Puttakkana Makkalu:ಪುಟ್ಟಕ್ಕನ ಹುಡುಕಲು ಹೊರಟ ಮಗಳು; ಚೋಟು ಮಾತಿಗೆ ಸಹನಾ ಕಕ್ಕಾಬಿಕ್ಕಿ

By ಪೂರ್ವ

ಸಹನಾ ಹೋಟೆಲ್‌ನಲ್ಲಿ ಇಲ್ಲದ ಸಂದರ್ಭದಲ್ಲಿ ಪುಟ್ಟಕ್ಕ ಎಲ್ಲಾ ಕಸ್ಟಮರ್ಸ್ ಅನ್ನು ಸಂಭಾಳಿಸಿದ್ದರು. ಈ ವೇಳೆ ಪುಟ್ಟಕ್ಕಗೆ ನೂರಾರು ಆಲೋಚನೆ. ಅದರಲ್ಲಿ ಒಂದು ತನ್ನ ಮಗಳು ಸಹನಾ ಬದುಕಿದ್ದಾಳೆ. ಆಕೆ ಸತ್ತಿಲ್ಲ ಎನ್ನುವುದೇ ಬಹಳ ದೊಡ್ಡ ನಂಬಿಕೆ. ಸಹನಾ ಈಗ ಸಾಲ ತೆಗೆದುಕೊಳ್ಳುವ ನೆಪದಲ್ಲಿ ಕಟುಕರ ಕೈಗೆ ಸಿಕ್ಕಿ ಹಾಕಿಕೊಂಡಿದ್ದಾಳೆ.

ಸಹನಾಗೆ ತನ್ನ ಅವ್ವ ತನ್ನನ್ನು ಹುಡುಕಿಕೊಂಡು ಬಂದಿರುವ ವಿಚಾರ ತಿಳಿದಿಲ್ಲ. ಪುಟ್ಟಕ್ಕ ಸಹನಾ ಕ್ಯಾಂಟಿನ್‌ನಲ್ಲಿ ಕೆಲಸ ಮಾಡಿ, ಅಲ್ಲಿಂದ ಹೋರಾಡಬೇಕಾದರೆ ಆ ಅಂಗಡಿಯ ಓನರ್ ಹಣ ಕೊಡಲು ಬರುತ್ತಾರೆ. ಇದನ್ನು ನೋಡಿ ಪುಟ್ಟಕ್ಕ "ನಾನು ಹಣಕ್ಕಾಗಿ ಈ ಕೆಲಸ ಮಾಡಲಿಲ್ಲ. ನಾನು ನಮ್ಮ ಊರಲ್ಲಿ ಹೋಟೆಲ್ ಶುರು ಮಾಡಿಕೊಂಡಿದ್ದೆ. ಆ ದಿನ ನೆನಪಿಗೆ ಬಂತು. ಹಾಗೆಯೇ ನಿಮಗೆ ಸಹಾಯ ಮಾಡಬೇಕು ಎಂದು ಮಾಡಿದೆ. ನನಗೆ ಈ ಹಣದ ಅಗತ್ಯ ಇಲ್ಲಮ್ಮ. ನೀವೇ ಇಟ್ಟುಕೊಳ್ಳಿ. ಆದರೆ, ನಾನು ಈ ಊರಿಗೆ ಬಂದಿದ್ದು ನನ್ನ ಮಗಳನ್ನು ಹುಡುಕಿಕೊಂಡು. ನನ್ನ ಮಗಳು ನನಗೆ ಸಿಕ್ಕರೆ ಅದೇ ಸಾಕು" ಎನ್ನುತ್ತಾರೆ.

Puttakkana Makkalu serial August 23rd Episode update

ನನ್ನ ಮಗಳ ಫೋಟೋ ತೋರಿಸುತ್ತೇನೆ. ಆಕೆಯನ್ನು ನೀವು ನೋಡಿದ್ದರೆ ಹೇಳಿ ಎಂದು ಫೋಟೋಗಾಗಿ ತಡಕಾಡುತ್ತಾರೆ. ಆದರೆ, ಫೋಟೋ ಸಿಗುವುದಿಲ್ಲ. ಪುಟ್ಟಕ್ಕಗೆ ಆತಂಕ ಹೆಚ್ಚಾಗುತ್ತದೆ. ನನ್ನ ಮಗಳ ಫೋಟೋ ಎಲ್ಲೋ ಕಳೆದುಹೋಗಿದೆ. ನಾನು ಅದನ್ನು ತೆಗೆದುಕೊಂಡು ಬರುತ್ತೇನೆ ಎಂದು ಹೇಳಿ ಅಲ್ಲಿಂದ ಹೊರಟು ಹೋಗುತ್ತಾರೆ. ಈ ಮಾತನ್ನು ಕೇಳಿ ಚೋಟುಗೆ ಕೊಂಚ ಅನುಮಾನ ಬರುತ್ತದೆ. ಸಹನಾ ಅಕ್ಕನ ಫೋಟೋ ಹಾಗೂ ಪುಟ್ಟಕ್ಕಗೂ ಸಾಕಷ್ಟು ಸಾಮ್ಯತೆ ಇರುವ ಹಾಗೆ ಅನ್ನಿಸಿತು. ಪುಟ್ಟಕ್ಕ ಹೋದ ಕೂಡಲೇ ಮ್ಯಾಕ್ಸ್‌ವೆಲ್ ಹಾಗೂ ಸಹನಾ ಬರುತ್ತಾರೆ.

