Puttakkana Makkalu:ಮಗ ಸೊಸೆಯನ್ನು ಹೊರ ಹಾಕಿದ ಮಾಧವ; ದತ್ತನ ಮನೆಗೆ ಬಂದ ತುಳಸಿ
ವರಮಹಾಲಕ್ಷ್ಮೀ ಯ ದಿನದಂದೇ ಅಭಿ ಹಾಗೂ ಅವಿ ಮಧ್ಯೆ ಸಂಘರ್ಷ ಶುರು ಆಗಿದೆ. ಅಭಿ ಅವಿಯ ಹೆಂಡತಿಯ ಮೇಲೆಯೇ ಹೆಂಡತಿಯ ಮಾತು ಕೇಳಿ ಅವಾಚ್ಯವಾಗಿ ನಿಂದನೆ ಮಾಡುತ್ತಾರೆ. ಇದೆಲ್ಲವನ್ನೂ ಕೇಳಿದ ಅವಿಗೆ ಅಭಿ ಮೇಲೆ ಬಹಳ ಸಿಟ್ಟು ಬರುತ್ತದೆ. ಅಭಿ ನೀನು ಮಾಡುತ್ತಿರುವ ಕೆಲಸ ಸರಿ ಇಲ್ಲ ಎಂದಾಗ ಅಭಿ ಕೊಂಚ ಜೋರಾಗಿಯೇ "ಅತ್ತಿಗೆ ನೀವು ಈ ರೀತಿ ಎಲ್ಲಾ ಕೆಟ್ಟ ಕೆಲಸ ಮಾಡುವುದರಿಂದಲೇ ನಿಮಗೆ ಮಕ್ಕಳಾಗುತ್ತಿಲ್ಲ. ನೀವು ಈ ರೀತಿ ಮಾಡಬಾರದಿತ್ತು ಎಂದು ಜೋರಾಗಿ ಕಿರುಚುತ್ತಾನೆ.
ಇದನ್ನು ನೋಡಿದ ಅವಿ ಅಭಿಯ ಕೆನ್ನೆಗೆ ಹೊಡೆಯುತ್ತಾನೆ. ಇದನ್ನು ನೋಡಿದ ಮಾಧವ ಅವಿಯನ್ನು ಮನೆಯಿಂದ ಆಚೆ ಹೋಗಲು ಹೋಗುತ್ತಾನೆ. ಇದನ್ನು ಕೇಳಿ ತುಳಸಿ ಈ ರೀತಿ ನಿರ್ಧಾರ ತೆಗೆದುಕೊಳ್ಳುವುದು ಇಲ್ಲ. ಇದರಲ್ಲಿ ಅವಿ ಮಾಡಿದ ತಪ್ಪು ಏನಿಲ್ಲ. ಅಭಿ ಮಾಡಿದ್ದು ತಪ್ಪು ಇದೆಲ್ಲವನ್ನೂ ನೀವು ತಿಳಿಸಿ ಹೇಳಬೇಕಾಗಿ ಇತ್ತು ಎಂದು ಹೇಳುತ್ತಾರೆ.

ತುಳಸಿ ಹೇಳಿದ ಮಾತಿಗೆ ಮಾಧವ "ಬೇಕಾದರೆ ನೀವು ಈ ಮನೆ ಬಿಟ್ಟು ಹೋಗಬಹುದು. ಆದರೆ ನನ್ನ ಮಕ್ಕಳಿಗೆ ಹಾಗೆ ಮಾಡಿ ಹೀಗೆ ಮಾಡಿ ಎಂದು ಯಾರು ಅಡ್ವೈಸ್ ಮಾಡಲು ಬರಬೇಡಿ" ಎಂದು ಹೇಳುತ್ತಾರೆ. ಇದನ್ನು ಕೇಳಿದ ತುಳಸಿ ಕೂಡ ಅವಿ ಹಾಗೂ ಪೂರ್ಣಿಮಾ ಜೊತೆ ಮನೆ ಬಿಟ್ಟು ಹೋಗಲು ರೆಡಿ ಆಗುತ್ತಾಳೆ. ಇದೆಲ್ಲವನ್ನೂ ನೋಡಿದ ಮಾಧವ ಅವರನ್ನು ತಡೆಯದೆ ಸೀದಾ ಒಳಗೆ ಹೋಗಿ ಬಿಡುತ್ತಾನೆ.
ದತ್ತನ ಮಾತಿಗೆ ತುಳಸಿ ಸಮಾಧಾನ
ಇನ್ನೂ ತುಳಸಿ, ಅವಿ ಹಾಗೂ ಪೂರ್ಣಿಮಾನನ್ನು ಕರೆದುಕೊಂಡು ನೇರವಾಗಿ ದತ್ತನ ಮನೆಗೆ ಹೋಗುತ್ತಾಳೆ. ತನ್ನ ಮಾವನನ್ನು ನೋಡಿ ತುಳಸಿ "ಮಾವ ಸ್ವಲ್ಪ ದಿನಗಳ ಕಾಲ ನಿಮ್ಮ ಮನೆಯಲ್ಲಿ ನಾವು ಇರಬಹುದಾ?" ಎಂದು ಕೇಳುತ್ತಾಳೆ. ಇದನ್ನು ಕೇಳಿದ ದತ್ತ "ಯಾಕಮ್ಮ ಹೀಗೆ ಹೇಳುತ್ತೀಯಾ? ನೀನು ಈ ಮನೆಯವಳು ಇಲ್ಲಿಗೆ ನೀನು ಯಾವಾಗಲೂ ಬರಬಹುದು. ಎಷ್ಟು ದಿನ ಕೂಡ ಇದ್ದು ಹೋಗಬಹುದು" ಎಂದು ಹೇಳುತ್ತಾರೆ.

