ಪುಟ್ಟಕ್ಕನ ಮಕ್ಕಳು: ಕ್ಯಾರೆಕ್ಟರ್‌ಗೆ ಕ್ಯಾರೆಟ್ ಎಂದು ಬರೆದ ದೊರೆ, ಮುಂಗುಸಿಯಿಂದ ಸಿಕ್ಕಿ ಬೀಳುತ್ತಾನಾ?
ಮರೆಯಲ್ಲಿಯೇ ನಿಂತು ಪುಟ್ಟಕ್ಕನ ಮನೆಗೆ ಸಹಾಯ ಮಾಡುತ್ತಿರುವ ದೊರೆಯನ್ನು ಕಣ್ಣಾರೆ ಕಾಣಬೇಕೆಂಬ ಬಯಕೆ ಸ್ನೇಹಾಳದ್ದು. ಆ ದೊರೆಗಾಗಿ ಸಾಕಷ್ಟು ಹುಡುಕಾಟ ನಡೆಸಿದ್ದಾಳೆ. ಆದರೂ ದೊರೆಯ ಸುಳಿವು ಮಾತ್ರ ಸಿಗುತ್ತಿಲ್ಲ. ಸ್ನೇಹಾಗೆ ಲೈಟ್ ಆಗಿ ದೊರೆ ಮೇಲೆ ಆಗಾಗ ಲವ್ ಕೂಡ ಆದಂತೆ ಕಾಣುತ್ತದೆ. ದೊರೆ ಹೆಸರೇಳಿದರೆ ಸಾಕು ಕಳೆದೆ ಹೋಗುತ್ತಾಳೆ. ಮುಖದಲ್ಲಿ ಶೈನಿಂಗ್ ಹೆಚ್ಚಾಗುತ್ತದೆ. ಇದೀಗ ದೊರೆಯಿಂದ ಪತ್ರವೊಂದು ಬಂದಿದೆ.
ಸ್ನೇಹಾ ಕಂಡಾಗಲೆಲ್ಲಾ ದೊರೆ ಹೂವು ಗಿಫ್ಟ್ ಕೊಟ್ಟು ಇಲ್ಲೆ ಹತ್ತಿರದಲ್ಲಿದ್ದೀನಿ ಅಂತ ತೋರಿಸುತ್ತಾನೆ. ದೊರೆ ಬಗ್ಗೆ ಮಾತಾಡಿದಾಗೆಲ್ಲಾ ಕಂಠಿ ಒಳಗೊಳಗೆ ಸಂತಸಪಡುತ್ತಾನೆ. ಆದರೆ ತಾನೇ ದೊರೆ ಎಂದು ಹೇಳಿಕೊಳ್ಳುವ ಧೈರ್ಯ ಮಾಡಿರಲಿಲ್ಲ. ಈಗ ಅದ್ಯಾಕೋ ಸಂಜೆ ಕಡೆಗೆ ಗುಡ್ಡದ ಮೇಲಕ್ಕೆ ಕರೆದಿದ್ದಾನೆ. ಸ್ನೇಹಾಗೆ ಸತ್ಯ ಹೇಳಲೇಬೇಕೆಂದು ನಿರ್ಧರಿಸಿದಂತಿದೆ.

ನಿಶ್ಚಿತಾರ್ಥಕ್ಕೂ ಮುನ್ನ ಪ್ರೀತಿ ಹೇಳುತ್ತಾನಾ?
ಕಂಠಿ ಒಂಥರ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾನೆ. ಇನ್ನು ಸ್ನೇಹಾಗೆ ಪ್ರೀತಿ ಬಗ್ಗೆ ಹೇಳಿಲ್ಲ. ಅವ್ವನ ಬಳಿ ಮದುವೆ ಬೇಡ ಎಂದು ಹೇಳುವ ಧೈರ್ಯವಿಲ್ಲ. ಹೀಗಾಗಿ ಅಡ್ಡ ಕತ್ತರಿಯಲ್ಲಿ ಸಿಲುಕಿದವನಂತೆ ಆಡುತ್ತಿದ್ದಾನೆ. ಮನೆಯಲ್ಲಿ ಈಗಾಗಲೇ ನಿಶ್ಚಿತಾರ್ಥಕ್ಕೆ ಎಲ್ಲಾ ತಯಾರಿ ನಡೆದಿದೆ. ಈ ಮಧ್ಯೆ ಮೊದಲು ಪ್ರೀತಿ ಉಳಿಸಿಕೊಳ್ಳಲು ಸ್ನೇಹಾಗೆ ಸತ್ಯ ಹೇಳಲು ಹೊರಟಿದ್ದಾನೆ.

