Don't Miss!
- News
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪತ್ರ ನಕಲಿ ಎಂದ ಸಿದ್ದರಾಮಯ್ಯ.! ಆ ಪತ್ರದಲ್ಲಿ ಏನಿದೆ.?
- Sports
IND-W vs SA-W T20 Tri-series Final: ಭಾರತ ವನಿತೆಯರ ವಿರುದ್ಧ ದಕ್ಷಿಣ ಆಫ್ರಿಕಾಗೆ ಜಯ
- Lifestyle
ಮಗುವಿಗೆ ತುಂಬಾ ಜ್ವರ ಇದ್ದಾಗ ಏನು ಮಾಡಬೇಕು?
- Finance
6 ತಿಂಗಳಲ್ಲಿ 2ನೇ ಬಾರಿಗೆ ಉದ್ಯೋಗಿಗಳನ್ನು ವಜಾಗೊಳಿಸಿದ Byju's: ಈ ಬಾರಿ ಎಷ್ಟು ನೌಕರರು?
- Automobiles
ಭಾರತದಲ್ಲಿ ಮಾರುತಿ ಜಿಮ್ನಿ ಎಸ್ಯುವಿಗೆ ಭಾರೀ ಡಿಮ್ಯಾಂಡ್: ಪ್ರತಿಸ್ಪರ್ಧಿಗಳಿಗೆ ಹೆಚ್ಚಿದ ಆತಂಕ
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Puttakkana Makkalu: ಪುಟ್ಟಕ್ಕನ ಮಗಳು ಸಹನಾ ಟ್ರೆಡಿಷನಲ್ ಲುಕ್ ಹೇಗಿದೆ ನೋಡಿ!
'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಮೂವರು ಮಕ್ಕಳು ಕೂಡ ಒಬ್ಬೊಬ್ಬರು ಒಂದೊಂದು ಮುತ್ತು ಇದ್ದಂತೆ. ಮೂವರು ಹೆಣ್ಣು ಮಕ್ಕಳನ್ನು ಸಾಕಿ, ಸಲಹುತ್ತಿರುವ ಪುಟ್ಟಕ್ಕ ಮಹಾತಾಯಿಯೇ ಆಗಿದ್ದಾರೆ. ಇಬ್ಬರು ಹೆಣ್ಣು ಮಕ್ಕಳು ಓದುತ್ತಿದ್ದಾರೆ. ಅದೇ ಸಹನಾ ಅಂದ್ರೆ ದೊಡ್ಡ ಮಗಳು ಮಾತ್ರ ಅಮ್ಮನಿಗೆ ಸಹಾಯ ಮಾಡುತ್ತಾ,ಅವರ ಕಷ್ಟಕ್ಕೆ ಹೆಗಲಾಗಿದ್ದಾಳೆ. ಇದೆಲ್ಲಾ ಧಾರಾವಾಹಿಯ ಮಾತು. ಆದರೆ ಸಹನಾ ಅಲಿಯಾಸ್ ಅಕ್ಷರಾ ತೆರೆ ಹಿಂದೆಯೇ ಫುಲ್ ಮಾಡ್ರನ್ ಗರ್ಲ್.
ರೋಜಾ
ಅವತಾರವೆತ್ತಿ
ತೆಲುಗು
ಕಿರುತೆರೆಗೆ
ಕಾಲಿಟ್ಟ
ಸುಪ್ರಿತಾ
ಸತ್ಯನಾರಾಯಣ
ಧಾರಾವಾಹಿಯಲ್ಲಿ ಯಾವಾಗಲು ಸೀರೆಯುಟ್ಟು, ಜೋರಾಗಿ ಮಾತನಾಡಿದರೆ ಸಾಕು ದಿಗಿಲು ಬೀಳುವ ಸ್ವಭಾವದ ಹುಡುಗಿ ಅಕ್ಷರಾ. ಆದರೆ ನಿಜ ಜೀವನದಲ್ಲಿ ಅದಕ್ಕೆ ಉಲ್ಟಾ ಇರುವಂತ ಕ್ಯಾರೆಕ್ಟರ್ ಅಕ್ಷರಾ ಅವರದ್ದು. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್ ಆಗಿರುವ ಅಕ್ಷರಾ, ಹಬ್ಬಕೊಂದಿಷ್ಟು ಪೋಟೋ ಬಿಟ್ಟು, ಗಂಡೈಕ್ಳ ಹೃದಯದಲ್ಲಿ ಹಲ್ ಚಲ್ ಹೆಬ್ಬಿಸಿದ್ದಾರೆ.

ಸಂಕ್ರಾಂತಿ ಸಂಭ್ರಮದಲ್ಲಿ ಅಕ್ಷರಾ
ಹಬ್ಬಗಳು ಅಥವಾ ವಿಶೇಷ ದಿನಗಳಲ್ಲಿ ನಟಿಮಣಿಯರು ಫೋಟೋ ಶೂಟ್ ಮಾಡಿಸುವುದು ಕಾಮನ್. ಸಂಕ್ರಾಂತಿ ಹಬ್ಬಕ್ಕೆಂದು ಪುಟ್ಟಕ್ಕನ ಮಗಳು ಸಹನಾ ಹೊಸದಾಗಿ ಫೋಟೋಶೂಟ್ ಮಾಡಿಸಿದ್ದಾರೆ. ಕಡುನೇರಳೆ ಮತ್ತು ನೀಲಿ ಬಣ್ಣ ಮಿಶ್ರಿತ ಉಡುಗೆ ತೊಟ್ಟು, ಫೋಟೋಗೆ ಪೋಸ್ ನೀಡಿದ್ದಾರೆ. ಬಲ್ಪ್ ಗಳ ಬೆಳಕಲ್ಲಿ, ಮುಖವೊಡ್ಡಿರುವ ಅಕ್ಷರಾ ಫೋಟೋ ಬೆಳದಿಂಗಳ ಚೆಲುವೆಯಂತೆ ಕಾಣುತ್ತಿದೆ. ಸಂಕ್ರಾಂತಿಗಾಗಿ ಮಾಡಿಸಿರುವ ಹೊಸ ಫೋಟೋಶೂಟ್ ಅದಾಗಿದೆ.
Kavya
Ramesh:ಕಿರುತೆರೆ
ನಂತರ
ಹಿರಿತೆರೆಯಲ್ಲಿ
ಅದೃಷ್ಟ
ಪರೀಕ್ಷೆಗಿಳಿದ
ಕಾವ್ಯ
ರಮೇಶ್!

