Puttakkana Makkalu:ಮುರಳಿ ಆರೋಪಕ್ಕೆ ಬಂಗಾರಮ್ಮ ಕೆಂಡಾಮಂಡಲ: ಅಮ್ಮ-ಹೆಂಡತಿ ಸಿಗಬಹುದೇ?
ಮುರಳಿಗೆ ಸಹನಾ ಮೇಲೆ ಹುಚ್ಚು ಪ್ರೀತಿ. ಆದರೆ, ಪ್ರೀತಿ ಇದೀಗ ದ್ವೇಷಕ್ಕೆ ತಿರುಗಿದೆ. ಸಹನಾ ತನ್ನ ತಾಯಿ ಹಾಗೂ ಬಾವನನ್ನು ಜೈಲಿಗೆ ಹಾಕಿದ್ದಾಳೆ ಎನ್ನುವ ಕೋಪ ಒಂದು ಕಡೆಯಾದರೆ, ಬಂಗಾರಮ್ಮನ ಮೇಲೆ ಮತ್ತೊಂದು ಕಡೆ ಕೋಪ. ಬಂಗಾರಮ್ಮನ ಅವರ ಬಳಿ ನನ್ನ ಹಾಗೂ ಸಹನಾಳನ್ನು ಹೇಗಾದರೂ ಒಂದು ಮಾಡಿಸಿ. ನಾವು ಇಬ್ಬರು ಒಂದಾಗಬೇಕು ಎಂದು ಸಹನಾ ಮೇಲಿರುವ ಪ್ರೀತಿಯನ್ನು ಮುರಳಿ ಹೇಳಿಕೊಂಡಿರುತ್ತಾನೆ.
ಆದರೆ, ಇದೆಲ್ಲವನ್ನೂ ಕೇಳಿದ ಬಳಿಕ ಬಂಗಾರಮ್ಮ ಪಂಚಾಯತಿ ಕರೆಯುತ್ತಾರೆ. ಆದರೆ ಅಲ್ಲಿ ನಡೆದಿದ್ದೇ ಬೇರೆ. ಕೌಸಲ್ಯಾ ಮಾಡಿದ ತಪ್ಪಿಗೆ ತಕ್ಕ ಪ್ರತಿಫಲ ಅನುಭವಿಸುತ್ತಿದ್ದಾಳೆ. ಆದರೂ ಕೌಸಲ್ಯಾಗೆ ಮನದಲ್ಲಿ ಯಾವುದೇ ಗಿಲ್ಟ್ ಇರುವುದಿಲ್ಲ. ನನ್ನಿಂದಾಗಿ ನನ್ನ ಮಗ ಸೊಸೆ ದೂರ ಆಗುತ್ತಿದ್ದಾರೆ. ನನ್ನ ಮಗ ಸಹನಾ ಇಲ್ಲದೆ ಇರುವುದು ಇಲ್ಲ. ಇಂತಹ ಒಳ್ಳೆಯ ಮಗನಿಗೆ ಹಾಗೆಲ್ಲ ಆಗಬಾರದು ಎಂದು ಸ್ವಲ್ಪವೂ ಯೋಚನೆ ಮಾಡುವುದಿಲ್ಲ. ಆಕೆಗೆ ಸಹನಾ ತನ್ನ ಮಗನಿಂದ ದೂರ ಆದರೆ ಅಷ್ಟೇ ಸಾಕು. ಬೇರೆ ಯಾವುದೂ ಬೇಡ ಎನ್ನುವ ಮಟ್ಟಿಗೆ ಇರುತ್ತಾರೆ.

