Puttakkana Makkalu:ಮಗಳು ಬದುಕಿರುವ ಸತ್ಯ ಪುಟ್ಟಕ್ಕಗೆ ಗೊತ್ತಾಯ್ತು? ಮುಂದೇನು?

By ಪೂರ್ವ

ಪುಟ್ಟಕ್ಕ ತನ್ನ ಮಗಳು ಸತ್ತು ಹೋಗಿದ್ದಾಳೆ. ಆಕೆ ಬದುಕಿ ಬರಲು ಸಾಧ್ಯವಿಲ್ಲ. ಈ ವಿಚಾರವನ್ನು ಕೊರವಂಜಿಗೆ ಹೇಳಬೇಕು. ಹೀಗಂದುಕೊಂಡು ಕೊರವಂಜಿಯನ್ನು ಹುಡುಕಿಕೊಂಡು ಮರದ ಬುಡದಲ್ಲಿರುವ ದೇವಾಲಯಕ್ಕೆ ಬರುತ್ತಾಳೆ. ಅಲ್ಲಿ ಕೊರವಂಜಿ ಬಹಳ ಹೊತ್ತಿನಿಂದ ಧ್ಯಾನ ಮಾಡುತ್ತಿರುತ್ತಾಳೆ. ಪುಟ್ಟಕ್ಕನನ್ನು ನೋಡಿದ ಊರ ಮಂದಿ ಕೊರವಂಜಿ ಧ್ಯಾನ ಮಾಡುತ್ತಿದ್ದಾರೆಂದು ಹೇಳುತ್ತಾರೆ.

ಬೆಳಗ್ಗೆ ಒಂದು ಧ್ಯಾನಕ್ಕೆ ಕೂತಿದ್ದ ಕೊರವಂಜಿ ಕಣ್ಣು ಬಿಟ್ಟಿರುವುದನ್ನು ನಾವು ನೋಡಲೇ ಇಲ್ಲ ಎಂದು ಹೇಳುತ್ತಾರೆ. ಆಗ ಪುಟ್ಟಕ್ಕ ಬಹಳ ಲಘು ಬಗೆಯಿಂದ ಓಡೋಡಿ ಬರುತ್ತಾಳೆ. ಪುಟ್ಟಕ್ಕ ಬರುತ್ತಿದ್ದಂತೆ ಕೊರವಂಜಿ ಮೆತ್ತಗೆ ಕಣ್ಣು ಬಿಡುತ್ತಾಳೆ. ಆಗ ಕೊರವಂಜಿ "ಪುಟ್ಟಕ್ಕ ನಿನಗೆ ನಾನು ಸುಮಾರು ಸಾರಿ ಹೇಳಿದ್ದೀನಿ. ಆದರೆ, ನಿನಗೆ ನನ್ನ ಮಾತಿನಲ್ಲಿ ನಂಬಿಕೆ ಬರುತ್ತಿಲ್ಲ. ಎಷ್ಟು ಬಾರಿ ಹೇಳಿದರು ಅದ್ಯಾವುದನ್ನು ಕೇಳಿಸಿಕೊಳ್ಳುವುದಕ್ಕೆ ಹೋಗುತ್ತಿಲ್ಲ. ಈಗ ನಾನು ಹೇಳುತ್ತಿದ್ದೇನೆ ಕೇಳು ಪುಟ್ಟಕ್ಕ. ನಿನ್ನ ಮಗಳು ಬದುಕಿದ್ದಾಳೆ" ಎಂದು ಹೇಳುತ್ತಾರೆ.

Puttakkana Makkalu serial August 8th episode update

"ಆಕೆಗೆ ಇನ್ನೂ ಕೂಡ ಈ ಭೂಮಿಯ ಋಣ ತೀರಿಲ್ಲ. ಆಕೆ ಎಲ್ಲಿಯೂ ಇದ್ದಾಳೆ. ಆದರೆ ಒಂದಲ್ಲ ಒಂದು ದಿನ, ನಿನ್ನನ್ನು ಹುಡುಕಿಕೊಂಡು ಆಕೆ ಬಂದೇ ಬರುತ್ತಾಳೆ" ಎಂದು ಕೊರವಂಜಿ ಹೇಳುತ್ತಾರೆ. ಆಕೆಯ ಮಾತು ಕೇಳಿದ ಪುಟ್ಟಕ್ಕಗೆ ಬಹಳ ಖುಷಿಯಾಗುತ್ತದೆ. ನನ್ನ ಮಗಳು ವಾಪಸ್ ಮನೆಗೆ ಬಂದರೆ ಸಾಕು. ಆಕೆ ಚೆನ್ನಾಗಿರಬೇಕು ಎಲ್ಲಿ ಇದ್ದರೂ ಖುಷಿಯಾಗಿರಬೇಕು" ಎಂದು ಆ ದೇವರಲ್ಲಿ ಬೇಡಿಕೊಳ್ಳುತ್ತಾಳೆ.

