Puttakkana Makkalu:ಸಹನಾ ಬದುಕಿರುವ ಸತ್ಯ ತಿಳೀತು; ಮಗಳ ಧ್ವನಿ ಕೇಳಿ ಕಣ್ಣೀರಾಕಿದ ಪುಟ್ಟಕ್ಕ

By ಪೂರ್ವ

ಪುಟ್ಟಕ್ಕಗೆ ತನ್ನ ಮಗಳು ಇನ್ನು ಬದುಕಿದ್ದಾಳೆ ಎನ್ನುವ ವಿಚಾರ ತಿಳಿದು ಖುಷಿಯಾಗುತ್ತದೆ. ಪುಟ್ಟಕ್ಕನ ತನ್ನ ಮನಸ್ಸಲ್ಲಿ ಸಹನಾ ಜೀವಂತವಾಗಿದ್ದಾಳೆ. ಆಕೆಗೆ ಏನು ಆಗಬಾರದು. ಆಕೆ ಚೆನ್ನಾಗಿರಬೇಕು. ಎಲ್ಲಿಯೇ ಇದ್ದರೂ ಸುಖವಾಗಿರಬೇಕು ಎಂದು ಆ ದೇವರ ಬಳಿ ಬೇಡಿಕೊಳ್ಳುತ್ತಿದ್ದಳು. ಮ್ಯಾಕ್ಸ್ ವೆಲ್ ಜೊತೆ ಸಹನಾ ಅಮ್ಮನಿಗಾಗಿ ಸೀರೆಯನ್ನು ಕೊಡಲು ಕೊಟ್ಟಿರುತ್ತಾಳೆ. ಆದರೆ ಮ್ಯಾಕ್ಸ್ ವೆಲ್ ಫೋನೇ ಮಾಡದೇ ಇರುವುದನ್ನು ನೋಡಿ ಬಹಳ ಆತಂಕ ಕೊಳ್ಳುತ್ತಾಳೆ.

ಇದೇನಿದು ಮ್ಯಾಕ್ಸ್‌ಗೆ ಅಲ್ಲಿ ಹೋಗಿ ಫೋನ್ ಮಾಡಲು ಹೇಳಿದ್ದೆ. ಆದರೆ, ಆತ ಫೋನ್ ಮಾಡಿಲ್ಲ. ಯಾಕೆ ಹೀಗೆ ಮಾಡುತ್ತಿದ್ದಾರೆ? ಎಂದು ಸಹನಾ ಆತಂಕಗೊಳ್ಳುತ್ತಾಳೆ. ಕೂಡಲೇ ಮ್ಯಾಕ್ಸ್‌ವೆಲ್‌ಗೆ ಸಹನಾ ಫೋನ್ ಮಾಡುತ್ತಾಳೆ. ಆದರೆ, ಮ್ಯಾಕ್ಸ್‌ವೆಲ್ ತನ್ನ ಫೋನ್‌ ಅನ್ನು ಪುಟ್ಟಕ್ಕನ ಹತ್ತಿರವೇ ಬಿಟ್ಟು ಹೋಗಿರುತ್ತಾನೆ.

Puttakkana Makkalu serial August 12th episode update

ಪುಟ್ಟಕ್ಕ ರಿಂಗ್ ಆಗುತ್ತಿರುವ ಫೋನನ್ನು ತೆಗೆದು ಹಲೋ ಯಾರು ಮಾತನಾಡುತ್ತಿರುವುದು ಎಂದು ಕೇಳುತ್ತಾಳೆ. ಆದರೆ, ಮಗುವಿನ ನಾಮಕರಣದ ಸಂದರ್ಭದಲ್ಲಿ ಪುಟ್ಟಕ್ಕಗೆ ಸಹನಾ ಧ್ವನಿ ಕೇಳಿಸುವುದಿಲ್ಲ. ಪುಟ್ಟಕ್ಕನ ಧ್ವನಿ ಕೇಳಿ ಸಹನಾಗೆ ಬಹಳ ಬೇಸರವಾಗುತ್ತದೆ. ಆಕೆ ಕೊಂಚ ಜೋರಾಗಿ ಅವ್ವಾ ಎಂದು ಕರೆಯುತ್ತಾಳೆ. ಆ ಧ್ವನಿ ಕೇಳಿದ ಪುಟ್ಟಕ್ಕಾಗೆ ಅದೇನಾಯ್ತೋ ಸಹನಾ ಎಂದು ಹೇಳುತ್ತಾಳೆ.

