Puttakkana Makkalu: ಕೊರವಂಜಿ ಮಾತು ಕೇಳಿ ಚಿಂತಿತಳಾದ ಪುಟ್ಟಕ್ಕ; ಅಮ್ಮನ ನೆನಪಿನಲ್ಲಿ ಸಹನಾ

By ಪೂರ್ವ

ಪುಟ್ಟಕ್ಕಗೆ ಇದೀಗ ತನ್ನ ಮಗಳದ್ದೆ ಚಿಂತೆ. ಸಹನಾ ಬದುಕಿದ್ದಾಳೆ ಎಂದು ಕೊರವಂಜಿ ಹೇಳಿದ್ದನ್ನು ಕೇಳಿದ ಪುಟ್ಟಕ್ಕ ನನ್ನ ಮಗಳು ಬದುಕಿದ್ದಾಳೆ ಎಂದು ಯೋಚನೆ ಮಾಡುತ್ತಿದ್ದಾಳೆ. ಪುಟ್ಟಕ್ಕಗೆ ತನ್ನ ಮಗಳು ಬದುಕಿದ್ದಾಳೆ ಎಂದು ತಿಳಿದರೆ ಮಾತ್ರ ಆಕೆಯಷ್ಟು ಸಂತಸ ಪಡುವವರು ಮತ್ತೆ ಬೇರೆ ಯಾರು ಸಿಗಲಾರರು. ಆಕೆಗೆ ತನ್ನ ಗಂಡ ಹತ್ತಿರ ಇರದ ಸಮಯದಲ್ಲಿ ಪುಟ್ಟಕ್ಕಗೆ ಬೆನ್ನುಲು ಬಾಗಿ ನಿಂತಿರುವುದು ಸಹನಾ. ಆದರೆ, ಇದೀಗ ಸಹನಾ ಇಲ್ಲ ಎಂದು ನೆನೆದುಕೊಂಡರೆ ಪುಟ್ಟಕ್ಕಗೆ ಅತೀವ ವಾದ ಸಂಕಟ ಆಗುತ್ತದೆ.

ಸುಮಾಗೆ ಈಗಾಗಲೇ ಅಕ್ಕ ಬದುಕಿದ್ದಾರೆ ಎನ್ನುವ ಡೌಟ್ ಬಂದಿದೆ. ಆದರೆ, ಅದನ್ನು ಯಾರ ಜೊತೆಯೂ ಹೇಳಿಕೊಳ್ಳುವ ಸ್ಥಿತಿಯಲ್ಲೂ ಆಕೆ ಇರುವುದಿಲ್ಲ. ಇನ್ನೂ ಸ್ನೇಹಾ ಮಾತ್ರ ಆಕೆಯ ಸಂಸಾರದ ಜಂಜಾಟದಲ್ಲಿ ಇರುತ್ತಾಳೆ. ಈ ವೇಳೆ ಪುಟ್ಟಕ್ಕ ಸ್ನೇಹಾಗೆ ಕರೆ ಮಾಡುತ್ತಾಳೆ. "ಅಮ್ಮ ಸ್ನೇಹಾ ನಿನ್ನ ಅತ್ತೆ ಮುಂಚಿನ ಹಾಗೆ ಇಲ್ಲ. ಅವರೇನಾದರೂ ಟೆನ್ಶನ್‌ನಲ್ಲಿ ಇದ್ದಾರಾ? ನಾನು ಏನೋ ಅವರ ಬಳಿ ಮಾತನಾಡಬೇಕು ಎಂದುಕೊಂಡರು. ಅವರು ಮಾತ್ರ ಮಾತನಾಡಲು ಹಿಂದೇಟು ಹಾಕುತ್ತಾರೆ. ಯಾಕೆ ಏನಾಯಿತು ಎಂದು ಪ್ರಶ್ನೆ ಕೇಳಿದಾಗ ಅಮ್ಮನನ್ನು ಸಮಾಧಾನ ಮಾಡಿ ಸ್ನೇಹಾ ಫೋನ್ ಇಡುತ್ತಾಳೆ.