ಇತ್ತ ಅಮ್ಮ ಜೈಲು ಪಾಲಾದ ಸಂಕಟದಲ್ಲಿ ಮುರಳಿ ಬಹಳ ಬೇಸರದಲ್ಲಿ ಕಂಠ ಪೂರ್ತಿ ಕುಡಿದು ಬಂಗಾರಮ್ಮ ಅವರ ಮನೆಗೆ ಬರುತ್ತಾನೆ. ಮುರಳಿಗೆ ಕೂಡಿದ ಮತ್ತಿನಲ್ಲಿ ಏನು ಮಾತನಾಡುತ್ತಾನೆ ಎನ್ನುವ ಆಲೋಚನೆ ಕೂಡ ಇರುವುದಿಲ್ಲ. ಬಂಗಾರಮ್ಮನ ಮನೆಗೆ ಬಂದ ಮುರಳಿ ಏಯ್ ಸ್ನೇಹಾ ಮನೆಯಿಂದ ಹೊರಗೆ ಬಾ.. ನಿನಗೆ ನನ್ನ ತಾಯಿಯ ವಿರುದ್ದ ಕಂಪ್ಲೇಂಟ್ ಕೊಡಲು ಹೇಳಿದ್ದು ಯಾರು? ಎಂದು ಖಡಕ್ ಆಗಿ ಹೇಳುತ್ತಾನೆ. ಇದನ್ನು ಕೇಳಿದ ಬಂಗಾರಮ್ಮ ಹಾಗೂ ಆಕೆಯ ಮನೆಯವರೆಲ್ಲ ಹೊರಗೆ ಬರುತ್ತಾರೆ. ಬಂಗಾರಮ್ಮಗೆ ಮುರಳಿ ಕುಡಿದು ಮನೆಯ ಮುಂದೆ ಗಲಾಟೆ ಮಾಡುತ್ತಿರುವುದನ್ನು ನೋಡಿ ಬಹಳ ಸಿಟ್ಟು ಬರುತ್ತದೆ.
ಮುರಳಿಗೆ ಸಮಾಧಾನ ಹೇಳಲು ಯತ್ನಿಸಿದ ಬಂಗಾರಮ್ಮ
ಆದರೆ ಆದೆಲ್ಲವನ್ನು ಸಹಿಸಿಕೊಂಡಿರುತ್ತಾರೆ. ಬಂಗಾರಮ್ಮ ಅವರನ್ನು ಏಕವಚನದಲ್ಲಿ ಮಾತನಾಡುವಾಗ ಕೋಪ ಬರುತ್ತದೆ. "ಯಾಕೆ ಹಾಗೆಲ್ಲ ಹೇಳುತ್ತಿದ್ದಿಯಾ? ಹೋಗು ಮನೆಗೆ, ನಾಳೆ ಮಾತನಾಡೋಣ" ಎಂದು ಹೇಳಿದಾಗ, "ನನ್ನ ಮನೆಗೆ ಹೋದರೆ ಅಲ್ಲಿ ಯಾರಿದ್ದಾರೆ? ನನ್ನ ತಾಯಿ ಹಾಗೂ ಬಾವ ಜೈಲಲ್ಲಿ ಇದ್ದಾರೆ. ನಿಮ್ಮಿಂದ ಏನಾದರೂ ಉಪಕಾರ ಆಗಬಹುದು ಎಂದು ಹೇಳಿ ನಾನು ಪಂಚಾಯತಿ ಕರೆದೆ. ಆದರೆ ಅದರಿಂದ ನನಗೆ ನಷ್ಟ ಹೆಚ್ಚಾಗಿದ್ದು, ಹೊರತು ನನಗೆ ಸುಖ ಸಿಗಲಿಲ್ಲ." ಎಂದು ಮುರಳಿ ಹೇಳುತ್ತಾನೆ.

