For Quick Alerts
  ALLOW NOTIFICATIONS  
  For Daily Alerts

  ಕಿರುತೆರೆ ನಂತರ ಹಿರಿತೆರೆಗೆ ಕಾಲಿಟ್ಟ ನಿಶಾ ಹೆಗಡೆ

  By ಅನಿತಾ ಬನಾರಿ
  |

  ಮನೋಜ್ಞ ನಟನೆಯ ಮೂಲಕ ಕಿರುತೆರೆ ಜಗತ್ತಿನಲ್ಲಿ ಮನೆ ಮಾತಾಗಿದ್ದ ನಟಿ ನಿಶಾ ಹೆಗಡೆ ಇದೀಗ ಹಿರಿತೆರೆಯತ್ತ ಮುಖ ಮಾಡಿದ್ದಾರೆ. ಹೌದು, ಆರೂರು ಜಗದೀಶ್ ನಿರ್ದೇಶನದಡಿಯಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಬಡ್ಡಿ ಬಂಗಾರಮ್ಮನ ಮಗಳು ವಸು ಪಾತ್ರಕ್ಕೆ ಜೀವ ತುಂಬುತ್ತಿರುವ ನಿಶಾ ಹೆಗಡೆ ಸದ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

  ಸಾಲು ಸಾಲು ಸಿನಿಮಾಗಳಲ್ಲಿ ನಟಿಸುವ ಸುವರ್ಣಾವಕಾಶ ಪಡೆದುಕೊಂಡಿರುವ ನಿಶಾ ಬಾಲಕಲಾವಿದೆಯಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದರು. ಕಿರುತೆರೆಯ ಸುಂದರಿಯ ಈ ಜರ್ನಿ ಅನೇಕರಿಗೆ ತಿಳಿದಿಲ್ಲ.‌

  Katheyondu Shuruvagide:ಆತ್ಮಹತ್ಯೆಯ ನಾಟಕವಾಡಿ ಸಾಮ್ರಾಟ್‌ನನ್ನು ವಲಿಸಿಕೊಳ್ತಾಳಾ ವರ್ಣಿಕಾ?Katheyondu Shuruvagide:ಆತ್ಮಹತ್ಯೆಯ ನಾಟಕವಾಡಿ ಸಾಮ್ರಾಟ್‌ನನ್ನು ವಲಿಸಿಕೊಳ್ತಾಳಾ ವರ್ಣಿಕಾ?

  ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಜೋಗುಳ' ಧಾರಾವಾಹಿಯಲ್ಲಿ ಬಾಲಕಲಾವಿದೆಯಾಗಿ ಕಾಣಿಸಿಕೊಳ್ಳುವ ಮೂಲಕ ನಟನಾ ಕ್ಷೇತ್ರಕ್ಕೆ ನಿಶಾ ಹೆಗಡೆ ಕಾಲಿಟ್ಟಿದ್ದರು. ಆ ಬಳಿಕ ವಿದ್ಯಾಬ್ಯಾಸದ ಸಲುವಾಗಿ ನಟನೆಗೆ ಗುಡ್ ಬೈ ಹೇಳಿದ್ದರು. ಥಿಯೇಟರ್ ಸ್ಟಡೀಸ್‌ನಲ್ಲಿ ಪದವಿ ಪಡೆದಿರುವ ನಿಶಾ ಹೆಗಡೆ ಸಕಲಾಕಲಾವಲ್ಲಭೆ ಅನ್ನೋದು ಅಷ್ಟೇ ಇಂಟ್ರೆಸ್ಟಿಂಗ್ ವಿಷಯ.

  ತಮಿಳು ಸೀರಿಯಲ್‌ನಲ್ಲಿ ನಟನೆ

  ತಮಿಳು ಸೀರಿಯಲ್‌ನಲ್ಲಿ ನಟನೆ

  ತಮಿಳಿನ ಸ್ಟಾರ್ ವಿಜಯ್ ಚಾನೆಲ್‌ನಲ್ಲಿ ಪ್ರಸಾರವಾಗುತ್ತಿದ್ದ 'ಪೊಣ್ಣುಕು ತಂಗು ಮನಸ್ಸು' ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ನಿಶಾ ಹೆಗಡೆ ಕಿರುತೆರೆ ಪಯಣ ಶುರು ಮಾಡಿದರು. ನಂತರ ಬಡ್ಡಿ ಬಂಗಾರಮ್ಮನ ಮಗಳಾಗಿ ಕನ್ನಡ ಕಿರುತೆರೆಗೆ ಪಾದಾರ್ಪಣೆ ಮಾಡಿದ ನಿಶಾ ಅಲ್ಲೂ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾದರು.

