Puttakkana Makkalu: ಹೊಸ ಜೀವನಕ್ಕೆ ಸಹನಾ ಅಡಿಪಾಯ; ಮುರಳಿ 2ನೇ ಮದ್ವೆಗೆ ಪುಟ್ಟಕ್ಕ ಮುನ್ನುಡಿ

By ಪೂರ್ವ

ಸಹನಾ ಈಗಾಗಲೇ ಹೊಸ ಹೋಟೆಲ್ ಅನ್ನ ತೆರೆದಿದ್ದಾಳೆ ಇನ್ನು ತೆರೆದ ವಾಹನದಲ್ಲಿಯೇ ಹೋಟೆಲ್ ಮಾಡಿಕೊಂಡ ಸಹನಾಗೆ ಮಾತ್ರ ಕಸ್ಟಮರ್ ಹೆಚ್ಚಾಗಿದ್ದಾರೆ. ಹಾಗೆಯೇ ಆಕೆಗೆ ಇರುವುದು ಒಂದೇ ಗುರಿ ನಾನು ಏನಾದರೂ ಜೀವನದಲ್ಲಿ ಸಾಧನೆ ಮಾಡಬೇಕು ಎನ್ನುವುದು ಆಕೆಯ ಗುರಿ. ಆದರೆ ಅದನ್ನು ಸಾಧಿಸದೆ ನಾನು ಮನೆಗೆ ಹೋಗುವುದಿಲ್ಲ. ಒಂದು ವೇಳೆ ಏನು ಸಾಧಿಸಲಾಗದೆ ಮನೆಗೆ ಹೋದರೆ ನನ್ನ ಕೈಲಾಗದವರು ಎಂದು ಎಲ್ಲರೂ ಹೇಳುತ್ತಾರೆ. ಆದ ಕಾರಣ ನಾನು ಹೋಟೆಲ್ ಉದ್ಯಮ ಮಾಡಿಕೊಂಡೆ ದೊಡ್ಡ ಸ್ಥಾನಕ್ಕೆ ಹೋಗಬೇಕು ಎಂದು ಸಹನಾ ಅಂದುಕೊಂಡಿದ್ದಾಳೆ.

ಹಾಗೆ ಆ ಕನಸಿಗೆ ಚೋಟು ಹಾಗೂ ಮ್ಯಾಕ್ಸ್‌ವೆಲ್ ಬೆಂಬಲವನ್ನು ನೀಡುತ್ತಾರೆ. ಇನ್ನು ಸಹನಾಳನ್ನು ಹೇಗಾದರೂ ಮಾಡಿ ನನ್ನವಳು ಮಾಡಿಕೊಳ್ಳಬೇಕು ಎನ್ನುವ ಸಂಚನ್ನು ಗೂಂಡಾ ಮಾಡುತ್ತಲೇ ಇರುತ್ತಾನೆ. ಇನ್ನೂ ಸಿಂಗಾರಮ್ಮ ಮಾಡಿದ ತಂತ್ರಕ್ಕೆ ಪುಟ್ಟಕ್ಕ ಬಲಿ ಆಗುತ್ತಿದ್ದಳು. ಆದರೆ, ಅದನ್ನು ತಪ್ಪಿಸಿದ್ದು ಮಾತ್ರ ಕಂಠಿ. "ನನ್ನ ಅತ್ತೆ ಯಾವ ತಪ್ಪು ಮಾಡಿಲ್ಲ. ಆಕೆ ತಪ್ಪು ಮಾಡಿದ್ದಾಳೆ ಎಂದು ಯಾರು ಹೇಳಿದರು" ಎಂದು ಜೋರಾಗಿಯೇ ಪೊಲೀಸ್ ಬಳಿ ಕೇಳುತ್ತಾನೆ. ಆ ಬಳಿಕ ತನ್ನ ಅತ್ತೆಯನ್ನು ದೋಷ ಮುಕ್ತರನ್ನಾಗಿ ಮಾಡಿ ಅಲ್ಲಿಂದ ಕರೆದುಕೊಂಡು ಬರುತ್ತಾನೆ.

