Puttakkana Makkalu:ಪುಟ್ಟಕ್ಕಗೆ ಕೊನೆಗೂ ಸಿಕ್ಕಿದ ಸಹನಾ; ಮಗಳನ್ನು ನೋಡಿ ಬಿಗಿದಪ್ಪಿಕೊಂಡ ಪುಟ್ಟಕ್ಕ

By ಪೂರ್ವ

ಪುಟ್ಟಕ್ಕ ತನ್ನ ಮಗಳು ಸಹನಾಳನ್ನು ಹುಡುಕಿಕೊಂಡು ದೇವಸ್ಥಾನದ ಬಳಿ ಹೋಗುತ್ತಾರೆ. ಅಲ್ಲಿ ದೇವರ ದರ್ಶನ ಮಾಡಿ ತನ್ನ ಮಗಳ ಹೆಸರಿನಲ್ಲಿ ಅರ್ಚನೆ ಮಾಡಿ ಪುಟ್ಟಕ್ಕ ದೇವರ ಮೊರೆ ಹೋಗಿದ್ದಾರೆ. "ನನ್ನ ಮಗಳ ಫೋಟೋ ಇದೀಗ ಕಳೆದು ಹೋಗಿದೆ. ನಾನು ಹೇಗೆ ನನ್ನ ಮಗಳನ್ನು ಹುಡುಕಲಿ. ಆಕೆಯ ಜೊತೆ ನಾನು ಹೇಗೆ ಕಾಲ ಕಳೆಯಲಿ" ಎಂದು ದೇವರ ಬಳಿ ಕೇಳುತ್ತಿರುತ್ತಾರೆ. ನನ್ನ ಮಗಳು ನನಗೆ ಆದಷ್ಟು ಬೇಗ ಸಿಗಲಿ ಎಂದು ದೇವರ ಬಳಿ ಬೇಡುತ್ತಿರುವಾಗಲೇ ಕಂಠಿ ಹಾಗೂ ಆತನ ಗೆಳೆಯರು ಆ ದೇವಾಲಯಕ್ಕೆ ಬರುತ್ತಾರೆ.

ಅಲ್ಲಿ ಕಂಠಿಯ ಗೆಳೆಯರು ಪುಟ್ಟಕ್ಕನನ್ನು ನೋಡುತ್ತಾರೆ. ಅಣ್ಣ ಅಲ್ಲಿ ನೋಡಿ ಅವ್ವ ಇದ್ದಾರೆ ಎಂದು ಹೇಳುತ್ತಾರೆ. ಆಗ ಕಂಠಿ, ಪುಟ್ಟಕ್ಕ ಇರುವ ಕಡೆ ನೋಡುತ್ತಾನೆ. ಪುಟ್ಟಕ್ಕ ದೇವರ ಬಳಿ ಪ್ರಾರ್ಥನೆ ಮಾಡುತ್ತಿರುವುದನ್ನು ನೋಡಿ ಕಂಠಿಗೆ ಹೋದ ಜೀವ ಮತ್ತೆ ಬಂದ ಹಾಗೆ ಆಗುತ್ತದೆ. ಇನ್ನು ಅತ್ತೆಯನ್ನು ನೋಡಿದ ಖುಷಿಯಲ್ಲಿ ಕಂಠಿ ಹೋಗಿ ಪುಟ್ಟಕ್ಕನ ಬಳಿ ಮಾತನಾಡುತ್ತಾನೆ. "ಅತ್ತೆ ಯಾಕೆ ಈ ರೀತಿ ಮಾಡಿದ್ದೀರಿ" ಎಂದು ಕೇಳುತ್ತಾನೆ. ಪುಟ್ಟಕ್ಕಗೆ ಕಂಠಿಯನ್ನು ನೋಡಿ ಶಾಕ್ ಆಗುತ್ತೆ. "ನಾನು ಸಹನಾ ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದೇನೆ. ಆದರೆ ನನ್ನ ಮಗಳು ನನಗೆ ಇಷ್ಟು ದೊಡ್ಡ ಸಿಟಿಯಲ್ಲಿ ಹುಡುಕಲು ಬಹಳ ಕಷ್ಟ ಆಗುತ್ತಿದೆ" ಎಂದು ಪುಟ್ಟಕ್ಕ ಹೇಳುತ್ತಾರೆ.