ಪುಟ್ಟಕ್ಕಾಗೆ ಸಹನಾ ಎಂದರೆ ಬಹಳ ಇಷ್ಟ. ತನಗೆ ಬೆಂಗಾವಲಾಗಿ ನಿಂತವಳು ನನ್ನ ದೊಡ್ಡ ಮಗಳು ಎಂದು ಹೇಳುತ್ತಲೇ ಇರುತ್ತಾಳೆ. ಇದೀಗ ಫೋನ್‌ನಲ್ಲಿ ಆಕೆಯ ಧ್ವನಿಯನ್ನು ಕೇಳಿ ಪುಟ್ಟಕ್ಕ ಬಹಳ ಸಂತಸಗೊಂಡಿದ್ದಾಳೆ. ಹಾಗೆಯೇ ಸಹನಾ ಕೂಡ ಸಿಕ್ಕಾಪಟ್ಟೆ ಖುಷಿ ಪಟ್ಟಿದ್ದಾಳೆ. ಸಹನಾ ಅಮ್ಮನ ಧ್ವನಿ ಕೇಳಿ "ಅವ್ವ ಹೇಗಿದ್ದೀಯವ್ವ?" ಎಂದು ಕೇಳುತ್ತಾಳೆ. ಇದನ್ನು ಕೇಳಿದ ಪುಟ್ಟಕ್ಕಗೆ ಮಾತೇ ಮರೆತು ಹೋಗಿದೆ. ಇತ್ತ ಕಂಠಿ ತನ್ನ ಸೊಸೆಗೆ ಸಹನಾ ಎಂದು ಹೆಸರಿಡುತ್ತಾನೆ.

Puttakkana Makkalu serial August 12th episode update

ಅಮ್ಮನ ಆರೋಗ್ಯದ ಬಗ್ಗೆ ಚಿಂತಿತಳಾದ ಸ್ನೇಹಾ

ಪುಟ್ಟಕ್ಕನನ್ನು ನೋಡಿದ ಸ್ನೇಹಾಗೆ ಬಹಳ ಶಾಕ್ ಆಗುತ್ತದೆ. ಅಮ್ಮನಿಗೆ ಇದೇನಾಗಿ ಬಿಟ್ಟಿತು. ಇಲ್ಲಿವರೆಗೂ ಚೆನ್ನಾಗಿಯೇ ಇದ್ದರಲ್ಲ ಎಂದು ಯೋಚನೆ ಮಾಡುತ್ತಾಳೆ. ಹಾಗೆ ಅಮ್ಮನಿಗೆ ಒಳ್ಳೆಯ ಚಿಕಿತ್ಸೆ ನೀಡುತ್ತಾಳೆ. ಪುಟ್ಟಕ್ಕ ಎಚ್ಚರವಾದ ಬಳಿಕ ಸಹನಾಳದ್ದೆ ಚಿಂತೆ. ಆಕೆ ಹೇಗಿದ್ದಾಳೋ, ಏನೋ? ಏನು ಮಾಡುತ್ತಿದ್ದಾಳೆ ಎನ್ನುವ ಆತಂಕ ಆಕೆಗೆ. ಇನ್ನೂ ಕಂಠಿ ಜೊತೆ ಬೈಕ್‌ನಲ್ಲಿ ಹೋಗುತ್ತಿರಬೇಕಾದರೂ ಸ್ನೇಹಾಗೆ ತನ್ನ ತಾಯಿಯದ್ದೆ ಚಿಂತೆ. ಅವ್ವನ ಆರೋಗ್ಯ ಇತ್ತೀಚೆಗೆ ಸುಧಾರಿಸಿತ್ತು. ಆದರೆ, ಇದೀಗ ವಾಪಸ್ ತಲೆ ತಿರುಗಿ ಬಿದ್ದಿದ್ದಾಳೆ ಎಂದು ಬಹಳ ಬೇಸರ ಮಾಡುತ್ತಿರುತ್ತಾಳೆ.