ಸಹನಾಗೆ ತಾಯಿ ಬಗ್ಗೆ ಹೇಳಿದ ಚೋಟು

ಸಹನಾ ಬಳಿ ಚೋಟು ಎಲ್ಲಾ ವಿಚಾರ ಹೇಳುತ್ತಾನೆ. "ಅಕ್ಕ ನೀನು ಇಲ್ಲದ ವೇಳೆ ಬಹಳಷ್ಟು ಜನರು ಈ ಹೋಟೆಲ್‌ಗೆ ಬಂದರು. ನಮಗೆ ಏನು ಮಾಡುವುದಕ್ಕೂ ಕೈ ಆಡಲಿಲ್ಲ. ಆಗ ಒಬ್ಬರು ಬಂದು ನಿನ್ನ ಹಾಗೆಯೇ ಕೆಲಸ ಮಾಡಿ ಕೊಟ್ಟರು. ಅವರನ್ನು ನೋಡಿದರೆ ನಿಮ್ಮ ಅಮ್ಮ ಎಂದು ಅನ್ನಿಸುತ್ತದೆ. ನೀನು ಹೇಗೆ ಕೆಲಸದಲ್ಲಿ ರಾಕ್ಷಸಿಯೋ. ಆದೆ ರೀತಿ ಅವರು ಕೂಡ ಕೆಲಸದಲ್ಲಿ ಬಹಳ ದೊಡ್ಡ ರಾಕ್ಷಸಿ" ಎನ್ನುತ್ತಾನೆ.

Puttakkana Makkalu serial August 23rd Episode update

ಅವ್ವನನ್ನು ಹುಡುಕುತ್ತಾ ಹೊರಟ ಸಹನಾ

ಅವರು ತನ್ನ ಮಗಳ ಫೋಟೋ ಇನ್ನೇನು ತೋರಿಸಬೇಕಾಗಿತ್ತು. ಆದರೆ ಆಕೆಯ ಫೋಟೋ ಕಳೆದು ಹೋಗಿದೆಯೆಂದು ಅತ್ತ ಕಡೆ ಹೋದರು. ಅವರು ನೋಡಲು ನಿಮ್ಮ ಅವ್ವನ ಹಾಗೆ ಇದ್ದರು ಎಂದು ಹೋಟೆಲ್‌ನಲ್ಲಿ ಇರುವ ಫೋಟೋ ನೋಡಿ ಹೇಳುತ್ತಾನೆ. ಆಗ ಸಹನಾಗೆ ಶಾಕ್ ಆಗುತ್ತದೆ. ತನ್ನ ಅವ್ವ ಮನೆ ಬಿಟ್ಟು ನನ್ನ ಹುಡುಕುತ್ತಿದ್ದಾಳೆ. ಆಕೆಗೆ ನಾನು ಎಂದರೆ ಬಹಳ ಇಷ್ಟ. ಇಂತಹ ವಯಸ್ಸಿನಲ್ಲಿ ಅವ್ವಗೆ ನಾನು ಎಷ್ಟು ಕಷ್ಟ ಕೊಟ್ಟುಬಿಟ್ಟೆ. ಆಕೆಯನ್ನು ಎಲ್ಲಿ ಎಂದು ಹುಡುಕಲಿ ಎಂದು ಅಳುತ್ತಾ ತನ್ನ ತಾಯಿ ಹೋದ ಸ್ಥಳದಲ್ಲಿ ಹುಡುಕಾಟ ಶುರು ಮಾಡುತ್ತಾಳೆ. ಆದರೆ, ಪುಟ್ಟಕ್ಕ ಸಿಗುವುದಿಲ್ಲ. ಇನ್ನೂ ಹೋಟೆಲ್‌ಗೆ ಬರುವಾಗ ಪೊಲೀಸರ ಬಳಿ ಪುಟ್ಟಕ್ಕನ ಫೋಟೋ ತೋರಿಸಿ ಕೇಳಿದಾಗ ಅವರು "ಆಕೆ ಬೆಳಗ್ಗೆ ದೇವಾಲಯದ ಬಳಿ ಬಂದು ಮಲಗಿದ್ದರು" ಎಂದು ಹೇಳುತ್ತಾರೆ.

ಪೊಲೀಸಪ್ಪನ ಮಾತು ಕೇಳಿ ಬೆದರಿದ ಸಹನಾ

ಪೊಲೀಸರ ಮಾತು ಕೇಳಿ ಸಹನಾಗೆ ದಿಕ್ಕೇ ತೋಚದ ಹಾಗಾಗುತ್ತದೆ. ತನ್ನ ತಾಯಿ ಎಲ್ಲಿದ್ದಾಳೋ, ಇಷ್ಟು ದೊಡ್ಡ ಸಿಟಿಯಲ್ಲಿ ಆಕೆಯನ್ನು ಹೇಗೆ ಹುಡುಕಲಿ ಎಂದು ಅಳುತ್ತಾಳೆ. ಇನ್ನೂ ಸ್ನೇಹಾಗೆ ಅಮ್ಮ ಕಳೆದು ಹೋಗಿರುವ ವಿಚಾರ ತಿಳಿಯಬೇಕು. ಆಕೆಗೆ ಅದ್ಯಾವ ವಿಚಾರವೂ ತಿಳಿದಿಲ್ಲ. ಆಕೆ ತಾನು ಡಿಸಿ ಆಗಬೇಕು ಎಂದು ಕನಸು ಹೊತ್ತು ಇಂಟರ್‌ವ್ಯೂಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾಳೆ. ಸುಮಾ ತಾಯಿ ಜೊತೆಯಲ್ಲಿ ಇಲ್ಲದನ್ನು ಕಂಡು ಗಾಬರಿ ಆಗಿದ್ದಾಳೆ. ಮುಂದೇನು ಆಗುತ್ತೆ ಅನ್ನೋದು ನೋಡಬೇಕಿದೆ.

More from Filmibeat

English summary
Puttakkana Makkalu serial August 23rd Episode update:
Read more about: serial poorva filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X