Puttakkana Makkalu: ಕಾಳಿ ಕೈಗೆ ಸಿಕ್ಕಿಬಿದ್ದ ಸಹನಾ; ಮುಂದೇನು ಮಾಡುತ್ತಾನೆ ಕಾಳಿ?
ಕಾಳಿಗೆ ಸಹನಾ ಇರುವ ಜಾಗ ಗೊತ್ತಾಗಿದೆ. ಸಹನಾ ಪುಟ್ಟಕ್ಕನ ಕೈಗೂ ಸಿಕ್ಕಿದ್ದಾಳೆ ಎನ್ನುವುದು ಕೇವಲ ಭ್ರಮೆ ಅಷ್ಟೇ. ಆಕೆ ತಾನು ಏನಾದರು ಸಾಧಿಸಬೇಕು. ಇಲ್ಲವಾದರೆ ಖಂಡಿತವಾಗಿಯೂ ನಾನು ಯಾರಿಗೂ ಮುಖ ತೋರಿಸುವುದು ಇಲ್ಲ ಎಂದು ಶಪಥ ಹಾಕಿರುತ್ತಾಳೆ. ಇದೀಗ ಅಮ್ಮ ನೋಡಲು ಸಿಕ್ಕಿದ್ದಾರೆ. ಆದರೆ, ಆಕೆಯ ಜೊತೆ ಮಾತನಾಡಲು ಸಹನಾ ಹಿಂದೇಟು ಹಾಕಿದ್ದಾಳೆ. ಕಾರಣ ಇಷ್ಟೇ. ನಾನು ಎಲ್ಲಾದರೂ ಅಮ್ಮನ ಬಳಿ ಓಡೋಡಿ ಬಂದು ಮಾತನಾಡಿ ಬಿಟ್ಟರೆ, ಅಮ್ಮ ನನ್ನನ್ನು ಇಲ್ಲಿ ಮಾತ್ರ ಖಂಡಿತವಾಗಿಯೂ ಬಿಟ್ಟು ಹೋಗುವುದಿಲ್ಲ. ಆಕೆ ನನ್ನನ್ನು ಊರಿಗೆ ಕರೆದುಕೊಂಡು ಹೋಗುತ್ತಾಳೆ ಎಂದು ಆಕೆಗೆ ಗೊತ್ತಿದೆ.
ಆದ ಕಾರಣಕ್ಕೆ ಸಹನಾ ಅಮ್ಮನ ಎದುರು ಅಡಗಿ ಕುಳಿತಿದ್ದಾಳೆ. ಇನ್ನೂ ಕಂಠಿಯನ್ನು ನೋಡಿ ಸಹನಾಗೆ ಕೊಂಚ ಸಮಾಧಾನ ಆಗುತ್ತದೆ. "ಪುಣ್ಯಕ್ಕೆ ಅವ್ವ ಒಬ್ಬರೇ ಇಲ್ಲ. ಆಕೆಯ ಜೊತೆ ಕಂಠಿ ಅವರು ಇದ್ದಾರೆ" ಎಂದು ತನ್ನನ್ನು ತಾನು ಸಮಾಧಾನ ಮಾಡಿಕೊಳ್ಳುತ್ತಾಳೆ. ಪುಟ್ಟಕ್ಕನ ಕಣ್ಣಿಗೆ ಮ್ಯಾಕ್ಸ್ ವೆಲ್ ಕಾಣಿಸುತ್ತಾನೆ. ಆತನ ಜೊತೆ ಸಹನಾ ಬಗ್ಗೆ ವಿಚಾರಣೆ ಮಾಡುತ್ತಾಳೆ. ಆದರೆ ಸಹನಾ ಬಗ್ಗೆ ಒಂದು ಸುಳಿವು ಆತ ಬಿಟ್ಟು ಕೊಡುವುದಿಲ್ಲ.

