Puttakkana Makkalu: ಕೌಸಲ್ಯ ವಿರುದ್ಧ ದೂರು ಕೊಟ್ಟ ಸಹನಾ; ಗಂಡನಿಂದ ಶಾಶ್ವತವಾಗಿ ದೂರ ಆಗುತ್ತಾಳಾ?
'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಸದ್ಯ ಸಹನಾ ಪೊಲೀಸ್ ಸ್ಟೇಷನ್‌ಗೆ ತೆರಳಿ ಅತ್ತೆ ಕೌಸಲ್ಯಾ ವಿರುದ್ಧ ದೂರು ಕೊಡುತ್ತಾಳೆ. ಆಕೆಯ ಬಳಿ ಮೇಷ್ಟ್ರು ಅದೆಷ್ಟೇ ಗೋಗರೆದರೂ ಸಹನಾ, ಕೌಸಲ್ಯಾ ವಿರುದ್ಧ ಸಿಡಿದೆದ್ದಿದ್ದಾಳೆ. ಕೌಸಲ್ಯಾ ಕೊಟ್ಟ ಕಾಟಕ್ಕೆ ತಕ್ಕ ಶಿಕ್ಷೆಯೇ ಆಗಿದೆ. ರಾಜೇಶ್ವರಿ ಮಾತು ಕೇಳಿ ಮೆರೆದ ಕೌಸಲ್ಯಾ ಎಂದು ಜೈಲು ಪಾಲಾಗಿದ್ದಾರೆ.
ಮುರಳಿ ತನ್ನ ಹೆಂಡತಿ ಮಾಡುತ್ತಿರುವ ಕೆಲಸ ನೋಡಿ ವಾರ್ನಿಂಗ್ ಮಾಡುತ್ತಿರುತ್ತಾನೆ. ನೀವು ಹೀಗೆಲ್ಲ ಮಾಡಿದರೆ ನನ್ನ ಎರಡನೇ ಮುಖವನ್ನು ನೀವು ನೋಡಬೇಕಾಗುತ್ತದೆ ಹುಷಾರು ಎಂದೆಲ್ಲ ಎಚ್ಚರಿಕೆ ನೀಡಿರುತ್ತಾನೆ. ಆದರೆ, ಸಹನಾ ಯಾವುದಕ್ಕೂ ಹೆದರದೆ ಪೊಲೀಸ್ ಸ್ಟೇಷನ್‌ನಲ್ಲಿ ಮೊದಲಿಗೆ ಹೇಳುತ್ತಾಳೆ. "ಸ್ನೇಹಾ ನೀನು ದೂರು ಕೊಟ್ಟಿರುವುದು ಸರಿಯಲ್ಲ" ಎಂದಾಗ ಸ್ನೇಹಾಗೆ ಶಾಕ್ ಆಗುತ್ತದೆ.

"ಅಕ್ಕ ಏನು ಹೇಳುತ್ತಿದ್ದಿಯಾ? ನಿನಗೆ ಅರಿವಿದೆ ಅಲ್ವಾ?" ಎಂದು ಹೇಳುತ್ತಾಳೆ. ಇದನ್ನು ಕೇಳಿದ ಸಹನಾ ಕೊಂಚ ಜೋರಾಗಿಯೇ ಹೇಳುತ್ತಾಳೆ. "ಕೌಸಲ್ಯಾ ವಿರುದ್ದ ಮಾತ್ರ ಅಲ್ಲ. ಅವರ ಅಳಿಯ ಸುಕುಮಾರ್ ವಿರುದ್ಧ ನನ್ನ ದೂರು ಇದೆ. ಮೊದಲನೆಯದಾಗಿ ವರದಕ್ಷಿಣೆ ಕಿರುಕುಳ, ಎರಡನೆಯದು ಮಾನಸಿಕ ಹಿಂಸೆ, ಮೂರನೆಯದಾಗಿ ನನಗೆ ವಿಷ ಬೆರೆಸಿ ಅನ್ನದಲ್ಲಿ ಕೊಟ್ಟಿದ್ದು, ನಾಲ್ಕನೆಯದಾಗಿ ಲೈಂಗಿಕ ದೌರ್ಜನ್ಯ ನೀಡಿದ್ದಾರೆ" ಎಂದೆಲ್ಲ ಪೊಲೀಸರ ಬಳಿ ದೂರು ಹೇಳಿದ್ದಾಳೆ. ಆಗ ಪೊಲೀಸರು "ಏನಮ್ಮಾ ಇದರಲ್ಲಿ ನಿನ್ನ ಗಂಡನ ಪಾತ್ರ ಏನು ಇಲ್ವಾ..?" ಎಂದು ಕೇಳುತ್ತಾರೆ.
"ನನ್ನ ಗಂಡ ನನಗೆ ಯಾವುದೇ ರೀತಿಯ ಹಿಂಸೆಯನ್ನು ನೀಡಿಲ್ಲ. ಅವರು ಒಳ್ಳೆಯವರೇ. ಅವರಿಗೆ ಅರ್ಥ ಮಾಡಿಸಲು ಕೊಂಚ ಸಮಯ ಆಗಬಹುದು. ಅವರ ಮಾನಸಿಕ ಸ್ಥಿತಿಯನ್ನು ಡಾಕ್ಟರ್ ಬಳಿ ತೋರಿಸಿಕೊಳ್ಳಲು ಹೇಳಿ" ಎಂದು ಹೇಳುತ್ತಾರೆ. ಇದನ್ನು ಕೇಳಿದ ಮುರಳಿಗೆ ಕೊಂಚ ಸಿಟ್ಟು ಬರುತ್ತದೆ. ಕಂಪ್ಲೇಂಟ್ ಎಲ್ಲಾ ಕೊಟ್ಟ ಬಳಿಕ ಕೌಸಲ್ಯಾ ಹೇಳುತ್ತಾರೆ. "ಏನಮ್ಮಾ ಸಹನಾ ನನ್ನ ಕಂಡರೆ, ನಿನಗೆ ಆಗುತ್ತಿರಲಿಲ್ಲ. ಅದಕ್ಕಾಗಿ ನೀನು ಈ ರೀತಿ ಮಾಡಿದ್ದೀಯಾ" ಎಂದು ಹೇಳಿದಾಗ ಪೊಲೀಸರು ಕೌಸಲ್ಯಾನನ್ನು ಜೈಲಿಗೆ ಹಾಕಲು ಹೇಳುತ್ತಾರೆ. ಮುರಳಿಗೆ ಏನು ಮಾಡಬೇಕು ತಿಳಿಯದೇ ಕಂಗಾಲಾಗಿ ಹೋಗುತ್ತಾನೆ.

