಡ ಕೂಡ ಬೇಡ. ನನಗೆ ಯಾರ ಅಗತ್ಯ ಕೂಡ ಇಲ್ಲ ಎಂದುಕೊಂಡು ಇರುತ್ತಾಳೆ. ಹೀಗಾಗಿ ಸಹನಾ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ. ಮುರಳಿ, ಪುಟ್ಟಕ್ಕನ ಮನೆ ಮುಂದೆ ಬಂದು "ಸಹನಾ ಅವರೇ ನನ್ನ ತಾಯಿಯನ್ನು ಜೈಲಿನಲ್ಲಿ ನೋಡಲು ಆಗುತ್ತಿಲ್ಲ. ದಯವಿಟ್ಟು ಅವರನ್ನು ಬಿಡಿಸಿ" ಎಂದು ಹೇಳುತ್ತಾರೆ. ಇದನ್ನು ಕೇಳಿದ ಸಹನಾ "ತಪ್ಪು ಮಾಡಿದವರು ಯಾರೇ ಇರಲಿ. ಅವರು ತಕ್ಕ ಪಾಠ ಅನುಭವಿಸಲಿದ್ದಾರೆ." ಎಂದು ಖಡಕ್ ಆಗಿ ಹೇಳುತ್ತಾರೆ. ಅಷ್ಟರಲ್ಲಿ ಪುಟ್ಟಕ್ಕನ ಮನೆಗೆ ಸಹನಾ ಹೇಳಿಕೆಯನ್ನು ತೆಗೆದುಕೊಳ್ಳಲು ಪೊಲೀಸರು ಬರುತ್ತಾರೆ.

