Puttakkana Makkalu: ಕಿರುತೆರೆಯಲ್ಲಿ ಪ್ರೇಮಿಗಳಾಗಿರುವ ಕಂಠಿ-ಸ್ನೇಹ ರಿಯಲ್ ಲೈಫ್‌ನಲ್ಲಿ ಹೇಗಿರ್ತಾರೆ ನೋಡಿ!
ಧಾರಾವಾಹಿ ಪ್ರಿಯರು ಯಾರೇ ಆಗಿರಲಿ ಪ್ರತಿಯೊಂದು ದೃಶ್ಯವನ್ನು ಫೀಲ್ ಮಾಡುತ್ತಾರೆ. ಅದು ಧಾರಾವಾಹಿ ಅಂತ ಗೊತ್ತಿದ್ದರು, ಅಯ್ಯೋ ಹಿಂಗೆ ಆಗಬಾರದಿತ್ತು, ಅಯ್ಯೋ ಹಂಗೆ ಆಗಬಾರದಿತ್ತು ಅಂತ ಕೊರಗಿಕೊಂಡೆ ಸೀರಿಯಲ್ ನೋಡ್ತಾರೆ. ಅದರಲ್ಲೂ ಲವ್ ಸೀನ್ ಬಂದ್ರೆ, ದುಃಖದ ಸೀನ್ ಬಂದ್ರೆ ಮುಗಿದೇ ಹೋಯಿತು.
ಸೀನ್‌ನಲ್ಲಿ ಹೀರೋ ಹೀರೋಯಿನ್‌ಗೆ ಧೈರ್ಯ ತುಂಬೋದಕ್ಕೆ ಫ್ರೆಂಡ್ಸ್ ಇರ್ತಾರೋ ಬಿಡ್ತಾರೋ. ಆದರೆ ಮನೆಯಲ್ಲಿ ಕೂತು ಧಾರಾವಾಹಿ ನೋಡುವವರು ಮಾತ್ರ ಗುರು ನೀನು ಹೋಗು ಗುರು ಬೇಗ ಪ್ರಪೋಸ್ ಮಾಡು. ಛೇ.. ಅವರ ಅಮ್ಮ ಈಗಲೇ ಬರಬೇಕಿತ್ತಾ ಅಂತ ಕೂತಲ್ಲೇ ಟೆನ್ಶನ್ ಆಗುತ್ತಾರೆ. ಇನ್ನು ವಿಲನ್‌ಗಳು ಎಂಟ್ರಿ ಆದರಂತೂ ಮುಗಿದೇ ಹೋಯಿತು. ತಮ್ಮ ಶತ್ರುಗಳಿಗೂ ಅಷ್ಟು ಶಾಪ ಹಾಕ್ತಾರೋ ಇಲ್ಲವೋ ಗೊತ್ತಿಲ್ಲ.
ಕಂಠಿಗೆ ಸ್ನೇಹಾಳದ್ದೇ ಧ್ಯಾನ..!
ನಾವೂ ಇಷ್ಟೆಲ್ಲಾ ಹೇಳೋದಕ್ಕೆ ಕಾರಣ ಪುಟ್ಟಕ್ಕನ ಮಕ್ಕಳು ಧಾರಾವಾಹಿ. ಈಗಾಗಲೇ ಎಲ್ಲಾ ವೀಕ್ಷಕರ ಮನ ಗೆದ್ದು ಯಶಸ್ಸಿನ ಅಲೆಯಲ್ಲೇ ಸಾಗುತ್ತಿರುವ ಈ ಧಾರಾವಾಹಿಯಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಸದ್ಯ ಈ ಧಾರಾವಾಹಿಯಲ್ಲೀಗ ಟ್ವಿಸ್ ಜೊತೆ ಜೊತೆಗೆ ಕಂಠಿ ಮತ್ತು ಸ್ನೇಹಾ ಪ್ರೀತಿ ಟ್ರ್ಯಾಕ್ ಕೂಡ ನಡೀತಿದೆ.

ಕಂಠಿಗೆ ಧೈರ್ಯ ಕಡಿಮೆ. ಆದರೆ ಕಂಠಿ ಯಾರ ಮಗ. ಬಡ್ಡಿ ಬಂಗಾರಮ್ಮನ ಮಗ. ಆದರೂ ಸ್ನೇಹಾ ಕಣ್ಣೆದುರಿಗೆ ಬಂದ್ರೆ ಸಾಕು ಮೀಟ್ರು ಆಫ್ ಆಗಿ, ಪ್ರೇಮಲೋಕಕ್ಕೆ ಹೋಗಿ ಬಿಡ್ತಾನೆ. ಅಕ್ಕ ಪಕ್ಕ ಇದ್ದ ಫ್ರೆಂಡ್ಸೆಲ್ಲಾ ಎಚ್ಚರಿಸಿದಾಗಲೇ ಗೊತ್ತಾಗೋದು ನಾನಿನ್ನು ಪ್ರೀತಿನೇ ಹೇಳಿಕೊಂಡಿಲ್ಲ ಅಂತ.
ಕಂಠಿ-ಸ್ನೇಹಾ ಬೆಸ್ಟ್ ಫ್ರೆಂಡ್ಸ್ ಗೊತ್ತಾ..?