Puttakkana Makkalu serial August 2nd episode update

ಇತ್ತೀಚೆಗಿನ ದಿನಗಳಲ್ಲಿ ಅತ್ತೆಯ ನಡವಳಿಕೆ ಬಹಳ ಬೇಸರ ತರಿಸಿರುವುದು ಮಾತ್ರ ಸತ್ಯ. ಯಾಕೆಂದರೆ ಮುಂಚೆ ಬಂಗಾರಮ್ಮ ಅವರು ಏನೇ ಮಾಡಿದರೂ ಎಲ್ಲರೂ ಹೆಮ್ಮೆ ಪಟ್ಟುಕೊಳ್ಳುವ ಹಾಗೆ ಮಾಡುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಬಂಗಾರಮ್ಮ ನಡವಳಿಕೆ ಎಲ್ಲರ ಮನದಲ್ಲಿ ನೋವು ಮೂಡಿಸುತ್ತಿದೆ. ಮನೆಯಲ್ಲಿ ನಿಯತ್ತಾಗಿ ದುಡಿಯುತ್ತಿದ್ದ ಆಳುಗಳನ್ನು ಹಾಗೆಯೇ ಡ್ರೈವರ್‌ಗಳನ್ನೂ ಮನೆಯ ಕೆಲಸದಿಂದ ತೆಗೆಸಿಬಿಡುತ್ತಾರೆ.

ಅಮ್ಮನ ವರ್ತನೆ ಕಂಡು ಕಂಠಿಗೆ ಅನುಮಾನ

ಆದರೆ, ಸಿಂಗಾರಮ್ಮ ಆಕೆಯ ಮಗನನ್ನೇ ಡ್ರೈವರ್ ಆಗಿ ಅಪಾಯಿಂಟ್ ಮಾಡುತ್ತಾರೆ. ಹಾಗೆಯೇ ಸಿಂಗಾರಮ್ಮ ತನ್ನ ಮಗನ ಜೊತೆ ಬಂಗಾರಮ್ಮ ಆಸ್ತಿ ನೋಡಲು ಸುತ್ತಾಡುತ್ತಾ ಇರುತ್ತಾಳೆ. ಇದೆಲ್ಲ ನನ್ನ ಆಸ್ತಿ ಆಗುತ್ತಿದ್ದವು. ಆದರೆ ಇದೆಲ್ಲವನ್ನೂ ನನ್ನಿಂದ ಬಂಗಾರಮ್ಮ ಕಿತ್ತುಕೊಂಡಿದ್ದಾಳೆ. ನಾನು ಇದಕ್ಕಿಂತ ಮುಂಚೆಯೇ ಎಚ್ಚೆತ್ತುಕೊಳ್ಳಬೇಕಿತ್ತು ಎಂದೆಲ್ಲ ಹೇಳುತ್ತಾರೆ. ಇನ್ನೂ ಕಂಠಿಗೆ ತನ್ನ ತಾಯಿಯ ನಡೆಯನ್ನು ನೋಡಿ ಅನುಮಾನ ಹುಟ್ಟಿಸಿದೆ.