ಪುಟ್ಟಕ್ಕನ ಮನೆಗೆ ಬಂದ ರಾಜೀ
"ಇನ್ನೂ ಪುಟ್ಟಕ್ಕನ ಮನೆಗೆ ರಾಜೇಶ್ವರಿ ಬರುತ್ತಾಳೆ. ಪುಟ್ಟಕ್ಕ ನಿನ್ನ ಮಗಳ ಜೀವನ ಸರಿ ಮಾಡುವುದು ನಿನ್ನ ಕೈಯಲ್ಲಿ ಇದೆ. ಆಕೆಯ ಜೀವನ ಚೆನ್ನಾಗಿರಬೇಕು. ನೀನು ಇರುವವರೆಗೆ ಜೀವನ ಹೆಂಗೋ ನಡೆದುಕೊಂಡು ಹೋಗುತ್ತದೆ. ಆದರೆ, ನೀನು ಹೋದ ಬಳಿಕ ನಿನ್ನ ಮಕ್ಕಳು ಒಂಟಿಯಾಗಿ ಇರಬೇಕಾಗುತ್ತದೆ." ಎಂದು ಹೇಳಿ ಮನೆಯಿಂದ ಹೊರಗೆ ಬರುತ್ತಿರುತ್ತಾರೆ. ಅಷ್ಟರಲ್ಲಿ ಸಹನಾ ಹಾಗೂ ಸ್ನೇಹಾ ಬರುತ್ತಾಳೆ. ಸ್ನೇಹಾ, ರಾಜೀ ಮನೆಯವರೆಗೆ ಬಂದಿರುವುದನ್ನು ನೋಡಿ ಆಶ್ಚರ್ಯ ವ್ಯಕ್ತಪಡಿಸುತ್ತಾಳೆ.
ರಾಜೀ ಬಾಯಿಗೆ ಬೀಗ ಹಾಕಿದ ಸಹನಾ
ಪುಟ್ಟಕ್ಕನ ಮಕ್ಕಳು, ಸಹನಾ ಈ ಮೊದಲೇ ಬಹಳ ಕೋಪದಲ್ಲಿ ಇರುತ್ತಾಳೆ. ಅದಕ್ಕೆ ತುಪ್ಪ ಸುರಿಯುವ ಮಾತನಾಡಿದ್ದು ರಾಜೀ. ಆ ವೇಳೆ ಸಹನಾಗೆ ರಾಜೀ ಜೋರಾಗಿಯೇ ಹೇಳುತ್ತಾಳೆ. "ನೀನು ಕಂಪ್ಲೇಂಟ್ ವಾಪಸ್ ತೆಗೆದುಕೊಳ್ಳಲೇ ಬೇಕು. ಯಾಕೆಂದರೆ ನಿನಗೆ ಒಂದು ಸ್ವಂತ ಮನೆ ಬೇಕಲ್ಲವೇ, ಗಂಡನಿಂದ ದೂರ ಇದ್ದು ಹೇಗೆ ನೀನು ಬದುಕು ಸಾಗಿಸುತ್ತಿಯಾ? ಎಂದೆಲ್ಲ ಹೇಳಿದಾಗ ಸಹನಾ ಕೊಂಚ ಖಡಕ್ ಆಗಿ ಮಾತನಾಡುತ್ತಾಳೆ.
ರಾಜೀ ಕೆನ್ನೆಗೆ ಬಾರಿಸಿದ ಪುಟ್ಟಕ್ಕನ ಮಕ್ಕಳು
ಇದನ್ನೆಲ್ಲ ಹೇಳಿದ ರಾಜೀ ಪುಟ್ಟಕ್ಕನ ಮಕ್ಕಳು ನಡತೆ ತೆಗೆಟ್ಟವರು ಎಂದು ಎಲ್ಲರ ಎದುರು ಹೇಳುತ್ತಾಳೆ. ಆಗ ಸಹನಾಗೆ ಸಿಟ್ಟು ಬಂದು, ಆಕೆಯ ಕಪಾಳಕ್ಕೆ ಹೊಡೆದರೆ, ಇತ್ತ ಕಡೆಯಿಂದ ಸ್ನೇಹಾ ಇನ್ನೊಂದು ಕೆನ್ನೆಗೆ ಹೊಡೆಯುತ್ತಾರೆ. ಪುಟ್ಟಕ್ಕನ ಮಕ್ಕಳ ರೌದ್ರಾವತಾರ ನೋಡಿ ರಾಜೀ ಬೆಚ್ಚಿ ಬಿದ್ದಿದ್ದಾಳೆ.


Click it and Unblock the Notifications