  ನಿಶಾ ಕೈ ತುಂಬಾ ಸಿನಿಮಾಗಳು

  ನಿಶಾ ಕೈ ತುಂಬಾ ಸಿನಿಮಾಗಳು

  ಜೀವನ್ ಹಳ್ಳೀಕರ್ ನಿರ್ದೇಶನದ ಥ್ರಿಲ್ಲರ್ ಸಸ್ಪೆನ್ಸ್ ಕಥಾನಕವನ್ನೊಳಗೊಂಡ 'ಬ್ಲಾಕ್ ಶೀಪ್'ನಲ್ಲಿ ನಾಯಕಿಯಾಗಿ ನಟಿಸುವ ಮೂಲಕ ನಿಶಾ ಹಿರಿತೆರೆಗೆ ಪಾದಾರ್ಪಣೆ ಮಾಡಿದ್ದಾರೆ. ಆ ಸಿನಿಮಾದಲ್ಲಿ ಡಬಲ್ ಶೇಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪಿ ಆರ್ ಕೆ ನಿರ್ಮಾಣದ ಸಿಂಧು ಶ್ರೀನಿವಾಸ್ ಮೂರ್ತಿ ನಿರ್ದೇಶನ ಮಾಡುತ್ತಿರುವ 'ಆಚಾರ್ & ಕೋ' ಎನ್ನುವ ಸಿನಿಮಾದಲ್ಲಿಯೂ ನಿಶಾ ನಟಿಸಿ ಸೈ ಎನಿಸಿಕೊಂಡಿದ್ದಾರೆ. ನಿಶಾ ಮುಂದೆ 'ಒಂದು ಒಳ್ಳೆ ಲವ್ ಸ್ಟೋರಿ' ಸಿನಿಮಾದಲ್ಲಿಯೂ ಮುಖ್ಯ ಪಾತ್ರಕ್ಕೆ ಜೀವ ತುಂಬಿದ್ದಾರೆ.

  ರೂಪದರ್ಶಿಯಾಗಿಯೂ ಸೈ

  ರೂಪದರ್ಶಿಯಾಗಿಯೂ ಸೈ

  ಪದವಿಯ ನಂತರ ಮಾಡೆಲಿಂಗ್ ಜಗತ್ತಿನತ್ತ ಆಕರ್ಷಣೆಗೊಂಡ ನಿಶಾ ಆ ಕ್ಷೇತ್ರಕ್ಕೂ ಕಾಲಿಟ್ಟರು. ಬೆರಳೆಣಿಕೆಯಷ್ಟು ಫ್ಯಾಷನ್ ಶೋಗಳಲ್ಲಿ ಮಿಂಚಿದ್ದಾರೆ. ಉಬರ್, ಪ್ಲಿಪ್ ಕಾರ್ಟ್, ತನಿಷ್ಕಾ ಜ್ಯುವೆಲ್ಲರಿ, ವಿಜಯಲಕ್ಷ್ಮಿ ಸಿಲ್ಕ್ಸ್, ಹೆಚ್ ಪಿ ಲಾಪ್ ಟಾಪ್ ಸೇರಿದಂತೆ ಒಂದಷ್ಟು ಜಾಹೀರಾತುಗಳಲ್ಲಿ ರೂಪದರ್ಶಿಯಾಗಿ ಸೈ ಎನಿಸಿಕೊಂಡಿದ್ದಾರೆ. ಆಶೀರ್ವಾದ್ ಬ್ರಾಂಡ್‌ನ ಜಾಹೀರಾತಿನಲ್ಲಿಯೂ ನಿಶಾ ಕಾಣಿಸಿಕೊಂಡಿದ್ದು ಜನಪ್ರಿಯ ನಟಿ ರೇವತಿ ಅವರೊಂದಿಗೆ ನಟಿಸಿದ್ದಾರೆ.

  ನಿಶಾ ಡ್ಯಾನ್ಸರ್ ಕೂಡ ಹೌದು

  ನಿಶಾ ಡ್ಯಾನ್ಸರ್ ಕೂಡ ಹೌದು

  ಕಥಕ್ ನೃತ್ಯ ಕಲಾವಿದೆ ಆಗಿರುವ ನಿಶಾ ಕಥಕ್ ನಲ್ಲಿ ಪದವಿ ಪಡೆದಿದ್ದಾರೆ. ಕೇವಲ ವೆಸ್ಟರ್ನ್ ಡ್ಯಾನ್ಸ್ ನಲ್ಲಿಯೂ ಪರಿಣಿತಿ ಪಡೆದಿರುವ ನಿಶಾ ಬಾಲಿವುಡ್ ನ ಹೆಸರಾಂತ ಕೊರಿಯೋಗ್ರಾಫರ್ ಶಮಾಕ್ ದಾವರ್ಸ್ ಕಂಪೆನಿಯಲ್ಲಿದ್ದು ನೃತ್ಯದ ರೀತಿ ನೀತಿಗಳನ್ನು ತಿಳಿದುಕೊಂಡಿದ್ದಾರೆ.

  English summary
  Puttakkana Makkalu Serial Fame Actress Nisha Hegde Busy In Kannada Movies, Know More.
  Friday, January 6, 2023, 17:27
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X