Sanjana Burli: ರಜನಿಯ 'ಜೈಲರ್' ಸಿನಿಮಾ ಹಾಡಿಗೆ ಹೆಜ್ಜೆ ಹಾಕಿ ರೀಲ್ಸ್ ಮಾಡಿದ ಪುಟ್ಟಕ್ಕನ ಮಗಳು.. ವಿಡಿಯೋ ವೈರಲ್

By ಅನಿತಾ ಬನಾರಿ

ರಜನಿಕಾಂತ್ ಅಭಿನಯದ 'ಜೈಲರ್' ಸಿನಿಮಾ ಈಗಾಗಲೇ ಬಿಡುಗಡೆಯಾಗಿದ್ದು, ಅದ್ಧೂರಿ ಪ್ರದರ್ಶನ ಕಾಣುತ್ತಿದೆ. ಅದರಲ್ಲೂ ಆ ಸಿನಿಮಾದ ಕಾವಾಲಯ್ಯ ಹಾಡು ಕೂಡಾ ಸಿಕ್ಕಾಪಟ್ಟೆ ಫೇಮಸ್ಸು ಆಗಿ ಬಿಟ್ಟಿದೆ. ಅದರ ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಎಲ್ಲರ ಬಾಯಲ್ಲೂ ಕಾವಾಲಯ್ಯ ಹಾಡಿನದ್ದೇ ದರ್ಬಾರು.

ಇನ್ನು ಸೋಶಿಯಲ್ ಮೀಡಿಯಾಗಳಲ್ಲೂ ಕೂಡಾ ಅದರದ್ದೇ ಹವಾ. ಕಿರುತೆರೆ, ಹಿರಿತೆರೆ ತಾರೆಯರ ಜೊತೆಗೆ ಜನ ಸಾಮಾನ್ಯರು ಕೂಡಾ ಆ ಹಾಡಿಗೆ ರೀಲ್ಸ್ ಮಾಡಿ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದೀಗ ಪುಟ್ಟಕ್ಕನ ಮಗಳ ಸರದಿ.

Sanjana Burli-Kaavaalaa Song

'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಎರಡನೇ ಮಗಳು ಸ್ನೇಹಾ ಪಾತ್ರದಲ್ಲಿ ನಟಿಸಿ, ವೀಕ್ಷಕರ ಮನ ಸೆಳೆದಿರುವ ಸಂಜನಾ ಬುರ್ಲಿ ಇದೀಗ ಕಾವಾಲಯ್ಯ ಹಾಡಿಗೆ ಹೆಜ್ಜೆ ಹಾಕಿದ್ದು ಸಖತ್ ವೈರಲ್ ಆಗುತ್ತಿದೆ. ಬೀಚ್ ಬದಿಯಲ್ಲಿ ಕಾವಾಲಯ್ಯ ಹಾಡಿಗೆ ಹೆಜ್ಜೆ ಹಾಕಿರುವ ಸಂಜನಾ ಹಸಿರು ಬಣ್ಣದ ಮಿನಿ ಸ್ಕರ್ಟ್ ಧರಿಸಿದ್ದು ಅದರಲ್ಲೂ ತುಂಬಾ ಮುದ್ದಾಗಿ ಕಾಣಿಸಿಕೊಂಡಿದ್ದಾರೆ.

ಮಿನಿ ಸ್ಕರ್ಟ್ ಧರಿಸಿದ ನಟಿ ಕಂಡು ನೆಟ್ಟಿಗರು ಫಿದಾ

ಧಾರಾವಾಹಿಯಲ್ಲಿ ಕೇವಲ ಚೂಡಿದಾರ್ ತಪ್ಪಿದರೆ ಸೀರೆಯಲ್ಲಿಯೇ ಹೆಚ್ಚಾಗಿ ಸಂಜನಾ ಬುರ್ಲಿ ಕಾಣಿಸಿಕೊಳ್ಳುತ್ತಿದ್ದರು. ಇದೀಗ ಮಿನಿ ಸ್ಕರ್ಟ್ ಧರಿಸಿದ ಸಂಜನಾ ಬುರ್ಲಿ ಕಂಡು ಫಿದಾ ಆಗಿದ್ದಾರೆ. ನೀವು ಸ್ನೇಹಾ ಆಗಿಯೂ ಸೂಪರ್, ಸಂಜನಾ ಆಗಿಯೂ ಸೂಪರ್.. ಬಂಗಾರಮ್ಮನ ಮನೆಯಲ್ಲಿ ನಿಮ್ಮದೇ ಹವಾ, ಸೋಶಿಯಲ್ ಮೀಡಿಯಾದಲ್ಲೂ ನಿಮ್ಮದೇ ಹವಾ ಹೀಗೆ ಫ್ಯಾನ್ಸ್ ನಾನಾ ರೀತಿಯ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ.

