Sanjana Burli : ಓದಿನ ಜೊತೆಗೆ ನಟನೆಯನ್ನೂ ನಿಭಾಯಿಸುತ್ತಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಸ್ನೇಹಾ!

By ಪ್ರಿಯಾ ದೊರೆ

'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯ ಸ್ನೇಹಾ ನಿಮಗೆಲ್ಲರಿಗೂ ಗೊತ್ತೆ ಇದೆ. ಧಾರಾವಾಹಿಯಲ್ಲಿ ಮನೆಯ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು, ಕೆಎಎಸ್ ಆಗುವ ಕನಸಿನ ಹಾದಿಯಲ್ಲಿದ್ದಾಳೆ.

ಊರಿನಲ್ಲೆಲ್ಲಾ ನ್ಯಾಯ ಮಾತಾಡುತ್ತಾಳೆ. ಎಲ್ಲರಿಗೂ ಇವಳನ್ನು ಕಂಡರೆ ಸ್ವಲ್ಪ ಭಯವೇ. ತನ್ನ ಜೋರು ಬಾಯಿಂದಲೇ ಪ್ರೇಕ್ಷಕರ ಮನಗೆದ್ದಿದ್ದಾಳೆ. ಅಸಲಿಗೆ ಸ್ನೇಹಾ ನಿಜವಾದ ಹೆಸರು ಸಂಜನಾ ಬುರ್ಲಿ. ನಿಜ ಜೀವನದಲ್ಲಿ ಎಂಜಿನಿಯರಿಂಗ್ ಓದುತ್ತಿರುವ ಸಂಜನಾಗೆ ಪುಟ್ಟಕ್ಕನ ಮಕ್ಕಳು ಸೀರಿಯಲ್ ಮೊದಲ ಧಾರಾವಾಹಿಯಲ್ಲ.

ಸಂಜನಾ ಬಗ್ಗೆ ಆಸಕ್ತಿಕರ ವಿಷಯ ಇಲ್ಲಿದೆ

ಸಂಜನಾ ಬಗ್ಗೆ ಆಸಕ್ತಿಕರ ವಿಷಯ ಇಲ್ಲಿದೆ

ಸಂಜನಾ ಹಿಂದೆಯೂ ಒಂದು ಧಾರಾವಾಹಿಯಲ್ಲಿ ನಟಿಸಿದ್ದರು. ಆದರೆ ಆ ಧಾರಾವಾಹಿ ಕಾರಣಾಂತರಗಳಿಂದ ಅರ್ಧಕ್ಕೆ ನಿಂತು ಹೋಯ್ತು. ಇನ್ನು ಸಂಜನಾ ಬುರ್ಲಿ ಹಲವು ವರ್ಷಗಳಿಂದ ರಂಗಭೂಮಿಯಲ್ಲಿದ್ದಾರೆ. ರಂಗಭೂಮಿ ಕಲಾವಿದೆಯಾಗಿರುವ ಸಂಜನಾ ಸಿನಿಮಾಗಳಲ್ಲೂ ನಟಿಸಿದ್ದಾರೆ. ಕೇವಲ ಕನ್ನಡ ಅಷ್ಟೇ ಅಲ್ಲದೇ ತಮಿಳಿನಲ್ಲಿಯೂ ನಟಿಸಿದ್ದಾರೆ. ಆದರೆ ಈ ಯಾವ ಸಿನಿಮಾಗಳೂ ಇನ್ನೂ ರಿಲೀಸ್ ಆಗಿಲ್ಲ. ಅದಕ್ಕೆ ಕಾರಣ ಕೋವಿಡ್. ಬನ್ನಿ ಹಾಗಿದ್ದರೆ ಸಂಜನಾ ಬಗ್ಗೆ ಇನ್ನಷ್ಟು ವಿಷಯ ತಿಳಿದುಕೊಳ್ಳೋಣ.

ಸಂಜನಾ ಇಂಜಿನಿಯರಿಂಗ್ ಸ್ಟುಡೆಂಟ್ ಗೊತ್ತಾ?