Puttakkana Makkalu serial August 24th Episode

"ನನ್ನ ಸಹನಾ ಖಂಡಿತವಾಗಿಯೂ ಬದುಕಿದ್ದಾಳೆ. ಆದರೆ, ಆಕೆಯನ್ನು ಹುಡುಕಬೇಕಷ್ಟೇ. ಆಕೆ ಫೋನ್‌ನಲ್ಲಿ ನನ್ನ ಬಳಿ ಮಾತನಾಡಿದಳು. ಆದರೆ, ನಾನು ಆ ದಿನ ನಿಮ್ಮ ಬಳಿ ಏನು ಹೇಳಲಿಲ್ಲ. ಇದೀಗ ನಾನು ಹೇಳುತ್ತಿದ್ದೇನೆ. ನನಗೆ ತುಂಬಾ ಬೇಸರ ಆಗುತ್ತಿದೆ. ನನ್ನ ಮಗಳು ನನಗೆ ಬೇಕು" ಎಂದು ಅಳುತ್ತಾರೆ. ಆಗ ಕಂಠಿ ಅತ್ತೆಗೆ ಸಮಾಧಾನ ಹೇಳುತ್ತಾನೆ. ಇನ್ನೂ ಅದೇ ದೇವಸ್ಥಾನಕ್ಕೆ ಸಹನಾ ಕೂಡ ಬರುತ್ತಾಳೆ. ಸಹನಾ ಹಾಗೂ ಮ್ಯಾಕ್ಸ್‌ವೆಲ್, ಚೋಟು ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕುತ್ತಿರುತ್ತಾರೆ. ಪುಟ್ಟಕ್ಕಗೆ ತನ್ನ ಮಗಳು ಈ ದೇವಸ್ಥಾನ ಬಂದಿದ್ದಾಳೆ ಎನ್ನುವುದು ಗೊತ್ತಿರುವುದಿಲ್ಲ.

ದೇವರ ಮೊರೆ ಹೋದ ಪುಟ್ಟಕ್ಕ

ಇನ್ನೂ ಪುಟ್ಟಕ್ಕ ದೇವಸ್ಥಾನದ ಹೊರ ಭಾಗ ಕುಳಿತುಕೊಂಡಿರಬೇಕಾದರೆ, ಸಹನಾ ಹಾಗೂ ಆಕೆಯ ಗೆಳೆಯರು ದೇವಸ್ಥಾನದಿಂದ ಹೊರಗಡೆ ಬರುತ್ತಿರುತ್ತಾರೆ. ಇನ್ನು ಮ್ಯಾಕ್ಸ್‌ವೆಲ್ ದೇವಸ್ಥಾನದ ಚಿತ್ರೀಕರಣ ಮಾಡುತ್ತಿರುವ ವೇಳೆ ಪುಟ್ಟಕ್ಕ ಇರುವುದು ಆತನಿಗೆ ಕಾಣಿಸುತ್ತದೆ. ಆ ಕೂಡಲೇ ಸಹನಾ ಬಳಿ ಯುವರ್ ಮದರ್ ಎಂದು ಮ್ಯಾಕ್ಸ್‌ವೆಲ್ ಹೇಳುತ್ತಾನೆ. ಆಗ ಸಹನಾ ತನ್ನ ಅವ್ವನನ್ನು ನೋಡಿ ಅವ್ವ ಎಂದು ಹೇಳುತ್ತಾಳೆ. ಪುಟ್ಟಕ್ಕ ಸಹನಾಳನ್ನು ನೋಡಿ ಬಹಳ ಖುಷಿ ಪಟ್ಟು ಅಪ್ಪಿ ಮುದ್ದಾಡುತ್ತಾಳೆ.