ದೊರೆ ಕೊಟ್ಟ ಪತ್ರದಲ್ಲಿ ತಪ್ಪುಗಳ ಸುರಿಮಳೆ
ಕಂಠಿಗೆ ಓದಲು ಬರೆಯಲು ಬರಲ್ಲ. ಸ್ನೇಹಾ ದೊಡ್ಡ ಕಲೆಕ್ಟರ್ ಆಗಬೇಕೆಂದು ಹೊರಟಿರುವಳು. ಆದರೆ ಪ್ರೀತಿಯೇನೋ ಆಗಿದೆ. ಒಂದು ವಿದ್ಯೆ ಅಡ್ಡಿಯಾಗಬಹುದು. ಮತ್ತೊಂದು ಕಂಠಿ ಅವ್ವನೇ ದೊಡ್ಡ ಸಮಸ್ಯೆ ಆಗಬಹುದು. ಈ ಎಲ್ಲಾ ಸಮಸ್ಯೆ ಒಂದು ಕಡೆಯಾದರೆ ಕಂಠಿ ತನ್ನ ಪ್ರೀತಿಯನ್ನು ಪಡೆಯಲು ಪಣ ತೊಟ್ಟಿದ್ದಾನೆ. ದೊರೆಯ ಹೆಸರಿನಲ್ಲಿ ಸ್ನೇಹಾಗೆ ಹತ್ತಿರವಾಗುತ್ತಿದ್ದಾನೆ. ದೊರೆ ಬರೆದಂತೆ ಪತ್ರ ಬರೆದಿದ್ದಾನೆ. ಆ ಪತ್ರ ಬರೆದಿದ್ದು ಮುಂಗುಸಿ. ಪದಗಳೆಲ್ಲಾ ಅಲ್ಲಲ್ಲಿ ಯಡವಟ್ಟು ಪದಗಳೇ. ಕಲೆಕ್ಟರ್ ಅನ್ನೋದಕ್ಕೆ ಹಲೋ ಕಲೆಟ್ಕರ್ ಮೇಡಂ ಎಂದು ಬರೆದಿದ್ದಾನೆ. ಸ್ನೇಹಾ ಓದುತ್ತಿದ್ದಂತೆ ಅಲ್ಲಿಯೇ ನಿಂತಿದ್ದ ಮುಂಗಿಸಿ ಕರೆಕ್ಷನ್ ಮಾಡಿದ್ದಾನೆ. ಅದು ಕಲೆಕ್ಟರ್ ಇರಬೇಕು ಎಂದು. ಮತ್ತೊಂದು ಕ್ಯಾರೆಕ್ಟರ್ ಹೋಗಿ ಕ್ಯಾರೆಟ್ ಆಗಿದೆ. ಅದನ್ನು ಸರಿ ಮಾಡಿದ್ದಾನೆ.

ಕಂಠಿಗೆ ಅಷ್ಟು ಧೈರ್ಯವಿದೆಯಾ?
ಮನೆಯಲ್ಲಿ ನಿಶ್ಚಿತಾರ್ಥದ ಕಾರ್ಯ ನಡೆಯುತ್ತಿರುವುದು ಅತ್ತ ಕಡೆ ವಸುಗೆ ಭಯವಾಗುತ್ತಿದೆ. ಸ್ನೇಹಾ ಬಳಿ ಮೊದಲು ಪ್ರೀತಿ ಹೇಳು ಅಂತ ಸಲಹೆ ನೀಡಿದ್ದಾಳೆ. ಕಂಠಿಯೇ ದೊರೆ ಎಂಬ ಸತ್ಯ ಸ್ನೇಹಾಗೆ ತಿಳಿದಿಲ್ಲ. ಇದು ತಿಳಿದರೆ ಅರಗಿಸಿಕೊಳ್ಳುವುದು ಕಷ್ಟವೇ. ದೊರೆಯನ್ನು ನೋಡಬೇಕೆಂದುಕೊಂಡು ತುದಿಗಾಲಿನಲ್ಲಿ ನಿಂತಿರುವ ಸ್ನೇಹಾಗೆ ಭೇಟಿಯ ಅವಕಾಶ ನೀಡಿದ್ದಾನೆ ದೊರೆ. ಸೂರ್ಯಾಸ್ತದ ಸಮಯದಲ್ಲಿ ರಾಮಗುಡ್ಡಕ್ಕೆ ಬಂದರೆ ಭೇಟಿ ಮಾಡುತ್ತೇನೆ ಎಂದಿದ್ದಾನೆ.

ಕಾಳಿಯಿಂದ ಬಚಾವ್
ಕಂಠಿ ಹೇಳಿಕೊಟ್ಟಂತೆ ಮುಂಗುಸಿ ಪತ್ರದಲ್ಲಿ ಬರೆದಿದ್ದಾನೆ. ಆದರೆ ಅದರಲ್ಲಿನ ತಪ್ಪುಗಳನ್ನು ಕಂಡು ಸ್ನೇಹಾ ಕೊಂಚ ಶಾಕ್ ಆಗಿದ್ದಾಳೆ. ಬರೆದಿದ್ದ ಮಹಾನುಭಾವ ಅಲ್ಲಿಯೇ ನಿಂತಿದ್ದ ಕಾರಣ ಎಲ್ಲಾ ಪದಗಳನ್ನು ಸರಿಮಾಡಿದ್ದಾನೆ. ಲೆಟರ್ ನಲ್ಲಿದ್ದ ಪದಗಳು ಸ್ನೇಹಾಗೆ ಅರ್ಥವಾಗಿರಲಿಲ್ಲ. ಆದರೆ ಮುಂಗುಸಿಗೆ ಅರ್ಥವಾಗಿದ್ದು ಹೇಗೆ ಎಂಬ ಅನುಮಾನ ಮೂಡುವುದರಲ್ಲಿತ್ತು. ಅಷ್ಟರಲ್ಲಿ ಕಾಳಿ ಪುಟ್ಟಕ್ಕನ ಮೆಸ್ ಮುಂದೆ ಬಂದು ನಿಂತಿದ್ದಾನೆ. ಅದನ್ನು ಕಂಡ ಸ್ನೇಹಾ ದೊರೆ, ದೊರೆಯ ಪತ್ರದ ತಪ್ಪುಗಳನ್ನು ಸೈಡಿಗಿಟ್ಟು ಆ ಕಡೆ ಗಮನ ಕೊಟ್ಟಿದ್ದಾಳೆ.


Click it and Unblock the Notifications