ಸಂಜನಾ ಇಂಜಿನಿಯರಿಂಗ್ ಸ್ಟುಡೆಂಟ್ ಗೊತ್ತಾ?

ಸಂಜನಾ ಇಂಜಿನಿಯರಿಂಗ್ ಸ್ಟುಡೆಂಟ್. ಅವರು ತಮ್ಮ ಓದಿನ ಜೊತೆಗೆ ನಟನೆಯನ್ನೂ ಬ್ಯಾಲೆನ್ಸ್ ಮಾಡುತ್ತಿದ್ದಾರೆ. ಇಂಜಿನಿಯರಿಂಗ್ ಎಂಟನೇ ಸೆಮಿಸ್ಟರ್‌ನಲ್ಲಿ ಓದುತ್ತಿರುವ ಸಂಜನಾ ಕಾಲೇಜು ಮುಗಿದ ಮೇಲೆ ಶೂಟಿಂಗ್‌ಗೆ ಬರುತ್ತಾರೆ. ಸಿಕ್ಕ ಸಮಯವನ್ನು ಸ್ವಲ್ಪವೂ ವೇಸ್ಟ್ ಮಾಡಿಕೊಳ್ಳದ ಸಂಜನಾ ಬುರ್ಲಿ ಓದಿಕೊಳ್ಳುತ್ತಾರೆ. ಇನ್ನು ಓದುವುದು ಸಂಜನಾರ ದೊಡ್ಡ ಕನಸಾದರೆ, ನಟನೆ ಪ್ಯಾಷನ್ ಎಂದು ಸ್ವತಃ ಅವರೇ ಹೇಳಿಕೊಂಡಿದ್ದಾರೆ.

ಸಂಜನಾ ನಟಿಸಿದ ಮೊದಲ ಧಾರಾವಾಹಿ 'ಪತ್ತೆದಾರಿ ಪ್ರತಿಭಾ'

ಸಂಜನಾ ನಟಿಸಿದ ಮೊದಲ ಧಾರಾವಾಹಿ 'ಪತ್ತೆದಾರಿ ಪ್ರತಿಭಾ'

ಸಂಜನಾ ಮೊದಲ ಧಾರಾವಾಹಿ ಪತ್ತೆದಾರಿ ಪ್ರತಿಭಾ. ಈ ಹಿಂದೆ 'ಲಗ್ನಪತ್ರಿಕೆ' ಎಂಬ ಧಾರಾವಾಹಿಯಲ್ಲಿ ಸಂಜನಾ ಬುರ್ಲಿ ನಟಿಸಿದ್ದರು. ಈ ಧಾರಾವಾಹಿ ಅವರಿಗೆ ಒಳ್ಳೆಯ ಬ್ರೇಕ್ ಕೊಡುತ್ತೆ ಎಂದುಕೊಂಡಿದ್ದರು. ಆದರೆ ಅದು ಅರ್ಧಕ್ಕೆ ನಿಂತಾಗ ಬೇಸರಗೊಂಡಿದ್ದರು. 'ಸ್ನೇಹರ್ಷಿ' ಎಂಬ ಸಿನಿಮಾದಲ್ಲಿ ಮೊದಲು ನಟಿಸಿದ್ದ ಸಂಜನಾ, ಕಳೆದ ವರ್ಷ ಸಂಜನಾ ಅವರು 'ರಾಧಾ ಸರ್ಚಿಂಗ್ ರಮಣ ಮಿಸ್ಸಿಂಗ್' ಸಿನಿಮಾದಲ್ಲಿ ನಟಿಸಿದ್ದರು. ಈಗ ಅದರ ಟ್ರೈಲರ್ ಹಾಗೂ ಹಾಡು ರಿಲೀಸ್ ಆಗಿದೆ. ಸಿನಿಮಾ ರಿಲೀಸ್‌ಗಾಗಿ ಸಂಜನಾ ಕಾಯುತ್ತಿದ್ದಾರೆ ಮಾಡುತ್ತಿದ್ದಾರೆ. ಇನ್ನು ಅನಂತ್‌ನಾಗ್ ಅವರ ಜೊತೆಗೆ 'ವೀಕೆಂಡ್ ಸಿನಿಮಾ' ಎಂಬ ಚಿತ್ರದಲ್ಲೂ ಬಣ್ಣ ಹಚ್ಚಿದ್ದರು. 'ನಾನ್ ವೆಜ್' ಎಂಬ ಸಿನಿಮಾದಲ್ಲೂ ಸಂಜನಾ ನಟಿಸಿದ್ದು, ತಮಿಳಿನ ಚಿತ್ರವೊಂದಕ್ಕೂ ಬಣ್ಣ ಹಚ್ಚಿದ್ದಾರೆ.