ಅಭಿ ಮಾತಿಗೆ ಅವಿ ಬೇಸರ
ಇದನ್ನು ಕೇಳಿದ್ದ ತುಳಸಿ, ಮಾವ ನಾನು ಮಾತ್ರ ಅಲ್ಲ "ನನ್ನ ಜೊತೆ ನನ್ನ ಮಗ ಹಾಗೂ ನನ್ನ ಸೊಸೆ ಕೂಡ ಇಲ್ಲಿ ಇರುತ್ತಾರೆ. ಅದಕ್ಕೆ ನೀವು ಒಪ್ಪಿಗೆ ಕೊಡಬೇಕು" ಎಂದು ಹೇಳುತ್ತಾರೆ. ಇದನ್ನು ಕೇಳಿದ ದತ್ತನಿಗೆ ಏನು ಮಾಡಬೇಕು ಎಂದು ದಿಕ್ಕು ತೋಚದ ಹಾಗೆ ಆಗುತ್ತದೆ. ಹಾಗೆಯೇ ಅವರೆಲ್ಲರನ್ನೂ ಮನೆಯ ಒಳಗೆ ಕರೆದು ಅಲ್ಲಿ ಏನಾಗಿದೆ ಎನ್ನುವುದನ್ನು ವಿವರವಾಗಿ ತಿಳಿದುಕೊಳ್ಳುತ್ತಾರೆ. ಇನ್ನೂ ದತ್ತನ ಮನೆಯಲ್ಲಿ ಕೂಡ ವರಮಹಾಲಕ್ಷ್ಮಿ ಹಬ್ಬ ಬಹಳ ವೈಭವದಿಂದ ನಡೆಯುತ್ತದೆ.
ಸಂಧ್ಯಾಗೆ ಸಾಲಗಾರರ ಕಾಟ
ಆ ವೇಳೆ ಸಂಧ್ಯಾನಿಗೆ ಸಾಲಗಾರರ ಕಾಟ ಬೇರೆ. ಸಂಧ್ಯಾ ತೆಗೆದುಕೊಂಡಿರುವ ಸಾಲವನ್ನು ಮರುಪಾವತಿ ಮಾಡಬೇಕು ಎಂದು ಸಾಲ ಕೊಟ್ಟಿರುವವರು ಸಂಜೆಯಾಗಿ ಕರೆ ಮಾಡಿ ಪೀಡಿಸುತ್ತಾನೆ. ಹಾಗೆಯೇ ಅದಕ್ಕೆ ಒಂದು ಡೇಟ್ ಕೂಡ ನೀಡಿರುತ್ತಾನೆ. ಇದನ್ನು ಕೇಳಿದ ಸಂಧ್ಯಾ ಭಯದಿಂದ ತತ್ತರಿಸಿ ಹೋಗುತ್ತಾಳೆ. ಏಕೆಂದರೆ ಆಕೆಯ ಬಳಿ ಹಣ ಇರುವುದಿಲ್ಲ. ಇನ್ನು ಊಟ ಮಾಡುವಾಗ ತಂದೆ ಮೌನವಾಗಿ ಕುಳಿತಿರುವುದನ್ನು ನೋಡಿದ ಸಮರ್ಥ್ ಕೇಳುತ್ತಾನೆ. "ಸಂಧ್ಯಾ ಯಾಕೆ ವರಮಹಾಲಕ್ಷ್ಮಿ ಹಬ್ಬಕ್ಕೆ ಏನಾದರೂ ತೆಗೆದುಕೊಳ್ಳುವುದು. ನಾನು ನಿನಗೆ ಹಣ ಕೊಡುತ್ತೇನೆ. ನೀನು ಏನು ವರಿ ಮಾಡಬೇಡ ಊಟ ಮಾಡು" ಎಂದಾಗ ಸಂಧ್ಯಾ ಕೆಲಸಕ್ಕೆ ಹೋಗುವ ವಿಚಾರವನ್ನು ಪ್ರಸ್ತಾಪ ಮಾಡುತ್ತಾಳೆ.


Click it and Unblock the Notifications