ಸಹನಾ ಬಳಿ ಪೊಲೀಸರು "ನಿಮಗೆ ನಿಮ್ಮ ಅತ್ತೆ ಹಿಂಸೆ ನೀಡುತ್ತಿರುವುದು ನಿಜಾನಾ?" ಎಂದು ಕೇಳುತ್ತಾರೆ. ಯಾಕೆಂದರೆ, ಕೇಸ್ ಕೊಟ್ಟಿದ್ದು ಸ್ನೇಹಾ ಆಗಿರುವುದರಿಂದ ಅವರ ಬಳಿ ಕೂಡ ಒಂದು ಮಾತು ಕೇಳೋಣವೆಂದು ಪೊಲೀಸರು ಮನೆಗೆ ಬರುತ್ತಾರೆ. ಸಹನಾ ಅಭಿಪ್ರಾಯ ಕೇಳಿದಾಗ ಸಹನಾ ಖಡಕ್ ಆಗಿ ಹೇಳುತ್ತಾರೆ. "ನಾನು ನನ್ನ ಜೀವನದಲ್ಲಿ ಏನು ನಡೆಯಿತು ಎನ್ನುವುದನ್ನು ಹೇಳುತ್ತೇನೆ. ನನಗೆ ಸುಳ್ಳು ಹೇಳಿ ಗೊತ್ತಿಲ್ಲ" ಎಂದು ಮುರಳಿ ಮುಖ ನೋಡಿ ಹೇಳುತ್ತಾರೆ.
ಅಕ್ಕನಿಗೆ ಸಾಥ್ ಕೊಟ್ಟ ಸ್ನೇಹಾ
ಇತ್ತ ಸ್ನೇಹಾ ಕೂಡ ಅಕ್ಕನಿಗೆ ಸಾಥ್ ನೀಡುತ್ತಾಳೆ. "ನೀನು ಮಾಡುತ್ತಿರುವುದು ಸರಿ ಅಕ್ಕ" ಎಂದಾಗ ಪುಟ್ಟಕ್ಕನಿಗೆ ಬಹಳ ಕೋಪ ಬರುತ್ತದೆ. "ಸಂಸಾರವನ್ನು ತನ್ನ ಕೈಯಾರೆ ಹಾಳು ಮಾಡಿಕೊಂಡುಬಿಟ್ಟಳು" ಎಂದು ಬಹಳ ಬೇಸರ ಮಾಡಿಕೊಳ್ಳುತ್ತಾರೆ. ಮಕ್ಕಳು ಯಾರು ನನ್ನ ಮಾತನ್ನು ಕೇಳುತ್ತಿಲ್ಲ. ಹೇಗಪ್ಪಾ ನಾನು ಇದೆಲ್ಲ ಸಹಿಸಿಕೊಂಡು ಇರಲಿ ಎಂದು ಬಹಳ ಬೇಸರ ಪಟ್ಟುಕೊಳ್ಳುತ್ತಾರೆ.
ರಾಧಾ ಮೇಲೆ ಬಂಗಾರಮ್ಮಗೆ ನಂಬಿಕೆ
ಇತ್ತ ರಾಧಾ ಹೇಗಾದರೂ ಮಾಡಿ ಕಂಠಿ ಮಾವನನ್ನು ನನ್ನವನ್ನಾಗಿ ಮಾಡಿಕೊಳ್ಳಬೇಕು. ಆತನ ಜೊತೆ ಸಂಸಾರ ನಡೆಸಬೇಕು ಎಂದು ಆಲೋಚನೆ ಮಾಡುತ್ತಿರುತ್ತಾಳೆ. ಅದಕ್ಕಾಗಿ ಬಂಗಾರಮ್ಮನ ಜೊತೆ ಬಹಳ ಒಳ್ಳೆಯವಳ ಹಾಗೆ ನಡೆದುಕೊಳ್ಳುತ್ತಾರೆ. ಬಂಗಾರಮ್ಮ, ರಾಧಾ ಮುಖ ನೋಡಿ ಆಕೆ ಬಹಳ ಒಳ್ಳೆಯವಳು ಎಂದು ತಿಳಿದು ಆಕೆ ಹೇಳಿದ್ದಕ್ಕೆಲ್ಲ ಆಯಿತು ಎಂದೆ ಉತ್ತರವನ್ನು ಕೊಡುತ್ತಾ ಖುಷಿಯಲ್ಲಿ ಇರುತ್ತಿದ್ದಳು. ಆದರೆ, ಸ್ನೇಹಾಗೆ ರಾಧಾ ಏನು ಎಂಬ ವಿಚಾರ ಚೆನ್ನಾಗಿಯೇ ಗೊತ್ತಾಗಿದೆ. ಆಕೆಯ ಬಂಡವಾಳ ಅತ್ತೆಯ ಎದುರು ಹೇಗೆ ಅನಾವರಣ ಮಾಡುವುದು ಎಂದು ಯೋಚನೆ ಮಾಡುತ್ತಿರುತ್ತಾಳೆ.

ಸ್ನೇಹಾಗೆ ಈಗ ಆತಂಕ ಶುರು
ವಸುಗೆ ಏನಾದರು ಆಗಿ ಬಿಡುತ್ತದೆ ಎನ್ನುವ ಕಳವಳದಲ್ಲಿ ಬಂಗಾರಮ್ಮ ಇರುತ್ತಾರೆ. ನಂಜಮ್ಮನನ್ನು ನಂಬುವುದಾದರೂ ಹೇಗೆ? ಇಂಥ ಸಮಯದಲ್ಲಿ ವಸು ಜೊತೆ ಯಾರಾದರೂ ಇದ್ದರೆ, ಬಹಳ ಒಳ್ಳೆಯದು ಎಂದುಕೊಂಡು ರಾಧಾನನ್ನು ವಸು ಮನೆಗೆ ಕಳುಹಿಸುತ್ತಾಳೆ. ಆದರೆ, ಆತಂಕ ಸ್ನೇಹಾಗೆ ಈಗ ಶುರು ಆಗಿದೆ.


Click it and Unblock the Notifications











