For Quick Alerts
  ALLOW NOTIFICATIONS  
  For Daily Alerts

  ಸೀರಿಯಲ್ ನಟಿ ಚಂದನಾ ಮಹಾಲಿಂಗಯ್ಯ ಎಲ್ಲಿ ಹೋದ್ರು!

  By ಪ್ರಿಯಾ ದೊರೆ
  |

  ಜೀ ಕನ್ನಡದಲ್ಲಿ ಮೂಡಿ ಬರುತ್ತಿರುವ ಪ್ರಸಿದ್ಧ ಧಾರಾವಾಹಿಗಳಲ್ಲಿ ಪುಟ್ಟಕ್ಕನ ಮಕ್ಕಳು ಕೂಡ ಒಂದು. ಪುಟ್ಟಕ್ಕನ ಮಕ್ಕಳು ಧಾರಾವಾಹಿ ಸೂಪರ್‌ ಡೂಪರ್ ಹಿಟ್‌ ಆಗಿದೆ. ನಟಿ ಉಮಾಶ್ರೀ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು, ಟಿಆರ್ ಪಿ ಅಲ್ಲೂ ಟಾಪ್‌ ಸ್ಥಾನವನ್ನು ಗಿಟ್ಟಿಸಿಕೊಂಡಿದೆ.

  ಇನ್ನು ಧಾರಾವಾಹಿಯಲ್ಲಿ ನಟಿಸುತ್ತಿರುವ ಪಾತ್ರಗಳನ್ನು ಕೂಡ ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಪುಟ್ಟಕ್ಕ, ಬಂಗಾರಮ್ಮ, ನಂಜಮ್ಮ, ಕಂಠಿ, ಸ್ನೇಹಾ, ಸಹನಾ, ಮುರಳಿ, ಚಂದ್ರು ಹೀಗೆ ಎಲ್ಲಾ ಪಾತ್ರಗಳು ಕೂಡ ಅದ್ಭುತವಾಗಿ ಮೂಡಿ ಬರುತ್ತಿವೆ. ಹೀಗಿರುವಾಗಲೇ ಧಾರಾವಾಹಿಯಲ್ಲಿ ಮೊತ್ತೊಂದು ಬದಲಾವಣೆ ಕಂಡು ಬಂದಿದೆ.

  ಸ್ನೇಹಾಗೆ ಸತ್ಯ ಹೇಳಲೇ ಬೇಕಾದ ಪರಿಸ್ಥಿತಿಯಲ್ಲಿ ಕಂಠಿ!ಸ್ನೇಹಾಗೆ ಸತ್ಯ ಹೇಳಲೇ ಬೇಕಾದ ಪರಿಸ್ಥಿತಿಯಲ್ಲಿ ಕಂಠಿ!

  ಇತ್ತೀಚೆಗಷ್ಟೇ, ಈ ಧಾರಾವಾಹಿಯ ಲಾಯರ್ ಚಂದ್ರು ಪಾತ್ರಧಾರಿ ಬದಲಾಗಿದ್ದಾರೆ. ಈ ಮೊದಲು ಕಾರ್ತಿಕ್ ಮಹೇಶ್, ಚಂದ್ರು ಪಾತ್ರವನ್ನು ನಿರ್ವಹಿಸಿದ್ದರು. ಇದೀಗ ಈ ಪಾತ್ರಕ್ಕೆ ನಟ ನಂದೀಶ್ ಅವರು ಆಗಮಿಸಿದ್ದಾರೆ. ಇದೀಗ ಇಂತಹದ್ದೇ ಒಂದು ಬದಲಾವಣೆ ಈ ಧಾರಾವಾಹಿಯಲ್ಲಿ ನಡೆಯುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.

  ಪುಟ್ಟಕ್ಕನನ್ನು ಮೆಚ್ಚಿದ ಜನ!

  ದಿನ ದಿನಕ್ಕೂ ಪುಟ್ಟಕ್ಕನ ಮಕ್ಕಳು ಧಾರಾವಾಹಿಯನ್ನು ನೋಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಪುಟ್ಟಕ್ಕನ ಮಕ್ಕಳು ಎಪಿಸೋಡ್‌ಗಳನ್ನು ಮಿಸ್ ಮಾಡದೇ ನೋಡಲು ಕಾತುರರಾಗಿರುತ್ತಾರೆ. ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಬರುವ ಪ್ರತಿಯೊಂದು ಪಾತ್ರಗಳು ಅದ್ಭುತವಾಗಿವೆ. ಧಾರಾವಾಹಿಯಲ್ಲಿ ಪ್ರತಿಯೊಂದು ಪಾತ್ರಕ್ಕೂ ಒಂದೊಂದು ಕಥೆ ಇದೆ. ಸೀರಿಯಲ್ ನ ಕಥೆಯೂ ಅಷ್ಟೇ ಅಚ್ಚುಕಟ್ಟಾಗಿ ಸಾಗುತ್ತಿದೆ. ಕ್ಯೂರಿಯಾಸಿಟಿಯನ್ನು ಉಳಿಸಿಕೊಂಡು ಕಥೆ ಸಾಗುತ್ತಿದೆ. ಮಂಡ್ಯ ಭಾಷೆಯಲ್ಲಿ ಡೈಲಾಗ್ ಗಳಿದ್ದು, ಈ ಭಾಷೆಯ ಶೈಲಿಯನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ.

  ಅನು ಮೇಲೆ ಆವರಿಸಿದ ರಾಜನಂದಿನಿ ಮನೆಯವರೆಲ್ಲಾ ಶಾಕ್!ಅನು ಮೇಲೆ ಆವರಿಸಿದ ರಾಜನಂದಿನಿ ಮನೆಯವರೆಲ್ಲಾ ಶಾಕ್!

