Puttakkana Makkalu:ದಿಟ್ಟ ನಿರ್ಧಾರ ತೆಗೆದುಕೊಂಡ ಸಹನಾ; ಪುಟ್ಟಕ್ಕನಿಗೆ ಮಗಳದ್ದೇ ಚಿಂತೆ
ಮಗಳ ಜೀವನ ಹಾಳಾಗುತ್ತಿದೆ ಎನ್ನುವ ಯೋಚನೆಯಲ್ಲಿ ಪುಟ್ಟಕ್ಕ ದಿನ ದೂಡುತ್ತಿದ್ದಾರೆ. ಈ ಬಗ್ಗೆ ಸಹನಾಗೂ ಬಹಳ ಬೇಸರವಿದೆ. ಚಿಕ್ಕ ವಯಸ್ಸಿನಿಂದಲೂ ಅಮ್ಮನಿಗೆ ಯಾವುದೇ ಕಷ್ಟ ಆಗದ ಹಾಗೆ ಬೆಳೆದಿದ್ದೇನೆ. ಆದರೆ, ಮದುವೆ ಆದ ಬಳಿಕ ಅಮ್ಮನಿಗೆ ನಾನು ತುಂಬಾನೇ ನೋವು ಕೊಟ್ಟು ಬಿಟ್ಟೆನಲ್ಲ ಎಂದು ಬಹಳ ನೊಂದುಕೊಂಡಿದ್ದಾಳೆ.
ಈ ಸಮಯದಲ್ಲಿ ಸ್ನೇಹಾ ಅಕ್ಕನಿಗೆ ಧೈರ್ಯ ಹೇಳುತ್ತಾಳೆ. ಈಗ ಪುಟ್ಟಕ್ಕ ಮಕ್ಕಳ ಜೊತೆ ಮಾತನಾಡುತ್ತಿಲ್ಲ. ಆಕೆಗೆ ತನ್ನ ಮಕ್ಕಳು ನನ್ನ ಮಾತನ್ನು ಸ್ವಲ್ಪ ಕೂಡ ಕೇಳುತ್ತಿಲ್ಲ ಎನ್ನುವ ಬೇಸರ. ನನ್ನ ಮಕ್ಕಳಿಗೆ ನಾನು ಅದೆಷ್ಟೇ ಬಾರಿ ಹೇಳಿದರೂ, ನನ್ನ ಮಾತನ್ನು ಅವರು ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಸಹನಾ ಹೇಳಿದ ಮಾತು ಕೇಳದೆ ಆಕೆಯ ಜೀವನವನ್ನು ಹಾಳು ಮಾಡಿಕೊಳ್ಳುತ್ತಾಳೆ ಎನ್ನುವ ಭಯ ಆಕೆಗೆ. ಸಹನಾಗೆ ಸ್ನೇಹಾ ಸಮಾಧಾನ ಮಾತು ಹೇಳುತ್ತಾಳೆ. ಆದರೆ, ಸಹನಾ ತನ್ನ ಗಂಡ ಮುರಳಿ ಪ್ರೀತಿ ವಿಚಾರ ಮಾತನಾಡುತ್ತಿರುತ್ತಾರೆ.