ಪರೀಕ್ಷೆಯಲ್ಲಿ ತೇರ್ಗಡೆಯಾದ ಸ್ನೇಹಾ

ಕಂಠಿ ಬೈಕ್ ಸ್ಟಾಪ್ ಮಾಡಿ ಸ್ನೇಹಾ ಬನ್ನಿ ಕಾಫಿ ಕುಡಿಯೋಣ ಎಂದು ಹೇಳುತ್ತಾನೆ. ಸ್ನೇಹಾ ನನಗೆ ಎನು ಬೇಡ ಎಂದು ಹೇಳುತ್ತಾರೆ. ಆ ಕೂಡಲೇ ಸ್ನೇಹಾ ಪರೀಕ್ಷೆ ರಿಸಲ್ಟ್ ಬರುತ್ತದೆ. ತಾನು ಕಷ್ಟ ಪಟ್ಟು ಓದಿದ್ದಕ್ಕೆ ಒಳ್ಳೆಯ ಪ್ರತಿಫಲವೇ ಸಿಗುತ್ತದೆ ಎನ್ನುವ ಆಲೋಚನೆಯಲ್ಲಿ ಇರುತ್ತಾಳೆ. ಇನ್ನೂ ರಿಸಲ್ಟ್ ನೋಡಿ ಸ್ನೇಹಾಗೆ ಬಹಳ ಖುಷಿ ಆಗುತ್ತದೆ. ತಾನು ಪಾಸ್ ಆಗಿರುವ ವಿಚಾರ ಅಮ್ಮನಿಗೆ ಹೇಳಬೇಕು ಎಂದುಕೊಂಡಿರುತ್ತಾರೆ. ಆದರೆ, ತಾಯಿ ಮಲಗಿರಬಹುದು ಎಂದು ಸುಮಾ ಮೊಬೈಲಿಗೆ ಸ್ನೇಹಾ ಕರೆ ಮಾಡುತ್ತಾಳೆ.

ಕಂಠಿ ಮಾತಿಗೆ ಪೆಚ್ಚಾದ ಸ್ನೇಹಾ

ಆದರೆ ಆಕೆ ಫೋನ್ ರಿಸೀವ್ ಮಾಡುವುದಿಲ್ಲ. ಅಮ್ಮನಿಗೆ ಹೇಗೆ ವಿಚಾರ ತಿಳಿಸುವುದು ಎಂದು ಆಲೋಚನೆ ಮಾಡುತ್ತಿರುತ್ತಾಳೆ. ಆಗ ಕಂಠಿಗೆ ಈ ಮಾತನ್ನು ಹೇಳುತ್ತಾಳೆ. ಇವತ್ತು ನಾನು ಇಡೀ ದಿನ ನಿಮ್ಮ ಜೊತೆಗೆ ಇರಬೇಕು ಎಂದು ಕೊಂಡಿದ್ದೇನೆ. ಹಾಗೆ ನಾನು ನಿಮ್ಮನ್ನು ಬಹಳ ನೋಯಿಸಿದ್ದೇನೆ ಎಂದು ಸ್ನೇಹಾ ಹೇಳುತ್ತಾಳೆ.

More from Filmibeat

English summary
Puttakkana Makkalu serial August 12th episode update
Read more about: serial filmibeat original poorva
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X