ಕಾಲಾವಾ ಹಾಡಿಗೆ ಸಂಜನಾ ರೀಲ್ಸ್

ಸೋಶಿಯಲ್ ಮೀಡಿಯಾದಲ್ಲಿ ಹಾಟ್ ಅವತಾರಗಳ ಮೂಲಕ ಪಡ್ಡೆ ಹೈಕ್ಕಳ ಮನ ಕದಿಯುತ್ತಿರುವ ಸಂಜನಾ ಬುರ್ಲಿ ಇದೇ ಮೊದಲ ಬಾರಿಗೆ ಹಳ್ಳಿ ಹುಡುಗಿಯಾಗಿ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಸ್ನೇಹಾ ಆಗಿ ಬದಲಾಗುವ ಮೊದಲು ಆ ಪಾತ್ರಕ್ಕಾಗಿ ಸಾಕಷ್ಟು ಸಿದ್ಧತೆಯನ್ನು ಕೂಡಾ ಆಕೆ ಮಾಡಿಕೊಂಡಿದ್ದಾರೆಯಂತೆ. ಜೊತೆಗೆ ಒಂದಷ್ಟು ತರಬೇತಿಯನ್ನು ಕೂಡಾ ಆಕೆ ಪಡೆದುಕೊಂಡಿದ್ದರಂತೆ. ಆದರೆ, ಸೋಶಿಯಲ್ ಮೀಡಿಯಾದಲ್ಲಿ ಅಸಲಿ ಅವತಾರದಲ್ಲಿ ಫ್ಯಾನ್ಸ್ ಮುಂದೆ ಬರುತ್ತಾರೆ. ರೀಲ್ಸ್, ಫೋಟೊ ಶೂಟ್‌ಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಈಗ 'ಜೈಲರ್' ಸಿನಿಮಾದ ಕಾವಾಲಾ ಹಾಡಿಗೆ ಹೆಜ್ಜೆ ಹಾಕಿ ರೀಲ್ಸ್ ಮಾಡಿ ನೆಟ್ಟಿಗರ ಮೆಚ್ಚುಗೆ ಪಡೆದುಕೊಂಡಿದ್ದಾರೆ.

ಕಿರುತೆರೆ ಜೊತೆಗೆ ಹಿರಿತೆರೆಯಲ್ಲೂ ಮೋಡಿ

'ಪತ್ತೇಧಾರಿ ಪ್ರತಿಭಾ' ಧಾರಾವಾಹಿಯಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಕಿರುತೆರೆಗೆ ಎಂಟ್ರಿ ಪಡೆದ ಸಂಜನಾ ಬುರ್ಲಿ ತದ ನಂತರ 'ಲಗ್ನಪತ್ರಿಕೆ' ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸಿದರು. ಇದೀಗ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಪುಟ್ಟಕ್ಕನ ಮಗಳಾಗಿ ಅಭಿನಯಿಸುತ್ತಿರುವ ಈಕೆ 'ಸ್ನೇಹರ್ಷಿ' ಸಿನಿಮಾದ ಮೂಲಕ ಹಿರಿತೆರೆಗೆ ಕಾಲಿಟ್ಟರು. ಹಾಗೇ 'ವೀಕೆಂಡ್', 'ಛೂ ಮಂತ್ರಕಾಳಿ', 'ರಾಧಾ ಸರ್ಚಿಂಗ್ ರಮಣ ಮಿಸ್ಸಿಂಗ್' ಸಿನಿಮಾಗಳಲ್ಲೂ ನಟಿಸಿದ್ದು, ಆ ಸಿನಿಮಾಗಳು ಬಿಡುಗಡೆಯಾಗಬೇಕಿದೆ.

More from Filmibeat

English summary
Actress Sanjana Burli made reels on Jailer movie Kavalaiya song
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X