ಓದಿಗಾಗಿ ಅವಕಾಶ ತಿರಸ್ಕರಿಸಿದ್ದ ಸಂಜನಾ

ಓದಿಗಾಗಿ ಅವಕಾಶ ತಿರಸ್ಕರಿಸಿದ್ದ ಸಂಜನಾ

ಕಳೆದ ವರ್ಷ ಆರೂರು ಜಗದೀಶ್ ಕರೆ ಮಾಡಿ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ನಟಿಸುವಂತೆ ಆಫರ್ ಕೊಟ್ಟರು. ಆದರೆ ಓದಿಗೆ ತೊಂದರೆಯಾಗಬಾರೆಂದು ಅವಕಾಶ ತಿರಸ್ಕರಿಸಿದ್ದ ಸಂಜನಾ ಬುರ್ಲಿ ಮತ್ತೆ ಆಕೆಯೆ ಕರೆ ಮಾಡಿ ನಟಿಸುವುದಾಗಿ ಹೇಳಿದ್ದಳು. 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯ ಪ್ರೋಮೊಗೆ ಒಳ್ಳೆಯ ಪ್ರತಿಕ್ರಿಯೆ ಬಂದಾಗ ಖುಷಿಯಾಗಿತ್ತಂತೆ. ಹಳ್ಳಿ ಹುಡುಗಿ ಲುಕ್‌ನಲ್ಲಿ ಕಾಣಿಸಿಕೊಳ್ಳುವ ಸಲುವಾಗಿ ಸಂಜನಾ ಆಕ್ಟಿಂಗ್ ಕ್ಲಾಸ್‌ನಲ್ಲಿ ತಯಾರಿ ನಡೆಸಿದ್ದರಂತೆ. ಸ್ನೇಹಾ ಪಾತ್ರದಿಂದ ಸಂಜನಾರನ್ನು ಹಲವರು ಗುರುತಿಸುತ್ತಿದ್ದು, ಸೀರಿಯಲ್‌ನಲ್ಲಿನ ತಮ್ಮ ನಟನೆಯನ್ನು ಹಲವರು ಮೆಚ್ಚಿಕೊಂಡಿದ್ದಾರೆ ಎಂದು ಸಂತಸ ಹಂಚಿಕೊಂಡಿದ್ದಾರೆ. ಒಟ್ನಲ್ಲಿ ಸಿನಿಮಾ ಹಾಗೂ ಕಿರುತೆರೆ ಎರಡರಲ್ಲೂ ಸಂಜನಾಗೆ ಆಫರ್‌ಗಳು ಬರುತ್ತಿದ್ದು, ಓದಿನ ಕಡೆ ಹೆಚ್ಚು ಗಮನ ಕೊಡಬೇಕೆಂದು ಎಲ್ಲವನ್ನು ತಿರಸ್ಕರಿಸುತ್ತಿದ್ದಾರೆ. ತಮ್ಮ ಕನಸು ಹಾಗೂ ಆಸೆ ಎರಡನ್ನೂ ನಿಭಾಯಿಸಿಕೊಂಡು ಹೋಗುತ್ತಿದ್ದಾರೆ.

More from Filmibeat

English summary
puttakkana makkalu serial details about Sanjana Burli personal life, film, education. Details are inside
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X