ಇನ್ನು ಸಹನಾ ಎಲ್ಲೋ ಒಂದು ಕಡೆ ಇದ್ದಾಳೆ ಎಂಬುದು ಪುಟ್ಟಕ್ಕನ ನಂಬಿಕೆ. ಇನ್ನು ತನ್ನ ಅಳಿಯನ ಮಾತು ಕೇಳಿ ಪುಟ್ಟಕ್ಕ ಊರಿನತ್ತ ಮುಖ ಮಾಡುತ್ತಾಳೆ. ಪುಟ್ಟಕ್ಕಗೆ ಬಹಳ ಬೇಸರದಿಂದ ತನ್ನ ಮನೆಗೆ ಪುನಃ ಬರುತ್ತಾಳೆ. ನನ್ನ ಮಗಳು ಸಿಗುವವರೆಗೆ ನಾನು ಈ ಮನೆಗೆ ಬರುವುದಿಲ್ಲ ಎಂದು ಹೇಳಿದ್ದ ಪುಟ್ಟಕ್ಕ ಅದೇ ಮನೆಗೆ ಕಾಲಿ ಕೈಯಲ್ಲಿ ಬರುತ್ತಾಳೆ.
ಗಂಡನನ್ನು ಕಾಣದೆ ತೆಪ್ಪಗೆ ಕುಳಿತ ಪುಟ್ಟಕ್ಕ
ಪುಟ್ಟಕ್ಕಗೆ ಏನು ಮಾಡಬೇಕು ಎಂದು ದಿಕ್ಕು ತೋಚದ ಹಾಗೆ ಆಗುತ್ತದೆ. ಆ ವೇಳೆ ಕಂಠಿ ಹಾಗೂ ಸುಮಾ ಸುಮ್ಮನೆ ನಿಂತಿರುತ್ತಾರೆ. ಆದರೆ, ಗೋಪಾಲ ಎಲ್ಲಿಯೂ ಕಾಣಿಸುವುದಿಲ್ಲ. ಪುಟ್ಟಕ್ಕ ಗೋಪಾಲನ ಬಗ್ಗೆ ವಿಚಾರಣೆ ಮಾಡಿದಾಗ ಸುಮಾಗೆ ಬಹಳ ಬೇಸರ ಆಗುತ್ತೆ. "ಅವ್ವ ನೀನು ಇಲ್ಲದೆ ಇರುವಾಗ ಇಲ್ಲಿ ತುಂಬಾ ದೊಡ್ಡ ಕಥೆಯೇ ಆಗಿದೆ. ಬಂಗಾರಮ್ಮ ಅವರ ಮನೆಗೆ ಕಳ್ಳರು ನುಗ್ಗಿದ್ದರು. ಆ ಕಳ್ಳರು ಪೊಲೀಸರ ಬಳಿ ನಿನ್ನ ಹೆಸರನ್ನು ಹೇಳಿದ್ದಾರೆ." ಎಂದು ಹೇಳುತ್ತಾಳೆ.
ಆತಂಕದಲ್ಲಿರುವ ಪುಟ್ಟಕ್ಕ
"ಅದಕ್ಕೆ ಅವರು ನಿನ್ನನ್ನು ಹುಡುಕಿ ಇಲ್ಲಿಗೆ ಬಂದಿದ್ದಾರೆ. ನೀನು ಇಲ್ಲಿ ಇರದೆ ಇರುವುದನ್ನು ಕಂಡ ಪೊಲೀಸರು ಗೋಪಾಲ ಅವರನ್ನು ಕರೆದುಕೊಂಡು ಹೋದರು" ಎಂದು ಅಳುತ್ತಾಳೆ. ಆಗ ಪುಟ್ಟಕ್ಕಗೆ ಬಹಳ ಶಾಕ್ ಆಗುತ್ತೆ. "ಅಯ್ಯೋ ದೇವರೆ ಇದೇನು ಹೀಗೆಲ್ಲ ಆಗಿದೆ ಇಲ್ಲಿ" ಎಂದು ಆತಂಕಪಟ್ಟುಕೊಂಡಾಗ, ಕಂಠಿ "ಅವ್ವ ಏನು ಆಗುವುದಿಲ್ಲ. ಬನ್ನಿ ಆ ರೌಡಿಗಳು ಏನೋ ಪಿತೂರಿ ಮಾಡುತ್ತಿದ್ದಾರೆ. ಅಲ್ಲಿ ಏನು ಆಗಿದೆ ಎಂಬುವುದನ್ನು ನಾವು ನೋಡೋಣ" ಎಂದು ಪೊಲೀಸ್ ಸ್ಟೇಷನ್‌ಗೆ ಕರೆದುಕೊಂಡು ಹೋಗುತ್ತಾನೆ.

ಸಹನಾ ಮಾತಿಗೆ ಬೆಲೆಕೊಟ್ಟ ಕಾಳಿ
ಇತ್ತ ಸಹನಾ ಬಹಳ ಕಷ್ಟ ಪಟ್ಟು ಕೆಲಸ ಮಾಡುತ್ತಿರುತ್ತಾಳೆ. ಇನ್ನೇನು ಹೋಟೆಲ್ ಮುಚ್ಚಿ ಹೊರಡುವ ಸಮಯದಲ್ಲಿ ಕಾಳಿ ಆಕೆಯ ಹೋಟೆಲ್ ಬಳಿ ಬರುತ್ತಾನೆ. ಅಲ್ಲಿ ಸಹನಾ ನೋಡಿ ಕಾಳಿಗೆ ಶಾಕ್ ಆಗುತ್ತದೆ. ಕಾಳಿ ಬಂದಿದ್ದು ಸಹನಾಗೆ ಆತಂಕ ಆಗುತ್ತೆ. ಕಾಳಿ ಎಲ್ಲಾ ವಿಚಾರವನ್ನು ಮನೆಯಲ್ಲಿ ಹೇಳಿದರೆ, ತಾನು ಮಾಡಿದ ಪ್ಲಾನ್ ಎಲ್ಲಾ ಉಲ್ಟಾ ಆಗುತ್ತೆ. ಹಾಗೆ ಆಗಬಾರದು ಎಂದುಕೊಂಡು ಸಹನಾ, ಕಾಳಿಯ ಬಳಿ ಕೈ ಮುಗಿದು ಬೇಡಿಕೊಳ್ಳುತ್ತಾಳೆ. "ನಾನು ಇಲ್ಲಿ ಏನಾದರು ಸಾಧನೆ ಮಾಡಿದ ಬಳಿಕ ಊರಿಗೆ ಬರುತ್ತೇನೆ. ಅಲ್ಲಿಯವರೆಗೆ ನಾನು ಇಲ್ಲಿಯೇ ಇರಬೇಕು ಎಂದುಕೊಂಡಿದ್ದೇನೆ" ಎಂದು ಹೇಳುತ್ತಾಳೆ.


Click it and Unblock the Notifications