ಹೆಂಡತಿಯ ಮೇಲೆ ಅತಿಯಾದ ಪ್ರೀತಿ
"ನನಗೆ ನನ್ನ ಸಹನಾ ಬೇಕು. ಆಕೆಯನ್ನು ನನಗೆ ಮರಳಿ ಕೊಡಲು ಆಗುತ್ತಾ ನಿಮಗೆ, ನನ್ನ ತಾಯಿಯದ್ದು ತಪ್ಪಿದೆ. ಆದರೆ, ಅವರಿಗೆ ಒಂದು ಅವಕಾಶ ಕೊಡಬಹುದಾಗಿತ್ತು. ಆದರೆ, ಇದೀಗ ಅವರನ್ನು ಜೈಲಿಗೆ ಕಳುಹಿಸಿದ್ದೀರ" ಎಂದು ತನ್ನ ಕೋಪವನ್ನು ಹೊರಗಡೆ ಹಾಕುತ್ತಾನೆ. ಕೊನೆಗೆ ಏನು ಮಾತನಾಡದೆ ಮೌನವಾಗಿ ಬಿಡುತ್ತಾನೆ. ಆದರೆ, ಬಂಗಾರಮ್ಮ ಮಾತ್ರ ಮುರಳಿ ಮೇಲೆ ಬಹಳ ಸಿಟ್ಟು ಮಾಡಿಕೊಳ್ಳುತ್ತಾರೆ. ಮುರಳಿ ವಾದ ಒಂದೇ "ನೀವು ನ್ಯಾಯ ದೇವತೆ. ನಾನು ನಿಮ್ಮ ಬಳಿ ಕೈ ಮುಗಿದು ಬೇಡಿಕೊಂಡೆ ನನ್ನ ಸಹನಾನನ್ನು ದೂರ ಮಾಡಬೇಡಿ. ಅವರಿಲ್ಲದೆ ನಾನು ಖಂಡಿತವಾಗಿಯೂ ಇಲ್ಲ ಎಂದು ಗೋಗರೆದೆ. ಆದರೆ, ನ್ಯಾಯ ಕೊಡುವ ನ್ಯಾಯ ದೇವತೆ ನೀವು ಮಾಡಿದ್ದೇನು? ಎಂದು ಬಹಳ ಬೇಸರದಲ್ಲಿ ಕೇಳುತ್ತಾನೆ.
ಮುರಳಿ ಮಾತಿಗೆ ತಿರುಗೇಟು
ಆದರೆ ಬಂಗಾರಮ್ಮಗೆ ಬಹಳ ಸಿಟ್ಟು ಬರುತ್ತದೆ. "ಮುರಳಿ ನೀನು ಯಾರ ಬಳಿ ನಿಂತು ಮಾತನಾಡುತ್ತಿದ್ದಿಯಾ? ಎನ್ನುವ ಅರಿವು ನಿನಗೆ ಇದ್ಯಾ" ಎಂದಾಗ ಮುರಳಿ ಸ್ವಲ್ಪ ಜೋರಾಗಿ "ನಾನು ಯಾರ ಜೊತೆ ಮಾತನಾಡುತ್ತಾ ಇದ್ದೇನೆ ಎನ್ನುವ ಅರಿವು ನನಗಿದೆ. ನನ್ನ ಅಮ್ಮ ಬೇಕು. ನನ್ನ ಹೆಂಡತಿ ಬೇಕು ಎಂದು ಅಂಗಲಾಚಿ ಬೇಡಿಕೊಂಡೆ. ಆದರೆ ನೀವು ಕಲ್ಲು ತರನೆ ಆಡುತ್ತಿದ್ದಿರ" ಎಂದು ಬಂಗಾರಮ್ಮ ಅವರನ್ನು ಪ್ರಶ್ನೆ ಮಾಡುತ್ತಾನೆ. "ಹಾಗೆಯೇ ನನ್ನ ಜೀವನ ಹಾಳಾಗಲು ಕಾರಣ ನೀವು, ನಿಮ್ಮ ಸೊಸೆ ಕಾರಣ" ಎಂದು ಕೋಪದಿಂದ ಹೇಳುತ್ತಾನೆ. ಇದನ್ನೆಲ್ಲ ಕೇಳಿ ಬಂಗಾರಮ್ಮಗೆ ಕೋಪ ಮತ್ತಷ್ಟು ಉಕ್ಕಿ ಹರಿಯುತ್ತದೆ.


Click it and Unblock the Notifications