ಬಂಗಾರಮ್ಮನ ಬಳಿಗೆ ಬಂದ ಸಿಂಗಾರಮ್ಮ

ಬಂಗಾರಮ್ಮನನ್ನು ಗೂಂಡಾಗಳು ಕಟ್ಟಿ ಹಾಕುತ್ತಾರೆ. ಆಗ ಬಂಗಾರಮ್ಮ, ಸಿಂಗಾರಮ್ಮ ನೋಡಿದ ಕೂಡಲೇ ಅಂತಹದ್ದೇನು ಬಹಳ ಆತಂಕ ವ್ಯಕ್ತಪಡಿಸುವುದಿಲ್ಲ. ಆದರೂ, "ನೀನು ನನ್ನ ರೂಪದಲ್ಲಿ ಮನೆಗೆ ಹೋಗಿರಬಹುದು. ಆದರೆ ನನ್ನ ಮಕ್ಕಳಿಗೆ ನಿನ್ನ ಮೇಲೆ ಸ್ವಲ್ಪ ಡೌಟ್ ಬಂದರೂ ಕೂಡ ಅವರು ನಿನ್ನನ್ನು ಸುಮ್ಮನೆ ಬಿಡುವುದಿಲ್ಲ" ಎಂದು ಸಿಂಗಾರಮ್ಮನ ವಿರುದ್ಧ ಬಂಗಾರಮ್ಮ ಕಿರುಚಾಡುತ್ತಾರೆ.

Puttakkana Makkalu serial August 8th episode update

ಬಂಗಾರಮ್ಮನ ನೋಡಿ ನಕ್ಕ ಸಿಂಗಾರಮ್ಮ

ಸಿಂಗಾಗರಮ್ಮ ಮಾತ್ರ ಏನು ಮಾತನಾಡದೆ ಸುಮ್ಮನೆ ಇರುತ್ತಾಳೆ. ಆಗ ಬಂಗಾರಮ್ಮ ನಿನ್ನಿಂದ ಏನು ಮಾಡಿಕೊಳ್ಳಲು ಸಾಧ್ಯ ಇಲ್ಲ. ಯಾಕಂದ್ರೆ, ಇದೀಗ ನಾನೇ ನಿನ್ನ ಊರಿಗೆ ಬಂಗಾರಮ್ಮ. ನಿನ್ನ ಮಕ್ಕಳಿಗೆ ಇದೀಗ ನಾನೇ ತಾಯಿ. ನೀನು ಏನೇ ಹೇಳಿದರೂ, ಏನೇ ಮಾಡಿದರು ಅದ್ಯಾವುದನ್ನೂ ಯಾರು ನಂಬುವುದು ಇಲ್ಲ. ಹಾಗೆ ನಿನ್ನ ಮಕ್ಕಳನ್ನು ನಾನು ನಂಬಿಸಿದ್ದೇನೆ" ಎಂದು ಹೇಳುತ್ತಾಳೆ.

ಕುಟುಂಬ ರಕ್ಷಣೆಗೆ ಮುಂದಾದ ಬಂಗಾರಮ್ಮ

ಬಂಗಾರಮ್ಮಗೆ ನನ್ನ ಹಾಗು ನನ್ನ ಕುಟುಂಬಕ್ಕೆ ಸಿಂಗಾರಮ್ಮ ಖಂಡಿತವಾಗಿಯೂ ತೊಂದರೆ ಮಾಡುತ್ತಾಳೆ. ಆದರೆ, ಯಾವತ್ತೂ ಹಾಗೆಲ್ಲ ಆಗಬಾರದು ಇದನ್ನು ನಾನು ತಡೆಯುಬೇಕು ಎಂದು ಯೋಚನೆ ಮಾಡುತ್ತಾಳೆ. ಇನ್ನೂ ಸಹನಾ ತನ್ನ ಅಮ್ಮನ ನೆನಪಿನಲ್ಲಿ ದಿನ ದೂಡುತ್ತಿದ್ದಾರೆ. ಆಕೆಗೆ ತನ್ನ ತಾಯಿಯದ್ದೇ ಯೋಚನೆ. ಮ್ಯಾಕ್ಸ್ ವೆಲ್ ತನ್ನ ತಾಯಿಗೆ ಸೀರೆ ಕೊಟ್ಟನಾ? ತನ್ನ ತಾಯಿಯ ಬಳಿ ಏನು ಹೇಳದೆ ಬಂದರೆ ಸಾಕು ಎಂದು ಆಲೋಚನೆ ಮಾಡುತ್ತಿರುತ್ತಾಳೆ.

More from Filmibeat

English summary
Puttakkana Makkalu serial August 8th episode update
Read more about: serial poorva filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X