  ಧರ್ಮ ಸಂಕಟದಲ್ಲಿ ಕಂಠಿ!

  ಈ ಧಾರಾವಾಹಿಯಲ್ಲಿ ನಾಯಕ ಪಾತ್ರಧಾರಿ ಕಂಠಿ, ನಾಯಕಿ ಸ್ನೇಹಾಳನ್ನು ಪ್ರೀತಿಸುತ್ತಿದ್ದಾನೆ. ಆದರೆ ಇವರ ತಾಯಿ, ತಮ್ಮ ಅಣ್ಣನ ಮಗಳನ್ನು ಮಗನಿಗೆ ತಂದುಕೊಳ್ಳಲು ಮುಂದಾಗಿದ್ದಾಳೆ. ಅವಳೇ ಪೂರ್ವಿ. ಪೂರ್ವಿಗೂ ಕೂಡ ಕಂಠಿ ಎಂದರೆ ತುಂಬಾ ಇಷ್ಟ. ಅವಳು ಆಗಾಗ ಕಂಠಿಯನ್ನು ಭೇಡಟಿಯಾಗಲು ಪ್ರಯತ್ನಿಸುತ್ತಲೇ ಇರುತ್ತಾಳೆ. ಕಂಠಿಗೆ ಇದು ಇಷ್ಟವಿಲ್ಲದಿದ್ದರೂ, ತಾಯಿಗೆ ಎದುರು ಮಾತನಾಡಬಾರದು ಎಂಬ ಒಂದೇ ಕಾರಣಕ್ಕೆ ತನಗಿಷ್ಟವಿಲ್ಲದ ಪೂರ್ವಿ ಜೊತೆಗೆ ಮದುವೆಯಾಗಲು ಒಪ್ಪಿದ್ದಾನೆ. ಸದ್ಯ ಧರ್ಮ ಸಂಕಟದಲ್ಲಿರುವ ಕಂಠಿ ಯಾವಾಗ ಅವರ ತಾಯಿ ಬಂಗಾರಮ್ಮನ ಬಳಿ ಸತ್ಯ ಹೇಳುತ್ತಾನೋ ಕಾದು ನೋಡಬೇಕಿದೆ.

  ಸತ್ಯ ಗೊತ್ತಿದ್ದರೂ ಪ್ರೀತಿಸುತ್ತಿರುವ ಪೂರ್ವಿ!

  ಇತ್ತ ಪೂರ್ವಿಗೆ ಕಂಠಿ ಬಗ್ಗೆ ಗೊತ್ತಿದೆ. ಕಂಠಿ ಆಗಾಗ ಸ್ನೇಹಾಳನ್ನು ಭೇಟಿ ಮಾಡುವುದು. ಸದಾ ಪುಟ್ಟಕ್ಕನ ಮೆಸ್‌ನಲ್ಲಿ ಇರುವುದನ್ನು ಗಮನಿಸಿದ್ದಾಳೆ. ಇದರ ಜೊತೆಗೆ ಸ್ನೇಹಾ ಹಾಗೂ ಬಂಗಾರಮ್ಮ ಇಬ್ಬರಿಗೂ ಒಬ್ಬರನ್ನೊಬ್ಬರು ಕಂಡರೆ ಆಗುವುದಿಲ್ಲ. ಈ ಬಗ್ಗೆ ಪೂರ್ವಿಗೆ ಗೊತ್ತಿದೆ. ಹಾಗಿದ್ದರೂ ಆಕೆ ತನಗೇನೂ ಗೊತ್ತಿಲ್ಲ ಎಂಬಂತೆ ಸುಮ್ಮನಿದ್ದಾಳೆ. ಕಂಠಿಗೂ ತಾನೆಂದರೆ ಇಷ್ಟವಿಲ್ಲ ಎಂಬ ಸತ್ಯ ತಿಳಿದಿರುವ ಪೂರ್ವಿ ಬಂಗಾರಮ್ಮನ ಮಾತೇ ನಡೆಯುವುದು ಎಂದು ನಂಬಿದ್ದಾಳೆ. ಆದರೆ ಮುಂದೇನಾಗುತ್ತೆ ಎಂಬುದೇ ಕುತೂಹಲವಾಗಿದೆ.

  ಪೂರ್ವಿ ಪಾತ್ರಕ್ಕೆ ಬಂತಾ ಕಂಟಕ!

  ಈ ನಡುವೆ ಪೂರ್ವಿ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಹೀಗಾಗಿ ಪೂರ್ವಿ ಪಾತ್ರಧಾರಿ ಚಂದನಾ ಮಹಾಲಿಂಗಯ್ಯ ಅವರು ಧಾರಾವಾಹಿಯಿಂದ ಹೊರ ನಡೆದಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ. ಆದರೆ ಈ ಬಗ್ಗೆ ನಟಿ ಚಂದನಾ ಯಾವುದೇ ಮಾಹಿತಿ ಬಹಿರಂಗ ಪಡಿಸಿಲ್ಲ. ಇನ್ನು ಇತ್ತೀಚೆಗಷ್ಟೇ ಚಂದನಾ ಅವರು ಮದುವೆಯಾಗಿದ್ದು, ಈ ಕಾರಣಕ್ಕೆ ನಟನೆಯಿಮದ ದೂರ ಉಳಿದಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಚಂದನಾ ಆಗಲೀ ಅಥವಾ ಧಾರಾವಾಹಿಯ ತಂಡವಾಗಲೀ ಯಾವ ಮಾಹಿತಿಯನ್ನೂ ಹೊರ ಬಿಟ್ಟಿಲ್ಲ.

  English summary
  Puttakkana Makkalu Serial Fame Chandana Mahalingaiah Carector Changed, Know More,
  Monday, July 11, 2022, 9:34
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X