ಪುಟ್ಟಕ್ಕನ ಮಗಳು ಖ್ಯಾತಿಯ ಸಹನಾ ಸಿಕ್ಕಾಪಟ್ಟೆ ಮಾರ್ಡನ್ ಬೆಡಗಿ!
'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯ ಸಹನಾ ಪಾತ್ರ ಬಹಳ ಸೌಮ್ಯ. ಹೆಸರಿಗೆ ತಕ್ಕಂತೆ ಸಹನಾ ಮೂರ್ತಿಯಾಗಿರುವ ಸಹನಾ, ಸದಾ ಅಮ್ಮನ ಪರ, ಅಮ್ಮನ ಜೊತೆಗೆ ಇರುತ್ತಾಳೆ. ಧಾರಾವಾಹಿಯಲ್ಲಿ ಸೀರೆಯುಟ್ಟು ಮುದ್ದು ಮುಖದ ಮುಗ್ಧೆಯಾಗಿದ್ದಾರೆ.
ಇವರ ನಿಜವಾದ ಹೆಸರು ಅಕ್ಷರ. ಮಾಡೆಲಿಂಗ್ ಲೋಕದಿಂದ ಕಿರುತೆರೆಗೆ ಬಂದಿದ್ದಾರೆ. ತಮ್ಮ ಸಹನೆಯಿಂದಲೇ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಜನಮನ ಗೆದ್ದಿದ್ದಾರೆ. ಬಬ್ಲಿ ಬಬ್ಲಿ ಆಕ್ಟಿಂಗ್‌ಗೂ ಜೈ ಎನ್ನುವ ಅಕ್ಷರ ಸದ್ಯ ಹಳ್ಳಿ ಹುಡುಗಿ ಲುಕ್‌ನಲ್ಲಿ ಸೂಪರ್ ಆಗಿ ಕಾಣುತ್ತಿದ್ದಾರೆ.
ತಂದೆ-ತಾಯಿಯ ಆಸೆಯಂತೆಯೇ ಈ ಧಾರಾವಾಹಿಯಲ್ಲಿ ಅಕ್ಷರ ಆಕ್ಟಿಂಗ್ ಮಾಡುತ್ತಿದ್ದಾರೆ. ಇನ್ನು ಸಿನಿಮಾ ಕ್ಷೇತ್ರದಲ್ಲೂ ಮಿಂಚುವ ಆಸೆ ಅಕ್ಷರ ಅವರಿಗಿದೆ. ಈಗಾಗಲೇ ಕೆಲ ಸಿನಿಮಾಗಳಲ್ಲೂ ಕಾಣಿಸಿಕೊಂಡಿದ್ದಾರೆ.
ಬಬ್ಲಿ ಬಬ್ಲಿಯಾಗಿ ನಟಿಸಿದ್ದ ಅಕ್ಷರ!
ನಟಿ ಅಕ್ಷರ 'ಅಮ್ನೋರು' ಧಾರಾವಾಹಿ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದರು. ಇದಾದ ಬಳಿಕ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಲ್ಲಿ ಅಕ್ಷರ ಅವರು ಸಹನಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಕ್ಷರ ನಟಿಸಿದ ಈ ಹಿಂದಿನ ಧಾರಾವಾಹಿಗೂ ಇದಕ್ಕೂ ತುಂಬಾನೇ ವ್ಯತ್ಯಾಸವಿದೆ. 'ಅಮ್ನೋರು' ಧಾರಾವಾಹಿಯಲ್ಲಿ ಬಬ್ಲಿ ಬಬ್ಲಿ ಹುಡುಗಿಯಾಗಿ ನಟಿಸಿದ್ದರು. ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಸಹನಾ ಅಂದರೆ ತುಂಬಾ ತಾಳ್ಮೆ ಇರುವ, ಫ್ಯಾಮಿಲಿ ಹುಡುಗಿ. ಸಹೋದರಿಯರಿಗಾಗಿ ಕಷ್ಟ ಪಡುತ್ತಾಳೆ. ತಾಯಿ ಜೊತೆಗೆ ಇರುತ್ತಾಳೆ.
ಸಿನಿಮಾದಲ್ಲೂ ಮಿಂಚಲಿರುವ ನಟಿ!
ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದ ಅಕ್ಷರ ಅವರು ಇಲ್ಲೇ ವಿದ್ಯಾಭ್ಯಾಸವನ್ನೂ ಕೂಡ ಮಾಡಿದ್ದಾರೆ. ಸಿನಿಮಾ ಹಾಗೂ ಧಾರಾವಾಹಿಯಲ್ಲಿಯೂ ಅಕ್ಷರ ಸಕ್ರಿಯರಾಗಿದ್ದು, ಒಳ್ಳೆಯ ಸಿನಿಮಾಗಳಲ್ಲಿ ನಟಿಸಲು ಬಯಸುತ್ತಿದ್ದಾರೆ. ಅವಕಾಶಗಳಿಗಾಗಿ ಅಕ್ಷರ ಅವರು ಕಾಯುತ್ತಿದ್ದಾರೆ. ನಮ್ ಟ್ಯಾಲೆಂಟ್ ಮತ್ತು ಲಕ್ ಎರಡೂ ಇದ್ದರೆ ಅವಕಾಶ ಸಿಗುತ್ತದೆ. ಅದಕ್ಕಾಗಿ ನಾವು ಕಷ್ಟ ಪಡಬೇಕು ಎಂದು ಅಕ್ಷರ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಇನ್ನು ಈಗಾಗಲೇ ಅಭಿಷೇಕ್ ಅಂಬರೀಷ್ ನಟನೆಯ ಬ್ಯಾಡ್ ಮ್ಯಾನರ್ಸ್ ಸಿನಿಮಾದಲ್ಲೂ ಅಕ್ಷರ ಅವರು ನಟಿಸಿದ್ದಾರೆ. ಇದರ ಜೊತೆಗೆ ಶೀಘ್ರಮೇವ ಕಲ್ಯಾಣ ಪ್ರಾಪ್ತಿರಸ್ತು ಎಂಬ ಸಿನಿಮಾಗೂ ಬಣ್ಣ ಹಚ್ಚಿದ್ದಾರೆ.
ಅಕ್ಷರ ಮಾಡ್ರನ್ ಲುಕ್!
ಧಾರಾವಾಹಿಯಲ್ಲಿ ಹಳ್ಳಿ ಹುಡುಗಿಯಂತೆ ಕಾಣುವ ಅಕ್ಷರ ಅವರನ್ನು ಮಾಡೆಲಿಂಗ್ ಲುಕ್ ನಲ್ಲಿ ನೋಡಿದರೆ, ಇವರೇನಾ ಸಹನಾ ಎಂದು ಅನುಮಾನ ಮೂಡುತ್ತದೆ. ಧಾರಾವಾಹಿಯಲ್ಲಿ ಸೀರೆಯುಟ್ಟು ಹಳ್ಳಿ ಹುಡುಗಿ ಲುಕ್‌ನಲ್ಲಿ ಕಾಣುತ್ತಾರೆ. ಆದರೆ ಮಾಡೆಲಿಂಗ್ ನಲ್ಲಿ ವೆಸ್ಟರ್ನ್ ಡ್ರೆಸ್‌ನಲ್ಲಿ ಹಾಟ್ ಹಿರೋಯಿನ್ ನಂತೆ ಸುಂದರವಾಗಿ ಕಾಣುತ್ತಾರೆ. ಅಷ್ಟರ ಮಟ್ಟಿಗೆ ಅಕ್ಷರ ಮಾಡೆಲಿಂಗ್ ಲುಕ್ ಮತ್ತು ಧಾರಾವಾಹಿಯಲ್ಲಿನ ಲುಕ್‌ಗೂ ವ್ಯತ್ಯಾಸವಿದೆ.
ವಿಭಿನ್ನ ಫೋಟೊ ಶೂಟ್!
ಅಕ್ಷರ ಅವರು ಧಾರಾವಾಹಿ ಜೊತೆಗೆ ಆಗಾಗ ಫೋಟೋಶೂಟ್ ಕೂಡ ಮಾಡಿಸುತ್ತಿರುತ್ತಾರೆ. ಒಮ್ಮೆ ಮಧುಮಗಳ ಲುಕ್‌ನಲ್ಲಿ ಕಾಣಿಸಿಕೊಂಡರೆ, ಮತ್ತೊಮ್ಮೆ ಗ್ಲಾಮರ್ ಲುಕ್ ಹೀರೋಯಿನ್‌ನಂತೆ ಫೋಟೋಶೂಟ್ ಮಾಡಿಸುತ್ತಾರೆ. ಒಂದೊಂದು ಉಡುಗೆಯಲ್ಲಿ ಒಂದೊಂದು ರೀತಿ ಕಾಣುತ್ತಾರೆ. ಇದೀಗ ವೆಸ್ಟರ್ನ್ ಡ್ರೆಸ್ ನಲ್ಲಿ ಫೋಟೋಶೂಟ್ ಮಾಡಿಸಿದ್ದು, ಸಕ್ಕತ್ತಾಗಿ ಮಿಂಚಿದ್ದಾರೆ.


Click it and Unblock the Notifications