"ನನ್ನ ಹಾಗೂ ಮುರಳಿ ಪ್ರೀತಿ ಬಹಳ ಗಾಢವಾಗಿತ್ತು. ಆದರೆ, ಅವರಿಗೆ ನನ್ನ ಮೇಲೆ ನಂಬಿಕೆಯೇ ಇಲ್ಲವಾಗಿದೆ. ಅವರಿಗೆ ಅವರ ತಾಯಿಯೇ ಮುಖ್ಯ ಆಗಿರುವಾಗ ನಾನು ಅವರಿಗೆ ಲೆಕ್ಕಕ್ಕೆ ಇಲ್ಲ. ಇದರಿಂದ ನನಗೆ ಬಹಳ ನೋವಾಗಿದೆ. ಅಂತಹ ಸಂಬಂಧ ಇದ್ದರೇನು..? ಹೋದರೇನು?" ಎಂದು ಹೇಳುತ್ತಾಳೆ. ಕೊನೆಗೆ ಸ್ನೇಹಾ ಬಳಿ ಸಹನಾ ಇನ್ನೊಂದು ಮಾತು ಹೇಳುತ್ತಾಳೆ. "ಏನೇ ಆಗಲಿ ನನ್ನ ಮೇಲೆ ಯಾರನ್ನು ಸವಾರಿ ಮಾಡಲು ನಾನು ಬಿಡುವುದಿಲ್ಲ" ಎಂದು ಹೇಳುತ್ತಾಳೆ .ಇತ್ತ ಕಾಳಿ ಪುಟ್ಟಕ್ಕನ ಮನೆಗೆ ಬರುತ್ತಾನೆ . ಮನೆಯೊಳಗೆ ಇಣುಕಿ ನೋಡಿದಾಗ ಯಾರು ಇಲ್ಲದನ್ನು ನೋಡಿ ಸುಮ್ಮನೆ ಇರುತ್ತಾನೆ.
ಕಾಳಿ ಮಾತು ಕೇಳಲು ಗೋಪಾಲ ತಯಾರಿಲ್ಲ
ಕಾಳಿ ಇರುವ ವೇಳೆನೇ ಗೋಪಾಲ ಅಲ್ಲಿಗೆ ಬರುತ್ತಾರೆ. ಕಾಳಿ ಹೇಳುವ ಮಾತನ್ನು ಕೇಳಲು ಗೋಪಾಲ ರೆಡಿ ಇರುವುದು ಇಲ್ಲ. ಆದರೆ, ಗೋಪಾಲನ ಬಳಿ ಮುಖ್ಯವಾದ ವಿಚಾರ ಮಾತನಾಡಬೇಕು ಎಂದು ಹೇಳುತ್ತಾನೆ . ಗೋಪಾಲ ಅದಕ್ಕೆ "ಏನಯ್ಯ.. ಆಗ ನಿನ್ನ ಅಕ್ಕ ಬಂದು ರಾದ್ಧಾಂತ ಮಾಡಿದಳು. ಇದೀಗ ನೀನು ಇಲ್ಲಿಗೆ ಬಂದಿದ್ದೀಯಾ.. ಏನು ಕಥೆ ನಿಮ್ಮದು?" ಎಂದು ಹೇಳುತ್ತಾರೆ. ಅದಕ್ಕೆ ಕಾಳಿ "ಇದೀಗ ನೀವು ಕೌಸಲ್ಯಾ ಅವರ ವಿರುದ್ಧ ದೂರು ನೀಡಿದ್ದೀರಾ. ಅದಕ್ಕೆ ಸಾಕ್ಷಿ ಬೇಕು ಅಲ್ವಾ? ಸಾಕ್ಷಿ ಇಲ್ಲ ಆಂತಾದರೆ ಅವರನ್ನು ಜೈಲಿನಿಂದ ಹೊರಗೆ ಬಿಡುತ್ತಾರೆ" ಎಂದು ಹೇಳುತ್ತಾನೆ.

ಕಾಳಿ ನೋಡಿ ಕೋಪಗೊಂಡ ಸ್ನೇಹಾ
ಅಷ್ಟರಲ್ಲಿ ಅಲ್ಲಿಗೆ ಸ್ನೇಹಾ ಬಂದು ಕಾಳಿಯನ್ನು ನೋಡಿ ಕಿಡಿ ಕಾರುತ್ತಾಳೆ. ಕಂಠಿ ಬಳಿ ಬಂದು "ಏನ್ಲಾ ಕಾಳಿ ಇಲ್ಲಿಗೆ ಬಂದಿದ್ದೆ. ನೀನು ಪಂಚಾಯಿತಿಯಲ್ಲಿ ನಿಜ ಹೇಳಿದೆ ಎಂದು ನಾನು ನಿನ್ನನ್ನು ಸುಮ್ಮನೆ ಬಿಡುತ್ತಿದ್ದೇನೆ" ಎಂದು ಖಡಕ್ ವಾರ್ನಿಂಗ್ ಕೊಟ್ಟು ಮನೆಯಿಂದ ಹೊರಗೆ ಕಳುಹಿಸುತ್ತಾನೆ. ಆದರೆ ಕಾಳಿ ಹೇಳುವುದರಲ್ಲಿ ಅರ್ಥ ಇದೆ. ಕಂಪ್ಲೇಂಟ್ ಕೊಟ್ಟು ಬಂದರೆ ಸಾಲದು ಅದಕ್ಕೆ ಸಾಕ್ಷಿ ಬೇಕಿದೆ.
ಪುಟ್ಟಕ್ಕನ ಮಕ್ಕಳ ಮೇಲೆ ರಾಜಿ ಮುನಿಸು
ಇತ್ತ ರಾಜಿ 'ಪುಟ್ಟಕ್ಕನ ಮಕ್ಕಳ' ವಿರುದ್ದ ಕಿಡಿಕಾರುತ್ತಿರುತ್ತಾಳೆ. ಸಹನಾ ಹಾಗೂ ಸ್ನೇಹಾ ಇಬ್ಬರು ಕೂಡ ರಾಜಿ ಕೆನ್ನೆಗೆ ಬಾರಿಸಿ ಸರಿಯಾಗಿಯೇ ಮಂಗಳಾರತಿ ಮಾಡಿದ್ದಾರೆ. ಅದಕ್ಕಾಗಿ ಹೇಗಾದರೂ ಮಾಡಿ ಪುಟ್ಟಕ್ಕನ ಮಕ್ಕಳ ಜೀವನ ಹಾಳು ಮಾಡಬೇಕು ಎಂದು ಆಲೋಚಿಸುತ್ತಿರುತ್ತಾರೆ.


Click it and Unblock the Notifications