ಊರು ಸುತ್ತಲೂ ಹೊರಟ ಸಿಂಗಾರಮ್ಮ

ಅಮ್ಮ ಯಾಕೆ ಹೀಗೆ ನಡೆದುಕೊಳ್ಳುತ್ತಿದ್ದಾರೆ. ಅಮ್ಮ ಯಾವತ್ತೂ ಹೀಗೆಲ್ಲ ನಡೆದುಕೊಂಡಿದ್ದೆ ಇಲ್ಲ ಎಂದು ಆತನ ಮನಸ್ಸಿನೊಳಗೆ ಯಕ್ಷ ಪ್ರಶ್ನೆ ಮೂಡಿರುವುದು ಮಾತ್ರ ಸತ್ಯ. ಇನ್ನೂ ಮ್ಯಾಕ್ಸ್ ವೆಲ್ ಜೊತೆ ಸಹನಾ ನಿಜ ಹೇಳುತ್ತಿದ್ದಾಳೆ. ಪುಟ್ಟಕ್ಕ ನನ್ನ ಅವ್ವನಿಗೆ "ದಯವಿಟ್ಟು ಈ ಸೀರೆ ಕೊಟ್ಟು ಬಿಡಿ. ನಾನು ಕೊಟ್ಟೆ ಎಂದು ಹೇಳಬಾರದು" ಎಂದು ಹೇಳುತ್ತಾಳೆ. ಆದರೆ, ಮ್ಯಾಕ್ಸ್ ವೆಲ್‌ಗೆ ಮೊದಲು ಅರ್ಥ ಆಗುವುದು ಇಲ್ಲ. ಕೊನೆಗೆ ಆತನಿಗೆ ನಿಜ ಯಾವುದು ಎನ್ನುವುದು ಅರ್ಥ ಆಗುತ್ತದೆ. ಆತ ಸೀರೆ ಹಿಡಿದುಕೊಂಡು ದೇವಿಪುರಕ್ಕೆ ಹೋಗುತ್ತಾನೆ. ಇನ್ನೂ ಕೊರವಂಜಿ ಮಾತಿನಿಂದ ಪುಟ್ಟಕ್ಕಗೆ ಸಹನಾ ಬಂದೆ ಬರುತ್ತಾಳೆ ಎನ್ನುವ ಆಸೆ ಮೂಡಿದೆ.

Puttakkana Makkalu serial August 2nd episode update

ಸಹನಾ ಬದುಕಿರುವ ಸತ್ಯ ಹೇಳುತ್ತಾನಾ ಕಾಳಿ?

ಇನ್ನೊಂದು ಕಡೆ ಅದೆಷ್ಟೇ ಆಸೆ ಇಟ್ಟುಕೊಂಡಿದ್ದರೂ, ಅದೆಲ್ಲವೂ ನೀರಿನ ಮೇಲಿನ ಗುಳ್ಳೆಯ ಹಾಗೆ. ನಾವು ಅದರ ಬಗ್ಗೆ ಹೆಚ್ಚು ಆಸೆ ಇಟ್ಟುಕೊಳ್ಳಬಾರದು ಎಂದು ಮನದಲ್ಲಿ ಅಂದುಕೊಳ್ಳುತ್ತಾರೆ. ಕಾಳಿಗೆ ಕೂಡ ಸಹನಾ ಮನೆಗೆ ಬಂದೆ ಬರುತ್ತಾಳೆ ಎನ್ನುವ ಭರವಸೆ ಮೂಡುತ್ತದೆ. ಇನ್ನೂ ಪುಟ್ಟಕ್ಕ ಟೆನ್ಶನ್‌ನಲ್ಲಿ ಇರುವುದನ್ನು ಕಂಡ ಗೋಪಾಲ, ಪುಟ್ಟಕ್ಕ ಮನಸ್ಸನ್ನು ಬೇರೆಡೆಗೆ ತೆಗೆದುಕೊಂಡು ಹೋಗಲು ಯೋಚನೆ ಮಾಡುತ್ತಿರುತ್ತಾನೆ. ಇಲ್ಲವಾದರೆ ಪುಟ್ಟಕ್ಕ ಮುಂಚೆ ಇರುವ ಹಾಗೆ ಇರುತ್ತಾಳೆ. ಆಕೆಗೆ ಸಹನಾ ನೆನಪು ಕಾಡದೇ ಇರುವ ಹಾಗೆ ನೋಡಿಕೊಳ್ಳಬೇಕು ಎಂದು ಆಲೋಚನೆ ಮಾಡುತ್ತಾಳೆ.

More from Filmibeat

English summary
Puttakkana Makkalu serial August 2nd episode update
Read more about: serial poorva filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X