Puttakkana Makkalu serial August 28th Episode

ಇನ್ನೂ ಅಷ್ಟು ಹೊತ್ತಿಗೆ ಮುರಳಿ ಹಾಗೂ ವಿನುತ ಟೀಚರ್ ಕೂಡ ಪುಟ್ಟಕ್ಕನ ಮನೆಗೆ ಬರುತ್ತಾರೆ. ಮುರಳಿ ಸ್ಥಿತಿಯನ್ನು ನೋಡಿದ ಪುಟ್ಟಕ್ಕ ಮರುಗುತ್ತಾರೆ. ಇನ್ನೂ ಪುಟ್ಟಕ್ಕ ಮುರಳಿ ಯೋಗ ಕ್ಷೇಮ ವಿಚಾರಣೆ ಮಾಡುತ್ತಾಳೆ. ಹಾಗೆಯೇ "ಸಹನಾ ಬದುಕಿದ್ದಾಳೆ ಎನ್ನುವ ಆಸೆಯನ್ನು ನಾನು ಬಿಟ್ಟಿದ್ದೇನೆ. ಆಕೆ ಬದುಕಿದ್ದಾಳೆ ಎಂದು ನಾನು ನಂಬಿದ್ದೆ. ಆದರೆ ಆಕೆ ಬದುಕಿಲ್ಲ ಎನ್ನುವ ಸತ್ಯ ನನಗೆ ಯಾವಾಗ ತಿಳಿಯಿತೋ ಆವತ್ತಿನಿಂದ ನಾನು ಆಕೆಯನ್ನು ಹುಡುಕುವ ಪ್ರಯತ್ನವನ್ನು ನಿಲ್ಲಿಸಿದೆ. ನನಗೆ ಇದೀಗ ಇಬ್ಬರು ಮಕ್ಕಳಿದ್ದಾರೆ" ಎಂದು ಹೇಳುತ್ತಾಳೆ

ಮುರಳಿ ಮದುವೆಗೆ ಅಸ್ತು ಎಂದ ಪುಟ್ಟಕ್ಕ

"ನನಗೆ ಏನಾದರು ಆದರೆ ನನ್ನ ಮಕ್ಕಳ ಗತಿ ಏನು? ಅದಕ್ಕೆ ಗಟ್ಟಿ ಮನಸ್ಸು ಮಾಡಿ ಏನೇ ಆಗಲೀ ನಾನು ಮಾತ್ರ ತನ್ನ ಮಕ್ಕಳಿಗಾಗಿ ಜೀವನ ನಡೆಸಬೇಕಾಗಿದೆ. ನೀವು ಸಹನಾಳ ನೆನಪು ಮಾಡಿಕೊಂಡು ಮಾರುಗಬೇಡಿ. ಏಕೆಂದರೆ ಆಕೆ ಬದುಕಿದ್ದರೆ ಆಕೆಗಾಗಿ ಕಾಯಬೇಕಿತ್ತು. ಆದರೆ ಆಕೆ ನಮ್ಮೆಲ್ಲರನ್ನೂ ಬಿಟ್ಟು ಹೋಗಿದ್ದಾಳೆ. ಇದೀಗ ನಾನು ಹೇಳುವುದೇನೆಂದರೆ ನೀವು ವಿನೂತ ಅವರನ್ನು ಮದುವೆ ಆಗಿ" ಎಂದು ಹೇಳುತ್ತಾರೆ.