Puttakkana Makkalu serial August 24th Episode

ಮಗಳ ಬರುವಿಕೆಗಾಗಿ ಕಾಯುತ್ತಿರುವ ಜೀವ ಪುಟ್ಟಕ್ಕ

"ನನ್ನ ಮಗಳು ಸತ್ತಿಲ್ಲ. ಆಕೆ ಬದುಕಿದ್ದಾರೆ ಎಂದು ನಾನು ಪದೇ ಪದೇ ಹೇಳುತ್ತಿದ್ದೆ. ಆದರೆ ನನ್ನ ಮಾತನ್ನು ಯಾರು ಕೂಡ ನಂಬಿಲ್ಲ. ಇದೀಗ ನನಗೆ ಸಮಾಧಾನ ಆಗಿದೆ. ನನ್ನ ಮಗಳು ಬದುಕಿದ್ದಾಳೆ ಎಂದು ಪುಟ್ಟಕ್ಕ ಖುಷಿಯಲ್ಲಿ ಹೇಳುತ್ತಾಳೆ. ಇದಕ್ಕಿಂತ ಮುಂಚೆ ಸಿಂಗಾರಮ್ಮ, ಸ್ನೇಹಾಗೆ ಕರೆ ಮಾಡಿ ಪುಟ್ಟಕ್ಕ ಕಾಣೆ ಆಗಿರುವ ಬಗ್ಗೆ ಹೇಳಿ ಆಕೆಯ ಗಮನ ಬೇರೆಡೆಗೆ ತಿರುಗುವ ಹಾಗೆ ಮಾಡಿದ್ದಾಳೆ. ಸಿಂಗಾರಮ್ಮ, ಬಂಗಾರಮ್ಮನ ಮನೆಯನ್ನು ಹೇಗಾದರೂ ಮಾಡಿ ನೆಲಸಮ ಮಾಡಬೇಕು. ಆಕೆಯ ಮನೆ ಮಂದಿಯನ್ನು ಬದುಕಲು ಬಿಡಬಾರದು ಎನ್ನುವ ಮನಸ್ಥಿತಿ ಇನ್ನೂ ಹಾಗೇ ಇದೆ.

ಸ್ನೇಹಾ ಹಾದಿಗೆ ಕಲ್ಲು ಹಾಕಲು ಯತ್ನ

ಇದೀಗ ಸಿಂಗಾರಮ್ಮ ಸ್ನೇಹಾ ಹಾದಿ ತಪ್ಪಿಸುತ್ತಿರುವುದು ಮಾತ್ರ ಸತ್ಯ. ಆಕೆ ಡಿಸಿ ಆಗಲೇಬಾರದು ಎಂದು ಆಕೆ ಷಡ್ಯಂತ್ರ ಹೂಡಿದ್ದಾಳೆ. ಇನ್ನೂ ನಂಜಮ್ಮನ ಪ್ಲಾನ್ ಕೂಡ ಉಲ್ಟಾ ಆಗಿದೆ. ವಸುವನ್ನು ಮನೆಗೆ ಕರೆದುಕೊಂಡು ಹೋಗಬೇಕು. ಆಕೆಯ ಮಗುವನ್ನು ಹೇಗಾದರೂ ಮಾಡಿ ಸಾಯಿಸಬೇಕು ಎಂದು ಹೊಂಚು ಹಾಕುತ್ತಿರುತ್ತಾಳೆ. ಇದಕ್ಕೆಲ್ಲ ಬಂಗಾರಮ್ಮನ ರೂಪದಲ್ಲಿರುವ ಸಿಂಗಾರಮ್ಮ ಆಸ್ಪದ ಕೊಟ್ಟರೂ, ಕಂಠಿ ಮಾತ್ರ ಖಡಕ್ ಆಗಿ ಯಾರು ಕೂಡಾ ನನ್ನ ಸೊಸೆಯನ್ನು ಎಲ್ಲಿಗೂ ಕರೆದುಕೊಂಡು ಹೋಗುವುದು ಬೇಡ ಎಂದು ಹೇಳುತ್ತಾನೆ.

More from Filmibeat

English summary
Puttakkana Makkalu serial August 24th Episode
Read more about: serial poorva filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X