ಎಲ್ಲರನ್ನು ಆಕರ್ಷಿಸಿದ ಫೋಟೋ
ಸಹನಾ ಮತ್ತು ಮುರುಳಿ ಮೇಷ್ಟ್ರ ಕ್ಯೂಟ್ ಲವ್ ಸ್ಟೋರಿ ನಡೆಯುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಆ ಪ್ರೇಮಕ್ಕೆ ನಿಶ್ಚಿತಾರ್ಥ ಎಂಬ ಮುದ್ರೆಯೂ ಬೀಳುತ್ತಿದೆ. ಧಾರಾವಾಹಿಯಲ್ಲಿ ಸದಾ ಸೀರೆಯುಟ್ಟು ಮಿಂಚುವ ಸಹನಾ ಮೇಲೆ ಮುರುಳಿ ಮೇಷ್ಟ್ರಿಗೆ ಲವ್ವಾಗಿದ್ರೆ, ರಿಯಲ್ ಲೈಫ್ ನಲ್ಲಿ ಅದರಲ್ಲೂ ಅಕ್ಷರಾ ಹಾಕಿರುವ ಫೋಟೋ ನೋಡಿ ಪಡ್ಡೆ ಹುಡುಗರ ಹಾರ್ಟ್ ಬೀಟ್ ಜೋರಾಗಿದೆ. ಸುರಸುಂದರಿಯಂತೆ ಕಾಣುತ್ತಿದ್ದಾರೆ ಅಕ್ಷರಾ ಹೊಸ ಫೋಟೋಶೂಟ್ ನಲ್ಲಿ. ಈ ಫೋಟೋಗಳನ್ನು ನೋಡುತ್ತಾ ಇದ್ದರೆ, ಒಂದು ಕ್ಷಣ ಇದು ಸಹನಾ ಅವರೇನಾ ಎನ್ನುವ ಅನುಮಾನ ಮೂಡದೆ ಇರುವುದಿಲ್ಲ.

ಹೃದಯ ನೀಡಿದ ಫಾಲೋವರ್ಸ್
ಮಕರ ಸಂಕ್ರಾಂತಿ ಸ್ಪೆಷಲ್ ಶೂಟ್ ಮಾಡಿಸಿರುವ ಅಕ್ಷರಾ ಆ ಪೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆ ಫೋಟೋಗಳನ್ನು ನೋಡಿದ ಅಭಿಮಾನಿಗಳು ಸ್ಪೆಷಲ್ ವಿಶ್ ಮಾಡಿದ್ದಾರೆ. ಮಕರ ಸಂಕ್ರಾಂತಿ ಶುಭಾಶಯ ಕೋರುವುದರ ಜೊತೆಗೆ, ಸಾಕಷ್ಟು ಮಂದಿ ಆ ಫೋಟೋಗೆ ತಮ್ಮ ಹಾರ್ಟ್ ನೀಡಿದ್ದಾರೆ. ಫೋಟೋದಲ್ಲಿ ಗೊಂಬೆಯಂತೆ ಕಾಣುತ್ತಿದ್ದೀರಾ ಅಂತ ಹೊಗಳಿದ್ದಾರೆ.

ಅಕ್ಷರಾಗೆ ಸಿಕ್ಕಾಪಟ್ಟೆ ಫಾಲೋವರ್ಸ್
ಅಕ್ಷರಾ ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್ ಆಗಿರುತ್ತಾರೆ. ಅದರಲ್ಲೂ ಹೊಸ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಾ ತಮ್ಮ ಫಾಲೋವರ್ಸ್ ಜೊತೆಗೆ ಸದಾ ಸಂಪರ್ಕದಲ್ಲಿರುತ್ತಾರೆ. ಸುಮಾರು 22 ಸಾವಿರ ಫಾಲೋವರ್ಸ್ ಹೊಂದಿದ್ದಾರೆ. ಪುಟ್ಟಕ್ಕನ ಮಕ್ಕಳು ಸೆಟ್‌ನಲ್ಲಿ ಕಳೆದ ಸಮಯ ಹೇಗಿರುತ್ತೆ ಎಂಬುದನ್ನೆಲ್ಲಾ ಫೋಟೋ ಮೂಲಕ ತಿಳಿಸುತ್ತಾರೆ. ಅಷ್ಟೇ ಯಾಕೆ ಟೀಂ ಜೊತೆಗೆ ಸದಾ ರೀಲ್ಸ್ ಮಾಡುತ್ತಾ ಎಂಜಾಯ್ ಮಾಡುತ್ತಾ ಇರುತ್ತಾರೆ. ಹೀಗೆ ಹೊಸ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಾ ಖುಷಿಯನ್ನು ಹಂಚುತ್ತಾ ಇರುತ್ತಾರೆ. ಈಗ ಹೊಸ ಫೋಟೋ ಬಿಟ್ಟು, ವಾವ್ ಎನಿಸಿಕೊಂಡಿದ್ದಾರೆ.