ರಾಜಿಯ ಕೊಂಕು ನುಡಿಗೆ

ಆದರೆ, ಮುರಳಿಗೆ ಮಾತ್ರ ಅತ್ತೆಯ ಮಾತು ಸ್ವಲ್ಪ ಕೂಡ ಹಿಡಿಸುವುದು ಇಲ್ಲ. ಆ ಬಳಿಕ ಆಯಿತು ಎನ್ನುವ ಒಪ್ಪಿಗೆಯನ್ನು ನೀಡುತ್ತಾನೆ. ವಿನುತ ಬಳಿ ದೇವರಿಗೆ ದೀಪ ಹಚ್ಚಲು ಪುಟ್ಟಕ್ಕ ಹೇಳುತ್ತಾಳೆ. ಇನ್ನೂ ಅಂತೂ ಇಂತೂ ಮುರಳಿ ಜೀವನ ಕೂಡ ಚೆನ್ನಾಗಿ ಆಯಿತಲ್ಲ ಎಂದು ಪುಟ್ಟಕ್ಕ ನಿಟ್ಟುಸಿರು ಬಿಡುತ್ತಾರೆ. ಇನ್ನೂ ರಾಜೇಶ್ವರಿ, ಪುಟ್ಟಕ್ಕನ ಮನೆ ಮುಂದೆ ಬಂದು ಗಲಾಟೆ ಮಾಡುತ್ತಾಳೆ. ಆಕೆಗೆ ಪುಟ್ಟಕ್ಕ ನೆಮ್ಮದಿ ಆಗಿ ಇರುವುದು ಸ್ವಲ್ಪ ಕೂಡ ಇಷ್ಟ ಇರುವುದಿಲ್ಲ. ಇದೀಗ ಗೋಪಾಲ ಕೂಡಾ ಪುಟ್ಟಕ್ಕ ಜೊತೆಗೆ ಇರುವುದನ್ನು ಕಂಡು ಆಕೆಗೆ ಮತ್ತಷ್ಟು ಕೋಪ ಬಂದಿರುತ್ತದೆ.

Puttakkana Makkalu serial August 28th Episode

ಹಿಂದೆಯಿಂದ ಸಿಂಗಾರಮ್ಮ ಕುತಂತ್ರ

ರಾಜಿ ಹೇಗಾದರೂ ಮಾಡಿ ಗೋಪಾಲ ಹಾಗೂ ಪುಟ್ಟಕ್ಕನನ್ನು ದೂರ ಮಾಡಬೇಕು ಎಂದು ಅಂದುಕೊಂಡು ಇರುತ್ತಾಳೆ. ಆದರೆ ಅದು ಸಾಧ್ಯ ಆಗದೆ ಇರುವ ಕಾರಣ ಏನಾದರು ಒಂದು ಷಡ್ಯಂತ್ರ ಹೂಡುತ್ತಿರುತ್ತಾಳೆ. ರಾಜಿಯ ಮಾತು ಕೇಳಿದ ಸ್ನೇಹಾ ಹಾಗೂ ಕಂಠಿ ರಾಜಿಗೆ ಸಖತ್ ಆಗಿ ಕ್ಲಾಸ್ ತೆಗೆದುಕೊಳ್ಳುತ್ತಾರೆ. ಸ್ನೇಹಾ ಇನ್ಮೇಲೆ ಇಡೀ ಊರಿಗೆ ಡಿಸಿಯಾಗುತ್ತಾಳೆ ಎಂದು ತಿಳಿದು ಇನ್ನೂ ಹೊಟ್ಟೆ ಉರಿದುಕೊಳ್ಳುತ್ತಾಳೆ. ಕಂಠಿ ಖುಷಿಗೆ ಮಾತ್ರ ಪಾರವೇ ಇಲ್ಲದೆ ಖುಷಿಯಿಂದ ಊರಿನ ಮಂದಿಗೆ ಕೇಳುವ ಹಾಗೆ, "ನನ್ನ ಹೆಂಡತಿ ಇಡೀ ಊರಿಗೆ ಇನ್ಮೇಲೆ ಡಿಸಿ. ಆಕೆಯ ಬಳಿ ಏನೇ ಸಹಾಯ ಬೇಕಾದರೂ ನೀವು ಕೇಳಬಹುದು" ಎಂದು ಬಹಳ ಖುಷಿಯಿಂದ ಹೇಳುತ್ತಾನೆ. ಇನ್ನೂ ಸಿಂಗಾರಮ್ಮ ಕೂಡ ಸ್ನೇಹಾ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾಳೆ. ಮುಂದೇನಾಗುತ್ತದೆ ಅನ್ನೋದು ಮುಂದಿನ ಸಂಚಿಕೆಯಲ್ಲಿ ಗೊತ್ತಾಗುತ್ತೆ.

More from Filmibeat

English summary
Puttakkana Makkalu serial August 28th Episode:
Read more about: serial poorva filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X