ಕಂಠಿಗೆ ಇಬ್ಬರು ಫ್ರೆಂಡ್ಸ್ ಇದ್ದಾರೆ. ನಾಗ ಮತ್ತೆ ಮುಂಗುಸಿ. ಕಂಠಿಯಲ್ಲಿ ಚಿಗುರಿದ ಪ್ರೀತಿಯನ್ನು ಹೆಮ್ಮರವಾಗಿ ಬೆಳೆಯೋ ಹಾಗೆ ಮಾಡಿದ್ದೇ ಈ ಇಬ್ಬರು ಮಹಾನುಭಾವರು. ಸ್ನೇಹಾಗೆ ಇನ್ನು ಕಂಠಿ ಯಾರು ಅನ್ನೋದು ಮಾತ್ರ ಗೊತ್ತಿಲ್ಲ. ಗೊತ್ತಾದ್ರೆ ಅವತ್ತು ಪ್ರಳಯಾನೇ ಆಗುತ್ತೆ. ಆದರೆ, ಅದು ಆಗೋದು ಧಾರಾವಾಹಿಯಲ್ಲಿ ಅನ್ನೋದಕ್ಕಿಂತ ಪ್ರೇಕ್ಷಕರ ಎದೆಯಲ್ಲಿ.
ಅದಕ್ಕೆ ಪ್ರೇಕ್ಷಕರೇ ಆಗಾಗ ದೇವರ ಬಳಿ ಈ ಇಬ್ಬರಿಗಾಗಿ ಮೊರೆ ಇಡುತ್ತಿರುತ್ತಾರೆ. ಮೊನ್ನೆ ಎಪಿಸೋಡ್‌ನಲ್ಲೇ ಈ ಬಗ್ಗೆ ಉದಾಹರಣೆ ಸಿಕ್ಕಿದೆ. ಪಂಚಾಯತಿಯಲ್ಲಿ ಇನ್ನೇನು ಬಂಗಾರಮ್ಮ- ಸ್ನೇಹಾ ಎದುರು ಬದುರಾಗಬೇಕಿತ್ತು. ಆ ದೃಶ್ಯದಲ್ಲಿ ಕಂಠಿ ಟೆನ್ಶನ್ ಆಗಿದ್ದ ಅಷ್ಟೆ. ಆದರೆ, ಪ್ರೇಕ್ಷಕರು ಒಂದು ಕ್ಷಣ ಉಸಿರನ್ನೇ ಬಿಗಿ ಹಿಡಿದುಕೊಂಡು ಬಿಟ್ಟಿದ್ದರು. ಪ್ರೇಕ್ಷಕರು ಕಂಠಿ ಮತ್ತು ಸ್ನೇಹಾ ಪ್ರೀತಿಗೆ ಇಷ್ಟು ಅಡಿಕ್ಷನ್ ಆಗಿದ್ದಾರೆ.
ಕಂಠಿ-ಸ್ನೇಹಾ ರೀಲ್ಸ್‌ನಲ್ಲಿ ಫುಲ್ ಬ್ಯುಸಿ
ಕಂಠಿಗೆ ನಾಗ ಮತ್ತೆ ಮುಂಗುಸಿ ಆಗಾಗ ಎನರ್ಜಿ ಬೂಸ್ಟ್ ಕೊಡ್ತಾನೆ ಇರ್ತಾರೆ. "ಅಣ್ಣೋ ಹೋಗಣ್ಣಾ ಅತ್ತಿಗೆಗೆ ಪ್ರಪೋಸ್ ಮಾಡು" ಅಂತ. ಆದರೆ, ನಮ್ ಕಂಠಿಗೆ ಆ ಧೈರ್ಯ ಎಲ್ಲಿಂದ ಬರ್ಬೇಕು. ನಿಮ್ಗೆಲ್ಲಾ ಒಂದು ಸೀಕ್ರೇಟ್ ಗೊತ್ತಿರಲಿ. ಕಂಠಿ ಆಂಡ್ ಸ್ನೇಹಾ ನಿಮ್ಗೆಲ್ಲಾ ಮೋಸ ಮಾಡ್ತಾ ಇದ್ದಾರೆ. ತೆರೆ ಹಿಂದೆ ಕಂಠಿ ಮತ್ತು ಸ್ನೇಹ ಹೇಗಿರುತ್ತಾರೆ ಅಂತ ನಿಮಗೆ ಗೊತ್ತಾ?
ತೆರೆ ಮೇಲೆ ಪ್ರೀತಿ ಹೇಳಪ್ಪ ಅಂದ್ರೆ ಹೆದರುವ ಕಂಠಿ, ರೀಲ್ಸ್ ನಲ್ಲಿ ಸ್ನೇಹಾ ಜೊತೆ ಬರೀ ಲವ್ ಸಾಂಗಿಗೆ ಡ್ಯೂಯೆಟ್ ಮೂಡಿನಲ್ಲಿ ಇರ್ತಾರೆ. ಅಷ್ಟೇ ಅಲ್ಲ ಸ್ನೇಹಾಳನ್ನು ಸಿಕ್ಕಾಪಟ್ಟೆ ಕಾಡಿಸ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಜೋಡಿ ಮಾಡಿದ ರೀಲ್ಸ್ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ನೋಡಿಲ್ಲ ಅಂದ್ರೆ ನಿಮ್ಮ ಕಂಠಿ ಆಂಡ್ ಸ್ನೇಹಾ ಅವತಾರವನ್ನ ನೀವೂ ಒಮ್ಮೆ ಸರ್ಚ್ ಮಾಡಿ. ನೋಡಿಬಿಡಿ.


Click it and Unblock the Notifications











